ದೇಶ

76ನೇ ಪ್ರತಿಷ್ಠಿತ ಸೀನಿಯರ್ ನ್ಯಾಷನಲ್ ಅಕ್ವಾಟಿಕ್ ಈಜು ಚಾಂಪಿಯನ್ ಶಿಪ್‍ನಲ್ಲಿ ವೈಷ್ಣವ್ ಹೆಗ್ಡೆಗೆ ಬೆಳ್ಳಿ ಪದಕ

ಪುತ್ತೂರು: ಜುಲೈ 6ರಂದು ಹೈದರಾಬಾದ್ ನ ಗಚಿಬೌಲಿಯಲ್ಲಿ ನಡೆದ 76ನೇ ಪ್ರತಿಷ್ಠಿತ ಸೀನಿಯರ್ ನ್ಯಾಷನಲ್ಸ್ ಅಕ್ವಾಟಿಕ್ ಚಾಂಪಿಯನ್ ಶಿಪ್‌ನಲ್ಲಿ ಸರ್ವಿಸಸ್ ತಂಡವನ್ನು ಪ್ರತಿನಿಧಿಸಿರುವ ಭಾರತೀಯ ನೌಕಾಪಡೆಯ ಈಜುಗಾರ ವೈಷ್ಣವ್ ಹೆಗ್ಡೆಯವರು 50 ಮೀಟರ್ ಬ್ರೆಸ್ಟ್ ಸ್ಟೋಕ್‌ನಲ್ಲಿ 28.8 ಸೆಕೆಂಡುಗಳಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ವೈಷ್ಣವ್ ಈ ವರ್ಷದ ಹಿರಿಯ ಸೀನಿಯರ್ಸ್ ರಾಷ್ಟ್ರೀಯ ಪದಕವನ್ನು ಗೆದ್ದ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಈಜುಗಾರರೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯುವ ರಾಷ್ಟ್ರೀಯ […]

76ನೇ ಪ್ರತಿಷ್ಠಿತ ಸೀನಿಯರ್ ನ್ಯಾಷನಲ್ ಅಕ್ವಾಟಿಕ್ ಈಜು ಚಾಂಪಿಯನ್ ಶಿಪ್‍ನಲ್ಲಿ ವೈಷ್ಣವ್ ಹೆಗ್ಡೆಗೆ ಬೆಳ್ಳಿ ಪದಕ Read More »

ಮಂಗಳವಾರದಿಂದ ರಾಜ್ಯಾದ್ಯಂತ ಹಗಲಿರುಳು ತೆರೆಯಲಿರುವ ಮದ್ಯದಂಗಡಿ | ಮೊದಲು ಜ್ಯಾರಿಗೊಳಿಸಿದ ಏಕೈಕ ರಾಜ್ಯ ಹರಿಯಾಣ

ಹರಿಯಾಣ: ಹರಿಯಾಣದ ಉಪಮುಖ್ಯಮಂತ್ರಿ ದುಶ್ಯಂತ್ ಚೌತಾಲಾ ಅವರು ಮಂಗಳವಾರದಿಂದ ರಾಜ್ಯದಾದ್ಯಂತ ಎಲ್ಲಾ ರೆಸ್ಟೋರೆಂಟ್‌ಗಳಿಗೆ ಹಗಲಿರುಳು ತೆರೆದಿರಲು ಅನುಮತಿ ನೀಡಿದ್ದಾರೆ. ಈ ನಿರ್ಧಾರ ತೆಗೆದುಕೊಂಡ ಉತ್ತರ ಭಾರತದ ಏಕೈಕ ರಾಜ್ಯ ಹರಿಯಾಣವಾಗಿದೆ. ಸರ್ಕಾರದ ಈ ನಿರ್ಧಾರದಿಂದ ಗುರುಗ್ರಾಮ್‌ನ ರೆಸ್ಟೋರೆಂಟ್ ಮಾಲೀಕರು ತುಂಬಾ ಸಂತೋಷಗೊಂಡಿದ್ದಾರೆ ಮತ್ತು ಸ್ಥಳೀಯ ನಿವಾಸಿಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳ (ಎಂಎನ್‌ಸಿ) ಉದ್ಯೋಗಿಗಳಿಗೆ ತಡರಾತ್ರಿಯವರೆಗೆ ಆಹಾರವನ್ನು ಒದಗಿಸುವ ಮೂಲಕ ಹಣ ಸಂಪಾದಿಸಲು ಸಾಧ್ಯವಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಹಗಲಿರುಳು ಮಾರಾಟ ಮಾಡಲು ಕೆಲವು ಕಡೆ ನಿಷೇದ ಮಾಡಲಾಗಿರುತ್ತದೆ.

ಮಂಗಳವಾರದಿಂದ ರಾಜ್ಯಾದ್ಯಂತ ಹಗಲಿರುಳು ತೆರೆಯಲಿರುವ ಮದ್ಯದಂಗಡಿ | ಮೊದಲು ಜ್ಯಾರಿಗೊಳಿಸಿದ ಏಕೈಕ ರಾಜ್ಯ ಹರಿಯಾಣ Read More »

ಕರ್ಕಿಸ್ಥಾನದಲ್ಲಿ ನಡೆದ ಏಷ್ಯಾ ಚೆಸ್ ಚಾಂಪಿಯನ್ ಶಿಪ್‍ | ಆದ್ಯಾ ಗೌಡ ಮೂರನೇ ಸ್ಥಾನ

ಪುತ್ತೂರು: ಕಳೆದ ಒಂದು ವಾರದಿಂದ ಕರ್ಕಿಸ್ಥಾನ್‍ ನಲ್ಲಿ ನಡೆದ ಏಷ್ಯಾ ಮಟ್ಟದ 10 ವರ್ಷದೊಳಗಿನ ಚೆಸ್ ಸ್ಪರ್ಧೆಯಲ್ಲಿ ಆದ್ಯಾ ಗೌಡ ಮೂರನೇ ಸ್ಥಾನ ಗಳಿಸಿದ್ದು, ವುಮೆನ್ ವುಮೆನ್  ಕ್ಯಾಂಡಿಡೇಟ್ ಮಾಸ್ಟರ್ ಗ್ರೇಡ್ ಲಭಿಸಿದೆ. ಇತ್ತೀಚೆಗೆ ಇಂಡಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿ ಕರ್ಕಿಸ್ಥಾನದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಅವರು ಬೆಂಗಳೂರಿನ ಕೇಂಬ್ರಿಡ್ಜ್‍ ಇಂಗ್ಲೀಷ್ ಸ್ಕೂಲ್‍ನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅರವಿಂದ ಹಾಗೂ ಡಾ.ರಮ್ಯಾ ದಂಪತಿ ಪುತ್ರಿಯಾಗಿದ್ದಾರೆ. ಜಿನ್ನಪ್ಪ ಗೌಡ ಮಳುವೇಲು ಹಾಗೂ

ಕರ್ಕಿಸ್ಥಾನದಲ್ಲಿ ನಡೆದ ಏಷ್ಯಾ ಚೆಸ್ ಚಾಂಪಿಯನ್ ಶಿಪ್‍ | ಆದ್ಯಾ ಗೌಡ ಮೂರನೇ ಸ್ಥಾನ Read More »

ವಂದೇ ಭಾರತ್ ರೈಲಿಗೆ ಹೊಸ ಖದರ್ | ಬಿಡುಗಡೆಗೆ ಸಜ್ಜು

ಚೆನ್ನೈ,: ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ವಂದೇ ಭಾರತ್ ರೈಲು ಇದೀಗ ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೆ ಸಜ್ಜಾಗಿದೆ. ಇದರ ಹೊಸ ನೋಟವನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ವೀಕ್ಷಿಸಿದರು. ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಅಶ್ವಿನಿ ವೈಷ್ಣವ್, ಬಳಿಕ ಚೆನ್ನೈನ ಪೆರಂಬೂರ್ ಲಕ್ಷ್ಮೀಪುರಂ ನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ಭೇಟಿ ನೀಡಿ ಹೊಸ ರೈಲನ್ನು ಪರಿಶೀಲಿಸಿದರು. ಹೊಸ ರೈಲಿನಲ್ಲಿ ತಾಂತ್ರಿಕವಾಗಿ ಮತ್ತು ವಿನ್ಯಾಸದಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದೆ. ನೀಲಿ, ಬಿಳಿ ಬಣ್ಣದ ಬದಲು ಕೇಸರಿ ಬಿಳಿ ಬಣ್ಣವನ್ನು

ವಂದೇ ಭಾರತ್ ರೈಲಿಗೆ ಹೊಸ ಖದರ್ | ಬಿಡುಗಡೆಗೆ ಸಜ್ಜು Read More »

ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ವೇಳೆ ಹಿಂಸಾಚಾರ | ಒಂಭತ್ತು ಮಂದಿ ಮೃತ್ಯು

ಕೊಲ್ಕತ್ತಾ: ಪಂಚಾಯಿತಿ ಚುನಾವಣೆ ವೇಳೆ ಹಿಂಸಾಚಾರ ಭುಗಿಲೆದ್ದ ಪರಿಣಾಮ ಒಂಭತ್ತು ಮಂದಿ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಮೂರು ಹಂತದ ಪಂಚಾಯತಿ ಚುನಾವಣೆಗೆ ಮತದಾನ ನಡೆಯುತ್ತಿದ್ದು, ನಾಮಪತ್ರ ಸಲ್ಲಿಕೆ ವೇಳೆ ತೀವ್ರ ಹಿಂಸಾಚಾರ ನಡೆದಿತ್ತು. ಪರಿಣಾಮ ಟಿಎಂಸಿ ಕಾರ್ಯಕರ್ತ ಸಹಿತ ಒಂಭತ್ತು ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಮತದಾನ ಆರಂಭಕ್ಕೂ ಕೆಲವೇ ಗಂಟೆಗಳ ಮೊದಲು ಮುರ್ಷಿದಾಬಾದ್‌ನಲ್ಲಿ ತಡರಾತ್ರಿ ಟಿಎಂಸಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಮನೆಯೊಂದನ್ನು ಧ್ವಂಸಮಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ವೇಳೆ ಹಿಂಸಾಚಾರ | ಒಂಭತ್ತು ಮಂದಿ ಮೃತ್ಯು Read More »

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಕೊಯಮತ್ತೂರು ಡಿಐಜಿ ವಿಜಯಕುಮಾರ್

ಕೊಯಮತ್ತೂರು: ಕೊಯಮತ್ತೂರು ಡಿಐಜಿ ವಿಜಯಕುಮಾರ್ ಅವರು ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. 2009ರ ಐಪಿಎಸ್ ಬ್ಯಾಚ್‌ನವರಾಗಿದ್ದ ಇವರು, 2022 ಜನವರಿ 6ರಂದು ಚೆನ್ನೈನ ಅಣ್ಣಾನಗರ ಡೆಪ್ಯುಟಿ ಕಮಿಷನರ್‌ನಿಂದ ಕೊಯಮತ್ತೂರು ಡಿಐಜಿಯಾಗಿ ಭಡ್ತಿ ಪಡೆದಿದ್ದರು ಎನ್ನಲಾಗಿದೆ. ಕಾಂಚೀಪುರಂ, ಕಡಲೂರು, ನಾಗಪಟ್ಟಿಣಂ ಮತ್ತು ತಿರುವರೂರ್ನಲ್ಲಿ ಡಿಎಸ್ಪಿಯಾಗಿ ಕೆಲಸ ಮಾಡಿದ್ದಾರೆ. ಈ ಕುರಿತು ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ಐಪಿಎಸ್ ಅಧಿಕಾರಿ ತಮ್ಮ ಬೆಳಗಿನ ವಾಕಿಂಗ್ ಬಳಿಕ

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಕೊಯಮತ್ತೂರು ಡಿಐಜಿ ವಿಜಯಕುಮಾರ್ Read More »

ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವರ ಜು 7 ರಿಂದ ಜಿಲ್ಲಾ ಪ್ರವಾಸ

ಮಂಗಳೂರು: ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಜು.7ರಿಂದ ದ.ಕ.ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಜು.7ರ ರಾತ್ರಿ 9.15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಬಳಿಕ ಧರ್ಮಸ್ಥಳಕ್ಕೆ ತೆರಳಿ ಸನ್ನಿಧಿ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡುವರು. ಜು.8ರ ಬೆಳಗ್ಗೆ 9.30ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೆಳಿಗ್ಗೆ 10 ಗಂಟೆಗೆ ಕನ್ಯಾಡಿ ರಾಮಮಂದಿರಕ್ಕೆ ಭೇಟಿ ನೀಡುವರು. ಪೂರ್ವಾಹ್ನ 11ಕ್ಕೆ ಉಜಿರೆಯ ಮಾತೃಶ್ರೀ ಡಿ.ರತ್ನಮ್ಮ ಹೆಗ್ಗಡೆ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ

ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವರ ಜು 7 ರಿಂದ ಜಿಲ್ಲಾ ಪ್ರವಾಸ Read More »

ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‍ ಗಳ ಬೆಲೆ ಏರಿಕೆ | ಏಳು ರೂಪಾಯಿಗಳಷ್ಟು ಹೆಚ್ಚಿಸಿದ ತೈಲ ಮಾರುಕಟ್ಟೆ ಕಂಪೆನಿ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಏಳು ರೂಪಾಯಿ ಹೆಚ್ಚಿಸಿದ್ದು, ಇಂದಿನಿಂದ ಜಾರಿಗೆ ಬರಲಿವೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಪ್ರತಿ ಸಿಲಿಂಡರ್‌ಗೆ 1,773 ರೂ.ನಿಂದ 1,780 ರೂ.ಗೆ ಏರಿಕೆಯಾಗಿದೆ. ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕೊನೆಯ ಬಾರಿಗೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಳೆದ ವರ್ಷದ ಸೆಪ್ಟೆಂಬರ್ 1 ರಂದು 91.50 ರೂ.ಗಳಷ್ಟು ಕಡಿಮೆ ಮಾಡಲಾಗಿತ್ತು. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 2022 ರ ಆಗಸ್ಟ್ 1 ರಂದು

ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‍ ಗಳ ಬೆಲೆ ಏರಿಕೆ | ಏಳು ರೂಪಾಯಿಗಳಷ್ಟು ಹೆಚ್ಚಿಸಿದ ತೈಲ ಮಾರುಕಟ್ಟೆ ಕಂಪೆನಿ Read More »

ಪ್ರಧಾನಿ ಮೋದಿ ನಿವಾಸದ ಬಳಿ ಡ್ರೋನ್ ಹಾರಾಟ | ಪೊಲೀಸರಿಂದ ತನಿಖೆ

ನವದೆಹಲಿ: ನವದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ಡ್ರೋನ್‌ ಹಾರಾಟವಾಗಿರುವ ಕುರಿತು ವರದಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಅವರ ರಕ್ಷಣೆಗಿರುವ ವಿಶೇಷ ರಕ್ಷಣಾ ತಂಡ ಡ್ರೋನ್‌ ಹಾರಾಟವನ್ನು ನೋಡಿ ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದೆ. ಪೊಲೀಸರು ಕೂಡಲೇ ತನಿಖೆ ಆರಂಭಿಸಿದ್ದಾರೆ.ಇನ್ನು ಡ್ರೋನ್‌ ಪತ್ತೆ ಕಾರ್ಯವನ್ನು ಆರಂಭಿಸಿರುವ ಪೊಲೀಸರಿಗೆ ಇದುವರೆಗೆ ಯಾವುದೇ ಡ್ರೋನ್‌ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ. ಮೋದಿ ಅವರ ನಿವಾಸವು ನೋ ಡ್ರೋನ್ ಝೋನ್ ಅಡಿಯಲ್ಲಿ ಬರುತ್ತದೆ. ಆದರೂ ಡ್ರೋನ್‌

ಪ್ರಧಾನಿ ಮೋದಿ ನಿವಾಸದ ಬಳಿ ಡ್ರೋನ್ ಹಾರಾಟ | ಪೊಲೀಸರಿಂದ ತನಿಖೆ Read More »

ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ ನಿಂದ ರೋಬೋಟ್ ಮೂಲಕ ವಿದ್ವಂಸಕ ಕೃತ್ಯಕ್ಕೆ ಸಂಚು | ಸ್ಪೋಟಕ ಮಾಹಿತಿ ಬಯಲು

ಶಿವಮೊಗ್ಗ: ರಾಜ್ಯದಲ್ಲಿ ರೋಬೋಟ್ ಗಳ ಮೂಲಕ ವಿಧ್ವಂಸಕ ಕೃತ್ಯ ಎಸಗಲು ಜಾಗತಿಕ ಭಯೋತ್ಪಾದಕಾ ಸಂಘಟನೆ ಐಸಿಸ್ ಸಂಚು ಹೂಡಿದೆ ಎಂದು ಎನ್ಐಎ ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ಸ್ಫೋಟಕ ಮಾಹಿತಿ ಬಯಲಾಗಿದೆ. ಶಿವಮೊಗ್ಗ ಟ್ರಾಯಲ್ ಬ್ಲಾಸ್ಟ್ ಮತ್ತು ಐಸಿಸ್ ಲಿಂಕ್ ಕೇಸ್ ನಲ್ಲಿ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಮೆಕಾನಿಕಲ್ ಇಂಜಿನಿಯರ್ ಹಿನ್ನೆಲೆಯ ಐವರು ಶಂಕಿತರಿಂದ ರೋಬೋಟಿಕ್ ದಾಳಿಗೆ ಪ್ಲಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ವಿಚಾರಣೆ ಸಂದರ್ಭದಲ್ಲಿ ಶಂಕಿತ ಉಗ್ರರು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. ಶಂಕಿತ ಉಗ್ರ

ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ ನಿಂದ ರೋಬೋಟ್ ಮೂಲಕ ವಿದ್ವಂಸಕ ಕೃತ್ಯಕ್ಕೆ ಸಂಚು | ಸ್ಪೋಟಕ ಮಾಹಿತಿ ಬಯಲು Read More »

error: Content is protected !!
Scroll to Top