ದೇಶ

ಪುರಿ ರಥಯಾತ್ರೆಯಲ್ಲಿ ಕಾಲ್ತುಳಿತ : ಮೂವರು ಸಾವು

ದರ್ಶನಕ್ಕಾಗಿ ಭಕ್ತರು ಮುಗಿಬಿದ್ದಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ನವದೆಹಲಿ: ಒಡಿಶಾದ ಪುರಿಯಲ್ಲಿ ಜಗತ್ಪ್ರಸಿದ್ಧ ಜಗನ್ನಾಥನ ರಥಯಾತ್ರೆಯ ಸಮಯದಲ್ಲಿ ಇಂದು ಮುಂಜಾನೆ ಕಾಲ್ತುಳಿತ ಸಂಭವಿಸಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. 10 ಜನರು ಗಾಯಗೊಂಡಿದ್ದು, ಈ ಪೈಕಿ 6 ಮಂದಿಯ ಸ್ಥಿತಿ ಚಿಂತಾಜನಕವಿದೆ ಎನ್ನಲಾಗಿದೆ.ಜಗನ್ನಾಥ, ಬಲರಾಮ ಮತ್ತು ಸುಭದ್ರ ದೇವಿಯ ವಿಗ್ರಹಗಳನ್ನು ಹೊತ್ತ ಮೂರು ರಥಗಳು ಜಗನ್ನಾಥ ದೇವಾಲಯದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಶ್ರೀ ಗುಂಡಿಚಾ ದೇವಾಲಯದ ಬಳಿ ಹಾದು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. […]

ಪುರಿ ರಥಯಾತ್ರೆಯಲ್ಲಿ ಕಾಲ್ತುಳಿತ : ಮೂವರು ಸಾವು Read More »

ಆರ್‌ಸಿಬಿ ಆಟಗಾರ ಯಶ್‌ ದಯಾಳ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

ಪ್ರೀತಿಸುವ ನಾಟಕವಾಡಿ ವಂಚಿಸಿದ್ದಾರೆ ಎಂದು ಆರೋಪಿಸಿದ ಯುವತಿ ಲಖನೌ: ಐಪಿಎಲ್​ನಲ್ಲಿ ಆರ್‌ಸಿಬಿ ಪರ ಆಡುತ್ತಿರುವ ಭಾರತದ ಯುವ ಕ್ರಿಕೆಟಿಗ ಯಶ್ ದಯಾಳ್ ವಿರುದ್ಧ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯ, ಹಿಂಸೆ ಮತ್ತು ವಂಚನೆ ಆರೋಪ ಹೊರಿಸಿದ್ದಾರೆ. ಯಶ್ ದಯಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಯುವತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ನ್ಯಾಯಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಪೊಲೀಸರಿಗೆ ಮನವಿ ಕೂಡ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸಿಎಂ ಹೆಲ್ಪ್‌ಲೈನ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದು,

ಆರ್‌ಸಿಬಿ ಆಟಗಾರ ಯಶ್‌ ದಯಾಳ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ Read More »

ಪ್ರಧಾನಿ ಮೋದಿ ಅವರಿಗೆ ‘ಧರ್ಮ ಚಕ್ರವರ್ತಿ’ ಬಿರುದು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈನ ಸಂತ ಆಚಾರ್ಯ ಶ್ರೀ 108 ವಿದ್ಯಾನಂದ ಜೀ ಅವರ ಶತಮಾನೋತ್ಸವ ಸಮಾರಂಭದಲ್ಲಿ ‘ಧರ್ಮ ಚಕ್ರವರ್ತಿ’ ಬಿರುದು‌ ಪ್ರದಾನಿಸಿ ಗೌರವಿಸಲಾಯಿತು. ಈ ಸಂಬಂಧ ಮಾತನಾಡಿರುವ ಪ್ರಧಾನಿ ಮೋದಿ, ನೀವು ನನಗೆ ಧರ್ಮ ಚಕ್ರವರ್ತಿ ಬಿರುದು ನೀಡಿದ್ದೀರಿ‌. ಆದರೆ ನಾನಿದಕ್ಕೆ ‌ಸೂಕ್ತನೋ ಗೊತ್ತಿಲ್ಲ. ಸಂತರಿಂದ ಏನೇ ದೊರೆತರೂ ಅದನ್ನು ಪ್ರಸಾದ ಎಂದು ಸ್ವೀಕರಿಸುವುದು ನಮ್ಮ ಸಂಸ್ಕೃತಿ. ಆದ್ದರಿಂದ ವಿನಯಪೂರ್ವಕವಾಗಿ ‌ನಾನು ಇದನ್ನು ಸ್ವೀಕಾರ ಮಾಡುತ್ತೇನೆ. ಹಾಗೆಯೇ ಇದನ್ನು ತಾಯಿ ಭಾರತಿಗೆ ಅರ್ಪಿಸುತ್ತೇನೆ

ಪ್ರಧಾನಿ ಮೋದಿ ಅವರಿಗೆ ‘ಧರ್ಮ ಚಕ್ರವರ್ತಿ’ ಬಿರುದು Read More »

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ 5.5 ಕೋಟಿ ಭಕ್ತರ ಭೇಟಿ

ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗಿ ಲೋಕಾರ್ಪಣೆಯಾದ ಬಳಿಕ ಅಲ್ಲಿಗೆ ದೇಶ ವಿದೇಶಗಳಿಂದ ಯಾತ್ರಿಕರ ದಂಡು ಹರಿದು ಬಂದಿದೆ. ಈವರೆಗೆ ಶ್ರೀರಾಮನ ದರ್ಶನಕ್ಕೆ ಸುಮಾರು 5.5 ಕೋಟಿಗೂ ಅಧಿಕ ಜನರು ಭೇಟಿ ನೀಡಿದ್ದಾಗಿ ಉತ್ತರ ಪ್ರದೇಶದ ಸರ್ಕಾರ ಮಾಹಿತಿ ನೀಡಿದೆ. ಸುಮಾರು 4.5 ಲಕ್ಷಕ್ಕೂ ಅಧಿಕ ಗಣ್ಯರು ಶ್ರೀರಾಮ ಮಂದಿರಕ್ಕೆ ಬಂದು ಹೋಗಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಯಾವುದೇ ಭಕ್ತರಿಗೂ ‌ಸಮಸ್ಯೆಯಾಗದ ನೆಲೆಯಲ್ಲಿ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿದ್ದು, ಅಲ್ಲಿನ ವ್ಯವಸ್ಥೆಗಳ

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ 5.5 ಕೋಟಿ ಭಕ್ತರ ಭೇಟಿ Read More »

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ ಸುಳ್ಳು ಮಾಹಿತಿ ನೀಡಿದರೆ ಶೇ.200 ದಂಡ

ಆದಾಯ ತೆರಿಗೆ ಸಲ್ಲಿಕೆಗೆ ಹೊಸ ನಿಯಮ ಜಾರಿ ನವದೆಹಲಿ : ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಹೊಸ ನಿಯಮ ಜಾರಿಯಾಗಿದ್ದು, ಇನ್ನು ಮುಂದೆ ರಿಟರ್ನ್ಸ್‌ ಸಲ್ಲಿಸುವಾಗ ತಪ್ಪು ಮಾಹಿತಿ ನೀಡುವ ಅಥವಾ ಆದಾಯವನ್ನು ಮರೆಮಾಚುವ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಕಠಿಣ ಎಚ್ಚರಿಕೆ ನೀಡಿದೆ. ತೆರಿಗೆದಾರರು ಸುಳ್ಳು ಮಾಹಿತಿಗಳನ್ನು ತೋರಿಸಿದರೆ ಅಥವಾ ಆದಾಯ ಮರೆಮಾಚಿದರೆ ಶೇ. 200ರವರೆಗೆ ದಂಡ, ವಾರ್ಷಿಕ ಶೇ. 24ವರೆಗೆ ಬಡ್ಡಿ ವಿಧಿಸಲಾಗುತ್ತದೆ. ಅಲ್ಲದೇ ಸೆಕ್ಷನ್ 276ಸಿ ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸುವ ಅವಕಾಶವೂ

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ ಸುಳ್ಳು ಮಾಹಿತಿ ನೀಡಿದರೆ ಶೇ.200 ದಂಡ Read More »

ಪಹಲ್ಗಾಮ್ ದಾಳಿಯ ಉಲ್ಲೇಖವಿಲ್ಲದ ಕಾರಣ SCO ಜಂಟಿ ಘೋಷಣೆಗಳಿಗೆ ಭಾರತ ಸಹಿ ಹಾಕಿಲ್ಲ

ನವದೆಹಲಿ: ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ ರಕ್ಷಣಾ ಸಚಿವರ ಸಭೆಯಲ್ಲಿ ಜಂಟಿ ಘೋಷಣೆಗೆ ಸಹಿ ಮಾಡಲು ಭಾರತ ನಿರಾಕರಿಸಿತ್ತು. ಈ ಬಗೆ ಕೆಲವು ವರದಿಗಳು ಇದರಲ್ಲಿ ಬಲೂಚಿಸ್ತಾನ್ ಬಿಕ್ಕಟ್ಟಿನ ಉಲ್ಲೇಖ ಇರುವುದಾಗಿ ಹೇಳಿದ್ದವು. ಇದಕ್ಕೆ ಸ್ಪಷ್ಚನೆ ನೀಡಿರುವ ಮೂಲಗಳು, ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸುವಾಗ ವಿಫಲವಾದ ಕಾರಣ ಭಾರತ ಇದಕ್ಕೆ ಸಹಿ ಹಾಕಿಲ್ಲ ಎಂದಿವೆ. ಇದರಲ್ಲಿ ಪಹಲ್ಗಾಮ್, ಬಲೂಚಿಸ್ತಾನ್ ಅಥವಾ ಉಗ್ರವಾದದ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಇದು ಭಾರತವು ಸಹಿ ಹಾಕುವುದಕ್ಕೆ ಹಿಂದೆ ಸರಿಯುವ ಹಾಗೆ

ಪಹಲ್ಗಾಮ್ ದಾಳಿಯ ಉಲ್ಲೇಖವಿಲ್ಲದ ಕಾರಣ SCO ಜಂಟಿ ಘೋಷಣೆಗಳಿಗೆ ಭಾರತ ಸಹಿ ಹಾಕಿಲ್ಲ Read More »

ಜಗತ್ಪ್ರಸಿದ್ಧ ಪುರಿ ರಥಯಾತ್ರೆಯಲ್ಲಿ ಕಾಲ್ತುಳಿತ : ಓರ್ವ ಮೃತ, 500 ಮಂದಿಗೆ ಗಾಯ

ತಾಳಧ್ವಜ ರಥ ರಥ ಎಳೆಯಲು ತಳ್ಳಾಟ ನಡೆದಾಗ ಅವಘಡ ಭುವನೇಶ್ವರ : ಒಡಿಶಾದ ಪುರಿಯ ಜಗತ್ಪ್ರಸಿದ್ಧ ವಾರ್ಷಿಕ ರಥಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಓರ್ವ ಮೃತಪಟ್ಟು 500ಕ್ಕೂ ಅಧಿಕ ಭಕ್ತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬಲಭದ್ರನ ರಥವನ್ನು ಎಳೆಯಲು ಭಾರಿ ಜನಸಮೂಹ ಮುಂದಕ್ಕೆ ಬಂದಾಗ ಕಾಲ್ತುಳಿದಂಥ ಪರಿಸ್ಥಿತಿ ತಲೆದೋರಿದೆ. ಶತಮಾನಗಳಷ್ಟು ಹಳೆಯ ಸಂಪ್ರದಾಯದ ಭಾಗವಾಗಿ ಎಳೆಯುವ ಮೂರು ಭವ್ಯ ರಥಗಳಲ್ಲಿ ಒಂದಾದ ತಾಳಧ್ವಜ ರಥವನ್ನು ಎಳೆಯುವ ಸಮಯದಲ್ಲಿ ಈ ಕಾಲ್ತುಳಿತದ ರೀತಿಯ ಘಟನೆ ಸಂಭವಿಸಿದೆ. ಲಕ್ಷಾಂತರ ಭಕ್ತರನ್ನು

ಜಗತ್ಪ್ರಸಿದ್ಧ ಪುರಿ ರಥಯಾತ್ರೆಯಲ್ಲಿ ಕಾಲ್ತುಳಿತ : ಓರ್ವ ಮೃತ, 500 ಮಂದಿಗೆ ಗಾಯ Read More »

ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು: ದತ್ತಾತ್ರೇಯ ಹೊಸಬಾಳೆ

ನವದೆಹಲಿ: ಸಮಾಜವಾದಿ ಮತ್ತು ಜಾತ್ಯಾತೀತ ಪದಗಳನ್ನು ನಮ್ಮ ಸಂವಿಧಾನದ ಪೀಠಿಕೆಯಿಂದ ತೆಗೆದು ಹಾಕಬೇಕು ಎಂದು RSS ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಆಗ್ರಹಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿರುವ ಡಾ| ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ದೇಶದ ಕ್ಷಮೆ ಯಾಚಿಸಬೇಕು. ತುರ್ತು ಪರಿಸ್ಥಿತಿ ಹೇರಿದವರೇ ಇಂದು ದೇಶದಲ್ಲಿ ಸಂವಿಧಾನದ ಪ್ರತಿಗಳನ್ನು ಹಿಡಿದು ಓಡಾಡುತ್ತಿದ್ದಾರೆ. ಆದರೆ ಈ ವರೆಗೂ ಅವರು ದೇಶದ ಜನರಲ್ಲಿ ಕ್ಷಮೆ ಕೇಳಿಲ್ಲ ಎಂದು ಅವರು

ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು: ದತ್ತಾತ್ರೇಯ ಹೊಸಬಾಳೆ Read More »

ಪಾಕ್ ಪತ್ರದಿಂದ ‘‌ಸಿಂಧೂ ಜಲ ಒಪ್ಪಂದ’ದ ಬಗ್ಗೆ ಭಾರತದ ನಿಲುವು ಬದಲಾಗದು

ನವದೆಹಲಿ: ಪಾಕಿಸ್ತಾನವು ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದ ಹಾಗೆ ಭಾರತಕ್ಕೆ ಪದೇ ಪದೇ ಪತ್ರ ಬರೆಯುತ್ತಿದ್ದು, ಇದನ್ನು ಜಲ ಶಕ್ತಿ ಸಚಿವ ಸಿ. ಆರ್. ಪಾಟೀಲ್ ತಿರಸ್ಕರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಅದು ಕೇವಲ ಔಪಚಾರಿಕ ಪತ್ರವಾಗಿದ್ದು, ಆ ಪತ್ರದಿಂದ ಭಾರತ ಈಗಾಗಲೇ ತೆಗೆದುಕೊಂಡ ನಿಲುವು ಬದಲಾಗುವುದಿಲ್ಲ ಎಂದಿದ್ದಾರೆ. ಪಾಕ್ ಎಷ್ಟೇ ಬಾರಿ ವಿನಂತಿ ಮಾಡಿದರೂ ಈ ವಿಚಾರದಲ್ಲಿ ಭಾರತದ ನಿಲುವನ್ನು ಮರುಪರಿಶೀಲಿಸುವ ಯಾವುದೇ ಆಲೋಚನೆ ಹೊಂದಿಲ್ಲ. ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ನೀರು ಎಲ್ಲಿಗೂ

ಪಾಕ್ ಪತ್ರದಿಂದ ‘‌ಸಿಂಧೂ ಜಲ ಒಪ್ಪಂದ’ದ ಬಗ್ಗೆ ಭಾರತದ ನಿಲುವು ಬದಲಾಗದು Read More »

error: Content is protected !!
Scroll to Top