ದೇಶ

ನಾಲ್ಕು ಅಂತಸ್ತಿನ ಕಟ್ಟಡ ಕುಸಿತ : ನಾಲ್ವರು ಸಾವು

ನವದೆಹಲಿ: ದೆಹಲಿಯ ಮುಸ್ತಫಾಬಾದ್‌ ಪ್ರದೇಶದಲ್ಲಿ ಇಂದು ನಸುಕಿನ ಜಾವ 4 ಅಂತಸ್ತಿನ ಕಟ್ಟಡ ಕುಸಿದು ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ 18 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ ಕೆಲವರು ಅವಶೇಷಗಳ ಅಡಿ ಸಿಲುಕಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಶಾನ್ಯ ದೆಹಲಿಯ ದಯಾಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ಚಾಂದಿನಿ, ದಾನಿಶ್, ರೇಷ್ಮಾ ಮತ್ತು ನವೀದ್ ಎಂದು ಗುರುತಿಸಲಾಗಿದೆ. ಕಟ್ಟಡ ಕುಸಿದಾಗ ಸುಮಾರು 24 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು ಅವರಲ್ಲಿ 18 ಮಂದಿಯನ್ನ […]

ನಾಲ್ಕು ಅಂತಸ್ತಿನ ಕಟ್ಟಡ ಕುಸಿತ : ನಾಲ್ವರು ಸಾವು Read More »

ಬ್ರಾಹ್ಮಣ ಸಮುದಾಯದವರ ಕ್ಷಮೆ ಕೇಳಿದ ಬಾಲಿವುಡ್‌ ನಿರ್ದೇಶಕ ಅನುರಾಗ್‌ ಕಶ್ಯಪ್‌

ಫುಲೆ ಚಿತ್ರ ವಿವಾದ ಹಿನ್ನೆಲೆಯಲ್ಲಿ ಬ್ರಾಹ್ಮಣರನ್ನು ಹೀನ ಮಾತಿನಿಂದ ನೋಯಿಸಿದ್ದ ನಿರ್ದೇಶಕ ಮುಂಬೈ: ಸಾವಿತ್ರಿಭಾಯಿ ಪುಲೆ ಜೀವನಾಧಾರಿತ ಸಿನಿಮಾವನ್ನು ಟೀಕಿಸುವ ಭರದಲ್ಲಿ ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ ಎಂದು ಪ್ರಶ್ನಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಬಾಲಿವುಡ್‌ನ ಖ್ಯಾತ ನಿರ್ದೇಶಕ-ನಟ ಅನುರಾಗ್ ಕಶ್ಯಪ್ ಕೊನೆಗೆ ಕ್ಷಮೆ ಯಾಚಿಸಿ ಈ ವಿವಾದವನ್ನು ಮುಕ್ತಾಯಗೊಳಿಸಲು ಪ್ರಯತ್ನಿಸಿದ್ದಾರೆ.ಸಾವಿತ್ರಿಬಾಯಿ ಪುಲೆ ಜೀವಾಧಾರಿತ ಸಿನಿಮಾಕ್ಕೆ ಸೆನ್ಸಾರ್‌ ಮಂಡಳಿ ಯು ಸರ್ಟಿಫಿಕೇಟ್ ನೀಡಿ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿತ್ತು. ಪ್ರಮುಖವಾಗಿ ಈ

ಬ್ರಾಹ್ಮಣ ಸಮುದಾಯದವರ ಕ್ಷಮೆ ಕೇಳಿದ ಬಾಲಿವುಡ್‌ ನಿರ್ದೇಶಕ ಅನುರಾಗ್‌ ಕಶ್ಯಪ್‌ Read More »

ತಮಿಳು ನಟ-ರಾಜಕಾರಣಿ ವಿಜಯ್‌ ವಿರುದ್ಧ ಜಾರಿಯಾಯಿತು ಫತ್ವಾ

ಇಫ್ತಾರ್‌ ಕೂಟಕ್ಕೆ ಕುಡುಕರನ್ನು ಆಹ್ವಾನಿಸಿದ್ದಕ್ಕೆ ಫತ್ವಾ ಚೆನ್ನೈ: ಇತ್ತೀಚೆಗೆ ರಾಜಕೀಯಕ್ಕೆ ಪ್ರವೇಶಿಸಿರುವ ತಮಿಳಿನ ಖ್ಯಾತ ಹೀರೊ ವಿಜಯ್‌ ವಿರುದ್ಧ ಉತ್ತರ ಪ್ರದೇಶದ ಬರೇಲಿಯ ಸುನ್ನಿ ಮುಸ್ಲಿಮ್‌ ಮಂಡಳಿ ಫತ್ವಾ ಜಾರಿಗೊಳಿಸಿದೆ. ಅಖಿಲ ಭಾರತ ಮುಸ್ಲಿಮ್‌ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಚಶ್ಮೆ ದಾರೂಲ್‌ ಇಫ್ತಾದ ಮುಖ್ಯ ಮುಫ್ತಿ ಆಗಿರುವ ಮೌಲಾನ ಶಹಾಬುದ್ದೀನ್‌ ರಝ್ವಿ ಬರೇಲಿ ಅವರು ನಟ ವಿಜಯ್‌ ವಿರುದ್ಧ ಫತ್ವಾ ಜಾರಿಗೊಳಿಸಿದ್ದಾರೆ. ರಮ್ಜಾನ್‌ ಉಪವಾಸ ವ್ರತದ ಸಂದರ್ಭದಲ್ಲಿ ಆಯೋಜಿಸಿದ ಇಫ್ತಾರ್‌ ಕೂಟಕ್ಕೆ ಮದ್ಯ ಸೇವಿಸುವವರನ್ನು ಮತ್ತು

ತಮಿಳು ನಟ-ರಾಜಕಾರಣಿ ವಿಜಯ್‌ ವಿರುದ್ಧ ಜಾರಿಯಾಯಿತು ಫತ್ವಾ Read More »

ಐಪಿಎಲ್‌ ಪಂದ್ಯಗಳ ಮೇಲೆ ಮತ್ತೆ ಫಿಕ್ಸಿಂಗ್‌ ಕರಿನೆರಳು

ಉಡುಗೊರೆ, ಪಾರ್ಟಿಗಳ ಮೂಲಕ ಆಟಗಾರರನ್ನು ಸೆಳೆಯಲು ಯತ್ನಿಸುತ್ತಿರುವ ಉದ್ಯಮಿ ಮುಂಬಯಿ: ಐಪಿಎಲ್‌ ಮೇಲೆ ಮತ್ತೊಮ್ಮೆ ಫಿಕ್ಸಿಂಗ್‌ ಕರಿನೆರಳು ಆವರಿಸಿದೆ. ಹೈದರಾಬಾದ್‌ ಮೂಲದ ಉದ್ಯಮಿಯೊಬ್ಬ ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ ಪಂದ್ಯಗಳನ್ನು ಫಿಕ್ಸ್‌ ಮಾಡಲು ಯತ್ನಿಸುತ್ತಿದ್ದಾನೆ ಎಂಬ ಗುಪ್ತ ಮಾಹಿತಿ ಸಿಕ್ಕಿದ ಬಳಿಕ ಬಿಸಿಸಿಐ ಅಲರ್ಟ್‌ ಆಗಿದೆ.ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ ಐಪಿಎಲ್‌ ಲೀಗ್‌ನ ಎಲ್ಲ 10 ತಂಡಗಳಿಗೆ ಫಿಕ್ಸಿಂಗ್‌ ಬಗ್ಗೆ ಎಚ್ಚರಿಕೆ ರವಾನಿಸಿ ಉದ್ಯಮಿ ಯಾವುದೇ ರೀತಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೆ ಕೂಡಲೇ ತಿಳಿಸಿ ಎಂದು ಸೂಚಿಸಿದೆ.ಉದ್ಯಮಿ

ಐಪಿಎಲ್‌ ಪಂದ್ಯಗಳ ಮೇಲೆ ಮತ್ತೆ ಫಿಕ್ಸಿಂಗ್‌ ಕರಿನೆರಳು Read More »

ಒಗ್ಗಟ್ಟಾಗಿರಿ, ಇಲ್ಲದಿದ್ದರೆ ಸರಕಾರ ಬೀಳುತ್ತೆ : ಸಿಎಂ, ಡಿಸಿಎಂಗೆ ಖರ್ಗೆ ಪಾಠ

ಮೋದಿ, ಅಮಿತ್‌ ಶಾ ಕರ್ನಾಟಕ ಸರಕಾರ ಬೀಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪ ಬೆಂಗಳೂರು: ರಾಜ್ಯದಲ್ಲಿರುವ ನಮ್ಮ ಸರ್ಕಾರ ತೆಗೆಯಲು ಪ್ಲ್ಯಾನ್‌ ನಡೆದಿದೆ. ಒಗ್ಗಟ್ಟಾಗಿ ಇರದೆ ಹೋದರೆ ಸರ್ಕಾರ ಉರುಳಬಹುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತುಮ್ಮೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿದ್ದಾರೆ.ಕಲಬುರಗಿಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು, ನೀವು ಹುಷಾರಾಗಿರಬೇಕು. ಮೋದಿ, ಅಮಿತ್ ಶಾ ನಿಮ್ಮ ಸರ್ಕಾರ ಬೀಳಿಸುತ್ತಾರೆ. ನಿಮ್ಮಲ್ಲಿ ಏನೇ ಮನಸ್ತಾಪವಿದ್ದರೂ ಒಗ್ಗಟ್ಟಾಗಿರಬೇಕು ಎಂದು ವೇದಿಕೆಯಲ್ಲಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ಗೆ ಕಿವಿಮಾತು

ಒಗ್ಗಟ್ಟಾಗಿರಿ, ಇಲ್ಲದಿದ್ದರೆ ಸರಕಾರ ಬೀಳುತ್ತೆ : ಸಿಎಂ, ಡಿಸಿಎಂಗೆ ಖರ್ಗೆ ಪಾಠ Read More »

2 ಸಾವಿರ ಕೋ.ರೂ. ಮೌಲ್ಯದ ಆಸ್ತಿ 50 ಲ.ರೂ.ಗೆ ವರ್ಗಾವಣೆ : ಚಾರ್ಜ್‌ಶೀಟ್‌ನಲ್ಲಿದೆ ʼಕೈʼಚಳಕದ ಮಾಹಿತಿ

ನ್ಯಾಶನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಸೋನಿಯಾ, ರಾಹುಲ್‌ಗೆ ಸಂಕಷ್ಟ ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಕೇಸ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಜ್ಯಸಭೆ ಸದಸ್ಯೆ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪಕ್ಷದ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ವಿರುದ್ಧ ಜಾರಿ ನಿರ್ದೇಶನಾಲಯ ಮಂಗಳವಾರ ದಿಲ್ಲಿಯ ರೋಸ್‌ ಅವೆನ್ಯೂ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸುವುದರೊಂದಿಗೆ ಕಾಂಗ್ರೆಸ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ನ್ಯಾಶನಲ್‌ ಹೆರಾಲ್ಡ್‌ನ ಕೋಟಿಗಟ್ಟಲೆ ಮೊತ್ತದ ಆಸ್ತಿಯನ್ನು ಕಬಳಿಸಲು ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಸೇರಿ ಕಾಂಗ್ರೆಸ್‌ನ

2 ಸಾವಿರ ಕೋ.ರೂ. ಮೌಲ್ಯದ ಆಸ್ತಿ 50 ಲ.ರೂ.ಗೆ ವರ್ಗಾವಣೆ : ಚಾರ್ಜ್‌ಶೀಟ್‌ನಲ್ಲಿದೆ ʼಕೈʼಚಳಕದ ಮಾಹಿತಿ Read More »

ಇಂದಿನಿಂದ ವಕ್ಪ್‌ ಕಾನೂನು ಹೋರಾಟ : ಸುಪ್ರೀಂ ಕೋರ್ಟಿನಲ್ಲಿ 73 ಅರ್ಜಿಗಳ ವಿಚಾರಣೆ

ನವದೆಹಲಿ: ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ಒಂದೆಡೆ ಬೀದಿ ಹೋರಾಟಗಳು ನಡೆಯುತ್ತಿದ್ದರೆ ಇಂದಿನಿಂದ ಸುಪ್ರೀಂ ಕೋರ್ಟಿನಲ್ಲಿ ಕಾನೂನು ಹೋರಾಟವೂ ಶುರುವಾಗಲಿದೆ. ವಕ್ಫ್‌ ತಿದ್ದುಪಡಿ ಮಸೂದೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ 73 ಅರ್ಜಿಗಳ ಗುಚ್ಚವನ್ನು ಸುಪ್ರೀಂ ಕೋರ್ಟ್‌ ಇಂದು ವಿಚಾರಣೆಗೆತ್ತಿಕೊಳ್ಳಲಿದೆ.ವಕ್ಫ್‌ ಕಾಯಿದೆಗೆ ತಿದ್ದಪಡಿ ಮಾಡುವ ಮೂಲಕ ಮುಸ್ಲಿಮರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ ಮತ್ತು ಅವರ ಆಸ್ತಿಯನ್ನು ಕಬಳಿಸುವ ಹುನ್ನಾರವಿದೆ. ಸಂವಿಧಾನದಲ್ಲಿ ವಕ್ಫ್‌ ಕಾಯಿದೆಗೆ ತಿದ್ದುಪಡಿ ಮಾಡಲು ಅವಕಾಶ ಇಲ್ಲ ಎಂದು ಮಸೂದೆಯನ್ನು ವಿರೋಧಿಸುವವರು ವಾದಿಸುತ್ತಿದ್ದಾರೆ.ವಕ್ಫ್‌ ಆಸ್ತಿಗಳ ನಿರ್ವಹಣೆಯಲ್ಲಿ

ಇಂದಿನಿಂದ ವಕ್ಪ್‌ ಕಾನೂನು ಹೋರಾಟ : ಸುಪ್ರೀಂ ಕೋರ್ಟಿನಲ್ಲಿ 73 ಅರ್ಜಿಗಳ ವಿಚಾರಣೆ Read More »

ಆಸ್ಪತ್ರೆಯಲ್ಲಿ ಅಗ್ನಿ ಅವಘಡ : ಓರ್ವ ರೋಗಿ ಸಾವು; ಇಬ್ಬರು ಗಂಭೀರ

ಲಖನೌ: ಇಲ್ಲಿನ ಲೋಕಬಂಧು ಸರಕಾರಿ ಆಸ್ಪತ್ರೆಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಒಬ್ಬ ರೋಗಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಮಾರು 200 ರೋಗಿಗಳನ್ನು ಕ್ಷಿಪ್ರವಾಗಿ ರಕ್ಷಿಸಿದ ಪರಿಣಾಮವಾಗಿ ಭಾರಿ ದುರಂತ ಸಂಭವಿಸುವುದು ತಪ್ಪಿದೆ. ರಾತ್ರಿ 10.30ರ ವೇಳೆಗೆ ಬೆಂಕಿ ಕಾಣಿಸಿಕೊಂಡು ಕ್ಷಿಪ್ರವಾಗಿ ಹರಡಿದೆ. ಇಡೀ ಆಸ್ಪತ್ರೆ ಹೊಗೆಯಿಂದ ಆವೃತ್ತವಾಗಿದ್ದು, ತುರ್ತು ನಿಗಾ ಘಟಕಕ್ಕೂ ವ್ಯಾಪಿಸಿತ್ತು. ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಮಹಿಳಾ ವಾರ್ಡ್‌ ಮತ್ತು ತುರ್ತು ಚಿಕಿತ್ಸೆ ಘಟಕದಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡಿರುವ

ಆಸ್ಪತ್ರೆಯಲ್ಲಿ ಅಗ್ನಿ ಅವಘಡ : ಓರ್ವ ರೋಗಿ ಸಾವು; ಇಬ್ಬರು ಗಂಭೀರ Read More »

ಬ್ಯಾಂಕಿಗೆ 13,850 ಕೋ. ರೂ. ವಂಚಿಸಿದ ಉದ್ಯಮಿ ಮೆಹುಲ್‌ ಚೋಕ್ಸಿ ಬೆಲ್ಜಿಯಂನಲ್ಲಿ ಬಂಧನ

2019ರಲ್ಲಿ ದೇಶ ಬಿಟ್ಟು ಪಲಾಯನ ಮಾಡಿದ್ದ ಪ್ರತಿಷ್ಠಿತ ವಜ್ರೋದ್ಯಮಿ ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,000 ಕೋ.ರೂ.ಗೂ ಹೆಚ್ಚು ಮೊತ್ತ ವಂಚಿಸಿ ಪಲಾಯನ ಮಾಡಿದ್ದ ಪ್ರತಿಷ್ಠಿತ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂ ದೇಶದಲ್ಲಿ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಭಾರತೀಯ ತನಿಖಾ ಸಂಸ್ಥೆಗಳ ಕೋರಿಗೆ ಮೇರೆಗೆ ಏಪ್ರಿಲ್‌ 12ರಂದು ಮೆಹುಲ್‌ ಚೋಕ್ಸಿಯನ್ನು ಬೆಲ್ಜಿಯಂನ ಆಸ್ಪತ್ರೆಯಲ್ಲಿ ಬಂಧಿಸಲಾಯಿತು ಎಂದು ತಿಳಿದುಬಂದಿದೆ. ಅವನನ್ನು ಭಾರತಕ್ಕೆ ಕರೆತರಲು ತನಿಖಾ ಸಂಸ್ಥೆಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಕಾನೂನು ಹೋರಾಟ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಮೂಲಗಳು

ಬ್ಯಾಂಕಿಗೆ 13,850 ಕೋ. ರೂ. ವಂಚಿಸಿದ ಉದ್ಯಮಿ ಮೆಹುಲ್‌ ಚೋಕ್ಸಿ ಬೆಲ್ಜಿಯಂನಲ್ಲಿ ಬಂಧನ Read More »

ಪಶ್ಚಿಮ ಬಂಗಾಳ : ಮೂವರು ಸಾವು; 150ಕ್ಕೂ ಅಧಿಕ ಬಂಧನ

ವಕ್ಫ್‌ ಕಾಯಿದೆ ವಿರೋಧಿ ಪ್ರತಿಭಟನೆ ವೇಳೆ ಭಾರಿ ಹಿಂಸಾಚಾರ ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿದೆ. ತಂದೆ ಮತ್ತು ಮಗ ಸೇರಿ ಈವರೆಗೆ ಒಟ್ಟು ಮೂವರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಶುಕ್ರವಾರದ ಪ್ರಾರ್ಥನೆಯ ನಂತರ ಭುಗಿಲೆದ್ದ ಹಿಂಸಾಚಾರ ಮುರ್ಷಿದಾಬಾದ್‌ ಜಿಲ್ಲೆಯ ಹಲವು ಭಾಗಗಳಿಗೆ ವ್ಯಾಪಿಸಿದ್ದು, ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿವೆ. ಕಳೆದ ರಾತ್ರಿ ಪೊಲೀಸರು, ಅರೆಸೇನಾ ಪಡೆಗಳು ಸಂಪೂರ್ಣ ಗಸ್ತು ತಿರುಗಿದ್ದು, ಸುತಿ,

ಪಶ್ಚಿಮ ಬಂಗಾಳ : ಮೂವರು ಸಾವು; 150ಕ್ಕೂ ಅಧಿಕ ಬಂಧನ Read More »

error: Content is protected !!
Scroll to Top