ದೇಶ

ಐಪಿಎಲ್‌ ಪಂದ್ಯದಲ್ಲಿ ಅಭಿಮಾನಿಯೊಬ್ಬ ಪಂಜುರ್ಲಿ ದೈವದ ವೇಷಧಾರಿ : ತುಳುವರಿಂದ ಭಾರಿ ಆಕ್ರೋಶ

ತುಳುನಾಡಿನ ದೈವಗಳಿಗೆ ಅವಮಾನ ಮಾಡಬೇಡಿ-ಕಾಂತಾರ-2 ಬೇಡ ಎಂದು ಒತ್ತಾಯ ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ಐಪಿಎಲ್‌ ಪಂದ್ಯದಲ್ಲಿ ಅಭಿಮಾನಿಯೊಬ್ಬ ಪಂಜುರ್ಲಿ ದೈವದ ವೇಷ ಹಾಕಿಕೊಂಡು ಬಂದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತನ್ನ ನೆಚ್ಚಿನ ತಂಡಕ್ಕೆ ಬೆಂಬಲ ನೀಡಲು ಆತ ಪಂಜುರ್ಲಿ ವೇಷ ಹಾಕಿದ್ದಾನೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಈ ಫೋಟೊವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಕ್ರೀಡಾಂಗಣದಲ್ಲಿ ದೈವದ ವೇಷ ಹಾಕಿದ್ದನ್ನು ನೋಡಿ ತುಳುವರು ಆಕ್ರೋಶ […]

ಐಪಿಎಲ್‌ ಪಂದ್ಯದಲ್ಲಿ ಅಭಿಮಾನಿಯೊಬ್ಬ ಪಂಜುರ್ಲಿ ದೈವದ ವೇಷಧಾರಿ : ತುಳುವರಿಂದ ಭಾರಿ ಆಕ್ರೋಶ Read More »

ಐಪಿಎಲ್ 2023 : ಅರ್ಧಶತಕ, ದಾಖಲೆ ನಿರ್ಮಿಸಿದ ಆರ್ ಸಿಬಿ ‘ರನ್ ಮಷಿನ್’ ವಿರಾಟ್ ಕೊಹ್ಲಿ

ಬೆಂಗಳೂರು : ಐಪಿಎಲ್ ಸೀಸನ್ 16ರ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಗೆಲುವು ಸಾಧಿಸಿದ್ದು, ಆರ್ ಸಿಬಿ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆರ್ ಸಿಬಿ 8 ವಿಕೆಗಳ ಭರ್ಜರಿ ಜಯ ದಾಖಲಿಸಿತು. ಇದೇ ಪಂದ್ಯದಲ್ಲಿ ಕೊಹ್ಲಿ ಅಪರೂಪದ ದಾಖಲೆ ಕೂಡ ನಿರ್ಮಾಣ ಮಾಡಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್ ಸಿಬಿ ತಂಡ ಎಂಟು

ಐಪಿಎಲ್ 2023 : ಅರ್ಧಶತಕ, ದಾಖಲೆ ನಿರ್ಮಿಸಿದ ಆರ್ ಸಿಬಿ ‘ರನ್ ಮಷಿನ್’ ವಿರಾಟ್ ಕೊಹ್ಲಿ Read More »

ಬೈಕ್‌-ಕಾರು ಡಿಕ್ಕಿ : ತಂದೆ-ಮಗಳ ಸಾವು

ರಾಮನಗರ : ಮಗಳನ್ನು ಶಾಲೆಗೆ ಬಿಟ್ಟು ಬರಲು ಹೋಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ತಂದೆ-ಮಗಳು ಸಾವನ್ನಪ್ಪಿರುವ ದುರಂತ ಘಟನೆ ರಾಮನಗರದಲ್ಲಿ ಸಂಭವಿಸಿದೆ. ಕಾರೊಂದು ಬೈಕ್‌ನ ಹಿಂಬದಿಯಿಂದ ಡಿಕ್ಕಿ ಹೊಡೆದು ತಂದೆ ಮತ್ತು ಮಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಸಾಬರಪಾಳ್ಯ ಬಳಿ ನಡೆದಿದೆ. ಯೋಗೇಶ್(47), ಹರ್ಷಿತಾ(14) ಅಪಘಾತದಲ್ಲಿ ಮೃತಪಟ್ಟವರು. ಮೃತರು ಮಾಗಡಿಯ ಕಲ್ಯಾ ಗ್ರಾಮದ ನಿವಾಸಿಗಳಾಗಿದ್ದು, ಪ್ರತಿನಿತ್ಯ ಶಾಲೆಗೆ ಬಿಡುತ್ತಿದ್ದಂತೆ ಮಗಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ತಂದೆ ಶಾಲೆಯತ್ತ ಸಾಬರಪಾಳ್ಯದ ಮಾರ್ಗವಾಗಿ ಹೋಗುತ್ತಿದ್ದಾಗ ಜವರಾಯನಾಗಿ

ಬೈಕ್‌-ಕಾರು ಡಿಕ್ಕಿ : ತಂದೆ-ಮಗಳ ಸಾವು Read More »

ಇದು ಪ್ರಚಾರದ ವಿಷಯವಾಗಿದೆ. ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರದ ಸೋಲಿಗೆ ಕೊಡುಗೆ ನೀಡುತ್ತದೆ : ಮೊಯ್ಲಿ

ಬೆಂಗಳೂರು : ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ರಾಹುಲ್ ಗಾಂಧಿಯವರ ಅನರ್ಹತೆಯು ಕಾಂಗ್ರೆಸ್‌ನ ರಾಜಕೀಯ ಲಾಭಕ್ಕೆ ಸಹಾಯ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮೊಯ್ಲಿ, ಖಂಡಿತವಾಗಿ, ಇದು ಪ್ರಚಾರದ ವಿಷಯವಾಗಿದೆ. ಮತ್ತು ಇದು ರಾಜ್ಯದಲ್ಲಿ ಬಿಜೆಪಿ ಸರಕಾರದ ಸೋಲಿಗೆ ಕೊಡುಗೆ ನೀಡುತ್ತದೆ ಹಾಗೂ ಸೇಡಿನ ರಾಜಕೀಯದ ಉತ್ತುಂಗವನ್ನು ತೋರಿಸುತ್ತದೆ ಎಂದು ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಸೋಮವಾರ ಹೇಳಿದರು. ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಇದೆ ಮತ್ತು ಭ್ರಷ್ಟಾಚಾರ ವಿಷಯಗಳ ಬಗ್ಗೆ

ಇದು ಪ್ರಚಾರದ ವಿಷಯವಾಗಿದೆ. ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರದ ಸೋಲಿಗೆ ಕೊಡುಗೆ ನೀಡುತ್ತದೆ : ಮೊಯ್ಲಿ Read More »

ದ್ವಿಚಕ್ರ ವಾಹನದ ಟೈರ್ ಸ್ಫೋಟ : ಟೆಕ್ಕಿ ಸಾವು

ಬೆಂಗಳೂರು : ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ವೇಳೆ ಟೈರ್ ಸ್ಫೋಟಗೊಂಡ ಪರಿಣಾಮ ಟೆಕ್ಕಿಯೋರ್ವರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೊಸಕೆರೆಹಳ್ಳಿ ಬಳಿಯ ನೈಸ್ ರಸ್ತೆಯಲ್ಲಿ ಸ್ಕೂಟರ್ ಟೈರ್ ಸ್ಫೋಟಗೊಂಡು, ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಾಪ್ಟ್‌ವೇರ್ ಇಂಜಿನಿಯರ್ ಸುಲೋಚನಾ(24) ಏ. 3 ರ ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಡಿಸಿಪಿ ಸುಮನ್ ಪನ್ನೇಕರ್ ತಿಳಿಸಿದ್ದಾರೆ. ಕೋರಮಂಗಲದಿಂದ ಹೊಸಕೆರೆಹಳ್ಳಿ ಕಡೆಗೆ ಸುಲೋಚನಾ ಮತ್ತು ಆಕೆಯ ಸ್ನೇಹಿತ ಆನಂದ್ ಹೋಗುತ್ತಿದ್ದ ವೇಳೆ ಆನಂದ್ ಪೂರ್ಣ ಹೆಲ್ಮೇಟ್ ಧರಿಸಿದ್ದು,

ದ್ವಿಚಕ್ರ ವಾಹನದ ಟೈರ್ ಸ್ಫೋಟ : ಟೆಕ್ಕಿ ಸಾವು Read More »

ಅಬಕಾರಿ ನೀತಿ ಪ್ರಕರಣ : ಸಿಸೋಡಿಯಾ ನ್ಯಾಯಾಂಗ ಬಂಧನ ಏ. 17 ರವರೆಗೆ ವಿಸ್ತರಣೆ

ದೆಹಲಿ : ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನಕ್ಕೊಳಗಾಗಿರುವ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ರೋಸ್ ಅವೆನ್ಯೂ ಕೋರ್ಟ್ ಏ. 17 ರವರೆಗೆ ವಿಸ್ತರಿಸಿದೆ. ಸಿಸೋಡಿಯಾ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯವಾದ ಹಿನ್ನೆಲೆಯಲ್ಲಿ ಎಎಪಿ ನಾಯಕನ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ತನಿಖೆಯು “ನಿರ್ಣಾಯಕ ಹಂತದಲ್ಲಿದೆ” ಎಂದು ಹೇಳಿದೆ. ಕೋರ್ಟ್ ಸಿಬಿಐ ಮನವಿಯನ್ನು ಪುರಸ್ಕರಿಸಿ ಏ. 7ರ ವರೆಗೆ ನ್ಯಾಯಾಂಗ

ಅಬಕಾರಿ ನೀತಿ ಪ್ರಕರಣ : ಸಿಸೋಡಿಯಾ ನ್ಯಾಯಾಂಗ ಬಂಧನ ಏ. 17 ರವರೆಗೆ ವಿಸ್ತರಣೆ Read More »

ಜಿಲ್ಲಾಧಿಕಾರಿಯಿಂದ ರೈತರಿಗೆ ಸಿಹಿಸುದ್ದಿ : ಕೋವಿ ಠೇವಣಿಯಿಂದ ವಿನಾಯಿತಿ

ಮಂಗಳೂರು : ಚುನಾವಣೆ ಸಮಯದಲ್ಲಿ ರೈತರು ಸೇರಿದಂತೆ ಎಲ್ಲರೂ ತಮ್ಮ ಪರವಾನಗಿಯುಳ್ಳ ಕೋವಿ/ಆಯುಧಗಳನ್ನು ಸಮೀಪದ ಠಾಣೆಯಲ್ಲಿ ಠೇವಣಿ ಇಡಬೇಕಾಗುತ್ತದೆ. ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ರಾಜ್ಯದೆಲ್ಲೆಡೆ ಈ ಆದೇಶ ಜಾರಿಯಲ್ಲಿದೆ. ಆದರೆ, ದಕ್ಷಿಣಕನ್ನಡ ಜಿಲ್ಲೆಯ ರೈತರಿಗೆ ಮಾತ್ರ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಏ.3 ರಂದು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ರೈತರು ಠೇವಣಿ ಇಡುವ ವಿಚಾರದಲ್ಲಿ ಕೆಲ ಸಡಿಲಿಕೆಗಳನ್ನು ಮಾಡಿದ್ದಾರೆ. ಚುನಾವಣೆ ಬಂದಾಗ ಸಾರ್ವಜನಿಕ ಶಾಂತಿ ಮತ್ತು ಶಿಸ್ತುಪಾಲಾನ ಮುಂಜಾಗ್ರತ ಕ್ರಮವಾಗಿ ಶಸ್ತ್ರಾಸ್ತ್ರ ಠೇವಣಿಗೆ ಆದೇಶಿಸಲಾಗುತ್ತದೆ. ರಾಜ್ಯದಲ್ಲಿ

ಜಿಲ್ಲಾಧಿಕಾರಿಯಿಂದ ರೈತರಿಗೆ ಸಿಹಿಸುದ್ದಿ : ಕೋವಿ ಠೇವಣಿಯಿಂದ ವಿನಾಯಿತಿ Read More »

ಎಮ್‌ಎಲ್‌ಸಿ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ ಆಯನೂರು ಮಂಜುನಾಥ್

ಶಿವಮೊಗ್ಗ : ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ವಿಧಾನಸಭೆಗೆ ಕಣಕ್ಕಿಳಿಯಲೇಬೇಕು ಎಂಬ ಇಚ್ಚೆಯಿಂದ ಸಾರ್ವತ್ರಿಕವಾಗಿ ಹೇಳಿದ್ದೇನೆ. ಪಕ್ಷದ ವೇದಿಕೆಯಲ್ಲೂ ನನ್ನ ವಿನಂತಿ ಮಾಡಿಕೊಂಡಿದ್ದೇನೆ. ಆದರೆ, ನನ್ನ ಪ್ರಯತ್ನಕ್ಕೆ ಪೂರಕವಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗಬಹುದು ಎಂಬ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದೇನೆಂದು ಹೇಳಿದ್ದಾರೆ.ಮೊನ್ನೆ ಈಶ್ವರಪ್ಪ‌ ಹೇಳಿದ ಮಾತನ್ನು

ಎಮ್‌ಎಲ್‌ಸಿ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ ಆಯನೂರು ಮಂಜುನಾಥ್ Read More »

ಮೆಡಿಕಲ್‌ ಸೀಟು ಕೊಡಿಸುವುದಾಗಿ ವಂಚಿಸಿದ ಆರೋಪಿಯ ಬಂಧನ

ಮಂಗಳೂರು : ನಗರದ ಖಾಸಗಿ ವೈದ್ಯಕೀಯ ಕಾಲೇಜಿನ ಹೆಸರಿನಲ್ಲಿ ಮೆಡಿಕಲ್‌ ಸೀಟು ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದ ಪ್ರಕರಣದಲ್ಲಿ ನೋಯ್ಡಾ ಮೂಲದ ಆರೋಪಿಯನ್ನು ಮಹಾರಾಷ್ಟ್ರದ ಪೊಲೀಸರು ಮುಂಬೈನ ನೆರೋಲ್ ನಲ್ಲಿ ಏ. 2 ರಂದು ಬಂಧಿಸಿ ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.ಬಂಧಿತನನ್ನು ಇಫ್ತಿಕರ್ ಅಹ್ಮದ್ (31) ಉತ್ತರ ಪ್ರದೇಶದ ನೋಯ್ಡಾ ನಿವಾಸಿಯೆಂದು ಗುರುತಿಸಲಾಗಿದೆ. ಬೀದರ್‌ ಮೂಲದ ವ್ಯಕ್ತಿಯೋರ್ವರು, ತಮ್ಮಿಂದ 22.5 ಲಕ್ಷ ರೂ. ಪಡೆದು ಖಾಸಗಿ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ದೊರಕಿಸುವುದಾಗಿ ನಂಬಿಸಿ ಇಫ್ತಿಕರ್ ಅಹ್ಮದ್ ಹಾಗೂ ಮತ್ತಿತರರು

ಮೆಡಿಕಲ್‌ ಸೀಟು ಕೊಡಿಸುವುದಾಗಿ ವಂಚಿಸಿದ ಆರೋಪಿಯ ಬಂಧನ Read More »

ಮನೆ ಯಜಮಾನನಿಗೆ ಹಲ್ಲೆ : ಗೂಗಲ್ ಪೇ ಮೂಲಕ ಹಣ ವರ್ಗಾವಣೆ

ಬೆಳ್ತಂಗಡಿ : ಪಡಂಗಡಿಯಲ್ಲಿ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕದ್ದು ಪರಾರಿಯಾದ ಘಟನೆ ಮಾ. 30 ರಂದು ಸಂಭವಿಸಿದೆ.ಪಡಂಗಡಿ ಗ್ರಾಮದ ಜಾನೆಬೈಲು ಪುತ್ಯೆ ಮನೆ ಎಂಬಲ್ಲಿ ಮನೆ ಯಜಮಾನ ಜುವಾಮ್‌ ಗೋವಿಯಸ್‌ (64) ಅವರಿಗೆ ಹಲ್ಲೆ ನಡೆಸಿದ್ದಾರೆ. ಪರಿಚಿತರಾದ ರಿಯಾಜ್‌ ಮತ್ತು ಫೈಝಲ್‌ ಎಂಬವರೇ ಹಣ ಎಗರಿಸಿದ ಆರೋಪಿಗಳು. ಜುವಾಮ್‌ ಗೋವಿಯಸ್‌ ಅವರು ತನ್ನ ಮಗನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಮನೆಯಲ್ಲಿ ಈ ಹಿಂದೆ ರಬ್ಬರ್‌ ಟ್ಯಾಪಿಂಗ್‌ ಮಾಡುತ್ತಿದ್ದ

ಮನೆ ಯಜಮಾನನಿಗೆ ಹಲ್ಲೆ : ಗೂಗಲ್ ಪೇ ಮೂಲಕ ಹಣ ವರ್ಗಾವಣೆ Read More »

error: Content is protected !!
Scroll to Top