ಛತ್ತೀಸ್‌ಗಢದಲ್ಲಿ 16 ನಕ್ಸಲರ ಹತ್ಯೆ
ರಾಯ್‌ಪುರ: ಛತ್ತೀಸ್‌ಗಢದ ಸುಕ್ಮಾ ಮತ್ತು ದಾಂತೆವಾಡ ಜಿಲ್ಲೆಗಳ ಗಡಿಭಾಗದಲ್ಲಿರುವ ಗೋಮಗುಂಡ ದಟ್ಟಾರಣ್ಯದಲ್ಲಿ ಇಂದು ಮತ್ತೆ 16 ನಕ್ಸಲರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ನಸುಕಿನ ವೇಳೆಗೆ ಪೊಲೀಸರು ಮತ್ತು ನಕ್ಸಲರ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದೆ. ನಿನ್ನೆಯಿಂದೀಚೆಗೆ ಇಲ್ಲಿ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಭದ್ರತಾ ಪಡೆಯ ಸಹಕಾರದೊಂದಿಗೆ ಕೂಂಬಿಂಗ್ ನಡೆಸುತ್ತಿದ್ದರು. ಇಂದು ನಸುಕಿನ ಹೊತ್ತು ಪೊಲೀಸರಿಗೆ ನಕ್ಸಲರು ಎದುರಾಗಿದ್ದು, ಗುಂಡಿನ ಕಾಳಗದಲ್ಲಿ 16 ನಕ್ಸಲರು ಸತ್ತಿರುವುದು ದೃಢಪಟ್ಟಿದೆ. ಇನ್ನೂ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ […]
ಛತ್ತೀಸ್‌ಗಢದಲ್ಲಿ 16 ನಕ್ಸಲರ ಹತ್ಯೆ Read More »










