ದೇಶ

ಈಶ್ವರಪ್ಪ ಆಜಾನ್‌ ಹೇಳಿಕೆಯನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಜಾನ್‌ ಕೂಗಿದ ಯುವಕ

ಶಿವಮೊಗ್ಗ : ಬಿಜೆಪಿ ನಾಯಕ ಕೆ. ಎಸ್‌.ಈಶ್ವರಪ್ಪ ಅವರು ಆಜಾನ್‌ ಕುರಿತು ನೀಡಿದ ಹೇಳಿಕೆಯನ್ನು ಪ್ರತಿಭಟಿಸಲು ಯುವಕನೊಬ್ಬ ಜಿಲ್ಲಾಧಿಕಾರಿ ಕಚೇರಿ ಬಳಿ ಆಜಾನ್ ಕೂಗಿದ ಘಟನೆ ಶಿವಮೊಗ್ಗದಲ್ಲಿ ಭಾನುವಾರ ಸಂಭವಿಸಿದೆ. ವಿಧಾನಸೌಧದಲ್ಲೂ ಆಜಾನ್‌ ಕೂಗುತ್ತೇವೆ ಎಂದು ಈ ಯುವಕರ ತಂಡ ಎಚ್ಚರಿಕೆ ನೀಡಿದೆ.ಈಶ್ವರಪ್ಪ ಆಜಾನ್ ಕುರಿತ ಹೇಳಿಕೆ ವಿರೋಧಿಸಿ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಯುವಕರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಾಗಿಗುಡ್ಡದ ನಿವಾಸಿ ಮೌಸೀನ್ ಎಂಬಾತ ಕಚೇರಿ ಮೇಲೆ ನಿಂತು ಆಜಾನ್ ಕೂಗಿದ್ದ. ಅಲ್ಲದೆ […]

ಈಶ್ವರಪ್ಪ ಆಜಾನ್‌ ಹೇಳಿಕೆಯನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಜಾನ್‌ ಕೂಗಿದ ಯುವಕ Read More »

ಜಿನ್ನಾ ಮಾನಸಿಕತೆ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲು ನಾವು ಸಿದ್ಧ: ಸಿ.ಟಿ.ರವಿ ಆಕ್ರೋಶ

ಯುವಕನೊಬ್ಬ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಝಾನ್‌ ಕೂಗಿರುವುದಕ್ಕೆ ತೀವ್ರ ಆಕ್ರೋಶ ಬೆಂಗಳೂರು : ಶಿವಮೊಗ್ಗದಲ್ಲಿ ಯುವಕನೊಬ್ಬ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಝಾನ್‌ ಕೂಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಜಿನ್ನಾ ಮಾನಸಿಕತೆ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲು ನಾವು ಸಿದ್ಧ. ಬಿನ್ ಲಾಡೆನ್ ರೀತ ಗುರುತಿಸಿಕೊಂಡರೆ ನಾವು ರೆಡಿ ಇಟ್ಟುಕೊಂಡಿದ್ದೇವೆ. ಸರ್ಜಿಕಲ್ ಸ್ಟ್ರೈಕ್ ಮಾಡಲು ನಾವು ತಯಾರಾಗಿದ್ದೇವೆ. ಬೆಂಕಿ ಹಾಕಲು ಬಂದರೆ ಯೋಗಿ ಆದಿತ್ಯನಾಥ್ ರೀತಿ ಕರ್ನಾಟಕದಲ್ಲಿ ಬುಲ್ಡೋಜರ್ ಚಾಲು ಮಾಡುತ್ತೇವೆ. ನೀವು

ಜಿನ್ನಾ ಮಾನಸಿಕತೆ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲು ನಾವು ಸಿದ್ಧ: ಸಿ.ಟಿ.ರವಿ ಆಕ್ರೋಶ Read More »

ತ್ರಿವರ್ಣ ಧ್ವಜ ಕೆಳಗಿಳಿಸಿ ಖಲಿಸ್ತಾನ್ ಪರ ಪ್ರತಿಭಟನೆ: ಭಾರತ ತೀವ್ರ ಖಂಡನೆ

ದೆಹಲಿ : ಲಂಡನ್‌ನ ಭಾರತದ ಹೈಕಮಿಷನರ್ ಕಚೇರಿಯಲ್ಲಿ ಖಲಿಸ್ಥಾನಿ ಬೆಂಬಲಿಗರು ತ್ರಿವರ್ಣ ಧ್ವಜವನ್ನು ಕಿತ್ತೆಸೆದಿರುವ ಕೃತ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಖಲಿಸ್ಥಾನಿ ಮುಖಂಡ ಅಮೃತಪಾಲ್‌ ಸಿಂಗ್‌ ಬಂಧನಕ್ಕೆ ಭಾರತದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ವಿರೋಧಿಸಿ ಕೆಲವು ಖಲಿಸ್ಥಾನಿ ಬೆಂಬಲಿಗರು ಲಂಡನ್‌ನಲ್ಲಿರುವ ಭಾರತದ ದೂತವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಯುವಕ ಹೈಕಮಿಷನ್‌ ಕಚೇರಿ ಇರುವ ಕಟ್ಟಡ ಹತ್ತಿ ಭಾರತದ ಧ್ವಜವನ್ನು ಕಿತ್ತು ಹಾಕಿದ್ದಾನೆ. ಈ ವೀಡಿಯೊ ನಿನ್ನೆಯಿಂದ ವೈರಲ್‌ ಆಗಿದ್ದು, ಖಲಿಸ್ಥಾನಿ ಬೆಂಬಲಿಗರ ಪುಂಡಾಟಕ್ಕೆ ಭಾರತ

ತ್ರಿವರ್ಣ ಧ್ವಜ ಕೆಳಗಿಳಿಸಿ ಖಲಿಸ್ತಾನ್ ಪರ ಪ್ರತಿಭಟನೆ: ಭಾರತ ತೀವ್ರ ಖಂಡನೆ Read More »

ಆರ್‌ಬಿಐ ಡೆಪ್ಯೂಟಿ ಗವರ್ನರ್ ಹುದ್ದೆಗೆ ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ

ದೆಹಲಿ: ಎಂಕೆ ಜೈನ್ ಅವರ ವಿಸ್ತೃತ ಅಧಿಕಾರ ಅವಧಿ ಜೂನ್ ನಲ್ಲಿ ಅಂತ್ಯವಾಗಲಿದ್ದು, ಹೊಸ ರಿಸರ್ವ್ ಬ್ಯಾಂಕ್ ಉಪ ಗವರ್ನರ್ ಹುದ್ದೆಗೆ ಕೇಂದ್ರ ಹಣಕಾಸು ಸಚಿವಾಲಯ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿದಾರರು ಬ್ಯಾಂಕಿಂಗ್ ಮತ್ತು ಹಣಕಾಸು ಮಾರುಕಟ್ಟೆ ಕಾರ್ಯಾಚರಣೆಗಳಲ್ಲಿ 15 ವರ್ಷಗಳ ಅನುಭವವನ್ನು ಹೊಂದಿರಬೇಕು, ಖಾಸಗಿ ವಲಯದ ಅಭ್ಯರ್ಥಿಗಳನ್ನು ಸಹ ನೇಮಕಾತಿಗೆ ಪರಿಗಣಿಸಲಾಗುವುದು ಎಂದು ಸಾರ್ವಜನಿಕ ಪ್ರಕಟಣೆ ತಿಳಿಸಿದೆ. ಸಾಂಪ್ರದಾಯಿಕವಾಗಿ, ನಾಲ್ಕು ಉಪ ಗವರ್ನರ್‌ಗಳಲ್ಲಿ ಒಬ್ಬರು ಸಾರ್ವಜನಿಕ ವಲಯದ ಬ್ಯಾಂಕಿಂಗ್ ಉದ್ಯಮದಿಂದ ಬಂದವರಾಗಿರುತ್ತಾರೆ. ಖಾಸಗಿ ವಲಯದಿಂದ ಯಾರನ್ನಾದರೂ ನೇಮಿಸಲು

ಆರ್‌ಬಿಐ ಡೆಪ್ಯೂಟಿ ಗವರ್ನರ್ ಹುದ್ದೆಗೆ ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ Read More »

ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯನ್ನು ನಿರ್ಧರಿಸುವ ಅಧಿಕಾರ ನನಗಿಲ್ಲ ಎಂದ ಅಣ್ಣಾಮಲೈ

ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆ ವೇಳೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ನಾನು ಬಿಜೆಪಿಯಿಂದ ಹೊರಹೋಗುವುದಾಗಿ ತಮಿಳುನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ ಎಂಬ ಮಾತು ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಅಣ್ಣಾಮಲೈ, ಮೈತ್ರಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನನಗಿಲ್ಲ, ಇದರ ಬಗ್ಗೆ ಪಕ್ಷದ ನಾಯಕತ್ವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ನಾನು ರಾಜಕೀಯಕ್ಕೆ ಬಂದಿರುವುದು ರಾಜ್ಯದಲ್ಲಿ ಬದಲಾವಣೆ ತರುವ ಉದ್ದೇಶಕ್ಕಾಗಿಯೇ ಹೊರತೂ, ಎಐಎಡಿಎಂಕೆಯ ಕಿರಿಯ ಮಿತ್ರನಾಗಿ ಇರಲು

ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯನ್ನು ನಿರ್ಧರಿಸುವ ಅಧಿಕಾರ ನನಗಿಲ್ಲ ಎಂದ ಅಣ್ಣಾಮಲೈ Read More »

ಇಂಟರ್ ನೆಟ್ ನಿರ್ಬಂಧ ವಿಸ್ತರಿಸಿದ ಪಂಜಾಬ್

ಚಂಡೀಗಢ: ಸಿಖ್ ಸಮುದಾಯದ ತೀವ್ರಗಾಮಿ ಹಾಗೂ ಖಲಿಸ್ತಾನ ಬೆಂಬಲಿಗ ಅಮೃತ್ ಪಾಲ್ ಸಿಂಗ್‌ ನ ಸಹಚರರನ್ನು ಬಂಧಿಸಿದ್ದ ಹಿನ್ನೆಲೆಯಲ್ಲಿ ಮಾ.19 ರ ಮಧ್ಯಾಹ್ನ 12 ಗಂಟೆಯವರೆಗೆ ಇಂಟರ್‌ನೆಟ್‌ ನಿರ್ಭಂದಿಸಿತ್ತು, ಈಗ ಸೋಮವಾರದವರೆಗೂ ಮೊಬೈಲ್ ಇಂಟರ್ ನೆಟ್ ಹಾಗೂ ಎಸ್ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಿಖ್ ಸಮುದಾಯದ ತೀವ್ರಗಾಮಿ ಹಾಗೂ ಖಲಿಸ್ತಾನ ಬೆಂಬಲಿಗ ಅಮೃತ್ ಪಾಲ್ ಸಿಂಗ್ ಗೆ ಶೋಧಕಾರ್ಯಾಚರಣೆ ಮುಂದುವರೆದಿದೆ.ಪೊಲೀಸ್ ಅಧಿಕಾರಿಗಳು ಶೋಧಕಾರ್ಯಾಚರಣೆ ಬಗ್ಗೆ ಮಾತನಾಡಿದ್ದು, ಶೀಘ್ರವೇ ಬಂಧಿಸಲಾಗುತ್ತದೆ ಎಂದು ಹೇಳಿದ್ದಾರೆ. ಬ್ಯಾಂಕಿಂಗ್ ಸೇವೆಗಳಿಗೆ ಆಸ್ಪತ್ರೆ ಸೇವೆಗಳು ಹಾಗೂ

ಇಂಟರ್ ನೆಟ್ ನಿರ್ಬಂಧ ವಿಸ್ತರಿಸಿದ ಪಂಜಾಬ್ Read More »

ಅಕ್ರಮ ಗಣಿಗಾರಿಕೆ: 5.21 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ

ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಬೆಂಗಳೂರು ವಲಯ ಕಚೇರಿಯು ಮಿನರಲ್ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ಅದರ ಅಧಿಕಾರಿಗಳಿಗೆ ಸೇರಿದ 5.21 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.ಅಧಿಕಾರಿಗಳ ಪ್ರಕಾರ, ಜಪ್ತಿ ಮಾಡಲಾದ ಆಸ್ತಿಗಳು ಆರೋಪಿಗಳ ಒಡೆತನದ ಆರು ಸ್ಥಿರಾಸ್ತಿಗಳ ರೂಪದಲ್ಲಿವೆ. ವಿಶೇಷ ತನಿಖಾ ತಂಡ ಮತ್ತು ಕರ್ನಾಟಕ ಲೋಕಾಯುಕ್ತ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇ.ಡಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ

ಅಕ್ರಮ ಗಣಿಗಾರಿಕೆ: 5.21 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ Read More »

ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳಿಗೆ ಎಐಸಿಸಿ ಹೆಸರಲ್ಲಿ ಕರೆ ಮಾಡಿ ವಂಚಿಸಲು ಯತ್ನ

ಬೆಂಗಳೂರು : ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳಿಗೆ ಎಐಸಿಸಿ ಹೆಸರಲ್ಲಿ ಕರೆ ಮಾಡಿ ವಂಚಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ದಿಲ್ಲಿಯ ಎಐಸಿಸಿ ಕಚೇರಿಯಿಂದ ಮಾತಾಡುತ್ತಿದ್ದೇವೆ ಎಂದು ಟಿಕೆಟ್ ಆಕಾಂಕ್ಷಿಗಳಿಗೆ ಕರೆ ಮಾಡಿ ವಂಚಿಸಲು ಯತ್ನಿಸಿದ್ದಾರೆ. 8287309623 ಮೊಬೈಲ್ ನಂಬರ್​​ನಿಂದ ಅಪರಿಚಿತ ವ್ಯಕ್ತಿಗಳು ಆಕಾಂಕ್ಷಿಗಳಿಗೆ ಕರೆ ಮಾಡಿ ಹಣ ಸುಲಿಯಲು ಯತ್ನಿಸಿದ್ದಾರೆ. 2 ಮತ್ತು 3ನೇ ಸ್ತರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ವಂಚಕರು ಕರೆ ಮಾಡಿ ವಿಧಾನಸಭಾ ಚುನಾವಣೆ ಸ್ಪರ್ಧೆ ಸಂಬಂಧ ಪಟ್ಟಿ ಸಿದ್ಧಗೊಂಡಿದೆ. ಚುನಾವಣೆ ಪಟ್ಟಿಯಲ್ಲಿ ನಿಮ್ಮ

ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳಿಗೆ ಎಐಸಿಸಿ ಹೆಸರಲ್ಲಿ ಕರೆ ಮಾಡಿ ವಂಚಿಸಲು ಯತ್ನ Read More »

ಪ್ರಜಾಪ್ರಭುತ್ವದ ಯಶಸ್ಸಿನಿಂದ ಕೆಲವರಿಗೆ ಮನಸ್ತಾಪ: ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ

ದೆಹಲಿ : ಭಾರತದಲ್ಲಿ ಪ್ರಜಾಪ್ರಭುತ್ವದ ಯಶಸ್ಸಿನಿಂದ ಕೆಲವರು ಕಂಗಾಲಾಗಿದ್ದಾರೆ. ಹೀಗಾಗಿ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ ಎಂದು ಪ್ರದಾನಿ ನರೇಂದ್ರ ಮೋದಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಕುಟುಕಿದ್ದಾರೆ. ಲಂಡನ್‌ನಲ್ಲಿ ರಾಹುಲ್ ಗಾಂಧಿ ಭಾರತದಲ್ಲಿ ಪ್ರಜಾಪ್ರಭುತ್ವ ದಾಳಿಗೆ ತುತ್ತಾಗುತ್ತಿದೆ ಎಂದು ನೀಡಿರುವ ಹೇಳಿಕೆ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮೋದಿ ತೀಕ್ಷ್ಣ ವಾಗ್ದಾಳಿ ನಡೆಸಿದರು. ದೇಶ ಅತ್ಯಂತ ಆತ್ಮವಿಶ್ವಾಸದಲ್ಲಿ ಇರುವ ಸಂದರ್ಭದಲ್ಲಿ ಇಡೀ ವಿಶ್ವದ ಬೌದ್ಧಿಕ ಸಮುದಾಯ ಭಾರತದ ಬಗ್ಗೆ

ಪ್ರಜಾಪ್ರಭುತ್ವದ ಯಶಸ್ಸಿನಿಂದ ಕೆಲವರಿಗೆ ಮನಸ್ತಾಪ: ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ Read More »

ಪೊದೆಯ ಮಧ್ಯೆ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿಟ್ಟ ದೇವರ ವಿಗ್ರಹಗಳು ಪತ್ತೆ

ಮಂಗಳೂರು : ಮಂಗಳೂರಿನ ಪಂಪ್‌ವೆಲ್‌-ಕುದ್ಕೋರಿ ಗುಡ್ಡೆ ಮುಖ್ಯರಸ್ತೆ ಸಮೀಪದ ಪೊದೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿಟ್ಟಿದ್ದ ದೇವರ ವಿಗ್ರಹಗಳು ಪತ್ತೆಯಾಗಿವೆ. ಶಾರಾದಾ ದೇವಿಯ 2.5 ಇಂಚು ಉದ್ದದ, ಗಣಪತಿಯ 1 ಇಂಚು ಉದ್ದದ, ಲಕ್ಷ್ಮೀ ದೇವಿಯ 2 ಇಂಚು ಉದ್ದದ, ಹಿತ್ತಾಳೆಯ ನಂದಿಯ 1 ಇಂಚು ಉದ್ದದ, ಕಂಚಿನ ದತ್ತಾತ್ರೇಯ ದೇವರ 6 ಇಂಚು ಉದ್ದ ಹಾಗೂ ಹಿತ್ತಾಳೆಯ ನಾಗದೇವರ 2 ಇಂಚು ಉದ್ದದ ವಿಗ್ರಹಗಳು ಪತ್ತೆಯಾಗಿವೆ. ಈ ವಿಗ್ರಹಗಳ ವಾರಸುದಾರರು ಇದ್ದಲ್ಲಿ ಸೂಕ್ತ ದಾಖಲೆಯೊಂದಿಗೆ ಮಂಗಳೂರು ಪೂರ್ವ

ಪೊದೆಯ ಮಧ್ಯೆ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿಟ್ಟ ದೇವರ ವಿಗ್ರಹಗಳು ಪತ್ತೆ Read More »

error: Content is protected !!
Scroll to Top