ದೇಶ

ಗ್ಯಾಸ್‌ ಸಿಲಿಂಡರ್‌ ಬೆಲೆ 111 ರೂ. ಏರಿಕೆ

ಹೊಸ ವರ್ಷದ ಮೊದಲ ದಿನವೇ ಬೆಲೆ ಏರಿಕೆಯ ಶಾಕ್‌ ನವದೆಹಲಿ : ಹೊಸ ವರ್ಷದ ಮೊದಲ ದಿನವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪ್ರತಿ ತಿಂಗಳಿನಂತೆ ಈ ಬಾರಿಯೂ ಗೃಹ ಮತ್ತು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ನವೀಕರಿಸಲಾಗಿದೆ. ಕಳೆದ ವರ್ಷವಿಡೀ ಬೆಲೆ ಇಳಿಕೆಯಾಗಿತ್ತು. ಇದೀಗ ದರ ಏರಿಕೆಯಾಗಿದೆ. ಇಂಡಿಯನ್ ಆಯಿಲ್ ಪ್ರಕಾರ, ದೆಹಲಿಯಲ್ಲಿ ಇಂದಿನಿಂದ 19 ಕೆಜಿ ಎಲ್‌ಪಿಜಿ ಸಿಲಿಂಡರ್ 1580.50 ರೂ.ಗಳ ಬದಲಿಗೆ 1691.50 ರೂ.ಗಳಿಗೆ ಲಭ್ಯವಾಗಲಿದೆ. […]

ಗ್ಯಾಸ್‌ ಸಿಲಿಂಡರ್‌ ಬೆಲೆ 111 ರೂ. ಏರಿಕೆ Read More »

ಭಾರತಕ್ಕೂ ಬಂದರಾ ಅನಾಮಿಕ ಶೂಟರ್ಸ್‌? : ಪುಣೆಯಲ್ಲಿ ಬಾಂಬ್‌ ಸ್ಫೋಟ ಆರೋಪಿಯ ಹತ್ಯೆ

ಬೈಕಿನಲ್ಲಿ ಬಂದು ಗುಂಡಿಕ್ಕಿ ಪಲಾಯನ ಮಾಡಿದ ಅಜ್ಞಾತ ದುಷ್ಕರ್ಮಿಗಳು ಪುಣೆ: 2012ರಲ್ಲಿ ಪುಣೆಯಲ್ಲಿ ಸಂಭವಿಸಿದ ಸ್ಫೋಟ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಅನಾಮಿಕರು ಗುಂಡಿಕ್ಕಿ ಕೊಂದು ಹಾಕಿದ್ದಾರೆ ಎಂದು ವರದಿಯಾಗಿದೆ. 2012ರ ಪುಣೆ ಸರಣಿ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಬಂಟಿ ಜಹಗೀರ್ದಾರ್ ಎಂಬಾತನನ್ನು ಬುಧವಾರ ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಶ್ರೀರಾಂಪುರ ಪಟ್ಟಣದಲ್ಲಿ ಅನಾಮಿಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 50 ವರ್ಷದ ಜಹಗೀರ್ದಾರ್ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೊರಾವಕೆ ಕಾಲೇಜು ರಸ್ತೆಯಲ್ಲಿರುವ ಸ್ಮಶಾನದಿಂದ ದ್ವಿಚಕ್ರ ವಾಹನದಲ್ಲಿ

ಭಾರತಕ್ಕೂ ಬಂದರಾ ಅನಾಮಿಕ ಶೂಟರ್ಸ್‌? : ಪುಣೆಯಲ್ಲಿ ಬಾಂಬ್‌ ಸ್ಫೋಟ ಆರೋಪಿಯ ಹತ್ಯೆ Read More »

ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಮೋದಿ

ಶಾಂತಿ ನೆಲೆಸಿ, ಪ್ರಜೆಗಳಿಗೆ ಉತ್ತಮ ಆರೋಗ್ಯ, ಸಮೃದ್ಧಿ ಸಿಗಲಿ ಎಂದು ಹಾರೈಕೆ ನವದೆಹಲಿ : ಜಗತ್ತು 2026ಕ್ಕೆ ಕಾಲಿಡುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ದೇಶ ಹಾಗೂ ವಿಶ್ವದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ದೇಶದಲ್ಲಿ ಶಾಂತಿ ನೆಲೆಸಿ, ಪ್ರಜೆಗಳಿಗೆ ಉತ್ತಮ ಆರೋಗ್ಯ, ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಎಕ್ಸ್‌​​ನಲ್ಲಿ ಸಂದೇಶವನ್ನು ಹಂಚಿಕೊಂಡಿರುವ ಮೋದಿ, ಜನರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸು ಪಡೆಯಲಿ ಎಂದು ಹಾರೈಸಿದ್ದಾರೆ. ಹೊಸ ವರ್ಷವು ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ಮತ್ತು

ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಮೋದಿ Read More »

ಜಿಡಿಪಿಯಲ್ಲಿ ಜಪಾನನನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ನೆಗೆದ ಭಾರತ

ಈಗ ಭಾರತ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶ ನವದೆಹಲಿ: ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಭಾರತ ಹೊರಹೊಮ್ಮಿದೆ. ಆರ್ಥಿಕ ಸುಧಾರಣೆಗಳಿಂದ ಜಪಾನನ್ನು ಹಿಂದಿಕ್ಕಿ ಭಾರತ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಗಾತ್ರವು 4.18 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. 4.18 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಭಾರತವು ಜಪಾನನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಮುಂದಿನ 3 ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಲಿದೆ.

ಜಿಡಿಪಿಯಲ್ಲಿ ಜಪಾನನನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ನೆಗೆದ ಭಾರತ Read More »

ರಿವರ್ಸ್‌ ತೆಗೆಯುವಾಗ ಜನರ ಮೇಲೆ ಹರಿದುಹೋದ ಬಸ್‌ : 4 ಮಂದಿ ಸಾವು

ಜನನಿಬಿಢ ರೈಲು ನಿಲ್ದಾಣದ ಹೊರಗೆ ಸಂಭವಿಸಿದ ಭೀಕರ ಅಪಘಾತ ಮುಂಬೈ: ಮುಂಬೈ ಉಪನಗರ ಭಾಂಡೂಪ್‌ನ ರೈಲು ನಿಲ್ದಾಣದ ಹೊರಗೆ ಬೆಸ್ಟ್​ ಬಸ್ ಪಾದಚಾರಿಗಳ ಮೇಲೆ ಹರಿದ ಪರಿಣಾಮ ನಾಲ್ವರು ಸಾವನ್ನಪ್ಪಿ 9 ಮಂದಿ ಗಾಯಗೊಂಡ ಭೀಕರ ಅಪಘಾತ ಸೋಮವಾರ ರಾತ್ರಿ ಸಂಭವಿಸಿದೆ. ಜನನಿಬಿಢ ಭಾಂಡೂಪ್‌ ಸ್ಟೇಷನ್ ರಸ್ತೆಯಲ್ಲಿ ಬೆಸ್ಟ್ ಬಸ್ ಹಿಮ್ಮುಖವಾಗಿ ಚಲಿಸುವಾಗ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಜನರು ಕೆಲಸದಿಂದ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಜನದಟ್ಟಣೆಯ ಪ್ರದೇಶದಲ್ಲಿ ಭೀತಿ ಉಂಟಾಗಿದೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಮೂವರು

ರಿವರ್ಸ್‌ ತೆಗೆಯುವಾಗ ಜನರ ಮೇಲೆ ಹರಿದುಹೋದ ಬಸ್‌ : 4 ಮಂದಿ ಸಾವು Read More »

ರೈಲಿನಲ್ಲಿ ಭೀಕರ ಅಗ್ನಿ ಅವಘಡ : ಓರ್ವ ಪ್ರಯಾಣಿಕ ಸಾವು

ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಅವಘಡ ವಿಶಾಖಪಟ್ಟಣಂ : ವಿಶಾಖಪಟ್ಟಣಂನಿಂದ 66 ಕಿ.ಮೀ ದೂರದಲ್ಲಿರುವ ಅನಕಪಳ್ಳಿ ಜಿಲ್ಲೆಯ ಯಲಮಂಚಿಲಿಯಲ್ಲಿ ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಒಬ್ಬ ಪ್ರಯಾಣಿಕ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಗ್ನಿ ಅವಘಡ ಮಧ್ಯರಾತ್ರಿ 12.45ಕ್ಕೆ ನಡೆದಿದೆ. ರೈಲು ಬೆಂಕಿ ಹೊತ್ತಿಕೊಂಡಾಗ ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಮತ್ತು ಇನ್ನೊಂದು ಬೋಗಿಯಲ್ಲಿ 76 ಪ್ರಯಾಣಿಕರು ಇದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಮೃತರನ್ನು ಚಂದ್ರಶೇಖರ್ ಸುಂದರಂ ಎಂದು ಗುರುತಿಸಲಾಗಿದೆ. ಹಾನಿಗೊಳಗಾದ ಎರಡು

ರೈಲಿನಲ್ಲಿ ಭೀಕರ ಅಗ್ನಿ ಅವಘಡ : ಓರ್ವ ಪ್ರಯಾಣಿಕ ಸಾವು Read More »

16 ವರ್ಷಕ್ಕಿಂತ ಕೆಳಗಿನವರಿಗೆ ಸೋಷಿಯಲ್‌ ಮೀಡಿಯಾ ಬ್ಯಾನ್‌ : ಹೈಕೋರ್ಟ್‌ ಸಲಹೆ

ಆಸ್ಟ್ರೇಲಿಯಾ ಮಾದರಿ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರುವ ಚಿಂತನೆ ಚೆನ್ನೈ: ಆಸ್ಟ್ರೇಲಿಯಾದ ಮಾದರಿಯಲ್ಲಿ ಭಾರತದಲ್ಲೂ 16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ಕಾನೂನು ಜಾರಿಗೆ ತರುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ. ಅಪ್ರಾಪ್ತ ವಯಸ್ಕರು ಸೋಷಿಯಲ್ ಮೀಡಿಯಾದಲ್ಲಿ ಸುಲಭವಾಗಿ ಅಶ್ಲೀಲ ವಿಷಯಗಳಿಗೆ ಒಡ್ಡಿಕೊಳ್ಳುತ್ತಿರುವುದನ್ನು ತಡೆಗಟ್ಟಲು ಆಸ್ಟ್ರೇಲಿಯಾ ಮಾದರಿ ಕಾನೂನನ್ನ ಭಾರತದಲ್ಲಿ ಪರಿಗಣಿಸಬೇಕು ಎಂದು ಮದ್ರಾಸ್ ಕೋರ್ಟ್ ಸಲಹೆ ನೀಡಿದೆ. ನ್ಯಾಯಮೂರ್ತಿಗಳಾದ ಜಿ.ಜಯಚಂದ್ರನ್ ಮತ್ತು ಕೆ.ಕೆ.ರಾಮಕೃಷ್ಣನ್ ಅವರಿದ್ದ ವಿಭಾಗೀಯ ಪೀಠ ಪಿಐಎಲ್ ಅರ್ಜಿ

16 ವರ್ಷಕ್ಕಿಂತ ಕೆಳಗಿನವರಿಗೆ ಸೋಷಿಯಲ್‌ ಮೀಡಿಯಾ ಬ್ಯಾನ್‌ : ಹೈಕೋರ್ಟ್‌ ಸಲಹೆ Read More »

ಇಂದಿನಿಂದ ರೈಲ್ವೆ ಟಿಕೆಟ್‌ ದರ ತುಸು ಹೆಚ್ಚಳ

ದೀರ್ಘ ಪ್ರಯಾಣದ ದರ ಪೈಸೆಗಳ ಲೆಕ್ಕದಲ್ಲಿ ಏರಿಕೆ ನವದೆಹಲಿ: ದೇಶಾದ್ಯಂತ ಇಂದಿನಿಂದ ಅನ್ವಯವಾಗುವಂತೆ ರೈಲ್ವೆ ಇಲಾಖೆ ಪ್ರಯಾಣ ದರ ತುಸು ಏರಿಕೆ ಮಾಡಲಾಗಿದೆ. ಉಪನಗರ ರೈಲು ಪ್ರಯಾಣದ ದರವನ್ನು ಹೆಚ್ಚಿಸಿಲ್ಲವಾದರೂ, ದೀರ್ಘ ಪ್ರಯಾಣದ ದರವನ್ನು ರೈಲ್ವೆ ಸಚಿವಾಲಯ ಹೆಚ್ಚಳ ಮಾಡಿದೆ. ಪ್ರತಿ 500 ಕಿ.ಮೀ.ಗೆ 10 ರೂ. ಹೆಚ್ಚಳ ಮಾಡಲಾಗಿದೆ. ಡಿಸೆಂಬರ್ 21 ರಂದು ಸಚಿವಾಲಯವು ಪ್ರಯಾಣಿಕರ ದರದಲ್ಲಿ ಹೆಚ್ಚಳವನ್ನು ಘೋಷಿಸಿದ್ದು, ಇದು ಡಿಸೆಂಬರ್ 26ರಿಂದ ಜಾರಿಗೆ ಬರಲಿದೆ. ಈ ವರ್ಷ ರೈಲು ದರದಲ್ಲಿ ಇದು ಎರಡನೇ

ಇಂದಿನಿಂದ ರೈಲ್ವೆ ಟಿಕೆಟ್‌ ದರ ತುಸು ಹೆಚ್ಚಳ Read More »

ಅಮೆರಿಕದ ಬ್ಲೂಬರ್ಡ್‌-6 ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಇಸ್ರೊ

6500 ಕೆ.ಜಿ. ತೂಕದ ಉಪಗ್ರಹ ಉಡಾವಣೆ ಯಶಸ್ವಿ ಶ್ರೀಹರಿಕೋಟಾ: ಭಾರತದ ರಾಕೆಟ್ ಮಾರ್ಕ್-3 (LVM3)-M6 ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಅಮೆರಿಕದ ಬ್ಲೂಬರ್ಡ್‌-6 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಶ್ರೀಹರಿಕೋಟಾ ಉಡ್ಡಯನ ಕೇಂದ್ರದ ಎರಡನೇ ಲಾಂಚ್‌ ಪ್ಯಾಡ್‌ನಿಂದ ಬೆಳಗ್ಗೆ 8.54ಕ್ಕೆ ಮಾರ್ಕ್‌ 3 ರಾಕೆಟ್ 6,500 ಕೆ.ಜಿ ತೂಕದ ಭಾರಿ ಭಾರದ ಉಪಗ್ರಹವನ್ನು ಹೊತ್ತುಕೊಂಡು ನಭಕ್ಕೆ ಚಿಮ್ಮಿತು. ಸುಮಾರು 15 ನಿಮಿಷಗಳ ಹಾರಾಟದ ನಂತರ ರಾಕೆಟ್‌ನಿಂದ ಬ್ಲೂಬರ್ಡ್ ಬ್ಲಾಕ್-2 ಬೇರ್ಪಟ್ಟು ಸುಮಾರು 520 ಕಿ.ಮೀ. ಎತ್ತರದಲ್ಲಿ ಅದರ ಉದ್ದೇಶಿತ ಕಕ್ಷೆಯನ್ನು

ಅಮೆರಿಕದ ಬ್ಲೂಬರ್ಡ್‌-6 ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಇಸ್ರೊ Read More »

ಪ್ರಿಯಾಂಕಾ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಮಾಡಿ : ಪತಿ ರಾಬರ್ಟ್‌ ವಾದ್ರಾ ಆಗ್ರಹ

ಕಾಂಗ್ರೆಸ್‌ನಲ್ಲಿ ಪ್ರಿಯಾಂಕಾ ಗಾಂಧಿ ಪರ ಬ್ಯಾಟ್‌ ಬೀಸುವವರ ಸಂಖ್ಯೆ ಹೆಚ್ಚಳ ನವದೆಹಲಿ: ಕಾಂಗ್ರೆಸ್‌ನಲ್ಲಿ ಪ್ರಿಯಾಂಕ ಗಾಂಧಿಗೆ ಪ್ರಮುಖ ಹುದ್ದೆ ನೀಡಬೇಕೆಂದು ಒತ್ತಾಯಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಚಳಿಗಾಲದ ಅಧಿವೇಶನದ ಬಳಿಕ ರಾಹುಲ್‌ ಗಾಂಧಿಗಿಂತ ಪ್ರಿಯಾಂಕ ಗಾಂಧಿಯೇ ಪಕ್ಷ ಮುನ್ನಡೆಸಲು ಸಮರ್ಥ ನಾಯಕಿ ಎಂಬ ಅಭಿಪ್ರಾಯ ಬಹಿರಂಗವಾಗಿ ವ್ಯಕ್ತವಾಗಲಾರಂಭಿಸಿದೆ. ಕಾಂಗ್ರೆಸ್‌ ಸಂಸದ ಇಮ್ರಾನ್ ಮಸೂದ್ ಕೆಲದಿನಗಳ ಹಿಂದೆಯಷ್ಟೇ ಪ್ರಿಯಾಂಕಾ ಗಾಂಧಿ ವಾದ್ರಾ ಪರ ಬ್ಯಾಟಿಂಗ್‌ ಮಾಡಿದ್ದರು. ಇದೀಗ ಪತಿ ರಾಬಾರ್ಟ್‌ ವಾದ್ರಾ ಅವರು ಪತ್ನಿಯ ಪರ ವಹಿಸಿ ಮಾತನಾಡಿ

ಪ್ರಿಯಾಂಕಾ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಮಾಡಿ : ಪತಿ ರಾಬರ್ಟ್‌ ವಾದ್ರಾ ಆಗ್ರಹ Read More »

error: Content is protected !!
Scroll to Top