ದೇಶ

ಈ ತಿಂಗಳಲ್ಲಿ ಸಂಭವಿಸಲಿದೆ ಎರಡು ಗ್ರಹಣ

ಮಾ.14ರಂದು ಚಂದ್ರಗ್ರಹಣ; ಮಾ.29ರಂದು ಸೂರ್ಯಗ್ರಹಣ ಮಂಗಳೂರು: ಈ ವರ್ಷದ ಮೊದಲ ಚಂದ್ರಗ್ರಹಣ ಫಾಲ್ಗುಣ ಮಾಸದ ಹುಣ್ಣಿಮೆಯಂದು ಸಂಭವಿಸಲಿದೆ. ಈ ದಿನದಂದು ಹೋಳಿ ಹಬ್ಬವನ್ನು ಸಹ ಆಚರಿಸಲಾಗುತ್ತದೆ. ಭಾರತೀಯ ಕಾಲಮಾನದ ಪ್ರಕಾರ ಈ ಚಂದ್ರಗ್ರಹಣ ಮಾರ್ಚ್ 14ರಂದು ಬೆಳಿಗ್ಗೆ 9.29ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3.29ಕ್ಕೆ ಕೊನೆಗೊಳ್ಳಲಿದೆ. ಸುದೀರ್ಘ ಆರು ತಾಸು ಚಂದ್ರಗ್ರಹಣ ಇದ್ದರೂ ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಇದೇ ತಿಂಗಳಲ್ಲಿ ಸೂರ್ಯಗ್ರಹಣ ಕೂಡ ಸಂಭವಿಸಲಿದೆ. ಖಗೋಲ ಶಾಸ್ತ್ರಜ್ಞರ ಪ್ರಕಾರ ಮಾ.29ರಂದು ಸೂರ್ಯಗ್ರಹಣ ಸಂಭವಿಸಲಿದ್ದು, ಭಾರತೀಯ ಕಾಲಮಾನದ ಪ್ರಕಾರ […]

ಈ ತಿಂಗಳಲ್ಲಿ ಸಂಭವಿಸಲಿದೆ ಎರಡು ಗ್ರಹಣ Read More »

ಐಪಿಎಲ್‌ ಪಂದ್ಯಗಳಲ್ಲಿ ತಂಬಾಕು, ಮದ್ಯದ ಜಾಹೀರಾತಿಗೆ ನಿಷೇಧ : ಕೇಂದ್ರ ಸೂಚನೆ

ಟಿವಿ ಚಾನೆಲ್‌ಗಳಲ್ಲಿ, ಸ್ಟೇಡಿಯಂ ಸುತ್ತಮುತ್ತ ತಂಬಾಕು, ಮದ್ಯದ ಜಾಹೀರಾತು ಹಾಕದಂತೆ ಆದೇಶ ಹೊಸದಿಲ್ಲಿ: ಐಪಿಎಲ್‌ ಪಂದ್ಯಗಳು ನಡೆಯುವ ಕ್ರೀಡಾಂಗಣದ ಆವರಣದಲ್ಲಿ ಮತ್ತು ಪ್ರಸಾರದ ಸಮಯದಲ್ಲಿ ಎಲ್ಲ ರೀತಿಯ ತಂಬಾಕು ಮತ್ತು ಮದ್ಯದ ಜಾಹೀರಾತು ಮತ್ತು ಪ್ರಚಾರಗಳನ್ನು ನಿಷೇಧಿಸಲು ಐಪಿಎಲ್‌ ಮಂಡಳಿಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಈ ಸಂಬಂಧ ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಅವರಿಗೆ ಪತ್ರ ಬರೆದಿರುವ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಪ್ರೊ.ಡಾ.ಅತುಲ್ ಗೋಯೆಲ್, ಇದು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸುವ ನಿಮ್ಮ ಸಾಮಾಜಿಕ ಮತ್ತು ನೈತಿಕ

ಐಪಿಎಲ್‌ ಪಂದ್ಯಗಳಲ್ಲಿ ತಂಬಾಕು, ಮದ್ಯದ ಜಾಹೀರಾತಿಗೆ ನಿಷೇಧ : ಕೇಂದ್ರ ಸೂಚನೆ Read More »

ವಿದ್ಯಾರ್ಥಿನಿ ಹಾಗೂ ಆಟೋ ಚಾಲಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು : ಮೂರು ವಾರಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಹಾಗೂ ಆಟೋ ರಿಕ್ಷಾ ಚಾಲಕ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಕುಂಬಳೆ ಠಾಣಾ ವ್ಯಾಪ್ತಿಯ ಕಯ್ಯಾರ್ ಮಂಡಕಾವು ಎಂಬಲ್ಲಿ ಪತ್ತೆಯಾಗಿದೆ. ಮಂಡಕಾಪುವಿನ ಶ್ರೇಯಾ (15) ಮತ್ತು ಆಟೋ ಚಾಲಕ ಪ್ರದೀಪ್ ( 42) ಎಂಬವರ ಮೃತದೇಹ ಪತ್ತೆಯಾದದ್ದು. ಮನೆಯಿಂದ ಅರ್ಧ ಕಿ. ಮೀ ದೂರದ ಕಾಡಿನಲ್ಲಿ ಆದಿತ್ಯವಾರ ಬೆಳಿಗ್ಗೆ 10.30 ರ ವೇಳೆಗೆ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ತನಿಖೆ ನಡೆಸಿದ್ದರು .

ವಿದ್ಯಾರ್ಥಿನಿ ಹಾಗೂ ಆಟೋ ಚಾಲಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ರನ್ಯಾ ರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಕೇಳಿ ಬರುತ್ತಿದೆ ರಾಜಕೀಯ ನಾಯಕರ ಹೆಸರು

ನಟಿಯ ಕಂಪನಿಗೆ ಮಂಜೂರಾಗಿದೆಯಾ 12 ಎಕರೆ ಜಮೀನು? ಬೆಂಗಳೂರು: ಕನ್ನಡ ನಟಿ ರನ್ಯಾ ರಾವ್‌ ಒಳಗೊಂಡಿರುವ ಗೋಲ್ಡ್‌ ಸ್ಮಗ್ಲಿಂಗ್‌ ಜಾಲದ ಬಾಹುಗಳು ಬಹಳ ವಿಶಾಲವಾಗಿ ಚಾಚಿಕೊಂಡಿವೆ ಎಂಬ ವಿಚಾರ ತನಿಖೆ ಮುಂದುವರಿದಂತೆ ಬಯಲಾಗುತ್ತಿದೆ. ಕೆಲದಿನಗಳ ಹಿಂದೆಯಷ್ಟೇ ದಿಲ್ಲಿ ಮತ್ತು ಮುಂಬಯಿ ವಿಮಾನ ನಿಲ್ದಾಣಗಳಲ್ಲೂ ಭಾರಿ ಪ್ರಮಾಣದ ಚಿನ್ನದ ಬಿಸ್ಕಟ್‌ಗಳು ವಶವಾಗಿದ್ದು, ಈ ಪ್ರಕರಣಗಳಿಗೂ ರನ್ಯಾ ರಾವ್‌ ಒಳಗೊಂಡಿರುವ ಪ್ರಕರಣಕ್ಕೂ ಸಂಬಂಧ ಇದೆ ಎಂಬ ಅನುಮಾನ ಬಂದಿದೆ. ಮೂರು ಕಡೆ ಒಂದೇ ರೀತಿಯ ಚಿನ್ನದ ಬಿಸ್ಕೆಟ್‌ಗಳು ವಶವಾಗಿವೆ. ಮೂರೂ

ರನ್ಯಾ ರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಕೇಳಿ ಬರುತ್ತಿದೆ ರಾಜಕೀಯ ನಾಯಕರ ಹೆಸರು Read More »

ಮದುವೆ ಸಮಾರಂಭದಲ್ಲಿ ಪ್ಲಾಸ್ಟಿಕ್‌ ನೀರಿನ ಬಾಟಲಿ ಬಳಕೆ ಮಾಡುವಂತಿಲ್ಲ

ಹೈಕೋರ್ಟಿನ ಮಹತ್ವದ ಆದೇಶ ತಿರುವನಂತಪುರ: ಮದುವೆ ಮತ್ತಿತರ ಖಾಸಗಿ ಸಮಾರಂಭಗಳಲ್ಲಿ ಪ್ಲಾಸಿಕ್‌ ನೀರಿನ ಬಾಟಲಿ ಬಳಕೆ ಮಾಡಬಾರದು ಎಂದು ಕೇರಳ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ನ್ಯಾಯಾಲಯ ರಾಜ್ಯದಲ್ಲಿ ಮದುವೆ ಮತ್ತಿತರ ಸಮಾರಂಭದಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಬಾರದು ಎಂದು ಹೇಳಿದೆ. ಸಣ್ಣ ಪ್ಲಾಸ್ಟಿಕ್ ಬಾಟಲಿಗಳು ಪ್ರಕೃತಿಗೆ ಹಾನಿಯನ್ನುಂಟುಮಾಡುತ್ತಿವೆ ಮತ್ತು ಯಾವುದೇ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ.ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಅನ್ನು ತೊಡೆದುಹಾಕಲು ಕಠಿಣ ಕ್ರಮಗಳು

ಮದುವೆ ಸಮಾರಂಭದಲ್ಲಿ ಪ್ಲಾಸ್ಟಿಕ್‌ ನೀರಿನ ಬಾಟಲಿ ಬಳಕೆ ಮಾಡುವಂತಿಲ್ಲ Read More »

ಚಾಂಪಿಯನ್ಸ್‌ ಟ್ರೋಫಿ : ಫೈನಲ್‌ ಪಂದ್ಯದ ಮೇಲೆ ನಡೆದಿದೆ ಭರ್ಜರಿ ಬೆಟ್ಟಿಂಗ್‌

ಭಾರತ-ನ್ಯೂಜಿಲ್ಯಾಂಡ್‌ ಫೈನಲ್‌ ಕದನಕ್ಕೆ ಕ್ಷಣಗಣನೆ; ಭಾರತವೇ ಬುಕ್ಕಿಗಳ ಫೇವರಿಟ್‌ ದುಬೈ : ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡಗಳ ನಡುವೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಐಸಿಸಿ ಟೂರ್ನಿಯ ಫೈನಲ್​ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ ಗೆದ್ದ ಇತಿಹಾಸವಿಲ್ಲ. ಹೀಗಾಗಿ ಈ ಬಾರಿ ಏನಾಗಲಿದೆ ಎಂಬ ತೀವ್ರ ಕುತೂಹಲ ಕ್ರಿಕೆಟ್‌ ಪ್ರೇಮಿಗಳಲ್ಲಿದೆ. ಇದರ ಜೊತೆಗೆ ಈ ಪಂದ್ಯದ ಮೇಲೆ ಭರ್ಜರಿ ಬೆಟ್ಟಿಂಗ್‌ ಕೂಡ ನಡೆದಿದೆ. ದುಬೈನ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಮಧ್ಯಾಹ್ನ ಪಂದ್ಯ ಶುರುವಾಗಲಿದೆ.

ಚಾಂಪಿಯನ್ಸ್‌ ಟ್ರೋಫಿ : ಫೈನಲ್‌ ಪಂದ್ಯದ ಮೇಲೆ ನಡೆದಿದೆ ಭರ್ಜರಿ ಬೆಟ್ಟಿಂಗ್‌ Read More »

ಇಬ್ಬರು ಪ್ರೇಯಸಿಯರ ಜೊತೆ ಸೇರಿ ಮೂರನೆಯ ಪ್ರೇಯಸಿಯನ್ನು ವಿಷದ ಇಂಜೆಕ್ಷನ್‌ ಚುಚ್ಚಿ ಸಾಯಿಸಿದ ಪಾತಕಿ

ಬೆಚ್ಚಿಬೀಳಿಸುತ್ತಿದೆ ಇಂಜಿನಿಯರಿಂಗ್‌ ವಿದ್ಯಾರ್ಥಿ ಎಸಗಿದ ಕೃತ್ಯ ಚೆನ್ನೈ : ಇಬ್ಬರು ಪ್ರೇಯಸಿಯರ ಜೊತೆ ಸೇರಿಕೊಂಡು ಮೂರನೇ ಪ್ರೇಯಸಿಯನ್ನು ಕೊಂದು ಕಮರಿಗೆ ಎಸೆದ ಪ್ರಕರಣವನ್ನು ತಮಿಳುನಾಡಿನ ಸೇಲಂ ಪೊಲೀಸರು ಭೇದಿಸಿದ್ದಾರೆ. ಲೋಗನಾಯಕಿ (35) ಕೊಲೆಯಾದ ಮಹಿಳೆ. ಅವಳ ಪ್ರಿಯಕರ ಇಂಜಿನಿಯರಿಂಗ್‌ ವಿದ್ಯಾರ್ಥಿ ಅಬ್ದುಲ್‌ ಅಝೀಝ್‌ (22) ಮತ್ತು ಅವನ ಪ್ರೇಯಸಿಯರಾದ ಐಟಿ ಉದ್ಯೋಗಿ ತಾವಿಯಾ ಸುಲ್ತಾನ (22) ಮತ್ತು ನರ್ಸಿಂಗ್‌ ವಿದ್ಯಾರ್ಥಿನಿ ಮೋನಿಶಾ (21) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.ತಾವಿಯಾ ಸುಲ್ತಾನ ಮತ್ತು ಮೋನಿಶಾಳನ್ನು ಬಲೆಗೆ ಹಾಕಿಕೊಳ್ಳುವ ಮುನ್ನ ಆರೋಪಿ

ಇಬ್ಬರು ಪ್ರೇಯಸಿಯರ ಜೊತೆ ಸೇರಿ ಮೂರನೆಯ ಪ್ರೇಯಸಿಯನ್ನು ವಿಷದ ಇಂಜೆಕ್ಷನ್‌ ಚುಚ್ಚಿ ಸಾಯಿಸಿದ ಪಾತಕಿ Read More »

ಮೂರನೇ ಫೈನಲ್‌ ಮುಖಾಮುಖಿಗೆ ಸಜ್ಜಾದ ಭಾರತ-ನ್ಯೂಜಿಲ್ಯಾಂಡ್‌

ಭಾನುವಾರ ದುಬೈಯಲ್ಲಿ ನಡೆಯಲಿದೆ ಹೈ ವೋಲ್ಟೇಜ್‌ ಫೈನಲ್‌ ಕದನ ದುಬೈ: ನಿನ್ನೆ ನಡೆದ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದು ನ್ಯೂಜಿಲ್ಯಾಂಡ್‌ ತಂಡ ಫೈನಲ್‌ಗೆ ಪ್ರವೇಶಿಸಿರುವುದರೊಂದಿಗೆ ಭಾರತವನ್ನು ಎದುರಿಸಲು ವೇದಿಕೆ ಸಿದ್ಧವಾಗಿದೆ. ಭಾನುವಾರ ದುಬೈನ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿದೆ. ಮೊದಲ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಟೀಮ್ ಇಂಡಿಯಾ ಫೈನಲ್​ಗೇರಿದರೆ, ದ್ವಿತೀಯ ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಸೋಲುಣಿಸಿ ನ್ಯೂಝಿಲೆಂಡ್ ಫೈನಲ್

ಮೂರನೇ ಫೈನಲ್‌ ಮುಖಾಮುಖಿಗೆ ಸಜ್ಜಾದ ಭಾರತ-ನ್ಯೂಜಿಲ್ಯಾಂಡ್‌ Read More »

ಚಾಂಪಿಯನ್ಸ್‌ ಟ್ರೋಫಿ : ಇಂದು ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್‌ ಫೈಟ್‌

ಆರು ಪ್ರಮುಖ ಆಟಗಾರರಿಲ್ಲದೆ ಆಸೀಸ್‌ ಕಂಗಾಲು, ಇಂಡಿಯಾಕ್ಕೆ ಸೆಲೆಕ್ಷನ್‌ ಕಗ್ಗಂಟು ದುಬೈ : ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್‌ ಪಂದ್ಯ ಇಂದು ದುಬೈಯಲ್ಲಿ ನಡೆಯಲಿದ್ದು, ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್​​ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಪ್ರಮುಖ ಆಟಗಾರರು ಕಾಣಿಸಿಕೊಳ್ಳುವುದಿಲ್ಲ ಎಂಬುದು ವಿಶೇಷ. ಏಕೆಂದರೆ ಆಸೀಸ್ ಪಡೆಯ 6 ಮಂದಿ ಈಗಾಗಲೇ ನಾನಾ ಕಾರಣಗಳಿಂದಾಗಿ ಹೊರಗುಳಿದಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಮತ್ತು ಆ ಬಳಿಕ ತಂಡದಿಂದ

ಚಾಂಪಿಯನ್ಸ್‌ ಟ್ರೋಫಿ : ಇಂದು ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್‌ ಫೈಟ್‌ Read More »

ಹಸಿಮೀನು ಗಂಟಲಲ್ಲಿ ಸಿಲುಕಿ ಯುವಕ ಸಾವು!

ಕೇರಳ: ಗದ್ದೆಯಲ್ಲಿ ಮೀನು ಹಿಡಿಯುತ್ತಿದ್ದಾಗ ಒಂದು ಮೀನು ಗಂಟಲೊಳಗೆ ಹೋದ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ಆಲಪ್ಪುಳ ಸಮೀಪದ ಕಾಯಂಕುಲಂನಲ್ಲಿ ಭಾನುವಾರ ನಡೆದಿದೆ. ಮೃತ ಯುವಕನನ್ನು ಪುತ್ತುಪ್ಪಳ್ಳಿಯ ಆದರ್ಶ್ ಅಲಿಯಾಸ್ ಉನ್ನಿ (25) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೆ 4.30ರ ಸುಮಾರಿಗೆ ಆದರ್ಶ್‌ ಸ್ನೇಹಿತರೊಂದಿಗೆ ಗದ್ದೆಗೆ ನೀರು ಹಾಯಿಸಿ ಮೀನು ಹಿಡಿಯುತ್ತಿದ್ದಾಗ ಈ ಘಟನೆ ನಡೆದಿದೆ. ಇನ್ನೊಂದು ಮೀನನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಮೀನೊಂದು ಆತನ ಬಾಯಿ ಕಚ್ಚಿಕೊಂಡು ಗಂಟಲೊಳಗೆ ಹೋಗಿ ಸಿಲುಕಿಕೊಂಡಿದೆ. ಕೂಡಲೇ ಯುವಕನನ್ನು

ಹಸಿಮೀನು ಗಂಟಲಲ್ಲಿ ಸಿಲುಕಿ ಯುವಕ ಸಾವು! Read More »

error: Content is protected !!
Scroll to Top