ದೇಶ

ಸಕ್ಕರೆ ರಫ್ತು ತಕ್ಷಣದಿಂದ ಬ್ಯಾನ್‌

ಬೆಲೆ ನಿಯಂತ್ರಿಸಲು ಕೇಂದ್ರದಿಂದ ಕಠಿಣ ಕ್ರಮ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು ದೇಶದೊಳಗೆ ಸಾಕಷ್ಟು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸಕ್ಕರೆ ರಫ್ತಿನ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಸೆಪ್ಟೆಂಬರ್ 30ರವರೆಗೆ ಸಂಪೂರ್ಣ ನಿಷೇಧ ಹೇರಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಈ ಆದೇಶ ಪ್ರಕಟಿಸಿದೆ. ಸಕ್ಕರೆ ರಫ್ತು ನೀತಿಯನ್ನು ಈ ಹಿಂದೆ ಇದ್ದ ‘ನಿರ್ಬಂಧಿತ’ ವರ್ಗದಿಂದ ‘ನಿಷೇಧಿತ’ ವರ್ಗಕ್ಕೆ […]

ಸಕ್ಕರೆ ರಫ್ತು ತಕ್ಷಣದಿಂದ ಬ್ಯಾನ್‌ Read More »

ಗಾಳಿ-ಮಳೆಯ ಆರ್ಭಟ : 74 ಮಂದಿ ಸಾವು

ಮರ, ವಿದ್ಯುತ್‌ ಕಂಬ, ಕಟ್ಟಡ ಬಿದ್ದು ವ್ಯಾಪಕ ಹಾನಿ ಲಖನೌ : ಉತ್ತರ ಪ್ರದೇಶದಲ್ಲಿ ಬುಧವಾರ ಬೀಸಿದ ಭೀಕರ ಬಿರುಗಾಳಿ, ಮಳೆ ಮತ್ತು ಆಲಿಕಲ್ಲು ಮಳೆಗೆ ಇಡೀ ರಾಜ್ಯವೇ ತತ್ತರಿಸಿದೆ. ಪ್ರಕೃತಿಯ ಈ ರೌದ್ರಾವತಾರಕ್ಕೆ ವಿವಿಧ ಜಿಲ್ಲೆಗಳಲ್ಲಿ ಗೋಡೆ ಕುಸಿತ, ಮರಗಳು ಬಿದ್ದಿರುವುದು ಮತ್ತು ಸಿಡಿಲು ಬಡಿದ ಘಟನೆಗಳಲ್ಲಿ ಇದುವರೆಗೆ 74 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ಹವಾಮಾನ ಇಲಾಖೆಯ ವರದಿಯಂತೆ ಉತ್ತರ ಪ್ರದೇಶ ವ್ಯಾಪ್ತಿಯಲ್ಲಿ ಚಂಡಮಾರುತ

ಗಾಳಿ-ಮಳೆಯ ಆರ್ಭಟ : 74 ಮಂದಿ ಸಾವು Read More »

ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ, ಕೇಸರಿ ಶಾಲಿಗಿಲ್ಲ ಅನುಮತಿ

ಹಿಜಾಬ್‌ ನಿಷೇಧಿಸಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶ ಹಿಂಪಡೆದ ಕಾಂಗ್ರೆಸ್‌ ಸರ್ಕಾರ ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ರಾಜ್ಯ ಸರ್ಕಾರ ಮತ್ತೆ ಅವಕಾಶ ಕಲ್ಪಿಸಿದೆ. ಎಲ್ಲ ಧರ್ಮಗಳ ಧಾರ್ಮಿಕ, ಸಾಂಪ್ರದಾಯಿಕ ವಸ್ತುಗಳಿಗೆ ಅವಕಾಶ ಕೊಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಶೈಕ್ಷಣಿಕ ವರ್ಷದಿಂದಲೇ ಆದೇಶ ಜಾರಿಗೆ ಬರಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಹಿಜಬ್‌ ನಿರ್ಬಂಧಿಸಿ 2022ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನ ಹಿಂಪಡೆದ ಸರ್ಕಾರ, ಹಿಜಬ್‌ ಧರಿಸಲು ಅವಕಾಶ ಕಲ್ಪಿಸಿ ಹೊಸ

ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ, ಕೇಸರಿ ಶಾಲಿಗಿಲ್ಲ ಅನುಮತಿ Read More »

ಚಿನ್ನದ ದರ ಏಕಾಏಕಿ 8,838 ರೂ. ಏರಿಕೆ, ಬೆಳ್ಳಿಯೂ ಜಿಗಿತ

ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಬೆಲೆ ನಾಗಾಲೋಟ ಮುಂಬೈ: ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕ ಏರಿಕೆಯಾದ ಬೆನ್ನಲ್ಲೇ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿಯ ದರ ಏರಿಕೆಯಾಗಿದೆ. ಇಂದು ಬೆಳಗ್ಗೆ 10 ಗ್ರಾಂ ಚಿನ್ನದ ಬೆಲೆ 8,838 ರೂ.(5.66%) ಏರಿಕೆಯಾಗಿ 1,61,887 ರೂ.ನಲ್ಲಿ ವ್ಯವಹಾರ ನಡೆಸುತ್ತಿದ್ದರೆ 1 ಕೆಜಿ ಬೆಳ್ಳಿ ದರ 18,0920 ರೂ. (6.36%) ಏರಿಕೆಯಾಗಿ 2,98,400 ರೂ. ನಲ್ಲಿ ವ್ಯವಹಾರ ನಡೆಸುತ್ತಿದೆ. ಮಧ್ಯಾಹ್ನ ನಂತರ ಈ ದರ ಮತ್ತಷ್ಟು ಏರಿಳಿತವಾಗುವ ಸಾಧ್ಯತೆಯಿದೆ. ಎಂಸಿಎಕ್ಸ್

ಚಿನ್ನದ ದರ ಏಕಾಏಕಿ 8,838 ರೂ. ಏರಿಕೆ, ಬೆಳ್ಳಿಯೂ ಜಿಗಿತ Read More »

ಇಂದಿರಾ ಗಾಂಧಿ ಊಟ, ಟೀ ಬಿಡಿ ಎಂದಿದ್ದನ್ನು ಮರೆತಿದ್ದಿರಾ?: ಕಾಂಗ್ರೆಸ್‌ಗೆ ದೇವೇಗೌಡ ತಿರುಗೇಟು

ಮೋದಿ ಬಗ್ಗೆ ಹಗುರ ಮಾತು ಬೇಡ ಎಂದು ಎಚ್ಚರಿಕೆ ಹಾಸನ: ಜಾಗತಿಕ ಮಟ್ಟದ ಪರಿಸ್ಥಿತಿ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬಳಕೆ ತಗ್ಗಿಸಿ, ಚಿನ್ನ ಖರೀದಿ ಕಡಿಮೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿರುವ ಬಗ್ಗೆ ಕಾಂಗ್ರೆಸ್‌ ನಾಯಕರ ಟೀಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ನಾಗಪುರದಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ವಾರದಲ್ಲಿ ಒಂದು ದಿನ ಊಟ, ಟೀ ಕುಡಿಯುವುದನ್ನು ಬಿಡಿ ಎಂದು ಬಹಿರಂಗ ಹೇಳಿಕೆ ನೀಡಿರುವ ವಿಚಾರವನ್ನು ಕಾಂಗ್ರೆಸ್‌ ನಾಯಕರು

ಇಂದಿರಾ ಗಾಂಧಿ ಊಟ, ಟೀ ಬಿಡಿ ಎಂದಿದ್ದನ್ನು ಮರೆತಿದ್ದಿರಾ?: ಕಾಂಗ್ರೆಸ್‌ಗೆ ದೇವೇಗೌಡ ತಿರುಗೇಟು Read More »

ವಾಟ್ಸಾಪ್‌ ಸಂದೇಶದಿಂದ ಬಯಲಾದ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ

ಡಾಕ್ಟರ್‌ ಮಗ ವೈದ್ಯ ವಿದ್ಯಾರ್ಥಿಯೇ ಸೋರಿಕೆಯ ರೂವಾರಿ ನವದೆಹಲಿ : ವಿದ್ಯಾರ್ಥಿಯೊಬ್ಬ ಹಾಸ್ಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಗೆ ಕಳುಹಿಸಿದ್ದ ವಾಟ್ಸಾಪ್ ಮೆಸೇಜಿನಿಂದಾಗಿ ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ವಿಚಾರೆ ಬಯಲಾಗಿದೆ ಎಂದು ತಿಳಿದುಬಂದಿದೆ. 22 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳ ಕನಸು ಪರೀಕ್ಷೆ ರದ್ದಾದ ಕಾರಣ ಛಿದ್ರವಾಗಿದೆ. ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯು ಈಗ ದೊಡ್ಡ ಹಗರಣವಾಗಿ ಬೆಳೆದಿದೆ. ತೀವ್ರ ಪ್ರತಿಭಟನೆಗಳ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರೀಕ್ಷೆಯನ್ನು ರದ್ದುಗೊಳಿಸಿದೆ. ದೇಶದಲ್ಲಿ ನೀಟ್

ವಾಟ್ಸಾಪ್‌ ಸಂದೇಶದಿಂದ ಬಯಲಾದ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ Read More »

ಸರ್ಕಾರದಿಂದಲೇ ಪ್ರಾರಂಭವಾಗಲಿದೆ ಮಿತವ್ಯಯ ಪಾಲನೆ

ಸಚಿವರ ಪ್ರಯಾಣ, ಅದ್ದೂರಿ ಔತಣಕೂಟ, ಸಭೆ, ಸೆಮಿನಾರ್‌ಗಳಿಗೆ ಕಡಿವಾಣ ಹಾಕಲು ಚಿಂತನೆ ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದಿಂದಾಗಿ ಭಾರತದಲ್ಲೂ ತೀವ್ರ ರೀತಿಯ ಆಥಿಕ ಬಿಕ್ಕಟ್ಟು ತಲೆದೋರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನಾಗರಿಕರು ಮಿತವ್ಯಯ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಕರೆನೀಡಿದ್ದಾರೆ. ಬದಲಾವಣೆ ನಮ್ಮ ಮನೆಯಿಂದಲೇ ಆರಂಭವಾಗಲಿ ಎಂದು ಸಲಹೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟದಲ್ಲಿ ಅನಗತ್ಯ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಸಚಿವರು ದೂರದ ರಾಜ್ಯಗಳಿಗೆ ಕಾರು, ಹೆಲಿಕಾಪ್ಟರ್​​ಗಳಲ್ಲಿ ಪ್ರಯಾಣ ಮಾಡುವ ಬದಲು

ಸರ್ಕಾರದಿಂದಲೇ ಪ್ರಾರಂಭವಾಗಲಿದೆ ಮಿತವ್ಯಯ ಪಾಲನೆ Read More »

ಕಲ್ಲಂಗಡಿ ಹಣ್ಣು ತಿಂದ ಬಳಿಕ ಬಾಲಕ ಸಾವು, ಮೂವರು ಅಸ್ವಸ್ಥ

ಬೆಳಗ್ಗೆ ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ಸಂಜೆ ತಿಂದಿದ್ದ ಮಕ್ಕಳು ಛತ್ತೀಸ್‌ಗಢ : ಮುಂಬೈಯಲ್ಲಿ ಕಲ್ಲಂಗಡಿ ಹಣ್ಣು ಸೇವಿಸಿದ ಬಳಿಕ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟ ಘಟನೆ ನೆನಪಿನಿಂದ ಮರೆಯಾಗುವ ಮೊದಲೇ ಇದೇ ಮಾದರಿಯ ಘಟನೆಯೊಂದು ಛತ್ತೀಸ್‌ಗಢದ ಜಾಂಜಗೀರ್-ಚಂಪಾ ಎಂಬಲ್ಲಿ ಸಂಭವಿಸಿದೆ. ಕತ್ತರಿಸಿ ಇಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಸೇವಿಸಿದ 15 ವರ್ಷದ ಬಾಲಕ ಮೃತಪಟ್ಟಿದ್ದು, ಮೂವರು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈಯ ಘಟನೆಗೆ ಕಲ್ಲಂಗಡಿ ಹಣ್ಣಿನೊಳಗೆ ಸೇರಿಕೊಂಡಿದ್ದ ಇಲಿಪಾಷಾಣ ಸಾವಿಗೆ ಕಾರಣವಾಗಿದೆ ಎಂದು ವರದಿ

ಕಲ್ಲಂಗಡಿ ಹಣ್ಣು ತಿಂದ ಬಳಿಕ ಬಾಲಕ ಸಾವು, ಮೂವರು ಅಸ್ವಸ್ಥ Read More »

ಜೋಸೆಫ್‌ ವಿಜಯ್‌ ದೇಶದ ಎರಡನೇ ಶ್ರೀಮಂತ ಮುಖ್ಯಮಂತ್ರಿ

648 ಕೋಟಿ ರೂಪಾಯಿ ಆಸ್ತಿಯ ಒಡೆಯ ವಿಜಯ್‌ ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್‌ ವಿಜಯ್ 648 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು, ತಮಿಳುನಾಡಿನ ಎರಡನೇ ಶ್ರೀಮಂತ ಶಾಸಕ ಹಾಗೂ ದೇಶದಲ್ಲೇ ಎರಡನೇ ಶ್ರೀಮಂತ ಮುಖ್ಯಮಂತ್ರಿಯೂ ಆಗಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೊದಲ ಸ್ಥಾನದಲ್ಲಿದ್ದಾರೆ. ಚಂದ್ರಬಾಬು ನಾಯ್ಡು ಆಸ್ತಿ 931 ಕೋಟಿ ರೂ.ಗಳಿಗೂ ಹೆಚ್ಚು. ತಮಿಳುನಾಡಿನ ಅತ್ಯಂತ ಶ್ರೀಮಂತ ಶಾಸಕಿ ಲಿಮಾ ರೋಸ್ ಮಾರ್ಟಿನ್. ಅವರ ಆಸ್ತಿ 5,863 ಕೋಟಿ ರೂ. ಲಿಮಾ ರೋಸ್ ಮಾರ್ಟಿನ್

ಜೋಸೆಫ್‌ ವಿಜಯ್‌ ದೇಶದ ಎರಡನೇ ಶ್ರೀಮಂತ ಮುಖ್ಯಮಂತ್ರಿ Read More »

ಮೋದಿ ಮಿತವ್ಯಯ ಮನವಿಯ ಹಿಂದಿದೆ ಕೋಟಿಗಟ್ಟಲೆ ರೂಪಾಯಿ ಉಳಿತಾಯದ ಲೆಕ್ಕಾಚಾರ

ವಿದೇಶಿ ವಿನಿಮಯ ದರವನ್ನು ಸುಸ್ಥಿರವಾಗಿಡಲು ಆಮದು ಮೇಲೆ ಕಡಿವಾಣ ಅನಿವಾರ್ಯ ನವದೆಹಲಿ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ನಮ್ಮ ದೇಶದ ಆರ್ಥಿಕ ಹೊರೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಮಿತವ್ಯಯ ಪಾಲಿಸಲು ಕರೆ ನೀಡಿದ್ದಾರೆ. ಈ ಕುರಿತಾಗಿ ಈಗ ನಾನಾ ರೀತಿಯ ಚರ್ಚೆಗಳು ಪ್ರಾರಂಭವಾಗಿವೆ. ದೇಶದ ಆರ್ಥಿಕ ಭದ್ರತೆಯನ್ನು ಗಟ್ಟಿಗೊಳಿಸಲು ಮತ್ತು ವಿದೇಶಗಳಿಗೆ ಹೋಗುತ್ತಿರುವ ಲಕ್ಷಾಂತರ ಕೋಟಿ ರೂಪಾಯಿಗಳ ಡಾಲರ್ ಹರಿವಿಗೆ ಬ್ರೇಕ್ ಹಾಕಲು ಪ್ರಧಾನಿ ನರೇಂದ್ರ ಮೋದಿ ಉಳಿತಾಯದ ಮಹಾ ಅಭಿಯಾನಕ್ಕೆ ಕರೆ

ಮೋದಿ ಮಿತವ್ಯಯ ಮನವಿಯ ಹಿಂದಿದೆ ಕೋಟಿಗಟ್ಟಲೆ ರೂಪಾಯಿ ಉಳಿತಾಯದ ಲೆಕ್ಕಾಚಾರ Read More »

error: Content is protected !!
Scroll to Top