ದೇಶ

ಗ್ಯಾರಂಟಿಗಳ ಹೊರೆ : ಶಾಸಕರು, ಕಾರ್ಯದರ್ಶಿಗಳ ಸಂಬಳ ಕಟ್‌

ಉಚಿತ ಕೊಡುಗೆಗಳಿಂದ ಬೊಕ್ಕಸ ಖಾಲಿ ಶಿಮ್ಲಾ: ಕಾಂಗ್ರೆಸ್‌ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿ ಕೊಡುಗೆಗಳ ಹೊಡೆತದಿಂದ ರಾಜ್ಯದ ಬೊಕ್ಕಸ ಬರಿದಾಗಿದೆ. ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂದರೆ ಅಲ್ಲಿ ಶಾಸಕರಿಗೆ ವೇತನ ನೀಡಲು ಹಣ ಇಲ್ಲದಂತಾಗಿದೆ. ಹೀಗಾಗಿ ಸರಕಾರ ಸಚಿವರೂ ಸೇರಿದಂತೆ ಎಲ್ಲ ಶಾಸಕರಿಗೆ ಎರಡು ತಿಂಗಳ ವೇತನ, ಭತ್ಯೆಗಳು ಸೇರಿದಂತೆ ಯಾವೊಂದು ಪಾವತಿಯೂ ಸಾಧ್ಯವಿಲ್ಲ ಎಂದು ಹೇಳಿದೆ.ಸಚಿವರು, ಮುಖ್ಯ ಸಂಸದೀಯ ಕಾರ್ಯದರ್ಶಿಗಳು ಮತ್ತು ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳವರೆಗೆ ಯಾವುದೇ ವೇತನ ಹಾಗೂ ಭತ್ಯೆ ನೀಡಲಾಗುವುದಿಲ್ಲ […]

ಗ್ಯಾರಂಟಿಗಳ ಹೊರೆ : ಶಾಸಕರು, ಕಾರ್ಯದರ್ಶಿಗಳ ಸಂಬಳ ಕಟ್‌ Read More »

ನಿವೃತ್ತ ಶಿಕ್ಷಕ ಕೊಲೆ ಪ್ರಕರಣ | ಕೊಲೆಗೆ ಬಳಸಿದ ಬೈಕ್‍, ಕತ್ತಿ, ಬಟ್ಟೆ ವಶಕ್ಕೆ ಪಡೆದ ಪೊಲೀಸರು

ಬೆಳ್ತಂಗಡಿ : ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದ ಬಳಿಕ ಮಧ್ಯಾಹ್ನ ಕಾಸರಗೋಡು ಮನೆಗೆ ತೆರಳಿದ ಧರ್ಮಸ್ಥಳ ಪೊಲೀಸರ ತಂಡ ಕೊಲೆಗೆ ಬಳಸಿದ ಬೈಕ್, ಕತ್ತಿ, ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್(83) ಅವರನ್ನು ಕೊಲೆ ಮಾಡಿದ ಆರೋಪಿಗಳಾದ ಕಾಸರಗೋಡು ತಾಲೂಕಿನ ಕುಂಬ್ರಾಜಿ ಗ್ರಾಮದ ಒಡಬ್ಬಳ ನಿವಾಸಿಯಾಗಿರುವ ಆಳಿಯ ರಾಘವೇಂದ್ರ ಕೆದಿ ಲಾಯ ( 53)

ನಿವೃತ್ತ ಶಿಕ್ಷಕ ಕೊಲೆ ಪ್ರಕರಣ | ಕೊಲೆಗೆ ಬಳಸಿದ ಬೈಕ್‍, ಕತ್ತಿ, ಬಟ್ಟೆ ವಶಕ್ಕೆ ಪಡೆದ ಪೊಲೀಸರು Read More »

ಕಾಶ್ಮೀರ : ಮೂವರು ಉಗ್ರರನ್ನು ಸದೆಬಡಿದ ಸೇನೆ

ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಸೇನಾಪಡೆ ನಡೆಸಿದ ಎನ್‌ಕೌಂಟಗೆ ಮೂವರು ಉಗ್ರರು ಬಲಿಯಾಗಿದ್ದಾರೆ. ಕುಪ್ವಾರ ಜಿಲ್ಲೆಯ ತಂಗ್ದಾರ್‌ಲ್ಲಿ ಕೆಲ ಉಗ್ರರು ಗಡಿ ನುಸುಳಲು ಯತ್ನ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನಾಪಡೆ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿತ್ತು. ಇದರಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ ರಜೋರಿಯಲ್ಲಿಯೂ ಉಗ್ರರು ಹಾಗೂ ಸೇನಾಪಡೆ ನಡುವೆ ಗುಂಡಿನ ಕಾಳಗ ಮುಂದುವರಿದಿದ್ದು, ಸೇನಾಪಡೆ ಎನ್‌ಕೌಟರ್ ಆರಂಭಿಸಿದೆ. ಖೇರಿ ಮೊಹ್ರಾ

ಕಾಶ್ಮೀರ : ಮೂವರು ಉಗ್ರರನ್ನು ಸದೆಬಡಿದ ಸೇನೆ Read More »

ರಾಮೇಶ್ವರಂ ಕೆಫೆ ಸ್ಫೋಟ ಸೂತ್ರದಾರನಿಂದ ರೈಲು ಸ್ಫೋಟಿಸಲು ಸಂಚು

ಜಿಹಾದಿ ಸ್ಲೀಪರ್‌ ಸೆಲ್‌ಗಳಿಗೆ ರೈಲು, ಪೆಟ್ರೋಲಿಯಂ ಲೈನ್‌ಗಳ ಮೇಲೆ ದಾಳಿ ಮಾಡಲು ಕರೆ ಹೊಸದಿಲ್ಲಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸೂತ್ರಧಾರ ಪಾಕಿಸ್ತಾನದಲ್ಲಿರುವ ಉಗ್ರ ಫರ್ಹಾತುಲ್ಲಾ ಘೋರಿ ಭಾರತಾದ್ಯಂತ ರೈಲುಗಳ ಮೇಲೆ ದಾಳಿ ನಡೆಸುವಂತೆ ಸ್ಲೀಪರ್ ಸೆಲ್‌ಗಳಿಗೆ ಕರೆ ನೀಡಿದ್ದಾನೆ. ಜಿಹಾದಿ ಘೋರಿ ಭಾರತದಲ್ಲಿನ ರೈಲ್ವೆ ಸಂಪರ್ಕವನ್ನು ಹಳಿತಪ್ಪಿಸಲು ಸ್ಲೀಪರ್ ಸೆಲ್‌ಗಳಿಗೆ ವಿಡಿಯೋ ಮೂಲಕ ಕರೆ ಕೊಟ್ಟಿದ್ದಾನೆ. ಪ್ರೆಶರ್ ಕುಕ್ಕರ್ ಬಳಸಿ ಬಾಂಬ್ ಸ್ಫೋಟಿಸುವ ವಿವಿಧ ವಿಧಾನಗಳನ್ನು ಈ ವೀಡಿಯೊದಲ್ಲಿ ವಿವರಿಸಿದ್ದಾನೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ

ರಾಮೇಶ್ವರಂ ಕೆಫೆ ಸ್ಫೋಟ ಸೂತ್ರದಾರನಿಂದ ರೈಲು ಸ್ಫೋಟಿಸಲು ಸಂಚು Read More »

ಆಸ್ಪತ್ರೆ ಆವರಣದಲ್ಲೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಜೋಧ್‌ಪುರ: ಕೋಲ್ಕತದಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಘಟನೆಗೆ ವ್ಯಕ್ತವಾಗಿರುವ ಪ್ರತಿಭಟನೆಯ ಬಿಸಿ ತಣ್ಣಗಾಗುವ ಮೊದಲೇ ರಾಜಸ್ಥಾನದಲ್ಲಿ ಇದೇ ಮಾದರಿಯ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ರಾಜಸ್ಥಾನದ ಜೋಧ್‌ಪುರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.ಬಾಲಕಿ ತಾಯಿ ಗದರಿಸಿದ ಕಾರಣಕ್ಕೆ ಸಿಟ್ಟಿನಿಂದ ಕಳೆದ ಭಾನುವಾರ ಮನೆ ತೊರೆದಿದ್ದಳು. ಅದೇ ದಿನ ಸಂಜೆ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಆದರೆ ಪೊಲೀಸರಿಗೆ ಸೋಮವಾರ ಸಂಜೆ ಮಾಹಿತಿ ಸಿಕ್ಕಿದೆ.

ಆಸ್ಪತ್ರೆ ಆವರಣದಲ್ಲೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ Read More »

ಸಂಸದೆ, ನಟಿ ಕಂಗನಾ ರಣಾವತ್‌ಗೆ ಜೀವ ಬೆದರಿಕೆ

ಹೊಸದಿಲ್ಲಿ: ಎಮರ್ಜೆನ್ಸಿ ಚಿತ್ರದ ಟ್ರಯಲರ್‌ ಬಿಡುಗಡೆಯಾದ ಬೆನ್ನಿಗೆ ಸಂಸದೆ, ನಟಿ ಕಂಗನಾ ರಣಾವತ್‌ಗೆ ಜೀವ ಬೆದರಿಕೆ ಒಡ್ಡಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಆಧಾರಿಸಿ ಕಂಗನಾ ಎಮರ್ಜೆನ್ಸಿ ಚಿತ್ರ ನಿರ್ದೇಶಿಸಿ ಅದರಲ್ಲಿ ತಾನೇ ಇಂದಿರಾ ಗಾಂಧಿಯಾಗಿ ನಟಿಸಿದ್ದಾರೆ. ಚಿತ್ರದ ಟ್ರಯಲರನ್ನು ನಿನ್ನೆ ಬಿಡುಗಡೆಗೊಳಿಸಿದ್ದು, ಇದರ ಬೆನ್ನಿಗೆ ಸಿಕ್ಖ್‌ ಉಗ್ರಗಾಮಿ ಸಂಘಟನೆಯೊಂದು ಕಂಗನಾಗೆ ಜೀವ ಬೆದರಿಕೆಯೊಡ್ಡಿದೆ.ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಸಂಸದೆಯೂ ಆಗಿರುವ ಕಂಗನಾ ಬೆದರಿಕೆ ಕುರಿತು ಪೊಲೀಸರಿಗೆ ದೂರು ನೀಡಿ ರಕ್ಷಣೆ

ಸಂಸದೆ, ನಟಿ ಕಂಗನಾ ರಣಾವತ್‌ಗೆ ಜೀವ ಬೆದರಿಕೆ Read More »

ಮೋದಿ ಉದ್ಘಾಟಿಸಿದ್ದ ಶಿವಾಜಿ ಮಹಾರಾಜರ 35 ಅಡಿ ಎತ್ತರದ ಪ್ರತಿಮೆ ಧರಾಶಾಯಿ

ಮುಂಬಯಿ: ಕಳೆದ ವರ್ಷ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದ ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ 35 ಅಡಿ ಎತ್ತರದ ಕುಸಿದು ಬಿದ್ದಿದೆ. ಮಾಲ್ವಾನ್‌ನ ರಾಜ್‌ಕೋಟ್ ಕೋಟೆಯಲ್ಲಿ ನಿರ್ಮಿಸಲಾಗಿದ್ದ 35 ಅಡಿ ಎತ್ತರದ ಪ್ರತಿಮೆ ನಿನ್ನೆ ಮಧ್ಯಾಹ್ನ ಕುಸಿದಿದೆ. ಪ್ರತಿಮೆಯ ಕುಸಿತದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಜಿಲ್ಲೆಯಲ್ಲಿ ಕಳೆದ 2-3 ದಿನಗಳಲ್ಲಿ ಭಾರಿ ಮಳೆ ಮತ್ತು ಬಿರುಗಾಳಿ ಬೀಸಿದೆ. ಇದೇ ಕುಸಿತಕ್ಕೆ ಕಾರಣವಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಲೀಸ್

ಮೋದಿ ಉದ್ಘಾಟಿಸಿದ್ದ ಶಿವಾಜಿ ಮಹಾರಾಜರ 35 ಅಡಿ ಎತ್ತರದ ಪ್ರತಿಮೆ ಧರಾಶಾಯಿ Read More »

ಜನಪ್ರಿಯ ನಟ ಸಿದ್ದಿಕ್‌ ವಿರುದ್ಧ ಲೈಂಗಿಕ ಶೋಷಣೆ ಆರೋಪ

ಮಲಯಾಳಂ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ ಹೇಮಾ ಸಮಿತಿ ವರದಿ ತಿರುವನಂತಪುರ: ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿಗತಿ ಅರಿಯಲು ರಚಿಸಲಾಗಿದ್ದ ಹೇಮಾ ಸಮಿತಿಯ ವರದಿಯನ್ನು ಕೇರಳ ಸರಕಾರ ಬಹಿರಂಗಗೊಳಿಸಿದ ಬಳಿಕ ಬಿರುಗಾಳಿಯೇ ಬೀಸಿದೆ. ಚಿತ್ರರಂಗದ ಘಟಾನುಘಟಿಗಳೆಲ್ಲ ವರದಿಯಿಂದಾಗಿ ತತ್ತರಿಸಿ ಹೋಗಿದ್ದಾರೆ. ಕೆಲವು ಆಘಾತಕಾರಿ ಅಂಶಗಳು ಹೊರಬಂದಿವೆ. ಇದರ ಬೆನ್ನಲ್ಲೇ ಮಲಯಾಳಂನ ಜನಪ್ರಿಯ ನಟ ಸಿದ್ದಿಕ್‌ ವಿರುದ್ಧ ಯುವ ನಟಿ ರೇವತಿ ಸಂಪತ್ ಮಾಡಿದ ಲೈಂಗಿಕ ಕಿರುಕುಳದ ಆರೋಪ ಅಲ್ಲೋಲಕಲ್ಲೋಲ ಎಬ್ಬಿಸಿದೆ.ಈ ಆರೋಪದ ಬೆನ್ನಲ್ಲೇ ಸಿದ್ದಿಕಿ ಅವರು ಮಲಯಾಳಂ ಕಲಾವಿದರ

ಜನಪ್ರಿಯ ನಟ ಸಿದ್ದಿಕ್‌ ವಿರುದ್ಧ ಲೈಂಗಿಕ ಶೋಷಣೆ ಆರೋಪ Read More »

ಅಯೋಧ್ಯೆ ರಾಮ ಮಂದಿರಕ್ಕೆ 2,100 ಕೋ ರೂ. ದೇಣಿಗೆ ಚೆಕ್‌!

ಪ್ರಧಾನಮಂತ್ರಿ ಸಹಾಯ ನಿಧಿ ಹೆಸರಲ್ಲಿ ಟ್ರಸ್ಟ್‌ಗೆ ಪೋಸ್ಟ್ ಮಾಡಿದ ದಾನಿ ಅಯೋಧ್ಯೆ: ಅಯೋಧ್ಯೆಯ ರಾಮಮಂದಿರ ಟ್ರಸ್ಟ್‌ಗೆ ದಾನಿಯೊಬ್ಬರು ಬರೋಬ್ಬರಿ 2,100 ಕೋಟಿ ರೂ. ಮೊತ್ತದ ಚೆಕ್ ಕಳಿಸಿದ್ದಾರೆ. ಈ ಚೆಕ್ ಮೇಲೆ ದಾನಿ ಹೆಸರು, ವಿಳಾಸ, ಫೋನ್ ನಂಬರ್ ಕೂಡ ಇದೆ.ಈ ಚೆಕ್ಕನ್ನು ಪ್ರಧಾನಮಂತ್ರಿ ಸಹಾಯ ನಿಧಿ ಹೆಸರಲ್ಲಿ ಟ್ರಸ್ಟ್‌ಗೆ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಚೆಕ್ ಬಗ್ಗೆ ಸಂಪೂರ್ಣ ವಿವರ ತಿಳಿಯಲು ಪ್ರಧಾನಿ ಸಚಿವಾಲಯವನ್ನು ಸಂಪರ್ಕಿಸಲು ಟ್ರಸ್ಟ್ ಮುಂದಾಗಿದೆ.ಚೆಕ್‌ ನೈಜವಾಗಿದೆಯೇ ಯಾರೋ ಕಿಡಿಗೇಡಿಗಳು ಕಳುಹಿಸಿದ್ದಾರೆಯೇ ಎಂದು

ಅಯೋಧ್ಯೆ ರಾಮ ಮಂದಿರಕ್ಕೆ 2,100 ಕೋ ರೂ. ದೇಣಿಗೆ ಚೆಕ್‌! Read More »

ಸರಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ | ಕೇಂದ್ರ ಸರಕಾರದಿಂದ ಘೋಷಣೆ | ಯಾವಾಗ ಜಾರಿಗೆ ಬರಲಿದೆ : ಇಲ್ಲಿದೆ ಡಿಟೈಲ್ಸ್

ಹೊಸದಿಲ್ಲಿ: ಕೇಂದ್ರ ಸರಕಾರ ಶನಿವಾರ ಏಕೀಕೃತ ಪಿಂಚಣಿ ಯೋಜನೆ ಎಂಬ ಹೊಸ ಪಿಂಚಣಿ ಯೋಜನೆಯನ್ನು ಘೋಷಿಸಿದೆ. ಈ ಹೊಸ ಯೋಜನೆಯಲ್ಲಿ ಕೇಂದ್ರ ಸರಕಾರಿ ನೌಕರರು ಖಚಿತವಾದ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಖಚಿತವಾದ ಕನಿಷ್ಠ ಪಿಂಚಣಿಯನ್ನು ಪಡೆಯುತ್ತಾರೆ. ಕೇಂದ್ರ ಸರಕಾರಿ ನೌಕರರು ಖಚಿತವಾದ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಖಚಿತವಾದ ಕನಿಷ್ಠ ಪಿಂಚಣಿ ಆಗಿದೆ. ಹೊಸ ಪಿಂಚಣಿ ಯೋಜನೆ ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆ. ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ ಈ ಯೋಜನೆಯು ಕಳೆದ

ಸರಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ | ಕೇಂದ್ರ ಸರಕಾರದಿಂದ ಘೋಷಣೆ | ಯಾವಾಗ ಜಾರಿಗೆ ಬರಲಿದೆ : ಇಲ್ಲಿದೆ ಡಿಟೈಲ್ಸ್ Read More »

error: Content is protected !!
Scroll to Top