ದೇಶ

ಮುಂಬಯಿಯಲ್ಲಿ ಮಹಾಮಳೆ : 4 ಮಂದಿ ಸಾವು

ಅನಾಹುತಗಳ ಸರಮಾಲೆ ಸೃಷ್ಟಿಸಿದ ಮಳೆ ಮುಂಬಯಿ: ಮುಂಬಯಿ ಮಹಾನಗರ ಸೇರಿ ಮಹಾರಾಷ್ಟ್ರದ ವಿವಿಧೆಡೆ ನಿನ್ನೆಯಿಂದೀಚೆಗೆ ಸುರಿಯುತ್ತಿರುವ ಮಹಾಮಳೆ ಅನಾಹುತಗಳ ಸರಮಾಲೆಯನ್ನು ಸೃಷ್ಟಿಸಿದೆ. ಮಳೆಗೆ ಮುಂಬಯಿಯಲ್ಲಿ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಬುಧವಾರ ಸಂಜೆ ಹೊತ್ತಿಗೆ ಮಳೆ ಶುರುವಾಗಿದ್ದು, ಸತತವಾಗಿ 5 ತಾಸು ಸುರಿದಿದೆ. ಮುಂಬಯಿ ಮಹಾನಗರ ಪ್ರದೇಶದ ಕೆಲವು ಭಾಗಗಳಲ್ಲಿ 200 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ.ಭಾರಿ ಮಳೆಯ ಹಿನ್ನೆಲೆಯಲ್ಲಿ ನಿನ್ನೆಯೇ ಮುಂಬಯಿ ಮತ್ತು ಥಾಣೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರೈಲು, ರಸ್ತೆ ಸಂಚಾರ ವ್ಯತ್ಯಯಗೊಂಡು ಜನರು ತಡರಾತ್ರಿಯವರೆಗೂ […]

ಮುಂಬಯಿಯಲ್ಲಿ ಮಹಾಮಳೆ : 4 ಮಂದಿ ಸಾವು Read More »

ತಿರುಪತಿ ವಿವಾದ : ವಿಶ್ವ ಹಿಂದೂ ಪರಿಷತ್ ಖಂಡನೆ

ಪುತ್ತೂರು: ತಿರುಪತಿ ದೇವಸ್ಥಾನದ ಲಡ್ಡು ಸಿದ್ಧಪಡಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಪತ್ತೆಯಾಗಿರುವುದಕ್ಕೆ ವಿಶ್ವ ಹಿಂದೂ ಪರಿಷತ್ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಈ ಕುರಿತು ಮಾತನಾಡಿ, ತಿರುಪತಿ ದೇವಸ್ಥಾನ ಹಿಂದೂಗಳ ಒಂದು ಶ್ರದ್ಧಾ ಕೇಂದ್ರ. ಇಲ್ಲಿ ಪ್ರಸಾದ ರೂಪದಲ್ಲಿ ಸಿಗುವಂತ ಲಡ್ಡು ಅತ್ಯಂತ ಮಹತ್ವಪೂರ್ಣವಾದದ್ದು. ಹೀಗಿರುವಾಗ ಪವಿತ್ರವಾದ ಲಡ್ಡು ಪ್ರಸಾದವನ್ನ ಅಪವಿತ್ರಗೊಳಿಸಿದ್ದಂತಹ ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ಸರ್ಕಾರ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.

ತಿರುಪತಿ ವಿವಾದ : ವಿಶ್ವ ಹಿಂದೂ ಪರಿಷತ್ ಖಂಡನೆ Read More »

ಲಾಪತಾ ಲೇಡಿಸ್ ಸಿನಿಮಾ ಆಸ್ಕರ್ ಅವಾರ್ಡ್‍ಗೆ ಆಯ್ಕೆ

ಲಾಪತಾ ಲೇಡಿಸ್’ ಸಿನಿಮಾ ‘ಆಸ್ಕರ್ 2025’ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ. ಕಿರಣ್ ರಾವ್ ನಿರ್ದೇಶನದ ಈ ಚಿತ್ರವನ್ನು ಆಮಿರ್ ಖಾನ್ ಅವರು ನಿರ್ಮಾಣ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ಈ ಚಿತ್ರ ಎಲ್ಲರಿಂದ ಮೆಚ್ಚುಗೆ ಪಡೆಯಿತು. ಒಟ್ಟಿನಲ್ಲಿ ರಿಲೀಸ್ ಆದ ಬಳಿಕ ಮತ್ತೊಂದಷ್ಟು ಮಂದಿ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಲಾಪತಾ ಲೇಡಿಸ್’ ಸಿನಿಮಾ ಮಹಿಳೆಯರ ಸಬಲೀಕರಣದ ಬಗ್ಗೆ ಇದೆ. ಈ ಸಿನಿಮಾದಲ್ಲಿ ನಿಶಾಂಶಿ ಗೋಯಲ್, ಪ್ರತಿಭಾ ರಾಂತಾ, ಸ್ಪರ್ಶ್ ಶ್ರೀವಾಸ್ತವ, ಚಾಯಾ

ಲಾಪತಾ ಲೇಡಿಸ್ ಸಿನಿಮಾ ಆಸ್ಕರ್ ಅವಾರ್ಡ್‍ಗೆ ಆಯ್ಕೆ Read More »

ಮುಖ್ಯಮಂತ್ರಿ ಆಸನ ಪಕ್ಕ ಬೇರೆ ಕುರ್ಚಿ ಹಾಕಿಕೊಂಡು ಕುಳಿತ ಆತಿಷಿ

ಪಾದುಕಾ ಪ್ರದಾನ ಪ್ರಸಂಗದಂತೆ ರಾಜ್ಯಭಾರ ಮಾಡುತ್ತೇನೆ ಎಂದು ಹೇಳಿದ ನೂತನ ಸಿಎಂ ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ನಡೆದ ನಾಟಕೀಯ ಬೆಳವಣಿಗೆಗಳಿಂದಾಗಿ ದಿಲ್ಲಿ ಮುಖ್ಯಮಂತ್ರಿಯಾಗಿರುವ ಆತಿಷಿ ಸಿಂಗ್‌ ಮರ್ಲೆನಾ ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆದರೆ ಅವರು ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಕುಳಿತುಕೊಳ್ಳುತ್ತಿದ್ದ ಕುರ್ಚಿಯಲ್ಲಿ ಕುಳಿತುಕೊಂಡಿಲ್ಲ. ಬದಲಾಗಿ ಮುಖ್ಯಮಂತ್ರಿ ಕುರ್ಚಿ ಪಕ್ಕದಲ್ಲೇ ಬೇರೆ ಕುರ್ಚಿ ಹಾಕಿಕೊಂಡು ಕುಳಿತು ಅಧಿಕಾರ ಚಲಾಯಿಸುತ್ತಿರುವ ಫೋಟೋ ಭಾರಿ ವೈರಲ್‌ ಆಗಿದೆ.ಮುಖ್ಯಮಂತ್ರಿ ಎಂದಿಗಾದರೂ ಕೇಜ್ರಿವಾಲ್‌ ತಾನು ಅವರ ಆದೇಶ ಪಾಲಕಿ ಮಾತ್ರ

ಮುಖ್ಯಮಂತ್ರಿ ಆಸನ ಪಕ್ಕ ಬೇರೆ ಕುರ್ಚಿ ಹಾಕಿಕೊಂಡು ಕುಳಿತ ಆತಿಷಿ Read More »

ತಿರುಪತಿ ದೇವಾಲಯ ಶುದ್ಧೀಕರಣ ಧಾರ್ಮಿಕ ವಿಧಿ ಆರಂಭ

ಶಾಂತಿಹೋಮ, ಪಂಚಗವ್ಯ ಸಂಪ್ರೋಕ್ಷಣೆ ಮೂಲಕ ಶುದ್ಧೀಕರಣ ತಿರುಪತಿ: ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ತಿರುಮಲದ ಪ್ರಸಿದ್ಧ ವೆಂಕಟೇಶ್ವರ ದೇವಾಲಯದ ಲಡ್ಡುವಿನಲ್ಲಿ ಪ್ರಾಣಿಜನ್ಯ ಕೊಬ್ಬಿನಂಶ ಬಳಸಲಾಗಿದೆ ಎಂಬ ವಿಚಾರ ಬಹಿರಂಗವಾದ ಬಳಿಕ ಭಕ್ತರ ಮನಸ್ಸಿನಲ್ಲಿ ಉಂಟಾದ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ (ಟಿಟಿಡಿ) ಹಲವಾರು ಧಾರ್ಮಿಕ ಕಾರ್ಯಗಳನ್ನು ಮಾಡಲು ನಿರ್ಧರಿಸಿದೆ. ಕ್ಷೇತ್ರದ ಪಾವಿತ್ರ್ಯಕ್ಕೆ ಆಗಿರುವ ಅಪಚಾರಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡು ಕ್ಷೇತ್ರವನ್ನು ಶುದ್ಧೀಕರಿಸುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ದೇವಾಲಯದಲ್ಲಿ ಶಾಂತಿಹೋಮ, ಧಾರ್ಮಿಕ ವಿಧಿಗಳು ಆರಂಭವಾಗಿವೆ. ನಾಲ್ಕು

ತಿರುಪತಿ ದೇವಾಲಯ ಶುದ್ಧೀಕರಣ ಧಾರ್ಮಿಕ ವಿಧಿ ಆರಂಭ Read More »

ತಿರುಪತಿ ಪ್ರಸಾದ ಪಾವಿತ್ರ್ಯಕ್ಕೆ ಅಪಚಾರ : ಪ್ರಾಯಶ್ಚಿತ್ತಕ್ಕೆ ಶೃಂಗೇರಿ ಶ್ರೀಗಳು ಕರೆ

ಮೂರು ದಿನ ಉಪವಾಸ, ಮೌನವ್ರತ ಕೈಗೊಳ್ಳಲಿರುವ ಶ್ರೀಗಳು ಬೆಂಗಳೂರು: ತಿರುಪತಿ ಲಡ್ಡು ಪ್ರಸಾದದಲ್ಲಿ ದನ ಮತ್ತು ಮೀನಿನ ಕೊಬ್ಬಿನಂಶ ಸೇರಿಸಿ ಅಪವಿತ್ರಗೊಳಿಸಿರುವುದಕ್ಕೆ ಪ್ರಾಯಶ್ಚಿತ್ತವಾಗಿ ಮತ್ತು ಅಪವಿತ್ರ ಶುದ್ಧಿಗಾಗಿ ಜನರು ಮೂರು ದಿನ ಉಪವಾಸ, ಮೌನವ್ರತ ಕೈಗೊಳ್ಳಬಹುದು ಎಂದು ಶೃಂಗೇರಿ ಮಹಾಸಂಸ್ಥಾನದ ಶ್ರೀ ಅಭಿನವ ಶಂಕರಭಾರತಿ ಮಹಾಸ್ವಾಮಿಗಳು ಸಲಹೆ ನೀಡಿದ್ದಾರೆ. ಸ್ವಾಮೀಜಿಗಳು ಸ್ವತಹ ಮೂರು ದಿನ ಉಪವಾಸ ಮತ್ತು ಮೌನವ್ರತ ಕೈಗೊಳ್ಳುವ ಸಂಕಲ್ಪ ಮಾಡಿದ್ದಾರೆ. ತಿರುಪತಿ ತಿಮ್ಮಪ್ಪನ ಲಡ್ಡುಗೆ ಪ್ರಾಣಿಗಳ ಕೊಬ್ಬಿನಂಶ ಹಾಗೂ ಮೀನಿನ ಎಣ್ಣೆ ಬೆರೆಸಿ ಕ್ಷೇತ್ರವನ್ನು

ತಿರುಪತಿ ಪ್ರಸಾದ ಪಾವಿತ್ರ್ಯಕ್ಕೆ ಅಪಚಾರ : ಪ್ರಾಯಶ್ಚಿತ್ತಕ್ಕೆ ಶೃಂಗೇರಿ ಶ್ರೀಗಳು ಕರೆ Read More »

ಹಳಿ ಮೇಲೆ ಗ್ಯಾಸ್‌ ಸಿಲಿಂಡರ್‌ : ರೈಲು ಅವಘಡಕ್ಕೆ ಮತ್ತೊಂದು ಸಂಚು

ಲಖನೌ: ಉತ್ತರ ಪ್ರದೇಶದ ಕಾನ್ಪುರದಲ್ಲಿ ರೈಲು ಹಳಿ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟು ರೈಲನ್ನು ಉರುಳಿಸುವ ಸಂಚು ನಡೆದಿದೆ. ಕಾನ್ಪುರದಿಂದ ಫತೇಪುರ್‌ಗೆ ಬರುತ್ತಿದ್ದ ದೆಹಲಿ-ಹೌರಾ ರೈಲ್ವೆ ಹಳಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಇರಿಸಲಾಗಿತ್ತು. ಕಾನ್ಪುರದ ಪ್ರೇಂಪುರ ರೈಲು ನಿಲ್ದಾಣದ ಬಳಿ ಲೂಪ್ ಲೈನ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ಇರಿಸಲಾಗಿತ್ತು. ಬೆಳಗ್ಗೆ 5.50ಕ್ಕೆ ಈ ಘಟನೆ ನಡೆದಿದೆ. ಲೋಕೊ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ತುರ್ತು ಬ್ರೇಕ್ ಮೂಲಕ ಗೂಡ್ಸ್ ರೈಲನ್ನು ನಿಲ್ಲಿಸಿದ್ದರು.ರೈಲಿನಲ್ಲಿದ್ದ ನೌಕರರು ಆರ್‌ಪಿಎಫ್ ಮತ್ತು ಇತರ

ಹಳಿ ಮೇಲೆ ಗ್ಯಾಸ್‌ ಸಿಲಿಂಡರ್‌ : ರೈಲು ಅವಘಡಕ್ಕೆ ಮತ್ತೊಂದು ಸಂಚು Read More »

ಮೊದಲ ಟೆಸ್ಟ್‌ : ಭಾರತಕ್ಕೆ 280 ರನ್‌ಗಳ ಭರ್ಜರಿ ಗೆಲುವು

ಅಶ್ವಿನ್‌ ಸ್ಪಿನ್‌ ಮೋಡಿಗೆ ಮಕಾಡೆ ಮಲಗಿದ ಬಾಂಗ್ಲಾ ಹುಲಿಗಳು ಚೆನ್ನೈ: ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ ಅವರ ಆಲ್‌ರೌಂಡರ್‌ ಪ್ರದರ್ಶನದಿಂದಾಗ ಬಾಂಗ್ಲಾದೇಶ ವಿರುದ್ಧ ಆಡಿದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ 280 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.ಚೆನ್ನೈಯ ಚಿಪಾಕ್‌ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ದಿನದಾಟದಲ್ಲಿ ಕಠಿಣ ಗುರಿ ಬೆನ್ನಟ್ಟಿದ ಬಾಂಗ್ಲಾ, ಭಾರತದ ಸ್ಪಿನ್‌ ಮಾಂತ್ರಿಕರ ದಾಳಿಗೆ ಮಕಾಡೆ ಮಲಗಿತು. 158 ರನ್‌ಗಳಿಗೆ 4

ಮೊದಲ ಟೆಸ್ಟ್‌ : ಭಾರತಕ್ಕೆ 280 ರನ್‌ಗಳ ಭರ್ಜರಿ ಗೆಲುವು Read More »

ಮಣಿಪುರ: ಸಚಿವರ ಪಿಎ ಕಿಡ್ನಾಪ್‌

ಇಂಫಾಲ: ಮಣಿಪುರದ ಗ್ರಾಹಕ ವ್ಯವಹಾರಗಳ ಸಚಿವ ಎಲ್. ಸುಸಿಂದ್ರೋ ಅವರ ಆಪ್ತ ಸಹಾಯಕನನ್ನು(ಪಿಎ) ಇಂಫಾಲ ಪೂರ್ವ ಜಿಲ್ಲೆಯ ಅವರ ನಿವಾಸದ ಬಳಿಯೇ ದುಷ್ಕರ್ಮಿಗಳ ಗುಂಪೊಂದು ಅಪಹರಿಸಿದೆ.ಎಸ್. ಸೊಮೊರೆಂಡ್ರೊ (43) ಅಪಹರಣವಾಗಿರುವ ಪಿಎ. ಘಟನೆಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ. ದುಷ್ಕರ್ಮಿಗಳ ಗುಂಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.ಗುರುವಾರ ರಾತ್ರಿ ಬಿಷ್ಣುಪುರ ಜಿಲ್ಲೆಯ ಮಾಜಿ ಮುಖ್ಯ ಕಾರ್ಯದರ್ಶಿ ಓಯಿನಮ್ ನಬಕಿಶೋರ್ ಅವರ ನಿವಾಸದ ಮೇಲೂ ಶಸ್ತ್ರಸಜ್ಜಿತ ದಾಳಿಕೋರರು ಕನಿಷ್ಠ 5 ಸುತ್ತು ಗುಂಡು ಹಾರಿಸಿದ್ದ

ಮಣಿಪುರ: ಸಚಿವರ ಪಿಎ ಕಿಡ್ನಾಪ್‌ Read More »

ರಾಹುಲ್‌ ಗಾಂಧಿ ವಿರುದ್ಧ ಮೂರು ಎಫ್‌ಐಆರ್‌ ದಾಖಲು

ಹೊಸದಿಲ್ಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆ ಸಿಖ್ಖರ ಕುರಿತು ನೀಡಿದ ಹೇಳಿಕೆ ಖಂಡಿಸಿ ಛತ್ತೀಸ್‌ಗಢದ ಬಿಜೆಪಿ ನಾಯಕರು ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದಾರೆ.ರಾಯ್ಪುರ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಒಂದು, ಬಿಲಾಸ್‌ಪುರ ಜಿಲ್ಲಾ ಸಿವಿಲ್ ಲೈನ್ಸ್ ಠಾಣೆಯಲ್ಲಿ ಹಾಗೂ ದುರ್ಗ್ ಜಿಲ್ಲೆಯ ಕೋಟ್ಬಾಲಿ ಪೊಲೀಸ್ ಠಾಣೆಯಲ್ಲಿ ಒಂದು ಎಫ್‌ಐಆ‌ರ್ ದಾಖಲಿಸಲಾಗಿದೆ. ಬಿಜೆಪಿ ನಾಯಕರು ನೀಡಿದ ದೂರಿನ ಮೇರೆಗೆ ರಾಹುಲ್ ಗಾಂಧಿ ವಿರುದ್ಧ ಬಿಎನ್‌ಎಸ್‌ ಸೆಕ್ಷನ್ 299 ಮತ್ತು 302ರ

ರಾಹುಲ್‌ ಗಾಂಧಿ ವಿರುದ್ಧ ಮೂರು ಎಫ್‌ಐಆರ್‌ ದಾಖಲು Read More »

error: Content is protected !!
Scroll to Top