ದೇಶ

ಬೀದಿ ನಾಯಿ ದಾಳಿಯಿಂದ ತಪ್ಪಿಸಲು ಹೋಗಿ  ಪಾಳು ಬಾವಿಗೆ ಬಿದ್ದು ಬಾಲಕ ಮೃತ್ಯು

ಕಣ್ಣೂರು: ಬೀದಿ ನಾಯಿ ದಾಳಿಯಿಂದ ತಪ್ಪಿಸಲು ಓಡಿದ ಬಾಲಕ ಆವರಣವಿಲ್ಲದ ಪಾಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಣ್ಣೂರು ತೂವ್ವಕುನ್ನ್ ನಲ್ಲಿ ನಡೆದಿದೆ. ಚೇಲಕ್ಕೋಡ್ ಜುಮ್ಮಾ ಮಸೀದಿ ಬಳಿಯ ಉಸ್ಮಾನ್ ಎಂಬವರ ಪುತ್ರ, ತೂವ್ವಕುನ್ನ್ ಸರಕಾರಿ ಶಾಲೆಯ ನಾಲ್ಕನೆ ತರಗತಿ ವಿದ್ಯಾರ್ಥಿ ಮೊಹಮ್ಮದ್ ಫಸಲ್ (9)) ಮೃತಪಟ್ಟ ಬಾಲಕ. ಮೊಹಮ್ಮದ್ ಫಸಲ್ ಮನೆ ಸಮೀಪ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ‌ ಬೀದಿ ನಾಯಿ ಅವರತ್ತ ಓಡಿ ಬಂದಿದೆ. ಮಕ್ಕಳು ಹೆದರಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಬಳಿಕ ಫಸಲ್ ನಾಪತ್ತೆಯಾಗಿದ್ದ. ಮೊಹಮ್ಮದ್ ಫಸಲ್ […]

ಬೀದಿ ನಾಯಿ ದಾಳಿಯಿಂದ ತಪ್ಪಿಸಲು ಹೋಗಿ  ಪಾಳು ಬಾವಿಗೆ ಬಿದ್ದು ಬಾಲಕ ಮೃತ್ಯು Read More »

ಟಿಬೆಟ್‌ನಲ್ಲಿ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ : ಕನಿಷ್ಠ 36 ಮಂದಿ ಸಾವು

ಉತ್ತರ ಭಾರತ, ನೇಪಾಳ, ಚೀನದಲ್ಲೂ ಕಂಪನದ ಅನುಭವ ಹೊಸದಿಲ್ಲಿ : ಟಿಬೆಟ್‌ನಲ್ಲಿ ಇಂದು ಬೆಳಗ್ಗೆ ಒಂದು ತಾಸಿನೊಳಗೆ ಬೆನ್ನುಬಿನ್ನಿಗೆ 6 ಭೂಕಂಪಗಳು ಸಂಭವಿಸಿ ಅಪಾರ ಹಾನಿ ಉಂಟಾಗಿದೆ. ಈ ಪೈಕಿ ಮೊದಲ ಭೂಕಂಪ 7.1 ತೀವ್ರತೆ ಹೊಂದಿತ್ತು. ನಂತರ ಐದು ಪಶ್ಚಾತ್‌ ಕಂಪನಗಳು ಸಂಭವಿಸಿವೆ. ಭಾರತ, ನೇಪಾಳ, ಭೂತಾನ್‌ ಮತ್ತು ಚೀನದಲ್ಲೂ ಬೆಳಗ್ಗೆ ಕಂಪನದ ಅನುಭವ ಆಗಿದೆ. ಭೂಕಂಪದಿಂದಾಗಿ ಟಿಬೆಟ್‌ನಲ್ಲಿ ಅನೇಕ ಕಟ್ಟಡಗಳು ಉರುಳಿದ್ದು, ಕನಿಷ್ಠ 36 ಜನರು ಸಾವಿಗೀಡಾಗಿದ್ದಾರೆ. ಪರಿಹಾರ ಕಾರ್ಯಾಚರಣೆ ಶುರುವಾಗಿದ್ದು, ಅವಶೇಷಗಳನ್ನು ಎತ್ತಿದಾಗ

ಟಿಬೆಟ್‌ನಲ್ಲಿ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ : ಕನಿಷ್ಠ 36 ಮಂದಿ ಸಾವು Read More »

ಇಂದು ದಿಲ್ಲಿ ಚುನಾವಣಾ ದಿನಾಂಕ ಪ್ರಕಟ

ಕುತೂಹಲ ಕೆರಳಿಸಿದ ರಾಷ್ಟ್ರ ರಾಜಧಾನಿಯ ಮತ ಸಮರ ಹೊಸದಿಲ್ಲಿ: ದೇಶ ಇನ್ನೊಂದು ಚುನಾವಣೆ ಕದನ ಕುತೂಹಲಕ್ಕೆ ಸಜ್ಜಾಗುತ್ತಿದೆ. ಚುನಾವಣಾ ಆಯೋಗ ಇಂದು ಮಧ್ಯಾಹ್ನ 2 ಗಂಟೆಗೆ ದಿಲ್ಲಿ ವಿಧಾನಸಭಾ ಚುನಾವಣಾ ದಿನಾಂಕವನ್ನು ಪ್ರಕಟಿಸಲಿದೆ. ರಾಷ್ಟ್ರ ರಾಜಧಾನಿಯಿರುವ ರಾಜ್ಯದ ಚುನಾವಣೆ ಆದ ಕಾರಣ ದಿಲ್ಲಿ ಸಮರ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಸಾಕಷ್ಟು ಕುತೂಹಲ ಕೆರಳಿಸಿದೆ. 70 ಸದಸ್ಯ ಬಲದ ದಿಲ್ಲಿ ವಿಧಾನಸಭೆಯ ಅವಧಿ ಫೆ.23ರಂದು ಅಂತ್ಯಗೊಳ್ಳಲಿದ್ದು, ಅದಕ್ಕೂ ಮೊದಲೇ ಚುನಾವಣೆ ನಡೆಸಬೇಕಿದೆ. ಈಗಾಗಲೇ ದಿಲ್ಲಿ ವಿಧಾನಸಭಾ ಚುನಾವಣೆಗಾಗಿ ಆಮ್

ಇಂದು ದಿಲ್ಲಿ ಚುನಾವಣಾ ದಿನಾಂಕ ಪ್ರಕಟ Read More »

24 ವರ್ಷಗಳ ಹಿಂದೆಯೇ ಪತ್ತೆಯಾಗಿತ್ತು ಎಚ್‌ಎಂಪಿ ವೈರಸ್‌

ಪ್ರಕರಣಗಳ ಸಂಖ್ಯೆ 5ಕ್ಕೇರಿಕೆ; ಕೇಂದ್ರದಿಂದ ಮಾರ್ಗಸೂಚಿ ಪ್ರಕಟ ಹೊಸದಿಲ್ಲಿ: ಚೀನದಲ್ಲಿ ಕಾಣಿಕೊಂಡು ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಿಗೆ ಹರಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (ಎಚ್‌ಎಂಪಿಸಿ) ಹೊಸ ವೈರಸ್‌ ಅಲ್ಲ. 2001ರಲ್ಲೇ ಇದನ್ನು ಗುರುತಿಸಲಾಗಿತ್ತು ಮತ್ತು ಇದು ಅಪಾಯಕಾರಿಯಲ್ಲ ಎಂದು ಐಸಿಎಂಆರ್‌ ಹೇಳಿದೆ. 2001ರಲ್ಲಿ ಮೊದಲ ಬಾರಿಗೆ ಗುರುತಿಸಲಾದ ಈ ವೈರಸ್‌ ಹಲವು ವರ್ಷಗಳಿಂದ ಜಾಗತಿಕವಾಗಿ ಅಸ್ತಿತ್ವದಲ್ಲಿದೆ. ಹಾಗಾಗಿ ಜನರು ಆತಂಕ ಪಡಬೇಕಿಲ್ಲ. ಹಾಗಂತ ನಿರ್ಲಕ್ಷ್ಯವೂ ಮಾಡುವಂತಿಲ್ಲ ಎಂದು ಐಸಿಎಂಆರ್ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಿದೆ.ಕರ್ನಾಟಕದಲ್ಲಿ ಇಬ್ಬರು ಸೋಂಕಿತರು

24 ವರ್ಷಗಳ ಹಿಂದೆಯೇ ಪತ್ತೆಯಾಗಿತ್ತು ಎಚ್‌ಎಂಪಿ ವೈರಸ್‌ Read More »

ಭಾರತದಲ್ಲೂ ಹರಡುತ್ತಿದೆ ಎಚ್‌ಎಂಪಿವಿ ವೈರಸ್‌ : ದೃಢಪಡಿಸಿದ ಐಸಿಎಂಆರ್‌

ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಸೋಂಕು ಪತ್ತೆ; ಮುನ್ನೆಚ್ಚರಿಕೆ ವಹಿಸಲು ಸೂಚನೆ ಬೆಂಗಳೂರು: ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ವೈರಸ್‌ ಕಾಣಿಸಿಕೊಂಡಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಎರಡೂ ಪ್ರಕರಣಗಳಲ್ಲಿ ಟ್ರಾವೆಲ್‌ ಹಿಸ್ಟರಿ ಇಲ್ಲ, ಹೀಗಾಗಿ ಮಕ್ಕಳಿಗೆ ಈ ವೈರಸ್‌ ಸೋಂಕು ಹೇಗೆ ಹರಡಿತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಚೀನದಲ್ಲಿ ಹ್ಯೂಮನ್ ಮೆಟಾನ್ಯೂಮೋ ವೈರಸ್ (ಎಚ್‌ಎಂಪಿವಿ) ಭಾರಿ ಹಾವಳಿಯಿಟ್ಟಿದ್ದು, ಐದು ವರ್ಷ ಹಿಂದಿನ ಕೊರೊನ ಪರಿಸ್ಥಿತಿ ಮರುಕಳಿಸುವ ಭೀತಿ ತಲೆದೋರಿದೆ. ಈಗ ಭಾರತಕ್ಕೂ ಈ ವೈರಸ್‌ ಕಾಲಿಟ್ಟಿರುವುದು

ಭಾರತದಲ್ಲೂ ಹರಡುತ್ತಿದೆ ಎಚ್‌ಎಂಪಿವಿ ವೈರಸ್‌ : ದೃಢಪಡಿಸಿದ ಐಸಿಎಂಆರ್‌ Read More »

ಮನೆಯೊಳಗೆ ಉಸಿರುಕಟ್ಟಿ ಒಂದೇ ಕುಟುಂಬದ ಐವರು ಸಾವು

ಚಳಿಯಿಂದ ಪಾರಾಗಲು ಬಳಸಿದ ಹೀಟರ್‌ ಮೃತ್ಯುವಾಯಿತು ಶ್ರೀನಗರ: ಮನೆಯಲ್ಲಿಯೇ ಉಸಿರುಗಟ್ಟಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದಾರುಣ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಸಂಭವಿಸಿದೆ. ಚಳಿಯಿಂದ ಪಾರಾಗಲು ಬಳಸಿದ ಎಲ್‌ಪಿಜಿ ರೂಮ್‌ ಹೀಟರ್‌ ಅವರ ಸಾವಿಗೆ ಕಾರಣ ಎನ್ನಲಾಗಿದೆ. ಬಾರಾಮುಲ್ಲಾ ಜಿಲ್ಲೆಯ ಉರಿಯಿಂದ ಬಂದಿದ್ದ ದಂಪತಿ ಹಾಗೂ ಅವರ ಮೂವರು ಮಕ್ಕಳು ಶ್ರೀನಗರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಶ್ರೀನಗರ ಜಿಲ್ಲೆಯ ಪಂದ್ರಾಥಾನ್ ಪ್ರದೇಶದಲ್ಲಿ ದಂಪತಿ ಮತ್ತು ಅವರ 3 ಮಕ್ಕಳು ಸೇರಿದಂತೆ ಒಂದೇ ಕುಟುಂಬದ 5

ಮನೆಯೊಳಗೆ ಉಸಿರುಕಟ್ಟಿ ಒಂದೇ ಕುಟುಂಬದ ಐವರು ಸಾವು Read More »

ಮಾರುತಿಗೆ ಟಾಟಾ ಸಡ್ಡು : ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದ ಪಂಚ್‌

ಮಾರುತಿ ಕಂಪನಿಯ 40 ವರ್ಷಗಳ ಪಾರಮ್ಯ ಬ್ರೇಕ್‌ ಹೊಸದಿಲ್ಲಿ: ಭಾರತದ ಕಾರು ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ ಕಾರುಗಳು ಹೊಸ ಕ್ರಾಂತಿಯನ್ನು ಮಾಡಿವೆ. ಮಾರುತಿ ಸುಝುಕಿ ಕಂಪನಿಯ 40 ವರ್ಷಗಳ ದಾಖಲೆಯನ್ನು ಮುರಿದು ಟಾಟಾ ಕಾರುಗಳು ಮಾರಾಟದಲ್ಲಿ ವಿಕ್ರಮ ಸಾಧಿಸಿವೆ. ಉತ್ಪನ್ನದಲ್ಲಿ ಹೊಸತನ ಇದ್ದಲ್ಲಿ ಮಾರುಕಟ್ಟೆಯಲ್ಲಿ ಯಶಸ್ವಿಯಾಗುತ್ತದೆ ಎನ್ನುವುದನ್ನು ಟಾಟಾ ಕಾರುಗಳು ಸಾಬೀತುಪಡಿಸಿವೆ. ಕಳೆದ 40 ವರ್ಷಗಳಿಂದ ಭಾರತದ ಮಾರುಕಟ್ಟೆಯಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿದ್ದ ಮಾರುತಿ ಸುಝುಕಿ ಕಂಪನಿಯನ್ನು ದೇಶೀಯ ಕಂಪನಿ ಟಾಟಾ ಮೋಟಾರ್ಸ್‌ ಹಿಂದಿಕ್ಕಿದೆ. ಇಲ್ಲಿಯವರೆಗೆ ದೇಶದಲ್ಲಿ

ಮಾರುತಿಗೆ ಟಾಟಾ ಸಡ್ಡು : ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದ ಪಂಚ್‌ Read More »

ಅಯ್ಯಪ್ಪ ವ್ರತಧಾರಿಗಳು ಮಸೀದಿಗೆ ಹೋದರೆ ವ್ರತಭಂಗ : ಚರ್ಚೆಗೀಡಾದ ಶಾಸಕರ ಹೇಳಿಕೆ

ಅಯ್ಯಪ್ಪ ಭಕ್ತರನ್ನು ಮಸೀದಿಗೆ ಬರುವಂತೆ ಮಾಡುವುದು ಷಡ್ಯಂತ್ರ ಎಂದ ಬಿಜೆಪಿ ಎಂಎಲ್‌ಎ ಹೈದರಾಬಾದ್: ಬೆಳ್ತಂಗಡಿಯಲ್ಲಿ ಶುರುವಾದ ಅಯ್ಯಪ್ಪ ವ್ರತಧಾರಿಗಳ ಮಸೀದಿ ಭೇಟಿ ವಿವಾದ ಈಗ ತೆಲಂಗಾಣಕ್ಕೂ ಹರಡಿದೆ. ಬೆಳ್ತಂಗಡಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಉದ್ಯಮಿ ಹಾಗೂ ದಾನಿ ಶಶಿಧರ ಶೆಟ್ಟಿ ಬರೋಡ ಅಯ್ಯಪ್ಪನ ಯಕ್ಷಗಾನ ಪ್ರಸಂಗದಲ್ಲಿ ವಾವರ ಪಾತ್ರದ ಔಚಿತ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಪುರಾಣದಲ್ಲಿ ಇಲ್ಲದ ಮುಸ್ಲಿಮ್‌ ಪಾತ್ರವನ್ನು ಸೇರಿಸಿ ಹಿಂದುಗಳನ್ನು ಮೂರ್ಖರನ್ನಾಗಿ ಮಾಡಲಾಗಿದೆ ಎಂಬ ದಾಟಿಯಲ್ಲಿ ಅವರು ಮಾತನಾಡಿದ್ದು, ಅವರ ಭಾಷಣದ ಈ ವೀಡಿಯೊ

ಅಯ್ಯಪ್ಪ ವ್ರತಧಾರಿಗಳು ಮಸೀದಿಗೆ ಹೋದರೆ ವ್ರತಭಂಗ : ಚರ್ಚೆಗೀಡಾದ ಶಾಸಕರ ಹೇಳಿಕೆ Read More »

ಸಿಡ್ನಿಯಲ್ಲೂ ಸೋತ ಭಾರತ : ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾಕ್ಕೆ 3-1 ಅಂತರದ ಗೆಲುವು

ಹತ್ತು ವರ್ಷದ ಬಳಿಕ ಬಾರ್ಡರ್‌-ಗವಾಸ್ಕರ್‌ ಕಪ್‌ ಮೇಲೆ ಹಕ್ಕು ಸಾಧಿಸಿದ ಕಾಂಗರೂ ಪಡೆ ಸಿಡ್ನಿ : ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಬಾರ್ಡರ್‌-ಗವಾಸ್ಕರ್‌ ಸರಣಿಯ 5ನೇ ತಥಾ ಕೊನೆಯ ಟೆಸ್ಟ್‌ನಲ್ಲೂ ಭಾರತಕ್ಕೆ ಸೋಲಾಗಿದ್ದು, ಹತ್ತು ವರ್ಷಗಳ ಬಳಿ, ಈ ಪ್ರತಿಷ್ಠಿತ ಟೆಸ್ಟ್‌ ಸರಣಿ ಗೆದ್ದುಕೊಂಡು ಆಸ್ಟ್ರೇಲಿಯಾ ಬೀಗಿದೆ. ಈ ಜಯದೊಂದಿಗೆ ಆಸೀಸ್ ಪಡೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ 3-1 ಅಂತರದಿಂದ ಆಸ್ಟ್ರೇಲಿಯಾ ಪಾಲಾಗಿದೆ. ಭಾರತದ ವಿರುದ್ಧ 10 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆಲ್ಲುವಲ್ಲಿ ಕೊನೆಗೂ ಆಸ್ಟ್ರೇಲಿಯಾ

ಸಿಡ್ನಿಯಲ್ಲೂ ಸೋತ ಭಾರತ : ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾಕ್ಕೆ 3-1 ಅಂತರದ ಗೆಲುವು Read More »

ಎಚ್‌ಎಂಪಿವಿ ವೈರಸ್‌ ಸೋಂಕಿಗೆ ಸಾಮಾನ್ಯ ಎಚ್ಚರಿಕೆ ಸಾಕು : ಕೇಂದ್ರ ಮಾರ್ಗಸೂಚಿ

ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಶೀತ ಜ್ವರದ ಚಿಕಿತ್ಸೆ ಪಡೆಯಲು ಸಲಹೆ ಹೊಸದಿಲ್ಲಿ : ಚೀನದಲ್ಲಿ ಕಂಡು ಬಂದಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಹರಡುವ ಬಗ್ಗೆ ಭಯಪಡುವ ಅಗತ್ಯವಿಲ್ಲ. ಎಲ್ಲ ಉಸಿರಾಟದ ಸೋಂಕುಗಳ ವಿರುದ್ಧ ತೆಗೆದುಕೊಳ್ಳುವ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸಾಕು ಎಂದು ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಹೇಳಿದೆ. ನಾವು ದೇಶದಲ್ಲಿ ಉಸಿರಾಟದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಾಖಲಾದ ರೋಗಿಗಳ ಡೇಟಾವನ್ನು ವಿಶ್ಲೇಷಿಸಿದ್ದೇವೆ. ಡಿಸೆಂಬರ್ 2024ರ ಡೇಟಾದಲ್ಲಿ ಯಾವುದೇ ಗಣನೀಯ ಹೆಚ್ಚಳ ಕಂಡುಬಂದಿಲ್ಲ. ನಮ್ಮ ಯಾವುದೇ ಸಂಸ್ಥೆಗಳಿಂದ ಹೆಚ್ಚಿನ

ಎಚ್‌ಎಂಪಿವಿ ವೈರಸ್‌ ಸೋಂಕಿಗೆ ಸಾಮಾನ್ಯ ಎಚ್ಚರಿಕೆ ಸಾಕು : ಕೇಂದ್ರ ಮಾರ್ಗಸೂಚಿ Read More »

error: Content is protected !!
Scroll to Top