ದೇಶ

ಏ.20 ರಂದು ಈ ವರ್ಷದ ಮೊದಲ ಸೂರ್ಯಗ್ರಹಣ

ಬೆಂಗಳೂರು : ಈ ವರ್ಷದ ಮೊದಲ ಸೂರ್ಯಗ್ರಹಣ ವೈಶಾಖ ಅಮವಾಸ್ಯೆ ದಿನವಾದ ಏ.20 ರಂದು ಸಂಭವಿಸಲಿದೆ. ಅಂಟಾರ್ಟಿಕಾ, ಆಸ್ಟ್ರೇಲಿಯಾ, ದಕ್ಷಿಣ ಹಿಂದೂ ಮಹಾಸಾಗರ, ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ದಕ್ಷಿಣ ಪೆಸಿಫಿಕ್ ಪ್ರದೇಶಗಳಲ್ಲಿ ಗ್ರಹಣ ಗೋಚರಿಸುತ್ತದೆ. ಭಾರತದಲ್ಲಿ ಈ ಗ್ರಹಣ ಗೋಚರಿಸದಿದ್ದರೂ ಜ್ಯೋತಿಶ್ಶಾಸ್ತ್ರದ ಪ್ರಕಾರ ಅದರ ಪರಿಣಾಮ ಇದೆ.2023ರಲ್ಲಿ ಎರಡು ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣ ಸಂಭವಿಸಲಿದೆ. ಈ ಪೈಕಿ ಮೊದಲ ಗ್ರಹಣ ಏ.20ರದ್ದು. ಗ್ರಹಣ ಬೆಳಗ್ಗೆ 7.04ಕ್ಕೆ ಶುರುವಾಗಿ ಮಧ್ಯಾಹ್ನ 12.29ಕ್ಕೆ ಕೊನೆಗೊಳ್ಳುತ್ತದೆ. ಎರಡನೇ ಸೂರ್ಯಗ್ರಹಣ ಮುಂಬರುವ […]

ಏ.20 ರಂದು ಈ ವರ್ಷದ ಮೊದಲ ಸೂರ್ಯಗ್ರಹಣ Read More »

ಬಹುನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬ

ಪ್ರಯೋಗ ಖಚಿತ-ಬಂಡಾಯ ತಪ್ಪಿಸಲು ತಂತ್ರಗಾರಿಕೆ ದೆಹಲಿ : ಬಹುನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬವಾಗಿದೆ. ಸೋಮವಾರವೇ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಮತ್ತು 170 ರಿಂದ 180 ಅಭ್ಯರ್ಥಿಗಳ ಹೆಸರು ಈ ಪಟ್ಟಿಯಲ್ಲಿರುತ್ತದೆ ಎಂದು ಹೇಳಲಾಗಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ದಿಲ್ಲಿಯಲ್ಲಿ ಸುದ್ದಿಗಾರರಿಗೆ ಇಂದು (ಸೋಮವಾರ) ರಾತ್ರಿಯೊಳಗೆ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು.ಆದರೆ ನಿರೀಕ್ಷೆಯಂತೆ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಅರುಣಾಚಲ ಪ್ರದೇಶ ಪ್ರವಾಸ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ದಿಲ್ಲಿಗೆ ಮರಳುವುದು

ಬಹುನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬ Read More »

8.50 ಕೋ. ರೂ. ಮೌಲ್ಯದ ಡ್ರಗ್ಸ್ ವಶ – ಐವರು ನೈಜೀರಿಯಾ ಪ್ರಜೆಗಳ ಬಂಧನ

ಬೆಂಗಳೂರು ಪೊಲೀಸರ ಕಾರ್ಯಾಚರಣೆ ಬೆಂಗಳೂರು : ಬೆಂಗಳೂರು ಪೊಲೀಸರು ಇಂದು ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ 8.50 ಕೋಟಿ ರೂ.ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.ದಕ್ಷಿಣ ವಿಭಾಗದ ವಿವಿ ಪುರಂ ಹಾಗೂ ಜಯನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 5 ಮಂದಿ ನೈಜೀರಿಯಾ ಪ್ರಜೆಗಳು ಸೆರೆಯಾಗಿದ್ದಾರೆ.7.32 ಕೋಟಿ ರೂ. ಮೌಲ್ಯದ 1 ಕೆಜಿ 850 ಗ್ರಾಂ ಎಂಡಿಎಂಎ, 1 ಕೆಜಿ 150 ಗ್ರಾಂ ಬ್ರೌನ್‍ಶುಗರ್, 310 ಗ್ರಾಂ ಕೊಕೈನ್‍ನನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವೀಸಾ ಅವಧಿ 3 ವರ್ಷಗಳ ಹಿಂದೆಯೇ

8.50 ಕೋ. ರೂ. ಮೌಲ್ಯದ ಡ್ರಗ್ಸ್ ವಶ – ಐವರು ನೈಜೀರಿಯಾ ಪ್ರಜೆಗಳ ಬಂಧನ Read More »

ಇನ್ನೂ ಅಚ್ಚಳಿಯದೆ ಉಳಿದ ಕಹಿ ನೆನಪು ಪೆರ್ನೆಯ ಟ್ಯಾಂಕರ್‌ ದುರಂತ

ಉಪ್ಪಿನಂಗಡಿ : ಸಮೀಪದ ಪೆರ್ನೆಯಲ್ಲಿ 2013 ಎಪ್ರಿಲ್‌ 9ರಂದು ಅಡುಗೆ ಅನಿಲ ಸಾಗಾಟ ಮಾಡುತ್ತಿದ್ದ ಟ್ಯಾಂಕರ್‌ ಅಪಘಾತಕ್ಕೀಡಾಗಿ ಅನಿಲ ಸೋರಿಕೆಯೊಂದಿಗೆ ಅಗ್ನಿ ಅನಾಹುತ ಸಂಭವಿಸಿದ ಭೀಕರ ಘಟನೆಯಿಂದ ಹಲವು ಕುಟುಂಬಗಳಿಗೆ ಸೇರಿದ 13 ಮಂದಿ ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡ ಘಟನೆಗೆ 10 ವರ್ಷ ಸಂದರೂ ಅದರ ಕಹಿ ನೆನಪು ಇನ್ನೂ ಅಚ್ಚಳಿಯದೆ ಉಳಿದಿದೆ. ಮಂಗಳೂರಿನಿಂದ ಬೆಂಗಳೂರಿನತ್ತ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್‌ ಪೆರ್ನೆ ತಿರುವಿನಲ್ಲಿ ಮಗುಚಿ ಬಿದ್ದಿದ್ದು, ಅನಿಲ ಸೋರಿಕೆ ಆರಂಭವಾಗಿ ಅಗ್ನಿ ಸ್ಪರ್ಶವಾಗಿತ್ತು. ಧಗಧಗಿಸಲಾರಂಭಿಸಿದ ಬೆಂಕಿಯ

ಇನ್ನೂ ಅಚ್ಚಳಿಯದೆ ಉಳಿದ ಕಹಿ ನೆನಪು ಪೆರ್ನೆಯ ಟ್ಯಾಂಕರ್‌ ದುರಂತ Read More »

ಇರಾಕ್ ಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಕಚ್ಚಾ ತೈಲ ರಷ್ಯಾದಿಂದ ಭಾರತಕ್ಕೆ ಆಮದು

ದೆಹಲಿ : ಭಾರತ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಪ್ರಮಾಣ ಹೊಸ ದಾಖಲೆ ನಿರ್ಮಿಸಿದೆ. ಇರಾಕ್ ನಿಂದ ಆಮದು ಮಾಡಿಕೊಳ್ಳುತ್ತಿದ್ದಕ್ಕಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ನಾವು ಈಗ ರಷ್ಯಾದಿಂದ ತೈಲವನ್ನು ಖರೀದಿಸಿದ್ದೇವೆ. ಬೆಳವಣಿಗೆ ನಿಧಾನಗತಿಯಲ್ಲಿರುವುದರಿಂದ ತೈಲ ಆಮದಿನಲ್ಲಿ ಯಾವುದೇ ಬದಲಾವಣೆಯೂ ಕಂಡುಬಂದಿಲ್ಲ. ರಷ್ಯಾ ಕಚ್ಚಾ ತೈಲ ಪೂರೈಕೆ ಮಾಡುತ್ತಿರುವ ಏಕೈಕ ದೊಡ್ಡ ರಾಷ್ಟ್ರವಾಗಿದ್ದು, ಭಾರತ ಆಮದು ಮಾಡಿಕೊಳ್ಳುತ್ತಿರುವ ಒಟ್ಟಾರೆ ತೈಲದ ಪೈಕಿ ಮೂರನೇ ಒಂದರಷ್ಟನ್ನು ಪೂರೈಕೆ ಮಾಡುತ್ತಿರುವ ಮೂಲಕ ರಷ್ಯಾ ಸತತ 6 ನೇ ತಿಂಗಳು ಈ

ಇರಾಕ್ ಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಕಚ್ಚಾ ತೈಲ ರಷ್ಯಾದಿಂದ ಭಾರತಕ್ಕೆ ಆಮದು Read More »

ಗೇಲ್ ಪೈಪ್ ಲೈನ್ ಗ್ಯಾಸ್, ಸಿಎನ್‌ಜಿ ಬೆಲೆ ಪ್ರತಿ ಯೂನಿಟ್‌ಗೆ 7 ರೂ ಕಡಿತ

ಬೆಂಗಳೂರು : ಹೊಸ ದೇಶೀಯ ಅನಿಲ ಬೆಲೆಯ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಗೇಲ್ ಗ್ಯಾಸ್ ಲಿಮಿಟೆಡ್ ತನ್ನ ಬೆಲೆ ಕಡಿತ ಮಾಡಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ಮತ್ತು ದಕ್ಷಿಣ ಕನ್ನಡದಲ್ಲಿ ಗೇಲ್ ಕಂಪನಿಯು ತನ್ನ ಡೊಮೆಸ್ಟಿಕ್ (ಗೃಹಬಳಕೆ) ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಮತ್ತು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಬೆಲೆಗಳನ್ನು ಪ್ರತಿ ಯೂನಿಟ್‌ಗೆ 7 ರೂ.ಗಳಷ್ಟು ಕಡಿತಗೊಳಿಸುವುದಾಗಿ ಭಾನುವಾರ ಪ್ರಕಟಿಸಿದೆ.ಪರಿಷ್ಕೃತ ಬೆಲೆಗಳು ಭಾನುವಾರದಿಂದಲೇ ಜಾರಿಗೆ ಬಂದಿದ್ದು, ಪ್ರತಿ

ಗೇಲ್ ಪೈಪ್ ಲೈನ್ ಗ್ಯಾಸ್, ಸಿಎನ್‌ಜಿ ಬೆಲೆ ಪ್ರತಿ ಯೂನಿಟ್‌ಗೆ 7 ರೂ ಕಡಿತ Read More »

ಕಡಬ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ

ಕಡಬ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರೆಂಜಿಲಾಡಿ ಗ್ರಾಮದ ಮೀನಾಡಿ ಎಂಬಲ್ಲಿ ಎ. 8 ರಂದು ಸಂಭವಿಸಿದೆ. ಬೆಳ್ಯಪ್ಪ ಗೌಡ(75) ಎಂಬವರೇ ಮೃತ ವ್ಯಕ್ತಿ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಎ. 8 ರಂದು ದನದ ಕೊಟ್ಟಿಗೆಯ ಅಡ್ಡಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ Read More »

ತೊಕ್ಕೊಟ್ಟು : ವ್ಯಾಪಾರಿ ನೇಣು ಬಿಗಿದು ಆತ್ಮಹತ್ಯೆ

ಉಳ್ಳಾಲ : ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಹೊಲಿಗೆ ಸಂಬಂಧಿತ ಮಳಿಗೆಯೊಂದರ ಮಾಲಕ ತನ್ನ ಅಂಗಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.10 ರಂದು ಬೆಳಗ್ಗೆ ಸಂಭವಿಸಿರುತ್ತದೆ. ಪ್ರವೀಣ್ ಆಳ್ವ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೂಲತ ಸೇವಂತಿಗುಡ್ಡೆ ನಿವಾಸಿಯಾಗಿದ್ದ ಇವರು ಪ್ರಸ್ತುತ ಕನೀರುತೋಟದಲ್ಲಿ ವಾಸಿಸುತ್ತಿದ್ದರು. ತೊಕ್ಕೊಟ್ಟು ಜಂಕ್ಷನ್ ಬಳಿ ಟೈಲರ್‌ಗಳಿಗೆ ಸಂಬಂಧಿಸಿದ ಹೊಲಿಗೆ ನೂಲು ಸೇರಿದಂತೆ ಇತರ ಕಚ್ಚಾ ವಸ್ತುಗಳನ್ನು ಪೂರೈಸುವ ಅಂಗಡಿಯನ್ನು ಕಳೆದ ಏಳೆಂಟು ವರ್ಷಗಳಿಂದ ನಡೆಸುತ್ತಿದ್ದರು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಅವರು‌ ಬೆಳಗ್ಗೆ 6.30ಕ್ಕೆ ಮನೆಯಿಂದ

ತೊಕ್ಕೊಟ್ಟು : ವ್ಯಾಪಾರಿ ನೇಣು ಬಿಗಿದು ಆತ್ಮಹತ್ಯೆ Read More »

1.999 ಕೆಜಿ ಗಾಂಜಾ ವಶ : ಯುವಕನ ಬಂಧನ

ಮಂಗಳೂರು : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ಯುವಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಏ. 10 ರಂದು ಮರಕಡ್ಡದ ಪಡುಶೆಡ್ಡೆ ರಸ್ತೆ ಬದಿಯಲ್ಲಿ ಸಂಛವಿಸಿದೆ.ಬಂಧಿತ ಆರೋಪಿಯನ್ನು ಮಲ್ಪೆ ನಿವಾಸಿ ಸುಹಾನ್ ಎಸ್ ಪೂಜಾರಿ (23) ಎಂದು ಗುರುತಿಸಲಾಗಿದೆ. ಸುಹಾನ್ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಕಡ್ಡದ ಪಡುಶೆಡ್ಡೆ ಬಳಿ ರಸ್ತೆ ಬದಿ ಸ್ಕೂಟರ್‌ನಲ್ಲಿ ಕುಳಿತು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.ಆತನಿಂದ 1.999 ಕೆಜಿ ಗಾಂಜಾ, ಮೊಬೈಲ್ ಮತ್ತು ಸ್ಕೂಟರ್ ಅನ್ನು ಪೊಲೀಸರು ಜಪ್ತಿ

1.999 ಕೆಜಿ ಗಾಂಜಾ ವಶ : ಯುವಕನ ಬಂಧನ Read More »

ಪ್ರಪಾತಕ್ಕೆ ಬಿದ್ದ ಬೈಕ್ – ಹಿಂಬದಿ ಸವಾರ ಮೃತ್ಯು

ಬಂಟ್ವಾಳ : ಬೈಕ್ ಪ್ರಪಾತಕ್ಕೆ ಬಿದ್ದು, ಬೈಕಿನಲ್ಲಿ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದ ಚಿಕ್ಕ ಮಂಗಳೂರು ಮೂಲದ ಯುವಕನೋರ್ವ ಮೃತಪಟ್ಟ ಘಟನೆ ಏ. 10 ರ ಮುಂಜಾವಿನ ವೇಳೆ ಬಿಸಿರೋಡಿನ ಕೈಕಂಬ ಸಮೀಪದ ತಲಪಾಡಿ ಎಂಬಲ್ಲಿ ನಡೆದಿದೆ.ಯಶೋಧರ(25) ಎಂಬವರೇ ಮೃತ ದುರ್ದೈವಿ. ಚಿಕ್ಕಮಗಳೂರು ನಿವಾಸಿಯಾದ ಇವರು ಮಂಗಳೂರು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬೈಕ್ ಚಲಾಯಿಸುತ್ತಿದ್ದ ಈತನ ಸ್ನೇಹಿತ ಅವಿನಾಶ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಯಾವುದೇ ಪ್ರಾಣಾಪಯವಿಲ್ಲದೆ ಪಾರಾಗಿದ್ದಾನೆ. ಇವರಿಬ್ಬರೂ ಮಂಗಳೂರು ಸಿಟಿ ಸೆಂಟರ್ ನಲ್ಲಿ ಉದ್ಯೋಗಿಗಳಾಗಿದ್ದು, ಬೆಳ್ತಂಗಡಿ ಸ್ನೇಹಿತನ

ಪ್ರಪಾತಕ್ಕೆ ಬಿದ್ದ ಬೈಕ್ – ಹಿಂಬದಿ ಸವಾರ ಮೃತ್ಯು Read More »

error: Content is protected !!
Scroll to Top