ದೇಶ

ಭಾರತೀಯರು ಎಂದಿಗೂ ಮರೆಯದ ಕರಾಳ ದಿನ : ತುರ್ತು ಪರಿಸ್ಥಿತಿ ಬಗ್ಗೆ ಮೋದಿ ವಾಗ್ದಾಳಿ

ದಿ ಎಮರ್ಜೆನ್ಸಿ ಡೈರೀಸ್ ಪುಸ್ತಕದಲ್ಲಿ ನೆನಪುಗಳನ್ನು ಬಿಚ್ಚಿದ ಪ್ರಧಾನಿ ನವದೆಹಲಿ: ಇಂದಿರಾ ಗಾಂಧಿ ಸರ್ಕಾರ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭವನ್ನು ಭಾರತೀಯರು ಎಂದಿಗೂ ಮರೆಯದ ಕರಾಳ ದಿನ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತುರ್ತು ಪರಿಸ್ಥಿತಿ ಹೇರಿ ಇಂದಿಗೆ 50 ವರ್ಷವಾದ ಹಿನ್ನೆಲೆಯಲ್ಲಿ ಮೋದಿ ಆ ದಿನಗಳ ಕುರಿತು ಟವೀಟ್‌ ಮಾಡಿದ್ದಾರೆ. ಭಾರತದ ಪ್ರಜಾಪ್ರಭುತ್ವ ಇತಿಹಾಸದ ಕರಾಳ ಅಧ್ಯಾಯಗಳಲ್ಲಿ ಒಂದಾದ ತುರ್ತು ಪರಿಸ್ಥಿತಿ ಹೇರಿಕೆಗೆ ಇಂದು ಐವತ್ತು ವರ್ಷಗಳು ತುಂಬಿವೆ. ಭಾರತದ ಜನರು ಈ […]

ಭಾರತೀಯರು ಎಂದಿಗೂ ಮರೆಯದ ಕರಾಳ ದಿನ : ತುರ್ತು ಪರಿಸ್ಥಿತಿ ಬಗ್ಗೆ ಮೋದಿ ವಾಗ್ದಾಳಿ Read More »

ತುರ್ತು ಪರಿಸ್ಥಿತಿಗೆ 50 ವರ್ಷ: ಈ ಕರಾಳತೆಯ ಬಗ್ಗೆ ಪ್ರಧಾನಿ ಮೋದಿ ಏನಂದ್ರು ಗೊತ್ತಾ?

ನವದೆಹಲಿ: ಭಾರತದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ‌ಸಂದರ್ಭದಲ್ಲಿ ಹೇರಲಾಗಿದ್ದ ‘ತುರ್ತು ಪರಿಸ್ಥಿತಿ’ಗೆ 50 ವರ್ಷಗಳಾಗಿದ್ದು, ಈ ಕರಾಳ ದಿನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ತುರ್ತು ಪರಿಸ್ಥಿತಿಯನ್ನು ಭಾರತೀಯ ಪ್ರಜಾಪ್ರಭುತ್ವದ ಅತ್ಯಂತ ಕರಾಳ ದಿನ ಎಂದು ಕರೆದಿರುವ ಅವರು, ಭಾರತೀಯರು ಇದನ್ನು ಸಂವಿಧಾನ್ ಹಲ್ವಾ ದಿವಸ್ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಿಧಾನದ ಆಶಯಗಳನ್ನು, ಮೌಲ್ಯಗಳನ್ನು ಬದಿಗಿಡಲಾಯಿತು. ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ಹಲವರನ್ನು ಜೈಲಿಗಟ್ಟಲಾಯಿತು.

ತುರ್ತು ಪರಿಸ್ಥಿತಿಗೆ 50 ವರ್ಷ: ಈ ಕರಾಳತೆಯ ಬಗ್ಗೆ ಪ್ರಧಾನಿ ಮೋದಿ ಏನಂದ್ರು ಗೊತ್ತಾ? Read More »

ಐದು ಶತಕ ಸಿಡಿಸಿದರೂ ಹೀನಾಯ ಸೋಲು : ಟೀಮ್‌ ಇಂಡಿಯಾ ಅಭಿಮಾನಿಗಳಿಗೆ ಭಾರಿ ನಿರಾಶೆ

ಟೆಸ್ಟ್‌ ಕ್ರಿಕೆಟ್‌ನ 148 ವರ್ಷಗಳ ಇತಿಹಾಸದಲ್ಲೇ ಕಳಪೆ ದಾಖಲೆ ಬರೆದ ಭಾರತ ತಂಡ ಲಂಡನ್‌ : ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು ಐದು ಶತಕ ಸಿಡಿಸಿದರೂ ಇಂಗ್ಲಂಎಡ್‌ ವಿರುದ್ಧ ಭಾರತ ಸೋತಿರುವುದು ಭಾರತೀಯ ಕ್ರಿಕೆಟ್‌ ಅಭಿಮಾನಗಳಿಗೆ ಬಹಳ ನಿರಾಶೆ ಮೂಡಿಸಿದೆ. ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಐದು ವಿಕೆಟ್‌ಗಳ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ 471 ರನ್​ ಕಲೆಹಾಕಿದರೆ, ಇಂಗ್ಲೆಂಡ್ 465

ಐದು ಶತಕ ಸಿಡಿಸಿದರೂ ಹೀನಾಯ ಸೋಲು : ಟೀಮ್‌ ಇಂಡಿಯಾ ಅಭಿಮಾನಿಗಳಿಗೆ ಭಾರಿ ನಿರಾಶೆ Read More »

ಪಂಡರಾಪುರ ಭಕ್ತರ ಮೆರವಣಿಗೆ ಮೇಲೆ ಮಾಂಸ, ಮೂಳೆ ಚೂರು ಎಸೆದ ಮಹಿಳೆ

ಆಷಾಢಿ ವಾರ್ಕರಿ ಯಾತ್ರೆಯ ಸಂದರ್ಭ ನಡೆದ ಅಹಿತಕರ ಘಟನೆ ಪುಣೆ : ಪಂಡರಾಪುರದ ವಿಠ್ಠಲನ ಕ್ಷೇತ್ರಕ್ಕೆ ಸಾಗುತ್ತಿದ್ದ ವಾರ್ಕರಿಗಳ ಮೆರವಣಿಗೆಯ ಮೇಲೆ ಮುಸ್ಲಿಂ ಮಹಿಳೆಯೊಬ್ಬಳು ಮಾಂಸ ಮತ್ತು ಮೂಳೆ ಚೂರುಗಳನ್ನು ಎಸೆದು ಅಪವಿತ್ರಗೊಳಿಸಿದ ಘಟನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮಹಾರಾಷ್ಟ್ರದ ಪುಣೆಯ ಕ್ಯಾಂಪ್‌ ಏರಿಯಾದಲ್ಲಿ ಈ ಘಟನೆ ನಡೆದಿದೆ. ಮಾಂಸ ಎಸೆದ ಮಹಿಳೆಯನ್ನು ನಾಸಿಮ್‌ ಶೇಖ್‌ (57) ಎಂದು ಗುರುತಿಸಲಾಗಿದೆ. ಜೂನ್‌ 21ರಂದು ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಆಷಾಢಿ ವಾರಿ

ಪಂಡರಾಪುರ ಭಕ್ತರ ಮೆರವಣಿಗೆ ಮೇಲೆ ಮಾಂಸ, ಮೂಳೆ ಚೂರು ಎಸೆದ ಮಹಿಳೆ Read More »

ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಜ್ಜಿಯನ್ನು ಕಸದ ತೊಟ್ಟಿಗೆ ಎಸೆದ ಮೊಮ್ಮಗ!

ಅರೆಪ್ರಜ್ಞಾವಸ್ಥೆಯಲ್ಲಿದ್ದ ವೃದ್ಧೆಯನ್ನು ರಕ್ಷಿಸಿದ ಪೊಲೀಸರು ಮುಂಬೈ: ಕ್ಯಾನ್ಸರ್‌ ರೋಗದಿಂದ ಬಳಲುತ್ತಿರುವ ಅಜ್ಜಿಯನ್ನು ಮೊಮ್ಮಗನೇ ಕಸದ ತೊಟ್ಟಿಗೆ ಎಸೆದುಹೋದ ಅಮಾನವೀಯ ಘಟನೆಯೊಂದು ಮುಂಬಯಿ ಮಹಾನಗರದಲ್ಲಿ ಸಂಭವಿಸಿದೆ. 60 ವರ್ಷದ ಯಶೋದಾ ಗಾಯಕ್ವಾಡ್ ಎಂಬ ಹಿರಿಯ ಮಹಿಳೆ ಕಸದ ತೊಟ್ಟಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನರಳುತ್ತಿರುವುದನ್ನು ನೋಡಿ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಯಶೋದಾ ಚರ್ಮದ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಕಳೆದ ಶನಿವಾರ ಬೆಳಗ್ಗೆ ಗೋರೆಗಾಂವ್‌ ಸಮೀಪ ಆರೆ​ ಕಾಲನಿಯ ರಸ್ತೆಬದಿಯ ಕಸದ ರಾಶಿಯ ಮೇಲೆ ವೃದ್ಧೆ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದನ್ನು ಅಲ್ಲೇ ಹೋಗುತ್ತಿದ್ದವರು

ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಜ್ಜಿಯನ್ನು ಕಸದ ತೊಟ್ಟಿಗೆ ಎಸೆದ ಮೊಮ್ಮಗ! Read More »

ಭಾರತದ ಸೇನಾ ಬತ್ತಳಿಕೆಗೆ 6 ಪಿನಾಕ ರಾಕೆಟ್ ಶೀಘ್ರವೇ ಸೇರ್ಪಡೆ

ನವದೆಹಲಿ: ಜಗತ್ತಿನಲ್ಲಿ ಯುದ್ಧದ ಪರಿಸ್ಥಿತಿ ಹೆಚ್ಚಾಗುತ್ತಿದೆ. ಶತ್ರು ರಾಷ್ಟ್ರ ಪಾಕಿಸ್ತಾನ ಭಾರತದ ಮೇಲೆ ಆಗಾಗ್ಗೆ ಭಯೋತ್ಪಾದಕ ದಾಳಿಗಳನ್ನು ಮಾಡುತ್ತಿದೆ. ಚೀನಾ ಸಹ ತನ್ನ ಗಡಿ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಕುತಂತ್ರಗಳನ್ನು ಮಾಡುತ್ತಿದೆ. ಈ ಎಲ್ಲಾ ಕಾರಣಗಳಿಗಾಗಿ ಭಾರತ ತನ್ನ ಸೇನಾ ಬಲ, ಶಸ್ತ್ರಾಸ್ತ್ರಗಳ ಬಲವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಈ ನಿಟ್ಟಿನಲ್ಲಿ ಪ್ರಸ್ತುತ ಭಾರತೀಯ ಸೇನೆಗೆ ಪಿನಾಕ ಎಂಬ ಪ್ರಬಲ 6 ರಾಕೆಟ್ ಅಸ್ತ್ರಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತಿದೆ. 2026 ರ ವೇಳೆಗೆ ಈ ರಾಕೆಟ್‌ಗಳ ಲಾಂಚರ್‌ಗಳು ಆರು

ಭಾರತದ ಸೇನಾ ಬತ್ತಳಿಕೆಗೆ 6 ಪಿನಾಕ ರಾಕೆಟ್ ಶೀಘ್ರವೇ ಸೇರ್ಪಡೆ Read More »

ಜಗತ್ತಿನಲ್ಲಿ ಭಾರತ, ಪ್ರಧಾನಿ ಮೋದಿಯವರ ಖ್ಯಾತಿ ಹೆಚ್ಚಾಗಿದೆ : ದೆಹಲಿ ಸಿಎಂ ರೇಖಾ ಗುಪ್ತಾ

ನವದೆಹಲಿ: ಪ್ರಧಾನಿ ಸ್ಥಾನವನ್ನು ಮೋದಿ ಅವರು ಅಲಂಕರಿಸುವ ಮೊದಲು ಭಾರತವನ್ನು ಜಗತ್ತಿನಲ್ಲೇ ಅಭಿವೃದ್ಧಿ ಹೊಂದದ ಮತ್ತು ಹಿಂದುಳಿದ ರಾಷ್ಟ್ರ ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಪ್ರಧಾನಿ ಮೋದಿ ಮತ್ತು ಭಾರತದ ಖ್ಯಾತಿ ವಿಶ್ವದಲ್ಲಿ ಹೆಚ್ಚಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಹೇಳಿದ್ದಾರೆ. ಪ್ರಸ್ತುತ ವಿದೇಶಗಳಲ್ಲಿ ಭಾರತೀಯರನ್ನು ಶುಭಾಶಯ, ನಮಸ್ಕಾರಗಳ ಜೊತೆಗೆ ಸ್ವಾಗತ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಅವರು ದೇಶವನ್ನು ಸ್ವಾವಲಂಬಿ ರಾಷ್ಚ್ರವನ್ನಾಗಿಸಲು ಮತ್ತು ಸಮೃದ್ಧವನ್ನಾಗಿ ಮಾಡಲು ಕೆಲಸ ಮಾಡುತ್ತಿದ್ದಾರೆ. ದೆಹಲಿಯಲ್ಲೂ ತ್ರಿಬಲ್ ಎಂಜಿನ್ ಬಿಜೆಪಿ ಆಡಳಿತ

ಜಗತ್ತಿನಲ್ಲಿ ಭಾರತ, ಪ್ರಧಾನಿ ಮೋದಿಯವರ ಖ್ಯಾತಿ ಹೆಚ್ಚಾಗಿದೆ : ದೆಹಲಿ ಸಿಎಂ ರೇಖಾ ಗುಪ್ತಾ Read More »

ಪಹಲ್ಗಾಮ್‌ ದಾಳಿ : ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರ ಬಂಧನ

ಏ.22ರಂದು 26 ಪ್ರವಾಸಿಗರನ್ನು ಸಾಯಿಸಿದ್ದ ಭೀಕರ ಕೃತ್ಯಕ್ಕೆ ಸಾಥ್‌ ನೀಡಿದವರು ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ಏ.22ರಂದು 26 ಪ್ರವಾಸಿಗರನ್ನು ಕೊಂದು ಹಾಕಿದ್ದ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಪರ್ವೈಜ್ ಅಹ್ಮದ್ ಜೋಥರ್ ಮತ್ತು ಬಶೀರ್ ಅಹ್ಮದ್ ಜೋಥರ್ ಎಂದು ಗುರುತಿಸಲಾಗಿದೆ. ಬಂಧಿತರಿಬ್ಬರು ಪಹಲ್ಗಾಮ್ ನಿವಾಸಿಗಳಾಗಿದ್ದು, ಪಾಕಿಸ್ತಾನದ ಲಷ್ಕರ್-ಎ-ತೈಬಾ ಉಗ್ರ ಸಂಘಟನೆಗೆ ಸೇರಿದ ಮೂವರು ಉಗ್ರರಿಗೆ ಆಶ್ರಯ ನೀಡಿದ್ದರು. ತನಿಖೆ ವೇಳೆ ಬಂಧಿತರು ದಾಳಿಕೋರರ ಗುರುತುಗಳನ್ನು ಬಹಿರಂಗಪಡಿಸಿದ್ದು, ಉಗ್ರರು

ಪಹಲ್ಗಾಮ್‌ ದಾಳಿ : ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರ ಬಂಧನ Read More »

ಆಪರೇಷನ್ ಸಿಂಧೂ : ಇರಾನಿನಿಂದ 11 ಜನ ಕನ್ನಡಿಗರು ಭಾರತಕ್ಕೆ ವಾಪಾಸು

ಬೆಂಗಳೂರು: ಯುದ್ಧ ಪೀಡಿತ ಇರಾನ್‌ನಿಂದ ಆಪರೇಷನ್ ಸಿಂಧೂ ಮೂಲಕ 11 ಮಂದಿ ಕನ್ನಡಿಗರನ್ನು ಮರಳಿ ಕರೆತರಲಾಗಿದೆ. ಶನಿವಾರ ರಾತ್ರಿ ಟೆಹ್ರಾನ್‌ನಿಂದ 11 ಜನ ಕರ್ನಾಟಕದವರು ದೆಹಲಿಗೆ ಹಿಂದಿರುಗಿದ್ದಾರೆ. ಇಂದು ಅವರೆಲ್ಲರೂ ವಿಮಾನದ ಮೂಲಕ ಬೆಂಗಳೂರಿಗೆ ಬರಲಿದ್ದಾರೆ. ಜೂ.  19 ರಂದು ಇರಾನಿನಿಂದ ಅರ್ಮೇನಿಯಾ ಮೂಲಕ 110 ಮಂದಿ ವಿದ್ಯಾರ್ಥಿಗಳು ಭಾರತಕ್ಕೆ ಬಂದಿದ್ದರು. ಯುದ್ಧದ ಸಂದರ್ಭದಲ್ಲಿ ಇಸ್ರೇಲಿನಲ್ಲಿಯೂ ಸಿಲುಕಿ ಹಾಕಿಕೊಂಡಿದ್ದ 18 ಮಂದಿ ಕರ್ನಾಟಕದ ವಿದ್ಯಾರ್ಥಿಗಳು ಜೂ. 19 ರಂದೇ ಭಾರತಕ್ಕೆ ಬರಬೇಕಾಗಿತ್ತು. ಆದರೆ ಅಲ್ಲಿ ತುರ್ತು ಪರಿಸ್ಥಿತಿಯ

ಆಪರೇಷನ್ ಸಿಂಧೂ : ಇರಾನಿನಿಂದ 11 ಜನ ಕನ್ನಡಿಗರು ಭಾರತಕ್ಕೆ ವಾಪಾಸು Read More »

ರಾಜ್ಯದ ಮಾವು ಬೆಳೆಗಾರರಿಗೆ ನೆರವಾಗಲು ಮುಂದಾದ ಕೇಂದ್ರ ಸರ್ಕಾರ

ಬೆಂಗಳೂರು: ಕರ್ನಾಟಕದ ಮಾವು ಬೆಳೆಗಾರರ ರಕ್ಷಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ 2.5 ಲಕ್ಷ ಟನ್ ಮಾವು ಖರೀದಿಗೆ ಅಸ್ತು ಎಂದಿದೆ. ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಅವರೊಂದಿಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಂವಾದದ ಬಳಿಕ ರಾಜ್ಯದ ಮಾವು ಬೆಳೆಗಾರರಿಗೆ ನೆರವಾಗಲು ಕೇಂದ್ರ ಸರ್ಕಾರ ಮುಂದಾಗಿರುವುದಾಗಿದೆ. ಈ ಸಂಬಂಧ ಅಧಿಕೃತ ಆದೇಶ ಇನ್ನಷ್ಟೇ ಬರಬೇಕಿದೆ. ಈ ಸಂವಾದದಲ್ಲಿ ರಾಜ್ಯದಲ್ಲಿ ಉತ್ಪತ್ತಿಯಾಗುವ 10 ಲಕ್ಷ ಮೆಟ್ರಿಕ್ ಟನ್ ಮಾವುಗಳಲ್ಲಿ 2.5

ರಾಜ್ಯದ ಮಾವು ಬೆಳೆಗಾರರಿಗೆ ನೆರವಾಗಲು ಮುಂದಾದ ಕೇಂದ್ರ ಸರ್ಕಾರ Read More »

error: Content is protected !!
Scroll to Top