ದೇಶ

ಕೆಂಪು ಬಟ್ಟೆಯನ್ನು ಕೈಯಲ್ಲಿ ಪ್ರದರ್ಶಿಸಿ ರೈಲು ಅವಘಡ ತಪ್ಪಿಸಿದ ಮಹಿಳೆ

ಮಂಗಳೂರು : ರೈಲು ಹಳಿ ಮೇಲೆ ಮರ ಬಿದ್ದದ್ದನ್ನು ಗಮನಿಸಿದ ಮಹಿಳೆಯೊಬ್ಬರು ಕೆಂಪುಬಟ್ಟೆ ಯನ್ನು ಕೈಯಲ್ಲಿ ಪ್ರದರ್ಶಿಸಿ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿರುವ ಘಟನೆ ಪಡೀಲ್‌ – ಜೋಕಟ್ಟೆ ಮಧ್ಯೆಯ ಪಚ್ಚನಾಡಿ ಸಮೀಪ ಮಂದಾರದಲ್ಲಿ ಏ 04 ರಂದು ನಡೆದಿದೆ. ಚಂದ್ರಾವತಿ (70) ಎಂಬವರೇ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿ ಹಲವಾರು ಪ್ರಯಾಣಿಕರ ಪ್ರಾಣವನ್ನು ಉಳಿಸಿದ ಮಹಿಳೆ. ಮಾ. 21ರಂದು ಮಧ್ಯಾಹ್ನ ಸುಮಾರು 2.10ರ ಸುಮಾರಿಗೆ ರೈಲು ಹಳಿಗೆ ಮರ ಬಿದ್ದಿದ್ದು, ಅದೇ ಸಮಯಕ್ಕೆ ಮಂಗಳೂರಿನಿಂದ ಮುಂಬಯಿಗೆ ಮತ್ಸ್ಯಗಂಧ […]

ಕೆಂಪು ಬಟ್ಟೆಯನ್ನು ಕೈಯಲ್ಲಿ ಪ್ರದರ್ಶಿಸಿ ರೈಲು ಅವಘಡ ತಪ್ಪಿಸಿದ ಮಹಿಳೆ Read More »

ಟ್ವಿಟ್ಟರ್ ಲೋಗೋವನ್ನು ನೀಲಿ ಹಕ್ಕಿಯಿಂದ ನಾಯಿಗೆ ಬದಲಿಸಿದ ಎಲಾನ್ ಮಸ್ಕ್

ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್ ನಿತ್ಯ ಒಂದಲ್ಲಾ ಒಂದು ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಇದೀಗ ಟ್ವಿಟ್ಟರ್ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರವನ್ನು ಹಾಕಿದ್ದು ಕುತೂಹಲ ಮೂಡಿಸಿದೆ.ಹಕ್ಕಿಯ ಜಾಗಕ್ಕೆ ಕ್ರಿಪ್ಟೋಕರೆನ್ಸಿ ಡಾಗ್​ಕಾಯಿನ್​ನ ನಾಯಿಯ ಮೀಮ್ಸ್ ಫೋಟೋವನ್ನು ಬಳಸಿದ್ದಾರೆ. ಮಸ್ಕ್​ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್​ ಇದೆ. ಟ್ವಿಟ್ಟರ್ ಬದಲಾವಣೆ ಕೇವಲ ವೆಬ್​ ಆವೃತ್ತಿಗೆ ಮಾತ್ರ ಸೀಮಿತವಾಗಿದೆ, ಮೊಬೈಲ್​ನಲ್ಲಿ ಪಕ್ಷಿಯ ಲೋಗೋ ಕಾಣಿಸಲಿದೆ. ಬಿಟ್​ ಕಾಯಿನ್​ನಂತಹ ಇತರೆ ಕ್ರಿಪ್ಟೋ ಕರೆನ್ಸಿಯನ್ನು

ಟ್ವಿಟ್ಟರ್ ಲೋಗೋವನ್ನು ನೀಲಿ ಹಕ್ಕಿಯಿಂದ ನಾಯಿಗೆ ಬದಲಿಸಿದ ಎಲಾನ್ ಮಸ್ಕ್ Read More »

ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ

ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕರ್ನಾಟಕ ಅಂಚೆ ಇಲಾಖೆಯು ಸೋಮವಾರ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ 2023 ಎಂಬ ಹೊಸ ಯೋಜನೆಯನ್ನು ಹೊರತಂದಿದೆ.ಇದರ ಪ್ರಮುಖ ವೈಶಿಷ್ಟ್ಯಗಳೆಂದರೆ ಎರಡು ವರ್ಷಗಳ ಅವಧಿಯಲ್ಲಿ ಶೇಕಡಾ 7.5ರಷ್ಟು ಸ್ಥಿರ ಬಡ್ಡಿ, ಗರಿಷ್ಠ ಸೀಲಿಂಗ್ ಮಿತಿ 2 ಲಕ್ಷ ರೂಪಾಯಿ ಮತ್ತು ಒಂದು ವರ್ಷದ ನಂತರ ಭಾಗಶಃ ಹಿಂಪಡೆಯುವಿಕೆ ಸಾಧ್ಯವಾಗುತ್ತದೆ. ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ಇದು

ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ Read More »

ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮುಡ್ನೂರು ಗ್ರಾಮದ ಗುತ್ತಿಕಲ್ಲು ಎಂಬಲ್ಲಿ ಏ. 3 ರಂದು ಸಂಭವಿಸಿದೆ. ಶಿವಪ್ಪ ಗೌಡ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ಸುಮಾರು 4 ವರ್ಷಗಳ ಹಿಂದೆ ದಂಪತ್ಯದಲ್ಲಿ ಮನಸ್ಧಾಪ ಉಂಟಾಗಿ ಆತನ ಪತ್ನಿ ತವರು ಮನೆಯಲ್ಲಿ ನೆಲೆಸಿದ ಕಾರಣ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಏ. 1 ರಂದು ಶಿವಪ್ಪ ಗೌಡ ಕಾಣೆಯಾದ ಬಗ್ಗೆ ಅಣ್ಣ ತಿಮ್ಮಪ್ಪ ಗೌಡ ಪುತ್ತೂರು ನಗರ ಪೊಲೀಸ್‌

ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ Read More »

ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕನ್ಯಾನ ಗ್ರಾಮದ ಇಚ್ಚೆ ಎಂಬಲ್ಲಿ ಏ.2 ರಂದು ಸಂಭವಿಸಿದೆ. ಅಂಗಾರ(80) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಇವರು ಏ.2 ರಂದು ಮನೆಯಿಂದ ಸ್ವಲ್ಪ ದೂರದಲ್ಲಿ ಗೇರು ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ Read More »

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ.ಶಿ ಗೆ ಹೈಕಮಾಂಡ್‌ ನೀಡುವುದಿಲ್ಲ : ಸಿದ್ದರಾಮಯ್ಯ

ಡಿಕೆಶಿ ನಿದ್ದೆಗೆಡಿಸಿದ ಸಿದ್ದರಾಮಯ್ಯ ಸಂದರ್ಶನ ಬೆಂಗಳೂರು : ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೀಡಿರುವ ಹೇಳಿಕೆಯೊಂದು ಕಾಂಗ್ರೆಸ್ಸಿನ ಒಳ ಬೇಗುದಿಯನ್ನು ಹೆಚ್ಚಿಸಿದೆ. ಇಂಗ್ಲೀಷ್‌ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಹೈಕಮಾಂಡ್‌ ಮುಖ್ಯಮಂತ್ರಿ ಹುದ್ದೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರ ಈ ಹೇಳಿಕೆಯಿಂದ ಕಾಂಗ್ರೆಸ್​ನಲ್ಲಿ ತಲ್ಲಣ ಸೃಷ್ಟಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆ ವಿಕೋಪಕ್ಕೆ ತಿರುಗುವ ಮೊದಲು ಸಿದ್ದರಾಮಯ್ಯ ಎಚ್ಚೆತ್ತುಕೊಂಡು ಸ್ಪಷ್ಟನೆ ನೀಡಿದ್ದು, ನಾನು ಮುಖ್ಯಮಂತ್ರಿ ಅಭ್ಯರ್ಥಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ.ಶಿ ಗೆ ಹೈಕಮಾಂಡ್‌ ನೀಡುವುದಿಲ್ಲ : ಸಿದ್ದರಾಮಯ್ಯ Read More »

ನಿಷ್ಕ್ರಿಯ ಖಾತೆಗಳ 35012 ಕೋಟಿ ರೂ. ಆರ್‌ಬಿಐಗೆ ವರ್ಗಾವಣೆ

ದೆಹಲಿ : ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯಿಂದ ನಿಷ್ಕ್ರಿಯವಾಗಿರುವ ಬ್ಯಾಂಕ್‌ ಖಾತೆಗಳಲ್ಲಿ ಕೊಳೆಯುತ್ತಿದ್ದ 35012 ಕೋಟಿ ರೂ. ಠೇವಣಿಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ಗೆ ವರ್ಗಾವಣೆ ಮಾಡಿವೆ. 2023ರ ಫೆಬ್ರವರಿ ಅಂತ್ಯಕ್ಕೆ ಅನುಗುಣವಾಗಿ 10.24 ಕೋಟಿ ಖಾತೆಗಳಲ್ಲಿ ಈ ಹಣ ಇತ್ತು ಎಂದು ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್‌ ಕಾರಡ್‌ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಆರ್‌ಬಿಐಗೆ ವರ್ಗಾವಣೆಯಾದ 35012 ಕೋಟಿ ರೂ. ಪೈಕಿ ಭಾರತೀಯ ಸ್ಟೇಟ್‌

ನಿಷ್ಕ್ರಿಯ ಖಾತೆಗಳ 35012 ಕೋಟಿ ರೂ. ಆರ್‌ಬಿಐಗೆ ವರ್ಗಾವಣೆ Read More »

ಸಿಬಿಎಸ್‌ಇ ಪರಿಷ್ಕೃತ ಪಠ್ಯ ಕ್ರಮದಲ್ಲಿ ಮೊಘಲರ ಅಧ್ಯಾಯ ಇಲ್ಲ

ಎನ್‌ಸಿಇಆರ್‌ಟಿ ಪರಿಷ್ಕೃತ ಪಠ್ಯ 2023-24ರಿಂದಲೇ ಜಾರಿ ದೆಹಲಿ : ಕೇಂದ್ರ ಸರ್ಕಾರದ ಅಧೀನದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಸಂಸ್ಥೆ (ಎನ್‌ಸಿಇಆರ್‌ಟಿ) 12ನೇ ತರಗತಿಯ ಇತಿಹಾಸ ಪಠ್ಯದಲ್ಲಿ ಮೊಘಲರ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದುಹಾಕಿದೆ. 2023-24ನೇ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರಲಿದೆ. ಈ ಸೂಚನೆ ಸಿಬಿಎಸ್‌ಇ ಹಾಗೂ ಎನ್‌ಸಿಇಆರ್‌ಟಿ ಪಠ್ಯಕ್ರಮ ಅನುಸರಿಸುವ ಎಲ್ಲ ರಾಜ್ಯಗಳಿಗೆ ಅನ್ವಯಿಸಲಿದೆ. ನವೀಕರಿಸಿದ ಪಠ್ಯಕ್ರಮದ ಪ್ರಕಾರ, ಥೀಮ್ಸ್‌ ಆಫ್‌ ಇಂಡಿಯನ್‌ ಹಿಸ್ಟರಿ-ಪಾರ್ಟ್ 2 ಎಂಬ ಇತಿಹಾಸ ಪುಸ್ತಕದಲ್ಲಿ ಅರಸರು ಹಾಗೂ

ಸಿಬಿಎಸ್‌ಇ ಪರಿಷ್ಕೃತ ಪಠ್ಯ ಕ್ರಮದಲ್ಲಿ ಮೊಘಲರ ಅಧ್ಯಾಯ ಇಲ್ಲ Read More »

ಚುರುಕುಗೊಂಡ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ

ಬೆಂಗಳೂರು : ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದೆ. ಇಂದು ಮತ್ತು ನಾಳೆ ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಎರಡು ದಿನಗಳ ಸಭೆಯ ಬಳಿಕ ರಾಜ್ಯ ಚುನಾವಣಾ ಸಮಿತಿಯಿಂದ ಕೇಂದ್ರ ಚುನಾವಣಾ ಸಮಿತಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಶಿಫಾರಸುಗೊಳ್ಳಲಿದೆ. ಎರಡು ದಿನ ನೆಲಮಂಗಲದ ಗೋಲ್ಡನ್ ಪಾಮ್ ರೆಸಾರ್ಟ್‌ನಲ್ಲಿ ನಡೆದ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಸಂಗ್ರಹಿಸಲಾದ ಆಕಾಂಕ್ಷಿಗಳ ಪಟ್ಟಿಯನ್ನು ಚುನಾವಣಾ ಸಮಿತಿ ಫಿಲ್ಟರ್ ಮಾಡಲಿದ್ದು, ಪ್ರತಿ ಕ್ಷೇತ್ರಕ್ಕೆ ಮೂರು ಸಂಭಾವ್ಯ ಅಭ್ಯರ್ಥಿಗಳ ಹೆಸರು ಪಕ್ಷದ

ಚುರುಕುಗೊಂಡ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ Read More »

ಚುಂಬನ ಪ್ರಕರಣದಲ್ಲಿ 16 ವರ್ಷದ ಬಳಿಕ ಶಿಲ್ಪಾ ಶೆಟ್ಟಿ ನಿರ್ದೋಷಿ

2007ರಲ್ಲಿ ರಾಜಸ್ಥಾನದಲ್ಲಿ ನಡೆದ ಘಟನೆ ಮುಂಬಯಿ : ಸಾರ್ವಜನಿಕ ವೇದಿಕೆಯಲ್ಲಿ ಹಾಲಿವುಡ್‌ ನಟ ರಿಚರ್ಡ್‌ ಗೇರ್‌ ಅವರನ್ನು ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ 16 ವರ್ಷದ ಬಳಿಕ ನಿರ್ದೋಷಿ ಎಂದು ಸಾಬೀತಾಗಿದ್ದಾರೆ.ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ನಿರ್ದೋಷಿ ಎಂದು ಹೇಳಿ ಖುಲಾಸೆಗೊಳಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ತೀರ್ಪನ್ನು ಮುಂಬಯಿಯ ಸೆಷನ್ಸ್‌ ಕೋರ್ಟ್‌ ಎತ್ತಿ ಹಿಡಿದಿದೆ.2007ರಲ್ಲಿ ರಾಜಸ್ಥಾನದಲ್ಲಿ ಏಡ್ಸ್‌ ಜಾಗೃತಿ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ನಟ ರಿವರ್ಡ್‌ ಗೇರ್‌ ಅವರು ಶಿಲ್ಪಾ ಶೆಟ್ಟಿಯನ್ನು ಬರಸೆಳೆದು ಅಪ್ಪಿ ಹಿಡಿದು ಚುಂಬಿಸಿದ್ದರು.

ಚುಂಬನ ಪ್ರಕರಣದಲ್ಲಿ 16 ವರ್ಷದ ಬಳಿಕ ಶಿಲ್ಪಾ ಶೆಟ್ಟಿ ನಿರ್ದೋಷಿ Read More »

error: Content is protected !!
Scroll to Top