ದೇಶ

ಇಂದಿನಿಂದ ಪ್ರಧಾನಿ ಮೋದಿ ಕುವೈಟ್‌ ಪ್ರವಾಸ

43 ವರ್ಷಗಳ ಬಳಿಕ ಭಾರತದ ಪ್ರಧಾನಿಯ ಐತಿಹಾಸಿಕ ಭೇಟಿ ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕುವೈಟ್‌ ಪ್ರವಾಸ ಕೈಗೊಳ್ಳಲಿದ್ದು, ಭಾರಾತದ ಪ್ರಧಾನಿಯೊಬ್ಬರು 43 ವರ್ಷಗಳ ಕುವೈಟ್‌ಗೆ ಭೇಟಿ ನೀಡುತ್ತಿರುವ ಕಾರಣಕ್ಕೆ ಈ ಪ್ರವಾಸ ವಿಶೇಷ ಎನಿಸಿದೆ. ಮೋದಿ ಡಿಸೆಂಬರ್ 21 ಮತ್ತು 22 ರಂದು ಕುವೈಟ್‌ಗೆ ಭೇಟಿ ನೀಡಲಿದ್ದಾರೆ. ಕುವೈಟ್‌ನಲ್ಲಿ ಭಾರತ ಮೂಲದ ಲಕ್ಷಗಟ್ಟಲೆ ಮಂದಿ ನೌಕರಿ ಮಾಡುತ್ತಿದ್ದು, ಉಭಯ ರಾಷ್ಟ್ರಗಳ ನಡುವಣ ಸಂಬಂಧ ವೃದ್ಧಿಯಿಂದ ಇಲ್ಲಿರುವ ಭಾರತೀಯರಿಗೆ ಒಳಿತಾಗಲಿದೆ. ಕುವೈಟ್‌ನ […]

ಇಂದಿನಿಂದ ಪ್ರಧಾನಿ ಮೋದಿ ಕುವೈಟ್‌ ಪ್ರವಾಸ Read More »

ರಾಹುಲ್‌ ಗಾಂಧಿ ವಿರುದ್ಧ ಕ್ರೈಂ ಬ್ರಾಂಚ್‌ ತನಿಖೆ

ಬಿಜೆಪಿ ಸಂಸದರನ್ನು ತಳ್ಳಿ ಗಾಯಗೊಳಿಸಿದ ಪ್ರಕರಣ ಹೊಸದಿಲ್ಲಿ: ಸಂಸತ್ತಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸಂಸದರ ನಡುವೆ ನಡೆದ ತಳ್ಳಾಟ ಮತ್ತು ರಾಹುಲ್‌ ಗಾಂಧಿ ತಳ್ಳಿದಾಗ ಬಿಜೆಪಿಯ ಇಬ್ಬರು ಸಂಸದರು ಬಿದ್ದು ಗಾಯಗೊಂಡಿರುವ ಪ್ರಕರಣದ ತನಿಖೆಯನ್ನು ದಿಲ್ಲಿಯ ಕ್ರೈಂಬ್ರಾಂಚ್‌ ನಡೆಸಲಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ದಾಖಲಿಸಿದ ಪ್ರಕರಣಗಳ ತನಿಖೆಯನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.ಬಿಜೆಪಿ ನೀಡಿದ ದೂರಿನ ಆಧಾರದಲ್ಲಿ ಸಂಸದ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಗುರುವಾರ ಸಂಸತ್ತಿನ ಆವರಣದಲ್ಲಿ ನಡೆದ ಗದ್ದಲದ

ರಾಹುಲ್‌ ಗಾಂಧಿ ವಿರುದ್ಧ ಕ್ರೈಂ ಬ್ರಾಂಚ್‌ ತನಿಖೆ Read More »

ಎಲ್ಲ ಕಡೆ ಮಂದಿರ-ಮಸೀದಿ ವಿವಾದ ಬೇಡ : ಮೋಹನ್‌ ಭಾಗವತ್‌ ಕಿವಿಮಾತು

ಎಲ್ಲ ಧರ್ಮಗಳ ಜೊತೆಗೆ ಸಾಮರಸ್ಯದಿಂದ ಬಾಳಲು ಸಲಹೆ ಪುಣೆ : ಎಲ್ಲೆಂದರಲ್ಲಿ ರಾಮ ಮಂದಿರದಂತಹ ವಿವಾದಗಳನ್ನು ಹುಟ್ಟುಹಾಕಬೇಡಿ ಎಂದು ಆರ್‌ಎಸ್‌ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್ ಕಿವಿಮಾತು ಹೇಳಿದ್ದಾರೆ. ಪುಣೆಯಲ್ಲಿ ವಿಶ್ವಗುರು ಭಾರತ ಕುರಿತ ಉಪನ್ಯಾಸದಲ್ಲಿ ಪಾಲ್ಗೊಂಡ ಅವರು, ಭಾರತ ಎಲ್ಲ ಧರ್ಮಗಳು ಮತ್ತು ಸಿದ್ಧಾಂತಗಳ ಸಾಮರಸ್ಯದ ಸಹಬಾಳ್ವೆಗೆ ಮಾದರಿಯಾಗಬೇಕು ಎಂದು ಹೇಳಿದರು. ಉತ್ತರ ಪ್ರದೇಶದ ಸಂಭಾಲ್‌ನ ಶಾಹಿ ಜಾಮಾ ಮಸೀದಿ ಮತ್ತು ರಾಜಸ್ಥಾನದ ಅಜ್ಮೇರ್ ಷರೀಫ್‌ನಂತಹ ಧಾರ್ಮಿಕ ಸ್ಥಳಗಳ ಮೂಲದ ಬಗ್ಗೆ ಇತ್ತೀಚಿನ ವಿವಾದಗಳ ಹಿನ್ನೆಲೆಯಲ್ಲಿ

ಎಲ್ಲ ಕಡೆ ಮಂದಿರ-ಮಸೀದಿ ವಿವಾದ ಬೇಡ : ಮೋಹನ್‌ ಭಾಗವತ್‌ ಕಿವಿಮಾತು Read More »

ರಾಹುಲ್‌ ಗಾಂಧಿ ತಳ್ಳಿದಾಗ ಬಿದ್ದು ಗಾಯಗೊಂಡ ಬಿಜೆಪಿ ಸಂಸದ

ಸಂಸತ್‌ ಆವರಣದಲ್ಲಿ ಪ್ರತಿಭಟನೆ ವೇಳೆ ಹೈಡ್ರಾಮಾ ಹೊಸದಿಲ್ಲಿ: ಅಂಬೇಡ್ಕರ್‌ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನೀಡಿದ ಹೇಳಿಕೆ ಬಿಜೆಪಿ-ಕಾಂಗ್ರೆಸ್‌ ನಡುವೆ ಕಿಚ್ಚು ಹೊತ್ತಿಸಿದೆ. ಇಂದು ಉಭಯ ಪಕ್ಷಗಳು ಸಂಸತ್‌ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಭಾರಿ ಹೈಡ್ರಾಮಾ ನಡೆದಿದೆ. ಬಿಜೆಪಿ ಸಂಸದ ಪ್ರತಾಪ್‌ ಸಾರಂಗಿ ಕುಸಿದು ಬಿದ್ದಿದ್ದು, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್‌ ಪ್ರತಿಭಟನೆ ವಿರೋಧಿಸಿ ಬಿಜೆಪಿ ಸದಸ್ಯರು ಪ್ರತಿಭಟಿಸುತ್ತಿದ್ದ ವೇಳೆ ಪ್ರತಾಪ್‌

ರಾಹುಲ್‌ ಗಾಂಧಿ ತಳ್ಳಿದಾಗ ಬಿದ್ದು ಗಾಯಗೊಂಡ ಬಿಜೆಪಿ ಸಂಸದ Read More »

ಮುಂಬಯಿ ದೋಣಿ ದುರಂತ : ಮೃತರ ಸಂಖ್ಯೆ 13ಕ್ಕೇರಿಕೆ

ಎಲಿಫೆಂಟಾ ಕೇವ್ಸ್‌ಗೆ ಪ್ರಯಾಣಿಕರನ್ನು ಒಯ್ಯುತ್ತಿದ್ದ ದೋಣಿಗೆ ನೌಕಾಪಡೆಯ ಸ್ಪೀಡ್‌ ಬೋಟ್‌ ಡಿಕ್ಕಿಯಾಗಿ ಅವಘಡ ಮುಂಬಯಿ: ಮುಂಬಯಿಯ ಗೇಟ್‌ವೇ ಆಫ್ ಇಂಡಿಯಾ ಬಳಿ ಪ್ರಯಾಣಿಕರನ್ನು ಒಯ್ಯುತ್ತಿದ್ದ ದೋಣಿ ಮಗುಚಿ ಬಿದ್ದ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೇರಿದೆ. ರಕ್ಷಿಸಲ್ಪಟ್ಟ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತರಲ್ಲಿ 10 ಪ್ರಯಾಣಿಕರು ಮತ್ತು ಮೂವರು ನೌಕಾಪಡೆ ಸಿಬ್ಬಂದಿ ಸೇರಿದ್ದಾರೆ. ಗೇಟ್‌ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ಕೇವ್ಸ್‌ಗೆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. 4 ಸೇನಾ ಹೆಲಿಕಾಪ್ಟರ್‌ಗಳು,

ಮುಂಬಯಿ ದೋಣಿ ದುರಂತ : ಮೃತರ ಸಂಖ್ಯೆ 13ಕ್ಕೇರಿಕೆ Read More »

ಅಂತಾರಾಷ್ಟ್ರೀಯ ಕ್ರಿಕೆಟಿಗ ಸ್ಪಿನ್ನರ್‌ ಅಶ್ವಿನ್‌ ವಿದಾಯ

ಟೀಮ್ ಇಂಡಿಯಾದ ಯಶಸ್ವಿ ಬೌಲರ್‌ನ ಕ್ರಿಕೆಟ್‌ ಯಾನ ಮುಕ್ತಾಯ ಹೊಸದಿಲ್ಲಿ : ಭಾರತ ಕ್ರಿಕೆಟ್‌ ತಂಡದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಅಶ್ವಿನ್ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ 14 ವರ್ಷಗಳ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಅನ್ನು ಅಂತ್ಯಗೊಳಿಸಿದ್ದಾರೆ. ಅವರು ಇನ್ನು ಐಪಿಎಲ್​ನಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಅಶ್ವಿನ್‌ 106 ಟೆಸ್ಟ್ ಪಂದ್ಯಗಳಲ್ಲಿ 200 ಇನಿಂಗ್ಸ್​ಗಳಲ್ಲಿ

ಅಂತಾರಾಷ್ಟ್ರೀಯ ಕ್ರಿಕೆಟಿಗ ಸ್ಪಿನ್ನರ್‌ ಅಶ್ವಿನ್‌ ವಿದಾಯ Read More »

ಒಂದು ದೇಶ ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ

ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುವತ್ತ ಬಿಜೆಪಿ ನಿರ್ಣಾಯಕ ಹೆಜ್ಜೆ ಹೊಸದಿಲ್ಲಿ : ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಅವಕಾಶ ಕೊಡುವ ಬಹುನಿರೀಕ್ಷೆಯ ಒಂದು ದೇಶ ಒಂದು ಚುನಾವಣೆ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗಿದ್ದು, ಇದರೊಂದಿಗೆ ಸಾರ್ವತ್ರಿಕ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ ಮಾಡಿದ ಭರವಸೆಯನ್ನು ಜಾರಿಗೊಳಿಸುವಲ್ಲಿ ನಿರ್ಣಾಯಕ ಹೆಜ್ಜೆ ಇಟ್ಟಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಇಂದು ಲೋಕಸಭೆಯಲ್ಲಿ ಸಂವಿಧಾನ (ನೂರ ಇಪ್ಪತ್ತೊಂದನೇಯ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ

ಒಂದು ದೇಶ ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ Read More »

ತುಳಸಿ ಗೌಡ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಹೊಸದಿಲ್ಲಿ: ವೃಕ್ಷಮಾತೆ ತುಳಸಿ ಗೌಡ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ದಾರಿದೀಪವಾಗಿದ್ದ ತುಳಸಿ ಗೌಡ ಜೀವನ ನಮಗೆಲ್ಲ ಪ್ರೇರಣೆಯಾಗಲಿ ಎಂದು ಮೋದಿ ಸಂತಾಪ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಕರ್ನಾಟಕದ ಖ್ಯಾತ ಪರಿಸರವಾದಿ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತರಾದ ತುಳಸಿಗೌಡ ನಿಧನದಿಂದ ತೀವ್ರ ದುಃಖವಾಗಿದೆ. ಪ್ರಕೃತಿಯನ್ನು ಪೋಷಿಸಲು, ಸಾವಿರಾರು ಸಸಿಗಳನ್ನು ನೆಡಲು ಮತ್ತು ನಮ್ಮ ಪರಿಸರವನ್ನು ಸಂರಕ್ಷಿಸುವುದಕ್ಕಾಗಿ ಅವರು ಜೀವನವನ್ನೇ ಮುಡಿಪಾಗಿಟ್ಟರು. ಪರಿಸರ ಸಂರಕ್ಷಣೆ ವಿಚಾರದಲ್ಲಿ ಅವರು ಇನ್ನು ಮುಂದೆಯೂ ನಮಗೆ ದಾರಿದೀಪವಾಗಿ

ತುಳಸಿ ಗೌಡ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ Read More »

ಒಂದು ದೇಶ ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಇಂದು ಮಂಡನೆ

ಹೊಸದಿಲ್ಲಿ : ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಉದ್ದೇಶ ಹೊಂದಿರುವ ಒಂದು ದೇಶ ಒಂದು ಚುನಾವಣೆ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಇಂದು ಲೋಕಸಭೆಯಲ್ಲಿ ಮಸೂದೆ ಮಂಡಿಸುವ ನಿರೀಕ್ಷೆಯಿದೆ. ನಂತರ ವ್ಯಾಪಕ ಸಮಾಲೋಚನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಶಿಫಾರಸು ಮಾಡುವಂತೆ ಮೇಘವಾಲ್ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.ಪಕ್ಷಗಳ ಸಂಸದರ ಸಂಖ್ಯಾಬಲದ ಆಧಾರದ ಮೇಲೆ ಜಂಟಿ ಸದನ ಸಮಿತಿಯನ್ನು ರಚಿಸಲಾಗುತ್ತದೆ.

ಒಂದು ದೇಶ ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಇಂದು ಮಂಡನೆ Read More »

ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಗೆದ್ದು ಸಂಭ್ರಮಿಸಿದ ಹೆಮ್ಮೆಯ ದಿನ |  ಪಾಕಿಸ್ತಾನವು ಭಾರತದ ಜೊತೆ ಸೆಣಸಾಡಿದ  ಮಹತ್ವ, ಇತಿಹಾಸ ಹೀಗಿದೆ?

1971, ಡಿಸೆಂಬರ್ 16ರಂದು ಭಾರತ  ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಸೆಣಸಾಡಿ ಗೆಲುವು ಸಾಧಿಸಿ ವಿಜಯದ ಕಹಳೆ ಊದಿದೆ. ಅಂದಿನಿಂದ ಈ ದಿನವನ್ನು ಹೆಮ್ಮೆಯ ದಿನವಾಗಿ ಪರಿಗಣಿಸಿದ್ದು, ಇಡೀ ದೇಶವೇ ಈ ದಿನವನ್ನು ‘ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. 1999ರಲ್ಲಿ  ನಡೆದ ಭಾರತ- ಪಾಕಿಸ್ಥಾನ ಯುದ್ದದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವು  ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ.  ಪಾಕಿಸ್ತಾನದ ವಿರುದ್ಧದ ಗೆಲುವನ್ನು ನಮ್ಮ ದೇಶ ಮಹತ್ವದ ದಿನವೆಂದು  ಪರಿಗಣಿಸುತ್ತಾರೆ. ಅಂತೆಯೇ  ಡಿಸೆಂಬರ್ 16ರಂದು ಕೂಡ ಪಾಕಿಸ್ತಾನದ ವಿರುದ್ಧದ ಗೆಲುವನ್ನು ವಿಜಯ್ ದಿವಸ್

ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಗೆದ್ದು ಸಂಭ್ರಮಿಸಿದ ಹೆಮ್ಮೆಯ ದಿನ |  ಪಾಕಿಸ್ತಾನವು ಭಾರತದ ಜೊತೆ ಸೆಣಸಾಡಿದ  ಮಹತ್ವ, ಇತಿಹಾಸ ಹೀಗಿದೆ? Read More »

error: Content is protected !!
Scroll to Top