ದೇಶ

ಹೆಚ್ಚುವರಿ ಸಾಲಿಸಿಟರ್ ಜನರಲ್‍ ಕೆ.ಎಂ.ನಟರಾಜ್ ಮರು ನೇಮಕ

ಪುತ್ತೂರು: ಹೆಚ್ಚುವರಿ ಜನರಲ್ ಕೆ.ಎಂ.ನಟರಾಜ್ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಮರ ನೇಮಕಗೊಳಿಸಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ. ಹಿರಿಯ ವಕೀಲ ತುಷಾರ್ ಮೆಹ್ತಾ ಅವರನ್ನು ಮತ್ತೆ ಮೂರು ವರ್ಷಗಳ ಅವಧಿಗೆ ಭಾರತದ ಸಾಲಿಸಿಟರ್ ಜನರಲ್‍ ಆಗಿ ನೇಮ ಮಾಡಲಾಗಿದೆ. ಜತೆಗೆ ಹೆಚ್ಚುವರಿ ಸಾಲಿಸಿಟರ್ ಆಗಿ ಕೆ.ಎಂ.ನಟರಾಜ್ ಅವರನ್ನು ಮರು ನೇಮಕ ಮಾಡಲಾಗಿದೆ. ವಿಕ್ರಮ್ ಜಿತ್ ಬ್ಯಾನರ್ಜಿ, ಬಲ್ವೀರ್ ಸಿಂಗ್, ಎಸ್‍.ವಿ.ರಾಜು, ಎನ್.ವೆಂಕಟರಾಮನ್, ಐಶ್ವರ್ಯ ಭಾಟಿ ಸುಪ್ರೀಂ ಕೋರ್ಟ್‍ಗೆ ಮರು ನೇಮಕಗೊಂಡಿರುವ […]

ಹೆಚ್ಚುವರಿ ಸಾಲಿಸಿಟರ್ ಜನರಲ್‍ ಕೆ.ಎಂ.ನಟರಾಜ್ ಮರು ನೇಮಕ Read More »

ಜನನ-ಮರಣ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ

ನವದೆಹಲಿ: ದೇಶದಲ್ಲಿ ಜನನ ಮತ್ತು ಮರಣ ನೋಂದಣಿ ಗೆ ಆಧಾರ್ ಕಡ್ಡಾಯವಲ್ಲ. ಆಧಾರ್ ದೃಢೀಕರಣವನ್ನ ಕೈಗೊಳ್ಳಲು ರಿಜಿಸ್ಟ್ರಾರ್ ಜನರಲ್ (RGI) ಕಚೇರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದಾಗ್ಯೂ, ಅಂತಹ ನೋಂದಣಿಗೆ ಆಧಾರ್ ಕಡ್ಡಾಯವಲ್ಲ. ಜನನ ಮತ್ತು ಮರಣ ನೋಂದಣಿ ಸಮಯದಲ್ಲಿ ಒದಗಿಸಲಾದ ಗುರುತಿನ ವಿವರಗಳನ್ನ ದೃಢೀಕರಿಸಲು ಆಧಾರ್ ಡೇಟಾಬೇಸಿನ ಬಳಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಆರ್ ಜಿಐ ಕಚೇರಿಗೆ ಅನುಮತಿ ನೀಡಿದೆ ಎಂದು ಜೂ.27 ರಂದು ಪ್ರಕಟವಾದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಜನನ ಮತ್ತು

ಜನನ-ಮರಣ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ Read More »

ಹೊಸ ಉದ್ಯಮದತ್ತ ಆಕಾಶ್ ಅಂಬಾನಿ | ಜಿಯೋ ಫೈನಾನ್ಷಿಯಲ್ ಸರ್ವಿಸಸ್‌ನೊಂದಿಗೆ ಗ್ರಾಹಕ ಹಣಕಾಸು ಕ್ಷೇತ್ರಕ್ಕೆ ಪ್ರವೇಶಿಸಲು ನಿರ್ಧಾರ

ನವದೆಹಲಿ: ಅಂಬಾನಿ ಕುಟುಂಬದ ಮೂರನೇ ತಲೆಮಾರು ಎನಿಸಿಕೊಂಡಿರುವ ಆಕಾಶ್ ಅಂಬಾನಿ ಅಂದರೆ ಮುಖೇಶ್ ಅಂಬಾನಿಯವರ ಪುತ್ರ ಉದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು, ಎಚ್.ಡಿ.ಎಫ್.ಸಿ ಬ್ಯಾಂಕ್ ಹಾಗೂ ಬಜಾಜ್ ಗೆ ತೀವ್ರ ಸ್ಪರ್ಧೆ ಒಡ್ಡುವ ಸಾಧ್ಯತೆಯಿದೆ.ಹಾಗಿದ್ದರೆ ಆಕಾಶ್ ಅಂಬಾನಿಯ ಹೊಸ ಉದ್ಯಮ ಯಾವುದು. ಭಾರತೀಯ ಉದ್ಯಮ ಕ್ಷೇತ್ರದ ಅಗ್ರಜ ಎನಿಸಿಕೊಂಡಿರುವ ಮುಖೇಶ್ ಅಂಬಾನಿಯವರ ಹಿರಿಯ ಮಗ ಆಕಾಶ್ ಅಂಬಾನಿ ಹೊಸ ಉದ್ಯಮ ಆರಂಭಿಸಿಲಿದ್ದು. ಇದೇ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವರದಿಗಳ ಪ್ರಕಾರ, ಆಕಾಶ್ ಕನ್ಸ್ಯೂಮರ್ ಫೈನಾನ್ಸ್ ಕ್ಷೇತ್ರಕ್ಕೆ

ಹೊಸ ಉದ್ಯಮದತ್ತ ಆಕಾಶ್ ಅಂಬಾನಿ | ಜಿಯೋ ಫೈನಾನ್ಷಿಯಲ್ ಸರ್ವಿಸಸ್‌ನೊಂದಿಗೆ ಗ್ರಾಹಕ ಹಣಕಾಸು ಕ್ಷೇತ್ರಕ್ಕೆ ಪ್ರವೇಶಿಸಲು ನಿರ್ಧಾರ Read More »

ಅನ್ನಭಾಗ್ಯ ಯೋಜನೆ ಉಚಿತ 5 ಕೆ ಜಿ ಅಕ್ಕಿ ಬದಲಿಗೆ ಹಣ – ಸಂಪುಟ ಸಭೆಯಲ್ಲಿ ತೀರ್ಮಾನ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೆ ನೀಡಬೇಕಿರುವ ಅಕ್ಕಿಯ ಬದಲಿಗೆ ಹಣವನ್ನು ನೀಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಜೂನ್ 28ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಜುಲೈ 1 ರಿಂದಲೇ ಫಲಾನುಭವಿಗಳ (ಬಿಪಿಎಲ್ ಕಾರ್ಡ್ ದಾರರಿಗೆ )ಬ್ಯಾಂಕ್ ಖಾತೆಗಳಿಗೆ ಹಣ ಜಮಾವಣೆ ಮಾಡಲು ನಿರ್ಧರಿಸಲಾಗಿದೆ.

ಅನ್ನಭಾಗ್ಯ ಯೋಜನೆ ಉಚಿತ 5 ಕೆ ಜಿ ಅಕ್ಕಿ ಬದಲಿಗೆ ಹಣ – ಸಂಪುಟ ಸಭೆಯಲ್ಲಿ ತೀರ್ಮಾನ Read More »

ಪ್ರಧಾನಮಂತ್ರಿ ನರೇಂದ್ರ ಮೋದಿಗೆ 15 ಎಕ್ರೆ ಜಮೀನು ನೀಡಲು ಮುಂದೆ ಬಂದ 100 ರ ವೃದ್ಧೆ | ಸಾಮಾಜಿಕ ಜಾಲತಾಣದಲ್ಲಿ ವೈರಲ್

ಹೊಸದಿಲ್ಲಿ : ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಡೀ ವಿಶ್ವದ ಮನ್ನಣೆ ಪಡೆದ ಮಹಾನಾಯಕ ಆಗಿದ್ದಾರೆ. ಈ ನಾಯಕನಿಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಇದೀಗ ಇಲ್ಲೊಬ್ಬಳು ವೃದ್ಧೆ ಮಾತ್ರ ಮೋದಿ ಕುರಿತಾಗಿ ಅಪಾರ ಪ್ರಮಾಣದ ಅಭಿಮಾನ ಮತ್ತು ಗೌರವ ಇಟ್ಟುಕೊಂಡಿದ್ದು, ಮೋದಿಗಾಗಿ ತನ್ನೆಲ್ಲ ಜಮೀನು ನೀಡಲು ಮುಂದಾಗಿದ್ದಾರೆ. ಮಧ್ಯಪ್ರದೇಶದ ರಾಜ್‌ಗಢ್ ಜಿಲ್ಲೆಯ ಹರಿಪುರ ಗ್ರಾಮದಲ್ಲಿ ವಾಸವಾಗಿರುವ 100 ವರ್ಷದ ಮಂಗಿಬಾಯಿ ತನ್ವಾರ್ ಜಮೀನು ನೀಡಲು ಮುಂದೆ ಬಂದಿದ್ದು,   ಹಾಗಂತ ಆಕೆಗೆ ಮಕ್ಕಳಿಲ್ಲ ಎಂದು ಭಾವಿಸಬೇಡಿ.

ಪ್ರಧಾನಮಂತ್ರಿ ನರೇಂದ್ರ ಮೋದಿಗೆ 15 ಎಕ್ರೆ ಜಮೀನು ನೀಡಲು ಮುಂದೆ ಬಂದ 100 ರ ವೃದ್ಧೆ | ಸಾಮಾಜಿಕ ಜಾಲತಾಣದಲ್ಲಿ ವೈರಲ್ Read More »

ಭದ್ರತಾ ಪಡೆ –ಉಗ್ರರ ಗುಂಡಿನ ಕಾಳಗ | ಓರ್ವ ಉಗ್ರನ ಹತ್ಯೆ |ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ

ಕಾಶ್ಮೀರ: ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಓರ್ವ ಉಗ್ರನನ್ನು ಗುಂಡಿಕ್ಕಿ ಸಾಯಿಸಲಾದ ಘಟನೆ ಜಮ್ಮು ಕಾಶ್ಮೀರದ ಕುಲ್ಗಾಂವ್ ನಲ್ಲಿ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತಷ್ಟು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್ ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಒಳ ನುಸುಳುಕೋರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದರು.

ಭದ್ರತಾ ಪಡೆ –ಉಗ್ರರ ಗುಂಡಿನ ಕಾಳಗ | ಓರ್ವ ಉಗ್ರನ ಹತ್ಯೆ |ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ Read More »

ವಿಮಾನದ ಸೀಟಿನ ಮೇಲೆ ಮಲಮೂತ್ರ ಮಾಡಿದ ಪ್ರಯಾಣಿಕ | ಆರೋಪಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಹೊಸದಿಲ್ಲಿ: ಪ್ರಯಾಣಿಕನೋರ್ವ ವಿಮಾನದ ಸೀಟಿನ ಮೇಲೆ ಮಲಮೂತ್ರ ವಿಸರ್ಜಿಸಿದ ಅಸಹ್ಯಕರ ಘಟನೆ ಇಂಡಿಯಾ ಏರ್‍ ಲೈನ್ ವಿಮಾನದಲ್ಲಿ ನಡೆದಿದೆ. ಮುಂಬೈ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮಲಮೂತ್ರ ವಿಸರ್ಜಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈಯಿಂದ ದಿಲ್ಲಿಗೆ ತೆರಳುತ್ತಿದ್ದ ಏರ್ ಇಂಡಿಯಾದ ವಿಮಾನದ ಎಐಸಿ 866 ಫ್ಲೈಟ್ ನ ಸೀಟ್ ನಂ.17ಎಫ್ ನಲ್ಲಿ ಕುಳಿತಿದ್ದ ಪ್ರಯಾಣಿಕ ರಾಮ್ ಸಿಂಗ್ ಎಂಬಾತ ವಿಮಾನದೊಳಗೆ ಮಲಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ದುರ್ವರ್ತನೆಯನ್ನು ವಿಮಾನದ ಕ್ಯಾಬಿನ್ ಸಿಬ್ಬಂದಿ ಗಮಸನಿಸಿ ಆತನಿಗೆ ಮೌಖಿಕ ಎಚ್ಚರಿಕೆ ನೀಡಿದ

ವಿಮಾನದ ಸೀಟಿನ ಮೇಲೆ ಮಲಮೂತ್ರ ಮಾಡಿದ ಪ್ರಯಾಣಿಕ | ಆರೋಪಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು Read More »

ಕೊಳಚೆ ಗುಂಡಿಗೆ ಬೀಳುವುದನ್ನು ತಪ್ಪಿಸಲು ಹೋದ ಮಹಿಳೆ ವಿದ್ಯುತ್ ಕಂಬ ಹಿಡಿದು ವಿದ್ಯುತ್ ಶಾಕ್‍ಗೆ ಬಲಿ

ಹೊಸದಿಲ್ಲಿ: ಪುತ್ತೂರು: ಕೊಳಚೆ ಗುಂಡಿಗೆ ಬೀಳುವುದನ್ನು ತಪ್ಪಿಸಲು ವಿದ್ಯುತ್ ಕಂಬವನ್ನು ಹಿಡಿದ ಮಹಿಳೆಯೊಬ್ಬರು ವಿದ್ಯುತ್ ಆಘಾತದಿಂದ ಮೃತಪಟ್ಟ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಪೂರ್ವ ದೆಹಲಿಯ ಪ್ರೀತ್ ವಿಹಾರ್ ನಿವಾಸಿ ಸಾಕ್ಷಿ ಅಹುಜಾ ಮೃತಪಟ್ಟವರು. ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳೊಂದಿಗೆ ಬೆಳಿಗ್ಗೆ 5.30 ರ ಸುಮಾರಿ ರೈಲು ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಸಾಕ್ಷಿ ಅಹುಜಾ ಕೊಳಚೆ ಗುಂಡಿಗೆ ಬೀಳುವುದನ್ನು ತಪ್ಪಿಸಲು ವಿದ್ಯುತ್ ಕಂಬವನ್ನು ಹಿಡಿದಿದ್ದಾರೆ. ಈ ಸಂದರ್ಭ ಭಾರೀ ಪ್ರಮಾಣದ ವಿದ್ಯುತ್‍ ಪ್ರವಹಿಸಿ

ಕೊಳಚೆ ಗುಂಡಿಗೆ ಬೀಳುವುದನ್ನು ತಪ್ಪಿಸಲು ಹೋದ ಮಹಿಳೆ ವಿದ್ಯುತ್ ಕಂಬ ಹಿಡಿದು ವಿದ್ಯುತ್ ಶಾಕ್‍ಗೆ ಬಲಿ Read More »

ಮಂಗಳೂರು-ದುಬೈ ವಿಮಾನ ಯಾನ ದರ ಏರಿಕೆ | ರಜೆಯ ಸಮಯ ಬಳಕೆ ಮಾಡಿಕೊಂಡ ಇಂಡಿಯೋ ಮತ್ತು ಏರ್​ ಇಂಡಿಯಾ ಎಕ್ಸ್​ಪ್ರೆಸ್

ಮಂಗಳೂರು: ಮಂಗಳೂರು-ದುಬೈ ವಿಮಾನಯಾನ ದರ ಏರಿಕೆಯಾಗಿದ್ದು, ಈ ಮೂಲಕ ಕರಾವಳಿ ಭಾಗದಿಂದ ಉದ್ಯೋಗಕ್ಕೆಂದು ದುಬೈನಲ್ಲಿ ತೆರಳುವವರಿಗೆ ಶಾಕ್​ ಎದುರಾಗಿದೆ. ಬಕ್ರೀದ್​ ರಜೆಯಲ್ಲಿ ಊರಿಗೆ ಮರಳಬೇಕು ಎಂದುಕೊಂಡಿರುವ ಮಧ್ಯಮವರ್ಗದ ಭಾರತೀಯರು ವಿಮಾನಯಾನದ ದರ ಕೇಳಿ ಸುಸ್ತಾಗಿದ್ದಾರೆ. ದುಬೈನಲ್ಲಿ ಸೆಖೆ ವಿಪರೀತಗೊಳ್ಳುವ ಹಿನ್ನೆಲೆಯಲ್ಲಿ ಹಲವೆಡೆ ಬೇಸಿಗೆ ರಜೆ ಆರಂಭಗೊಂಡಿದೆ, ಅಲ್ಲದೇ ಬಕ್ರೀದ್​ ಹಬ್ಬ ಬೇರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ಅನೇಕರು ವೆಕೇಷನ್​ನಲ್ಲಿ ಊರಿಗೆ ಮರಳುವ ಸಿದ್ಧತೆಯಲ್ಲಿದ್ದಾರೆ. ಆದರೆ ಏಕಾಏಕಿ ಏರಿಕೆಗೊಂಡಿರುವ ವಿಮಾನಯಾನ ದರದಿಂದ ಊರಿಗೆ ಬರುವ ನಿರ್ಧಾರದಿಂದ ಹಿಂದೆ ಸರಿಯುವಂತಾಗಿದೆ.ದುಬೈ

ಮಂಗಳೂರು-ದುಬೈ ವಿಮಾನ ಯಾನ ದರ ಏರಿಕೆ | ರಜೆಯ ಸಮಯ ಬಳಕೆ ಮಾಡಿಕೊಂಡ ಇಂಡಿಯೋ ಮತ್ತು ಏರ್​ ಇಂಡಿಯಾ ಎಕ್ಸ್​ಪ್ರೆಸ್ Read More »

ಸಾವಿರಕ್ಕೂ ಅಧಿಕ ಮಹಿಳೆಯರ ಗುಂಪಿನಿಂದ ಸೇನಾ ನೆಲೆಯ ಮೇಲೆ ದಾಳಿ | ಸೆರೆಯಲ್ಲಿದ್ದ 12 ಬಂಡುಕೋರರ ಬಿಡುಗಡೆ

ಇಂಫಾಲ : ಮಹಿಳೆಯರ ಗುಂಪೊಂದು ಸೇನಾ ನೆಲೆಗೆ ಮುತ್ತಿಗೆ ಹಾಕಿ ಸೈನಿಕರ ಸೆರೆ ಹಿಡಿದಿದ್ದ 12 ಬಂಡುಕೋರರನ್ನು ಬಿಡಿಸಿಕೊಂಡು ಹೋದ ಘಟನೆ ಮಣಿಪುರದಲ್ಲಿ ನಡೆದಿದೆ. ಪೂರ್ವ ಇಂಫಾಲದ ಇಥಾಮ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಮಾರು 1200 ಕ್ಕೂ ಮಿಕ್ಕಿ ಮಹಿಳೆಯರ ಗುಂಪು ಸೇನಾ ಪಡೆಯನ್ನು ಸುತ್ತುವರಿದಿದ್ದು, ಬಂಡುಕೋರರನ್ನು ಬಿಡುವಂತೆ ಒತ್ತಾಯಿಸಿದೆ. ಹೆಚ್ಚಿನ ಅನಾಹುತ ತಪ್ಪಿಸಲು ಸೇವೆ ಅವರನ್ನು ಬಿಟ್ಟು ಕಳುಹಿಸಿದೆ ಎಂದು ಸೇನೆ ಟ್ವಿಟರ್ ಮೂಲಕ ತಿಳಿಸಿದೆ. ಮೆಟಾಯಿ ಬಂಡುಕೋರರ ಗುಂಪಿಗೆ ಸೇರಿದ 12

ಸಾವಿರಕ್ಕೂ ಅಧಿಕ ಮಹಿಳೆಯರ ಗುಂಪಿನಿಂದ ಸೇನಾ ನೆಲೆಯ ಮೇಲೆ ದಾಳಿ | ಸೆರೆಯಲ್ಲಿದ್ದ 12 ಬಂಡುಕೋರರ ಬಿಡುಗಡೆ Read More »

error: Content is protected !!
Scroll to Top