ದೇಶ

ಪ್ರತಿವರ್ಷ 500 ವಿಶೇಷ ಚೇತನ ಮಹಿಳೆಯರ ವಿವಾಹಕ್ಕೆ ತಲಾ 10 ಲ.ರೂ. ಕೊಡುಗೆ

ಅದಾನಿ ಪುತ್ರ ಜೀತ್‌ ಅದಾನಿಯಿಂದ ವಿಶೇಷ ಚೇತನರಿಗೆ ಮದುವೆ ಉಡುಗೊರೆ ಹೊಸದಿಲ್ಲಿ: ಕೈಗಾರಿಕೋದ್ಯಮಿ ಗೌತಮ್‌ ಅದಾನಿ ಅವರ ಪುತ್ರ ಜೀತ್‌ ಅದಾನಿ ತನ್ನ ಮದುವೆ ಸಂದರ್ಭದಲ್ಲಿ ವಿಶೇಷ ಚೇತನ ಮಹಿಳೆಯರಿಗೆ ದೊಡ್ಡ ಉಡುಗೊರೆಯೊಂದನ್ನು ನೀಡಿದ್ದಾರೆ. ಪ್ರತಿವರ್ಷ 500 ವಿಶೇಷ ಚೇತನ ಮಹಿಳೆಯರ ಮದುವೆಗೆ ತಲಾ 10 ಲ.ರೂ.ಯಂತೆ ದೇಣಿಗೆ ನೀಡುವುದಾಗಿ ಜೀತ್‌ ಅದಾನಿ ವಾಗ್ದಾನ ಮಾಡಿದ್ದಾರೆ. ಜೀತ್‌ ಅದಾನಿ ಅವರು ಫೆ.7ರಂದು ದಿವಾ ಶಾ ಅವರನ್ನು ವಿವಾಹವಾಗಲಿದ್ದಾರೆ. ಜೀತ್ ಮತ್ತು ದಿವಾ ತಮ್ಮ ದಾಂಪತ್ಯ ಜೀವನವನ್ನು ಒಂದು […]

ಪ್ರತಿವರ್ಷ 500 ವಿಶೇಷ ಚೇತನ ಮಹಿಳೆಯರ ವಿವಾಹಕ್ಕೆ ತಲಾ 10 ಲ.ರೂ. ಕೊಡುಗೆ Read More »

ದಿಲ್ಲಿ : ಆಪ್‌ ಹ್ಯಾಟ್ರಿಕ್‌ ಕನಸು ಭಗ್ನ?

ಸಮೀಕ್ಷೆಗಳೆಲ್ಲ ಬಿಜೆಪಿ ಪರ; ಮತದಾರರ ಮನದಾಳ ನಿಗೂಢ ಹೊಸದಿಲ್ಲಿ : ದಿಲ್ಲಿಯಲ್ಲಿ ಕೊನೆಗೂ ಅರವಿಂದ ಕೇಂಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ (ಆಪ್‌) ನಾಗಾಲೋಟಕ್ಕೆ ಬ್ರೇಕ್‌ ಹಾಕುವಲ್ಲಿ ಬಿಜೆಪಿ ಯಶಸ್ವಿಯಾಗಲಿದೆಯೇ? ಚುನಾವಣೋತ್ತರ ಸಮೀಕ್ಷೆಗಳನ್ನು ನಂಬುವುದಾದರೆ ಮೂರು ದಶಕಗಳ ಬಳಿಕ ದಿಲ್ಲಿಯಲ್ಲಿ ಬಿಜೆಪಿ ಗೆದ್ದು ಅಧಿಕಾರ ಹಿಡಿಯಲಿದೆ. ಈ ಮೂಲಕ ಹ್ಯಾಟ್ರಿಕ್‌ ಗೆಲುವು ಸಾಧಿಸುವ ಆಪ್‌ ಕನಸು ಭಗ್ನಗೊಳ್ಳಲಿದೆ. ಆದರೆ ಕಳೆದ ಲೋಕಸಭಾ ಚುನಾವಣೆ ಮತ್ತು ನಂತರ ನಡೆದ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಚುನಾವಣೋತ್ತರ ಸಮೀಕ್ಷೆಗಳೆಲ್ಲ ಬುಡಮೇಲಾಗಿರುವುದರಿಂದ

ದಿಲ್ಲಿ : ಆಪ್‌ ಹ್ಯಾಟ್ರಿಕ್‌ ಕನಸು ಭಗ್ನ? Read More »

ಮಹಾಕುಂಭಮೇಳ : ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದ ಮೋದಿ

ಪ್ರಯಾಗ್‌ರಾಜ್‌ : ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡು ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಪ್ರಧಾನಿ ಮೋದಿ ಜೊತೆಗಿದ್ದರು. ಬೆಳಗ್ಗೆ ಪ್ರಯಾಗ್‌ರಾಜ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಪ್ರಯಾಗ್‌ರಾಜ್‌ ನದಿ ಬಳಿಗೆ ಸಾಗಿ ದೋಣಿಯಲ್ಲಿ ಹೋಗಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಕಳೆದ ಜ.13ರಂದು ಪ್ರಾರಂಭವಾಗಿರುವ ಮಹಾಕುಂಭಮೇಳಕ್ಕೆ ದೇಶ-ವಿದೇಶಗಳ ಅನೇಕ ಗಣ್ಯರು ಭೇಟಿ ನೀಡಿದ್ದಾರೆ. ಈಗಾಗಲೇ 38 ಕೋಟಿಗೂ ಅಧಿಕ ಜನ

ಮಹಾಕುಂಭಮೇಳ : ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದ ಮೋದಿ Read More »

ದೇಶದಲ್ಲಿ ಮಾಂಸಾಹಾರ ಸೇವನೆ ನಿಷೇಧವಾಗಲಿ : ಅಚ್ಚರಿ ಹೇಳಿಕೆ ನೀಡಿದ ಟಿಎಂಸಿ ಸಂಸದ

ಸಮಾನ ನಾಗರಿಕ ಸಂಹಿತೆ ಜಾರಿ ಪರ ಬ್ಯಾಟ್‌ ಬೀಸಿದ ವಿಪಕ್ಷದ ಪ್ರಮುಖ ನಾಯಕ ಹೊಸದಿಲ್ಲಿ : ದೇಶದಲ್ಲಿ ಗೋಮಾಂಸ ಸೇವನೆ ಮಾತ್ರವಲ್ಲ ಎಲ್ಲ ರೀತಿಯ ಮಾಂಸಾಹಾರವನ್ನು ನಿಷೇಧಿಸಬೇಕು ಎನ್ನುವ ಮೂಲಕ ತೃಣಮೂಲ ಕಾಂಗ್ರೆಸ್‌ ಸಂಸದ, ಹಿರಿಯ ನಟ ಶತ್ರುಘ್ನ ಸಿನ್ಹ ಅಚ್ಚರಿ ಹುಟ್ಟಿಸಿದ್ದಾರೆ. ಅವರ ಪಕ್ಷ ಮತ್ತು ಅದರೊಂದಿಗಿರುವ ಇಂಡಿ ಮಿತ್ರಕೂಟದ ಎಲ್ಲ ಪಕ್ಷಗಳು ಗೋಮಾಂಸ ನಿಷೇಧವನ್ನೇ ವಿರೋಧಿಸುತ್ತಿರುವಾಗ ಸಿನ್ಹ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ. ಇಷ್ಟು ಮಾತ್ರವಲ್ಲದೆ ಉತ್ತರಖಂಡದ ಬಿಜೆಪಿ ಸರಕಾರ ರಾಜ್ಯದಲ್ಲಿ ಸಮಾನ ನಾಗರಿಕ

ದೇಶದಲ್ಲಿ ಮಾಂಸಾಹಾರ ಸೇವನೆ ನಿಷೇಧವಾಗಲಿ : ಅಚ್ಚರಿ ಹೇಳಿಕೆ ನೀಡಿದ ಟಿಎಂಸಿ ಸಂಸದ Read More »

ಮಹಾಕುಂಭಮೇಳ : ಇಂದು ಪ್ರಧಾನಿ ಮೋದಿ ಪುಣ್ಯಸ್ನಾನ

ಪ್ರಯಾಗ್‌ರಾಜ್‌ : ಮಹಾಕುಂಭಮೇಳದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಪುಣ್ಯಸ್ನಾನ ಮಾಡಲಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮುಳುಗೇಳುವ ಸಲುವಾಗಿ ಮೋದಿ ಇಂದು ಪ್ರಯಾಗ್‌ರಾಜ್‌ಗೆ ಭೇಟಿ ನೀಡುತ್ತಿದ್ದಾರೆ.ಮಹಾಕುಂಭಮೇಳಕ್ಕೆ ಆಗಮಿಸುವವರಿಗೆ ಕಲ್ಪಿಸಿರುವ ವ್ಯವಸ್ಥೆಗಳನ್ನು ಪರಿಶೀಲಿಸಲಿರುವ ಪ್ರಧಾನಿ ಬಳಿಕ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಧಾನಿ ಜೊತೆಗಿರುತ್ತಾರೆ. ಕೆಲವು ಪ್ರಮುಖ ಅಖಾಡಗಳ ಸಾಧು ಸಂತರೊಂದಿಗೂ ಮೋದಿ ಸಂವಾದ ನಡೆಸಲಿದ್ದಾರೆ.ಬೆಳಗ್ಗೆ 10 ಗಂಟೆಗೆ ಪ್ರಯಾಗ್‌ರಾಜ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಮೋದಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಅರೈಲ್‌ಘಾಟ್‌ಗೆ ಆಗಮಿಸಿ ಅಲ್ಲಿಂದ ಬೋಟ್‌ ಮೂಲಕ

ಮಹಾಕುಂಭಮೇಳ : ಇಂದು ಪ್ರಧಾನಿ ಮೋದಿ ಪುಣ್ಯಸ್ನಾನ Read More »

ದಿಲ್ಲಿಯಲ್ಲಿ ಮತದಾನ ಶುರು : ದೇಶಾದ್ಯಂತ ಕುತೂಹಲ ಕೆರಳಿಸಿರುವ ರಾಷ್ಟ್ರ ರಾಜಧಾನಿಯ ಚುನಾವಣೆ

ಹೊಸದಿಲ್ಲಿ : ತೀವ್ರ ಕುತೂಹಲ ಕೆರಳಿಸಿರುವ ದಿಲ್ಲಿ ವಿಧಾನಸಭೆ ಚುನಾವಣೆಯ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಎಲ್ಲ 70 ವಿಧಾನಸಭಾ ಕ್ಷೇತ್ರಗಳಿಗೆ ಏಕ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಜನರು ಮೈನಡುಗಿಸುವ ಚಳಿಯನ್ನೂ ಲೆಕ್ಕಿಸದೆ ಬೆಳಗ್ಗಿನಿಂದಲೇ ಮತಗಟ್ಟೆಯತ್ತ ಧಾವಿಸಿದ್ದಾರೆ.ಬೆಳಗ್ಗೆ 7 ಗಂಟೆಯಿಂದ ಸಂಜೆ 6.30ರ ವರೆಗೆ ಮತದಾನ ನಡೆಯಲಿದ್ದು 1.56 ಕೋಟಿ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಒಟ್ಟು 699 ಅಭ್ಯರ್ಥಿಗಳು ಕಣದಲ್ಲಿದ್ದು ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿ 8ಕ್ಕೆ ಫಲಿತಾಂಶ ಹೊರಬೀಳಲಿದೆ.ದಿಲ್ಲಿಯಲ್ಲಿ ಕಳೆದ 25 ವರ್ಷಗಳಿಂದ

ದಿಲ್ಲಿಯಲ್ಲಿ ಮತದಾನ ಶುರು : ದೇಶಾದ್ಯಂತ ಕುತೂಹಲ ಕೆರಳಿಸಿರುವ ರಾಷ್ಟ್ರ ರಾಜಧಾನಿಯ ಚುನಾವಣೆ Read More »

ಉಪ್ಪಿಟ್ಟು ಬದಲು ಬಿರಿಯಾನಿ, ಚಿಕನ್‌ ಫ್ರೈ ಕೊಡಿ: ಅಂಗನವಾಡಿ ಬಾಲಕನ ಮನವಿಗೆ ಸಚಿವರ ಒಪ್ಪಿಗೆ

ತಿರುವನಂತಪುರಂ : ಅಂಗನವಾಡಿಯಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ ಮತ್ತು ಚಿಕನ್‌ ಫ್ರೈ ನೀಡುವಂತೆ ಬಾಲಕ ಮಾಡಿದ ಮನವಿಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಒಪ್ಪಿಗೆ ಸೂಚಿಸಿದ್ದಾರೆ. ಊಟದ ಮೆನುವಿನಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ, ಚಿಕನ್‌ ಫ್ರೈ ನೀಡಬೇಕು ಎಂದು ಪುಟ್ಟ ಬಾಲಕ ಮನವಿ ಮಾಡಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಈ ವೀಡಿಯೋಗೆ ಸಚಿವರು ಸ್ಪಂದಿಸಿದ್ದಾರೆ. ಅಂಗನವಾಡಿಗಳಲ್ಲಿನ ಆಹಾರ ಮೆನುವನ್ನು ಪರಿಶೀಲಿಸಲು ಮತ್ತು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಶಂಕು ಎಂಬ

ಉಪ್ಪಿಟ್ಟು ಬದಲು ಬಿರಿಯಾನಿ, ಚಿಕನ್‌ ಫ್ರೈ ಕೊಡಿ: ಅಂಗನವಾಡಿ ಬಾಲಕನ ಮನವಿಗೆ ಸಚಿವರ ಒಪ್ಪಿಗೆ Read More »

ಫೆ.13ರಂದು ಮೋದಿ-ಟ್ರಂಪ್‌ ಭೇಟಿ

ಹೊಸದಿಲ್ಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಫೆಬ್ರವರಿ 12ರಿಂದ ಎರಡು ದಿನಗಳ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಟ್ರಂಪ್‌ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ ಅಮೆರಿಕ-ಭಾರತ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಇದು ಪ್ರಧಾನಿಯ ಮಹತ್ವದ ಪ್ರವಾಸ ಎಂದು ಪರಿಗಣಿಸಲಾಗಿದೆ. ಎರಡು ದಿನಗಳ ಪ್ಯಾರಿಸ್ ಭೇಟಿಯನ್ನು ಮುಗಿಸಿದ ನಂತರ ಫೆಬ್ರವರಿ 12ರ ಸಂಜೆ ಪ್ರಧಾನಿ ಅಮೆರಿಕ ರಾಜಧಾನಿಗೆ ಬಂದಿಳಿದು

ಫೆ.13ರಂದು ಮೋದಿ-ಟ್ರಂಪ್‌ ಭೇಟಿ Read More »

ರಾಷ್ಟ್ರಪತಿಗೆ ಅವಮಾನ : ಸೋನಿಯಾ ಗಾಂಧಿ ವಿರುದ್ಧ ದೂರು

ಹೊಸದಿಲ್ಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬಡಪಾಯಿ ಮಹಿಳೆ ಎಂದು ಕರೆದು ಹೀಯಾಳಿಸಿರುವ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಬಿಹಾರದಲ್ಲಿ ದೂರು ದಾಖಲಾಗಿದೆ. ಬಿಹಾರದ ಮುಜಾಫರ್‌ನಗರದ ವಕೀಲ ಸುಧೀರ್‌ ಓಜಾ ಎಂಬವರು ದೇಶದ ಪರಮೋಚ್ಛ ಸ್ಥಾನದಲ್ಲಿರುವ ವ್ಯಕ್ತಿಯ ಬಗ್ಗೆ ಕೀಳು ಪದಗಳಲ್ಲಿ ಟೀಕೆ ಮಾಡಿದ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಬೇಕೆಂದು ಆಗ್ರಹಿಸಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ

ರಾಷ್ಟ್ರಪತಿಗೆ ಅವಮಾನ : ಸೋನಿಯಾ ಗಾಂಧಿ ವಿರುದ್ಧ ದೂರು Read More »

ಮಹಾಕುಂಭಮೇಳದಲ್ಲಿ ಇಷ್ಟರ ತನಕ 30 ಕೋಟಿ ಜನರಿಂದ ಪುಣ್ಯಸ್ನಾನ

ಅಯೋಧ್ಯೆ, ಕಾಶಿಗೆ ಭೇಟಿ ನೀಡುವವರ ಸಂಖ್ಯೆ ಏರಿಕೆ ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಇಷ್ಟರತನಕ 30 ಕೋಟಿಗೂ ಅಧಿಕ ಮಂದಿ ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಸರಕಾರ ಮಾಹಿತಿ ನೀಡಿದೆ.ಜಗತ್ತಿನ ಎಲ್ಲೆಡೆಯಿಂದ ಜನರು ಕುಂಭಮೇಳ ನೋಡಲು ಮತ್ತು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಆಗಮಿಸುತ್ತಿದ್ದಾರೆ. ಶನಿವಾರ 77 ದೇಶಗಳ ರಾಜತಾಂತ್ರಿಕರು ಪುಣ್ಯಸ್ನಾನ ಮಾಡಿದ್ದಾರೆ ಎಂದು ತಿಳಿಸಿದೆ. ಕುಂಭಮೇಳದಲ್ಲಿ ಈವರೆಗೂ 30 ಕೋಟಿಗೂ ಅಧಿಕ ಭಕ್ತರು ಪವಿತ್ರಸ್ನಾನ ಮಾಡಿದ್ದಾರೆ. ಕಾಲ್ತುಳಿತ ಸಂಭವಿಸಿದ ಮೌನಿ ಅಮವಾಸ್ಯೆಯ ಒಂದೇ

ಮಹಾಕುಂಭಮೇಳದಲ್ಲಿ ಇಷ್ಟರ ತನಕ 30 ಕೋಟಿ ಜನರಿಂದ ಪುಣ್ಯಸ್ನಾನ Read More »

error: Content is protected !!
Scroll to Top