ದೇಶ

ಎರಡು ಬಸ್‍ ಗಳು ಮುಖಾಮುಖಿ ಡಿಕ್ಕಿ : ಏಳು ಸಾವು, 40 ಮಂದಿಗೆ ಗಾಯ

ತಮಿಳುನಾಡು : ತಮಿಳುನಾಡಿನ ಕಡಲೂರು ಜಿಲ್ಲೆಯ ಮೇಲ್ಪಟ್ಟಂಪಕ್ಕಂನಲ್ಲಿ ಸೋಮವಾರ ಬೆಳಗ್ಗೆ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಏಳು ಮಂದಿ ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಸ್‌ಗಳ ಡಿಕ್ಕಿಯ ಹಿಂದಿನ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಅಪಘಾತದಲ್ಲಿ ಭಾಗಿಯಾದವರ ಜೊತೆ ಮಾತನಾಡಿದ ನಂತರವಷ್ಟೇ ತಿಳಿಯಲಿದೆ ಎಂದು ಕಡಲೂರು ಪೊಲೀಸ್ […]

ಎರಡು ಬಸ್‍ ಗಳು ಮುಖಾಮುಖಿ ಡಿಕ್ಕಿ : ಏಳು ಸಾವು, 40 ಮಂದಿಗೆ ಗಾಯ Read More »

ಅಖಿಲ ಭಾರತ ಶಾಸಕಾಂಗ ಸಮ್ಮೇಳನದಲ್ಲಿ ಭಾಗಿಯಾದ ಪುತ್ತೂರು ಶಾಸಕ ಅಶೋಕ್ ರೈ

ಪುತ್ತೂರು: ಮುಂಬಯಿಯ ಜಿಯೋ ಕನ್ವೆನ್ಸ್ಯನ್ ಸೆಂಟರ್ ನಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಅಖಿಲ ಭಾರತ ಶಾಸಕಾಂಗ ಸಮ್ಮೇಳನಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈ ಭಾಗವಹಿಸಿದರು. ಶಾಸಕರಿಗೆ ತರಬೇತಿ ಸೇರಿದಂತೆ ಶಾಸಕಾಂಗ ವಿಚಾರದಲ್ಲಿ ಮಾಹಿತಿ ಕಾರ್ಯಾಗಾರವೂ ಇಲ್ಲಿ ನಡೆಯುತ್ತದೆ. ದೇಶಾಧ್ಯಂತ ಸುಮಾರು‌2000 ಮಂದಿ ವಿವಿಧ ರಾಜ್ಯಗಳ ಶಾಸಕರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ನಾಳೆ ಶನಿವಾರ ಸಮಾವೇಶ ಕೊನೆಗೊಳ್ಳಲಿದೆ.

ಅಖಿಲ ಭಾರತ ಶಾಸಕಾಂಗ ಸಮ್ಮೇಳನದಲ್ಲಿ ಭಾಗಿಯಾದ ಪುತ್ತೂರು ಶಾಸಕ ಅಶೋಕ್ ರೈ Read More »

ಬಾಲಕಿಯರಿಗೆ ಕಿರುಕುಳ | ಮದ್ರಸಾ ಶಿಕ್ಷಕನ ಬಂಧನ

ಕಾಸರಗೋಡು: ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪಿ ಉಪ್ಪಿನಂಗಡಿ ಮೂಲದ ಮದ್ರಸಾ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಇಳಂತಿಲ ಹೌಸ್ ನಿವಾಸಿ ಅಬ್ದುಲ್ ಹಮೀದ್ (55) ಬಂಧಿತ ಆರೋಪಿ. ಕಾಸರಗೋಡಿನಲ್ಲಿ ಮದ್ರಸಾ ಶಿಕ್ಷಕನಾಗಿದ್ದ ಆರೋಪಿ 7-8 ನೇ ತರಗತಿ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿತ್ತು. ಆದೂರು ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಾಲಕಿಯರಿಗೆ ಕಿರುಕುಳ | ಮದ್ರಸಾ ಶಿಕ್ಷಕನ ಬಂಧನ Read More »

ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ

ತೆಲಂಗಾಣ : ತೆಲಂಗಾಣದಲ್ಲಿ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ ಮಗು ಗಂಭೀರ ಗಾಯಗೊಂಡಿದೆ. ತೆಲಂಗಾಣದ ಕಾಮರೆಡ್ಡಿ ಗಾಂಧಾರಿ ಮಂಡಲದ ಮುಧೋಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಾಯಿ ದಾಳಿಯಿಂದ ಬಾಲಕನ ತಲೆ ಹಾಗೂ ಹೊಟ್ಟೆಗೆ ಗಾಯವಾಗಿದೆ. ಗ್ರಾಮದ ಫಂಕ್ಷನ್ ಹಾಲ್‍ನ ಹೊರಗಡೆ ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿದೆ. ಗಾಯಗೊಂಡು ನೋವಿನಿಂದ ನರಳುತ್ತಿದ್ದ ಬಾಲಕನನ್ನು ಕಂಡು ಸ್ಥಳೀಯರು ನಾಯಿಯಿಂದ ಬಿಡಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ Read More »

ಮಣಿಪುರ ಜನಾಂಗೀಯ ಸಂಘರ್ಷ | ಲೂಟಿ ಮಾಡಿದ ಶಸ್ತ್ರಾಸ್ತ್ರಗಳು ಸರಕಾರದ ವಶಕ್ಕೆ

ಗುವಾಹತಿ: ಮಣಿಪುರದಲ್ಲಿ ಕಳೆದ ತಿಂಗಳಿನಿಂದ ನಡೆದ ಜನಾಂಗೀಯ ಸಂಘರ್ಷದ ವೇಳೆ ಉದ್ರಿಕ್ತ ಗುಂಪು ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ಭದ್ರತಾ ಸಿಬ್ಬಂದಿಗಳು ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯಲಾಗಿದ್ದು, 11763 ಮದ್ದುಗುಂಡುಗಳು, 896 ಶಸ್ತ್ರಾಸ್ತ್ರಗಳು ಹಾಗೂ 200 ಬಾಂಬ್‍ಗಳನ್ನು ವಶಕ್ಕೆ ಪಡೆದಿವೆ. ರಾಜ್ಯ ಸರಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಈ ಮಾಹಿತಿ ನೀಡಿದ್ದು, ಈ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಲೂಟಿ ಮಾಡಿರುವ ನಿಖರ ಮಾಹಿತಿ ಇಲ್ಲದಿದ್ದರೂ ಗ್ರೆನೇಡ್ ಮತ್ತು ಸಣ್ಣಪುಟ್ಟ ಫಿರಂಗಿಗಳು ಸೇರಿದಂತೆ 50 ಸಾವಿರ ಮದ್ದು ಗುಂಡುಗಳು,

ಮಣಿಪುರ ಜನಾಂಗೀಯ ಸಂಘರ್ಷ | ಲೂಟಿ ಮಾಡಿದ ಶಸ್ತ್ರಾಸ್ತ್ರಗಳು ಸರಕಾರದ ವಶಕ್ಕೆ Read More »

ಇಂದು ಜಮ್ಮುವಿನಲ್ಲಿ ತಿರುಪತಿ ಬಾಲಾಜಿ ದೇವಸ್ಥಾನದ ಲೋಕಾರ್ಪಣೆ | ಜಮ್ಮುವಿನ ಅತೀ ದೊಡ್ಡ ದೇವಾಲಯಗಳಲ್ಲಿ ಒಂದಾಗಿರುವ ದೇವಾಲಯ

ಜಮ್ಮು: ಜಮ್ಮು ಮತ್ತು ಕಾಶ್ಮೀರ್ ಮಜೀನ್‍ನ ಶಿವಾಲಿಕ್ ಕಾಡುಗಳ ಮಧ್ಯೆ ಇರುವ ಸುಂದರವಾದ ತಿರುಪತಿ ಬಾಲಾಜಿ ದೇವಾಲಯ ಇಂದು ಉದ್ಘಾಟನೆಗೊಳ್ಳಲಿದೆ. ಜೂ.8 ರಂದು ಭಕ್ತಾದಿಗಳಿಗೆ ದೇವಸ್ಥಾನದ ಬಾಗಿಲು ತೆರೆಯಲಿದ್ದು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶ್ರೀ ವೆಂಕಟೇಶ್ವರ ದೇವಾ;ಲಯವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಸುಮಾರು 62 ಎಕ್ರೆ ಜಾಗದಲ್ಲಿ ನಿರ್ಮಿಸಲಾದ ಈ ದೇವಸ್ಥಾನ ಜಮ್ಮು ಪ್ರದೇಶದ ಅತೀ ದೊಡ್ಡ ದೇವಾಲಯಗಳಲ್ಲಿ ಒಂದಾಗಲಿದೆ. ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ತಿರುಪತಿ ಬಾಲಾಜಿ ದೇವಾಲಯ ಆಂಧ್ರಪ್ರದೇಶದ

ಇಂದು ಜಮ್ಮುವಿನಲ್ಲಿ ತಿರುಪತಿ ಬಾಲಾಜಿ ದೇವಸ್ಥಾನದ ಲೋಕಾರ್ಪಣೆ | ಜಮ್ಮುವಿನ ಅತೀ ದೊಡ್ಡ ದೇವಾಲಯಗಳಲ್ಲಿ ಒಂದಾಗಿರುವ ದೇವಾಲಯ Read More »

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ 6.5 ರಲ್ಲೇ ಮುಂದುವರಿಕೆ |ಸಾಲಗಾರರಿಗೆ ಬಿಗ್ ರಿಲೀಫ್

ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್​ ರೆಪೋ ದರವನ್ನು 6.5 ಶೇಕಡಾದಲ್ಲಿಯೇ ಮುಂದುವರಿಸಲು ನಿರ್ಧಾರ ಕೈಗೊಂಡಿದ್ದು, ಪರಿಣಾಮ ಸಾಲಗಾರರಿಗೆ ಬಿಗ್​ ರಿಲೀಫ್​ ಸಿಕ್ಕಂತಾಗಿದೆ. ಆರ್‍ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಹಣದುಬ್ಬರ ಕಡಿಮೆಯಾದ ಹಿನ್ನೆಲೆಯಲ್ಲಿ ಬಡ್ಡಿದರ ಏರಿಕೆ ಮಾಡುವ ಪ್ರಮೇಯ ಬರಲಿಲ್ಲ. ಆದರೆ ಹಣದುಬ್ಬರ ಇಳಿಕೆಯಾಗಿದ್ದರೂ ಸಹ ಸಮಾಧಾನಕರ ಸ್ಥಿತಿಗೆ ನಾವು ಬಂದಿಲ್ಲ. ನಮ್ಮ ಗುರಿ ಇನ್ನೂ ಮೇಲ್ಮಟ್ಟದಲ್ಲಿದೆ. ಹೀಗಾಗಿ ನಾವು ಹಣದುಬ್ಬರದ ಬಗ್ಗೆ ಅರ್ಜುನನ ಕಣ್ಣಿಡಬೇಕು ಎಂದು ಹೇಳಿದ್ದಾರೆ. ಕಳೆದ ಮೂರು

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ 6.5 ರಲ್ಲೇ ಮುಂದುವರಿಕೆ |ಸಾಲಗಾರರಿಗೆ ಬಿಗ್ ರಿಲೀಫ್ Read More »

ಪ್ರೇಯಸಿಯನ್ನು ಮರ ಕತ್ತರಿಸುವ ಯಂತ್ರದಿಂದ ಕತ್ತರಿಸಿ, ಕುಕ್ಕರಿನಲ್ಲಿ ಬೇಯಿಸಿದ

ಮುಂಬಯಿ: ವ್ಯಕ್ತಿಯೊಬ್ಬ ಸಂಗಾತಿಯನ್ನು ಕೊಂದು ದೇಹವನ್ನು ಮರ ಕತ್ತರಿಸುವ ಯಂತ್ರದಿಂದ ಕತ್ತರಿಸಿ ಕುಕ್ಕರ್ನಲ್ಲಿ ಬೇಯಿಸಿದ ಬರ್ಬರ ಕೃತ್ಯ ಮುಂಬಯಿಯ ಮಿರಾರೋಡ್ನಲ್ಲಿ ಸಂಭವಿಸಿದೆ.ಆರೋಪಿ ಮನೋಜ್ ಸಹಾನಿಯನ್ನು (56) ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಲಿವ್ ಇನ್ ಪಾರ್ಟ್ನರ್ ಸಂಗಾತಿಯನ್ನೇ ಬರ್ಬರವಾಗಿ ಸಾಯಿಸಿದ್ದಾನೆ. ಸರಸ್ವತಿ ವೈದ್ಯ (36) ಹತ್ಯೆಯಾಗಿರುವ ಮಹಿಳೆ. ಪೊಲೀಸರು ಬಂದು ಬಾಗಿಲು ತೆರೆದು ಮನೆಯೊಳಗೆ ಹೋದಾಗ ಕೊಳೆತ ಸ್ಥಿತಿಯಲ್ಲಿದ್ದ ದೇಹದ ತುಂಡುಗಳು ಎಲ್ಲೆಂದರಲ್ಲಿ ಬಿದ್ದುಕೊಂಡಿದ್ದವು. ಕೊಲೆ ನಡೆದ ಮೂರ್ನಾಲ್ಕು ದಿನಗಳ ಬಳಿಕ ಇದು ಹೊರಜಗತ್ತಿಗೆ ತಿಳಿದುಬಂದಿದೆ. ಮನೋಜ್

ಪ್ರೇಯಸಿಯನ್ನು ಮರ ಕತ್ತರಿಸುವ ಯಂತ್ರದಿಂದ ಕತ್ತರಿಸಿ, ಕುಕ್ಕರಿನಲ್ಲಿ ಬೇಯಿಸಿದ Read More »

ಮಣಿಪುರದಲ್ಲಿ ಜನಾಂಗೀಯ ಸಂಘರ್ಷ | ಆಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಪರಿಣಾಮ ಮೂವರು ಸಜೀವ ದಹನ

ಮಣಿಪುರ: ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ನಡೆಯುತ್ತಿದ್ದು, ಆಂಬುಲೆನ್ಸ್ ಒಂದಕ್ಕೆ ಬೆಂಕಿ ಹಚ್ಚಿದೆ ಪರಿಣಾಮ ಮೂವರು ಸಜೀವ ದಹನಗೊಂಡ ಘಟನೆ ನಡೆದಿದೆ. ಆಂಬುಲೆನ್ಸ್ ನಲ್ಲಿದ್ದ ಏಳು ವರ್ಷದ ಗಾಯಾಳು ಬಾಲಕ, ಆತನ ತಾಯಿ ಹಾಗೂ ಮತ್ತೊಬ್ಬ ಮಹಿಳೆ ಸೇರಿದಂತೆ ಮೂವರು ದಹನಗೊಂಡಿದ್ದಾರೆ. ಮಣಿಪುರದಲ್ಲಿ ಕಳೆದ ಹಲವು ದಿನಗಳಿಂದ ಮೀಸಲಾತಿ ಬಗ್ಗೆ ಘರ್ಷಣೆಗಳು ನಡೆಯುತ್ತಿದೆ.

ಮಣಿಪುರದಲ್ಲಿ ಜನಾಂಗೀಯ ಸಂಘರ್ಷ | ಆಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಪರಿಣಾಮ ಮೂವರು ಸಜೀವ ದಹನ Read More »

ಒಡಿಶಾ ರೈಲು ದುರಂತ: ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ | ಗಾಯಾಳುಗಳಿಗೆ ರಕ್ತದಾನ ಮಾಡಲು ಸರತಿ ಸಾಲು

ಬಾಲಸೋರ್: ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತಕ್ಕೆ ದೇಶಾದ್ಯಂತ ಸಂತಾಪ ವ್ಯಕ್ತವಾಗುತ್ತಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳದ ಭೀಕರತೆ ಪರಿಶೀಲನೆ ಮಾಡಿ, ಘಟನೆಯ ಬಗ್ಗೆ ಮಾಹಿತಿ‌ ಪಡೆದುಕೊಂಡರು. ಇನ್ನೊಂದೆಡೆ, ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಗಾಯಾಳುಗಳ ಜೀವ ಉಳಿಸಲು ರಕ್ತದ ಅವಶ್ಯಕತೆಯೂ ಹೆಚ್ಚುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ಸ್ಪಂದನೆ ವ್ಯಕ್ತವಾಗಿದ್ದು, ರಕ್ತದಾನ ಮಾಡಲು ಜನರು ಸಾಲಿನಲ್ಲಿ ಜನರು ನಿಂತಿರುವ ದೃಶ್ಯವೂ ಕಂಡುಬಂದಿದೆ.

ಒಡಿಶಾ ರೈಲು ದುರಂತ: ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ | ಗಾಯಾಳುಗಳಿಗೆ ರಕ್ತದಾನ ಮಾಡಲು ಸರತಿ ಸಾಲು Read More »

error: Content is protected !!
Scroll to Top