ದೇಶ

ಗುಜರಾತ್​ನ ನಕಲಿ ಎನ್​ಕೌಂಟರ್ ಪ್ರಕರಣದಲ್ಲಿ ಮೋದಿಯವರನ್ನು ಸಿಲುಕಿಸಲು ನನ್ನ ಮೇಲೆ ಸಿಬಿಐ ಒತ್ತಡ ಹಾಕಿತ್ತು : ಅಮಿತ್ ಶಾ

ದೆಹಲಿ : ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಗುಜರಾತ್​ನ ನಕಲಿ ಎನ್​ಕೌಂಟರ್ ಪ್ರಕರಣದಲ್ಲಿ ನರೇಂದ್ರ ಮೋದಿಯವರನ್ನು ಸಿಲುಕಿಸಲು ನನ್ನ ಮೇಲೆ ಸಿಬಿಐ ಒತ್ತಡ ಹಾಕಿತ್ತು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕೇಂದ್ರದ ಉನ್ನತ ತನಿಖಾ ಸಂಸ್ಥೆಗಳು ಹೇಗೆ ದುರ್ಬಳಕೆಯಾಗುತ್ತಿದ್ದವು ಎಂಬುದಕ್ಕೆ ನಾನೇ ದೊಡ್ಡ ಉದಾಹರಣೆ, ನಾನು ಗುಜರಾತ್​ನ ಗೃಹ ಸಚಿವನಾಗಿದ್ದಾಗ ರಾಜ್ಯದಲ್ಲಿ ಒಂದು ಎನ್​ಕೌಂಟರ್​ ನಡೆದಿತ್ತು, ನನ್ನ ವಿರುದ್ಧ ಪ್ರಕರಣ ದಾಖಲಾಯಿತು ಹಾಗೂ ಸಿಬಿಐ ನನ್ನನ್ನು ಬಂಧಿಸಿದ್ದರು. ಇಡೀ ತನಿಖೆಯುದ್ದಕ್ಕೂ ಮೋದಿ […]

ಗುಜರಾತ್​ನ ನಕಲಿ ಎನ್​ಕೌಂಟರ್ ಪ್ರಕರಣದಲ್ಲಿ ಮೋದಿಯವರನ್ನು ಸಿಲುಕಿಸಲು ನನ್ನ ಮೇಲೆ ಸಿಬಿಐ ಒತ್ತಡ ಹಾಕಿತ್ತು : ಅಮಿತ್ ಶಾ Read More »

ರಾಮ ಮಂದಿರದ ಹೊರಗೆ ಎರಡು ಗುಂಪುಗಳ ನಡುವೆ ಘರ್ಷಣೆ, ಕಲ್ಲು ತೂರಾಟ

ಮಹಾರಾಷ್ಟ್ರ : ಛತ್ರಪತಿ ಸಂಭಾಜಿನಗರದ ಕಿರಾದ್‌ಪುರ ಪ್ರದೇಶದಲ್ಲಿ ಬುಧವಾರ ರಾತ್ರಿ ರಾಮ ಮಂದಿರದ ಹೊರಗೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.ಎರಡು ಗುಂಪುಗಳ ಜನರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಮಾ. 29 ಮತ್ತು 30ರ ಮಧ್ಯರಾತ್ರಿ ಘರ್ಷಣೆ ಸಂಭವಿಸಿದೆ. ವಿಷಯ ಉಲ್ಬಣಗೊಂಡಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು ಗುಂಪು ದೇವಾಲಯದ ಹೊರಗೆ ನಿಲ್ಲಿಸಲಾಗಿದ್ದ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಗುಂಪನ್ನು ಚದುರಿಸಲು

ರಾಮ ಮಂದಿರದ ಹೊರಗೆ ಎರಡು ಗುಂಪುಗಳ ನಡುವೆ ಘರ್ಷಣೆ, ಕಲ್ಲು ತೂರಾಟ Read More »

ಆನ್‌ಲೈನ್‌ನಲ್ಲಿ ಫೇಸ್‌ಕ್ರೀಂಗಾಗಿ 2 ಲಕ್ಷ ರೂ. ಕಳೆದುಕೊಂಡ ಮಹಿಳೆ

ಲಿಂಕ್‌ ಕಳುಹಿಸಿ ಹಣ ಎಗರಿಸಿದ ಖದೀಮ ಉಡುಪಿ : ಆನ್‌ಲೈನ್‌ನಲ್ಲಿ ಫೇಸ್‌ಕ್ರೀಂ ಬಗ್ಗೆ ಮಾಹಿತಿ ಹುಡುಕಲು ಹೋದ ಮಹಿಳೆಯೊಬ್ಬರು ಸುಮಾರು 2 ಲ.ರೂ. ಕಳೆದುಕೊಂಡಿರುವ ಬಗ್ಗೆ ಉಡುಪಿ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಡುಪಿಯ ಜ್ಯೋತಿ (32) ಹಣ ಕಳೆದುಕೊಂಡವರು. ಫೇಸ್‌ಕ್ರೀಂ ಬಗ್ಗೆ ಆನ್‌ಲೈನ್‌ನಲ್ಲಿ ಮಾಹಿತಿ ಕಲೆ ಹಾಕುತ್ತಿದ್ದ ವೇಳೆ ದೊರೆತ ನಂಬರ್‌ಗೆ ಕರೆ ಮಾಡಿದ್ದು, ಆಗ ವ್ಯಕ್ತಿಯೊಬ್ಬ ನೋಂದಣಿ ಮಾಡುವಂತೆ ಸೂಚಿಸಿದ್ದಾನೆ. ಮಾ.22 ರಂದು ಮತ್ತೆ ಕರೆ ಮಾಡಿದ ವ್ಯಕ್ತಿ ಈ ಹಿಂದೆ ಮಾಡಿದ ಮಾಹಿತಿ

ಆನ್‌ಲೈನ್‌ನಲ್ಲಿ ಫೇಸ್‌ಕ್ರೀಂಗಾಗಿ 2 ಲಕ್ಷ ರೂ. ಕಳೆದುಕೊಂಡ ಮಹಿಳೆ Read More »

ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವ ಆಮಿಷವೊಡ್ಡಿ ಸಹಪಾಠಿಗಳಿಗೆ 28 ಲಕ್ಷ ರೂ. ಪಂಗನಾಮ

ಮಂಗಳೂರು : ಸುರತ್ಕಲ್‌ನ ಎನ್‌ಐಟಿಕೆ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳಿಗೇ ಸುಮಾರು 28 ಲ.ರೂ. ಪಂಗನಾಮ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕ ಲಾಭ ನೀಡುವುದಾಗಿ ಹಣ ಪಡೆದು ವಂಚಿಸಿರುವ ಬಗ್ಗೆ ವಿದ್ಯಾರ್ಥಿ ಯಶ್‌ವರ್ಧನ್‌ ಜೈನ್ ಎಂಬಾತನ ವಿರುದ್ಧ ಕೇಸು ದಾಖಲಾಗಿದೆ.. 2022ರ ಮಾರ್ಚ್‌ನಿಂದ ವಾಟ್ಸಪ್ ಗ್ರೂಪ್‌ನಲ್ಲಿ ಎನ್‌ಐಟಿಕೆ ವಿದ್ಯಾರ್ಥಿಗಳಿಗೆ ಒಂದು ವಾರದಲ್ಲಿ ಶೇ.10ರಷ್ಟು ಅಧಿಕ ಲಾಭ ನೀಡುವುದಾಗಿ ಭರವಸೆ ನೀಡಿ ಹಣ ಪಡೆದಿದ್ದ. ಅಕ್ಟೋಬರ್ ತಿಂಗಳಿನಲ್ಲಿ ‘ವೈವಿಜೆ ಇನ್‌ವೆಸ್ಟ್‌ಮೆಂಟ್ ಎಂಟರ್‌ಪ್ರೈಸಸ್ ಎಂಬ ಹೆಸರಿನ ಟೆಲಿಗ್ರಾಂ ಗ್ರೂಪ್ ಮಾಡಿದ್ದ.

ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವ ಆಮಿಷವೊಡ್ಡಿ ಸಹಪಾಠಿಗಳಿಗೆ 28 ಲಕ್ಷ ರೂ. ಪಂಗನಾಮ Read More »

ಮತದಾನ ಪ್ರಮಾಣ ಹೆಚ್ಚಿಸಲು ಹಾಗೂ ಸರಣಿ ರಜೆ ತಪ್ಪಿಸಲು ವಾರದ ಮಧ್ಯೆ ಚುನಾವಣೆ

ಬೆಂಗಳೂರು : ಈ ಸಲ ನಡೆಯುವ ವಿಧಾನಸಭೆ ಚುನಾವಣೆ ಮೆ 10 ಬುಧವಾರ ಬರುತ್ತದೆ. ಬುಧವಾರವನ್ನೇ ಆಯ್ಕೆ ಮಾಡಿಕೊಳ್ಳಲು ಚುನಾವಣಾ ಆಯೋಗ ಕಾರಣ ಕೊಟ್ಟಿದೆ. ಒಂದು ವೇಳೆ ಚುನಾವಣೆ ಸೋಮವಾರ ನಿಗದಿ ಮಾಡಿದ್ದರೆ ಆ ದಿನ ರಜೆಯಾದ್ದರಿಂದ ದೀರ್ಘ ವಾರಾಂತ್ಯ ಎಂದು ತೆರಳುವವರ ಸಂಖ್ಯೆ ಹೆಚ್ಚಾಗುತ್ತಿತ್ತು. ಇದರಿಂದ ಮತದಾನ ಕಡಿಮೆಯಾಗುತ್ತಿತ್ತು. ಮಂಗಳವಾರ ಚುನಾವಣೆ ನಿಗದಿ ಮಾಡಿದ್ದರೂ ಸೋಮವಾರ ಒಂದು ದಿನ ರಜೆ ಪಡೆದುಕೊಂಡರೆ ಒಟ್ಟು ನಾಲ್ಕು ದಿನಗಳ ರಜೆ ಸಿಗುತ್ತದೆ ಎಂದು ಪ್ರವಾಸ ತೆರಳುತ್ತಾರೆ.ಬುಧವಾರವಾದರೆ ಹೆಚ್ಚುವರಿಯಾಗಿ ಎರಡು

ಮತದಾನ ಪ್ರಮಾಣ ಹೆಚ್ಚಿಸಲು ಹಾಗೂ ಸರಣಿ ರಜೆ ತಪ್ಪಿಸಲು ವಾರದ ಮಧ್ಯೆ ಚುನಾವಣೆ Read More »

ದಿವ್ಯಾಂಗರು ಹಾಗೂ ಹಿರಿಯ ಮತದಾರರ ಅನುಕೂಲಕ್ಕಾಗಿ ವೋಟ್‌ ಫ್ರಂ ಹೋಮ್‌

ಈ ಸಲ ಮನೆಯಿಂದಲೇ ಮತಚಲಾಯಿಸುವ ಸೌಲಭ್ಯ ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ದೇಶದಲ್ಲೇ ಇದೇ ಮೊದಲ ಬಾರಿಗೆ ಹಿರಿಯ ಮತ್ತು ವಿಶೇಷ ಚೇತನ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ (ವೋಟ್‌ ಫ್ರಮ್‌ ಹೋಮ್) ಸೌಲಭ್ಯ ಕಲ್ಪಿಸಲಾಗಿದೆ. ನಿನ್ನೆ ಚುನಾವಣೆ ದಿನಾಂಕ ಘೋಷಣೆ ಮಾಡುವಾಗ ಮುಖ್ಯ ಚುನಾವಣಾ ಆಯಕ್ತ ರಾಜೀವ್‌ ಕುಮಾರ್‌ ಇದೇ ಮೊದಲ ಬಾರಿಗೆ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ (ವೋಟ್‌ ಫ್ರಮ್‌ ಹೋಮ್) ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.‌ ದೇಶದಲ್ಲಿ ಇದೇ ಮೊದಲ ಬಾರಿಗೆ

ದಿವ್ಯಾಂಗರು ಹಾಗೂ ಹಿರಿಯ ಮತದಾರರ ಅನುಕೂಲಕ್ಕಾಗಿ ವೋಟ್‌ ಫ್ರಂ ಹೋಮ್‌ Read More »

ಪೊಲೀಸರ ಸಮಯ ಪ್ರಜ್ಞೆ : ಆತ್ಮಹತ್ಯೆಗೆ ಬಲಿಯಾಗುತ್ತಿದ್ದ ಯುವಕ ಬಚಾವ್

ದೆಹಲಿ : ಈಶಾನ್ಯ ದೆಹಲಿಯ ನಂದ್ ನಾಗ್ರಿ ಪ್ರದೇಶದಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವ ಮೂಲಕ ಆತ್ಮಹತ್ಯೆಗೆ ಯತ್ನಿಸುತ್ತಿದ್ದ 25 ವರ್ಷದ ಯುವಕನನ್ನು ಪೊಲೀಸರು ಸಮಯ ಪ್ರಜ್ಞೆ ಮೆರೆಯುವ ಮೂಲಕ ಆತನ ಜೀವ ಉಳಿಸಿರುವ ಘಟನೆ ದೆಹಲಿಯಲ್ಲಿ ವರದಿಯಾಗಿದೆ. ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನ ಮಾಹಿತಿ ಪಡೆದು ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಂಡು ಪ್ರಾಣ ಉಳಿಸಿದ್ದಾರೆ. ಸೋಮವಾರ ರಾತ್ರಿ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿತು. ಸಂತ್ರಸ್ತನ ಫೇಸ್‌ಬುಕ್

ಪೊಲೀಸರ ಸಮಯ ಪ್ರಜ್ಞೆ : ಆತ್ಮಹತ್ಯೆಗೆ ಬಲಿಯಾಗುತ್ತಿದ್ದ ಯುವಕ ಬಚಾವ್ Read More »

ಲೋಕಾಯುಕ್ತ ದಾಳಿ ಪ್ರಕರಣ : ಮಾಡಾಳ್ ವಿರೂಪಾಕ್ಷಪ್ಪ ಪೊಲೀಸ್ ಕಸ್ಟಡಿಗೆ

ಬೆಂಗಳೂರು : ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐದು ದಿನಗಳ ಕಾಲ ಲೋಕಾಯುಕ್ತ ಪೊಲೀಸ್ ಕಸ್ಟಡಿಗೆ ನೀಡಲು ಮಾ.28 ರಂದು ಆದೇಶ ಹೊರಡಿಸಿದೆ. ಜಾಮೀನು ರದ್ದಾದ ನಂತರ ನಿನ್ನೆ ಸಂಜೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು, ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.ಆರೋಪಿ ಶಾಸಕರ ವಿಚಾರಣೆ ನಡೆಸಿದ ಕೋರ್ಟ್, ಹೆಚ್ಚಿನ ವಿಚಾರಣೆಗಾಗಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಏಪ್ರಿಲ್ 1ರ ವರೆಗೆ

ಲೋಕಾಯುಕ್ತ ದಾಳಿ ಪ್ರಕರಣ : ಮಾಡಾಳ್ ವಿರೂಪಾಕ್ಷಪ್ಪ ಪೊಲೀಸ್ ಕಸ್ಟಡಿಗೆ Read More »

ಕೆಯ್ಯೂರು : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ. 26 ರ ರಾತ್ರಿ ಕೆಯ್ಯೂರು ಗ್ರಾಮದಲ್ಲಿ ಸಂಭವಿಸಿದೆ. ಶೇಷಪ್ಪ ಪೂಜಾರಿ (75) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಶೇಷಪ್ಪ ಪೂಜಾರಿಯವರ ಅಳಿಯ ಗೋಪಾಲ ಪೂಜಾರಿ ತನ್ನ ಅತ್ತೆ, ಹೆಂಡತಿ, ಮಕ್ಕಳೊಂದಿಗೆ ಕೆಯ್ಯೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಗೆ ಹೋಗಿದ್ದು, ಈ ಸಂದರ್ಭ ಮನೆಯಲ್ಲಿ ಒಬ್ಬರೇ ಇದ್ದ ಶೇಷಪ್ಪ ಪೂಜಾರಿಯವರು ಮನೆಯ ಗೋಡೆಗೆ ಅಡ್ಡವಾಗಿ ಹಾಕಿದ ತೆಂಗಿನ ಮರದ ಅಡ್ಡಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ನೇಣು ಬಿಗಿದು

ಕೆಯ್ಯೂರು : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ಆಧಾರ್‌ ಪಾನ್‌ ಗಡುವು ಜೂನ್‌ 30 ರವರೆಗೆ ವಿಸ್ತರಣೆ

ಮಂಗಳೂರು : ಪಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಜೋಡಿಸಲು ಇರುವ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ 2023ರ ಜೂನ್ 30ರವರೆಗೂ ವಿಸ್ತರಿಸಿದೆ. ಈ ಮೊದಲು 1 ಸಾವಿರ ರೂ ದಂಡ ಸಹಿತವಾಗಿ ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ 2023ರ ಮಾರ್ಚ್ 31ರವರೆಗೆ ಸಮಯ ನೀಡಲಾಗಿತ್ತು. ಕೊನೆಯ ದಿನ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧದ ಜನರ ಆಕ್ರೋಶ ತೀವ್ರಗೊಂಡಿತ್ತು. ಜತೆಗೆ ಜೋಡಣೆಗೆ ವೇದಿಕೆಯಾಗಿರುವ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ಈ ವಿಭಾಗ ತೆರೆದುಕೊಳ್ಳುತ್ತಲೇ ಇರಲಿಲ್ಲ. ಈ ತಾಂತ್ರಿಕ ದೋಷದ

ಆಧಾರ್‌ ಪಾನ್‌ ಗಡುವು ಜೂನ್‌ 30 ರವರೆಗೆ ವಿಸ್ತರಣೆ Read More »

error: Content is protected !!
Scroll to Top