ದೇಶ

ರೈಲು ಅಪಘಾತ : ಗಾಯಾಳುಗಳ ಸಂಖ್ಯೆ 19ಕ್ಕೇರಿಕೆ

ಮೈಸೂರಿನಿಂದ ಬಿಹಾರಕ್ಕೆ ತೆರಳುತ್ತಿದ್ದಾಗ ರೈಲು ಗೂಡ್ಸ್‌ ರೈಲಿಗೆ ಡಿಕ್ಕಿ ಬೆಂಗಳೂರು: ಚೆನ್ನೈ ಸಮೀಪ ನಿನ್ನೆ ರಾತ್ರಿ ಸಂಭವಿಸಿದ ರೈಲು ಅಪಘಾತದಲ್ಲಿ ಗಾಯಗೊಂಡವರ ಸಂಖ್ಯೆ 19ಕ್ಕೇರಿದೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಿದೆ. ಮೈಸೂರಿನಿಂದ ಬಿಹಾರದ ದರ್ಬಾಂಗ್‌ಗೆ ತೆರಳುತ್ತಿದ್ದ ಬಾಗಮತಿ ಎಕ್ಸ್‌ಪ್ರೆಸ್‌ ರೈಲು ಚೆನ್ನೈ ಸಮೀಪ ಗೂಸ್‌ ರೈಲಿಗೆ ಡಿಕ್ಕಿ ಹೊಡೆದ ಅಪಘಾತ ಸಂಭವಿಸಿದೆ. ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಆಯುಧ ಪೂಜೆ ದಿನವೇ ಸಂಭವಿಸಿದ ಈ ಅಪಘಾತಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಅದೃಷ್ಟವಶಾತ್‌ ಇಲ್ಲಿಯವರೆಗೆ ಸಾವಿನ ಬಗ್ಗೆ […]

ರೈಲು ಅಪಘಾತ : ಗಾಯಾಳುಗಳ ಸಂಖ್ಯೆ 19ಕ್ಕೇರಿಕೆ Read More »

ಮತ್ತೆ ದಕ್ಷಿಣ ಭಾರತ, ಉತ್ತರ ಭಾರತ ವಾದ ಎತ್ತಿದ ಡಿ.ಕೆ.ಸುರೇಶ್‌

ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿವುದರಿಂದ ಪ್ರತ್ಯೇಕತೆಯ ಕೂಗು ಎಂದು ವಾದ ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್‌ ಮತ್ತೆ ದಕ್ಷಿಣ ಭಾರತ, ಉತ್ತರ ಭಾರತ ಪ್ರತ್ಯೇಕತೆಯ ಕುರಿತು ವಾದ ಮಂಡಿಸಿದ್ದಾರೆ. ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯವಾಗಿದೆ ಎನ್ನಲು ತಮ್ಮ ಹಿಂದಿನ ದಕ್ಷಿಣ ಭಾರತ ಪ್ರತ್ಯೇಕ ವಾದವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿರುವ ಬಗ್ಗೆ ಕಳೆದ ಬಾರಿಯೇ ವಿಷಯ ಪ್ರಸ್ತಾಪ ಮಾಡಿದ್ದೆ. ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನ್ಯಾಯ

ಮತ್ತೆ ದಕ್ಷಿಣ ಭಾರತ, ಉತ್ತರ ಭಾರತ ವಾದ ಎತ್ತಿದ ಡಿ.ಕೆ.ಸುರೇಶ್‌ Read More »

ಮತ್ತೆ ಬರಲಿದೆ ಭಾರತ್‌ ಬ್ರಾಂಡ್‌ ಅಕ್ಕಿ

ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮತ್ತೆ ರಿಯಾಯಿತಿ ದರದ ಅಕ್ಕಿ ಕೊಡಲು ಚಿಂತನೆ ಹೊಸದಿಲ್ಲಿ: ಆಹಾರ ಧಾನ್ಯಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ್‌ ಬ್ರಾಂಡ್‌ ಅಕ್ಕಿ ಮತ್ತು ಬೇಳೆಕಾಳುಗಳನ್ನು ಮತ್ತೆ ಮಾರುಕಟ್ಟೆಗೆ ಬಿಡಲು ಕೇಂದ್ರ ಸರಕಾರ ಮತ್ತೆ ಚಿಂತನೆ ನಡೆಸಿದೆ. ಹಣದುಬ್ಬರದ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಅಕ್ಕಿ, ಬೇಳೆಕಾಳುಗಳು, ಅಡುಗೆ ಎಣ್ಣೆ ಸಹಿತ ಅಗತ್ಯ ವಸ್ತುಗಳು ಬೆಲೆ ಏರಿಕೆಯಾಗುತ್ತಿದೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಇದರಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಿಸಲು ಕೇಂದ್ರ ಮುಂದಾಗಿದೆ. ಕಳೆದ

ಮತ್ತೆ ಬರಲಿದೆ ಭಾರತ್‌ ಬ್ರಾಂಡ್‌ ಅಕ್ಕಿ Read More »

ಮಗಳ ಮೇಲೆ ನಾಲ್ಕು ವರ್ಷ ಅತ್ಯಾಚಾರ ಎಸಗಿದ ಪಾಪಿ ತಂದೆ

ಭೋಪಾಲ: ಪಾಪಿ ತಂದೆಯೊಬ್ಬ ತನ್ನ ಮಗಳ ಮೇಲೆಯೇ ನಿರಂತರವಾಗಿ ಅತ್ಯಾಚಾರ ಎಸಗಿರುವ ನೀಚ ಘಟನೆ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದಿದೆ.ಆರೋಪಿಯ ಪತ್ನಿ ಮತ್ತು 21 ವರ್ಷದ ಮಗಳು ಇಂದು ಈ ಸಂಬಂಧ ಲವ್ಕುಶ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 40 ವರ್ಷ ಪ್ರಾಯದ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಅತ್ಯಾಚಾರ, ಆರೋಪಿ ತನ್ನ ಮಗಳನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನಿಂದಲೂ ಅತ್ಯಾಚಾರವೆಸಗುತ್ತಿದ್ದರಿಂದ ಲೈಂಗಿಕ

ಮಗಳ ಮೇಲೆ ನಾಲ್ಕು ವರ್ಷ ಅತ್ಯಾಚಾರ ಎಸಗಿದ ಪಾಪಿ ತಂದೆ Read More »

ದಿಲ್ಲಿ : ಕುರುಕು ತಿಂಡಿಗಳ ಪೊಟ್ಟಣಗಳಲ್ಲಿ ಅಡಗಿಸಿಟ್ಟಿದ್ದ 2 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

ಒಂದೇ ವಾರದಲ್ಲಿ 7,620 ಕೋ.ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡ ಪೊಲೀಸರು ಹೊಸದಿಲ್ಲಿ: ದಿಲ್ಲಿ ಪೊಲೀಸರು ಮತ್ತೊಂದು ದೊಡ್ಡ ಡ್ರಗ್ಸ್‌ ಬೇಟೆಯಾಡಿದ್ದಾರೆ. ಕುರುಕು ತಿಂಡಿಗಳ ಪೊಟ್ಟಣಗಲ್ಲಿ ತುಂಬಿಸಿಟ್ಟಿದ್ದ 2,000 ಕೋ. ರೂ. ಮೌಲ್ಯದ 200 ಕೆಜಿ ಕೊಕೈನ್‌ ವಶವಾಗಿದೆ. ಅ.2ರಂದು ದಿಲ್ಲಿಯಲ್ಲಿ 5,620 ಕೋ. ರೂ. ಮೌಲ್ಯದ 600 ಕೆಜಿ ಡ್ರಗ್ಸ್‌ ವಶವಾಗಿತ್ತು. ಅನಂತರ ಸಿಕ್ಕಿದ ಅತಿದೊಡ್ಡ ಪ್ರಮಾಣದ ಮಾದಕ ವಸ್ತುವಿದು.ದಿಲ್ಲಿಯ ರಮೇಶ್‌ ನಗರದ ಗೋದಾಮೊಂದರಲ್ಲಿ ಕುರುಕು ತಿಂಡಿಗಳ ಪೊಟ್ಟಣಗಳಲ್ಲಿ ತುಂಬಿಸಿ ಕೊಕೈನ್‌ ಅಡಗಿಸಿಡಲಾಗಿತ್ತು. ಮಾದಕವಸ್ತು ಸಾಗಿಸಲು

ದಿಲ್ಲಿ : ಕುರುಕು ತಿಂಡಿಗಳ ಪೊಟ್ಟಣಗಳಲ್ಲಿ ಅಡಗಿಸಿಟ್ಟಿದ್ದ 2 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ Read More »

ಸಂಪಾದಕೀಯ – ಭಾರತ ಮಾತೆಯ ಅನರ್ಘ್ಯ ರತ್ನ ರತನ್‌ ಟಾಟಾ

ಒಂದೇ ಒಂದು ಕಳಂಕ, ಕಪ್ಪುಚುಕ್ಕೆ ಇಲ್ಲದೆ ಎಂಟು ದಶಕ ಬದುಕಿದ್ದು ಅದ್ಭುತ! ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ರತನ್ ಟಾಟಾ ಇಂದು ನಮ್ಮನ್ನಗಲಿ ಹೋಗಿರುವುದರಿಂದ ದಸರಾ ಸಂಭ್ರಮದ ನಡುವೆ ದೇಶದಲ್ಲಿ ಸೂತಕದ ಛಾಯೆ ಹರಡಿದಂತಾಗಿದೆ. ರತನ್‌ ಟಾಟಾ ಭಾರತದ ಕೈಗಾರಿಕೋದ್ಯಮ ಕ್ಷೇತ್ರದ ಯುಗ ಪುರುಷ ಎಂದರೆ ಅತಿಶಯೋಕ್ತಿ ಆಗಲಾರದು. ಶತಮಾನಗಳ ಕಾಲ ವಿದೇಶಿಗರ ಆಳ್ವಿಕೆಗೆ ಒಳಗಾಗಿ ದೇಶ ತನ್ನ ಅಂತಃಸ್ಸತ್ವವನ್ನೇ ಕಳೆದುಕೊಂಡು ನಿಸ್ತೇಜವಾಗಿದ್ದ ಕಾಲದಲ್ಲಿ ಹುಟ್ಟಿಕೊಂಡದ್ದು ಟಾಟಾ ಕಂಪನಿ. ಆ ಟಾಟಾ ಪರಿವಾರದ ಕುಡಿಯಾಗಿರುವ ರತನ್‌

ಸಂಪಾದಕೀಯ – ಭಾರತ ಮಾತೆಯ ಅನರ್ಘ್ಯ ರತ್ನ ರತನ್‌ ಟಾಟಾ Read More »

ಅವಮಾನಿಸಿದ ಆ ವಿದೇಶ ಕಾರು ಕಂಪನಿಯನ್ನೇ ಖರೀದಿಸಿದ್ದರು ರತನ್‌ ಟಾಟಾ!

ಭಾರತದ ಉದ್ಯಮ ಕ್ಷೇತ್ರದ ಯುಗ ಪ್ರವರ್ತಕನ ಬದುಕಿನಲ್ಲಿದೆ ಸಾವಿರಾರು ಸ್ಫೂರ್ತಿದಾಯಕ ಕಥೆ ಹೊಸದಿಲ್ಲಿ : ನಿನ್ನೆ ರಾತ್ರಿ ನಮ್ಮನ್ನಗಲಿರುವ ರತನ್‌ ಟಾಟಾ ಅವರಿಗಾಗಿ ದೇಶ ಕಂಬನಿ ಮಿಡಿಯುತ್ತಿದೆ. ಜನರು ತಮ್ಮ ಕುಟುಂಬದ ಹಿರಿಯನನ್ನು ಕಳೆದುಕೊಂಡಂಥ ದುಃಖದ ಭಾವವನ್ನು ಅನುಭವಿಸುತ್ತಿದ್ದಾರೆ. ಟಾಟಾ ಕಂಪನಿ ಜನರ ಬದುಕಿನಲ್ಲಿ ಬೀರಿದ ಪರಿಣಾಮವಿದು. ಇಂದು ಇಡೀ ದೇಶದಲ್ಲಿ ಟಾಟಾ ಕಂಪನಿಯ ಯಾವುದಾದರೊಂದು ಉತ್ಪನ್ನವನ್ನು ಬಳಸದೆ ಇರುವ ಜನರನ್ನು ಹುಡುಕಿದರೂ ಸಿಗುವುದಿಲ್ಲ. ಉಪ್ಪಿನಿಂದ ಹಿಡಿದು ವಿಮಾನದ ತನಕ ಟಾಟಾ ಸಮೂಹ ಕೈಯಾಡಿಸದ ಕ್ಷೇತ್ರವಿಲ್ಲ. ಇದರ

ಅವಮಾನಿಸಿದ ಆ ವಿದೇಶ ಕಾರು ಕಂಪನಿಯನ್ನೇ ಖರೀದಿಸಿದ್ದರು ರತನ್‌ ಟಾಟಾ! Read More »

ಉದ್ಯಮ ಕ್ಷೇತ್ರದ ದಂತಕಥೆ ರತನ್‌ ಟಾಟಾ ವಿಧಿವಶ

ರಾಷ್ಟ್ರಪತಿ, ಪ್ರಧಾನಿಯಿಂದ ಸಂತಾಪ ಮುಂಬಯಿ : ದೇಶದ ಅಗ್ರಗಣ್ಯ ಉದ್ಯಮಿ, ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) ನಿನ್ನೆ ರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಸೋಮವಾರ ಮುಂಬಯಿಯ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿತ್ತು. ಬುಧವಾರ ರಾತ್ರಿ ರತನ್ ಟಾಟಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ನಾವಲ್ ಹರ್ಮುಸ್ ಜಿ ಟಾಟಾ ಮತ್ತು ಸೂನಿ ದಂಪತಿಯ ಹಿರಿಯ ಮಗನಾಗಿ ರತನ್ ಟಾಟಾ ಬೊಂಬಾಯಿನಲ್ಲಿ 1937ರಲ್ಲಿ ಜನಿಸಿದರು. ರತನ್ ಟಾಟಾ ಅವರಿಗೆ ಭಾರತ ಸರ್ಕಾರ 2008ರಲ್ಲಿ ದೇಶದ ಎರಡನೇ

ಉದ್ಯಮ ಕ್ಷೇತ್ರದ ದಂತಕಥೆ ರತನ್‌ ಟಾಟಾ ವಿಧಿವಶ Read More »

ಉಗ್ರರು ಅಪಹರಿಸಿದ್ದ ಯೋಧನ ಮೃತದೇಹ ಪತ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಬುಧವಾರ ಉಗ್ರರು ಅಪಹರಿಸಿದ್ದ ಯೋಧನ ಮೃತದೇಹವನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿವೆ. ಟೆರಿಟೋರಿಯಲ್ ಆರ್ಮಿಯ ಹಿಲಾಲ್ ಅಹ್ಮದ್ ಭಟ್ ಅವರ ಮೃತದೇಹವನ್ನು ಅನಂತನಾಗ್‌ನ ಉತ್ರಾಸೂ ಪ್ರದೇಶದ ಸಾಂಗ್ಲಾನ್ ಅರಣ್ಯ ಪ್ರದೇಶದಲ್ಲಿ ಸಿಕ್ಕಿದೆ ಎಂದು ಸೇನೆ ತಿಳಿಸಿದೆ. ದಕ್ಷಿಣ ಕಾಶ್ಮೀರದ ಕೋಕರ್‌ನಾಗ್ ಅರಣ್ಯದಲ್ಲಿ ರಾತ್ರೋರಾತ್ರಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯ ಸಂದರ್ಭದಲ್ಲಿ ಇಬ್ಬರು ಯೋಧರನ್ನು ಉಗ್ರರು ಅಪಹರಿಸಿದ್ದರು. ಅವರಲ್ಲಿ ಓರ್ವ ಎರಡು ಗುಂಡೇಟು ತಿಂದರೂ ಉಗ್ರರ ಕೈಯಿಂದ ತಪ್ಪಿಸಿಕೊಂಡು ಬಂದಿದ್ದರು.

ಉಗ್ರರು ಅಪಹರಿಸಿದ್ದ ಯೋಧನ ಮೃತದೇಹ ಪತ್ತೆ Read More »

ದೇಶವನ್ನು ದುರ್ಬಲಗೊಳಿಸುವ ಅಂತಾರಾಷ್ಟ್ರೀಯ ಕೂಟದೊಂದಿಗೆ ಕಾಂಗ್ರೆಸ್‌ ಶಾಮೀಲು : ಮೋದಿ

ಅಧಿಕಾರವಿಲ್ಲದೆ ಚಡಪಡಿಸುತ್ತಿರುವ ಕಾಂಗ್ರೆಸ್‌ನಿಂದ ದಿನಕ್ಕೊಂದು ಷಡ್ಯಂತ್ರ ಎಂದು ಆರೋಪ ಹೊಸದಿಲ್ಲಿ: ದೇಶದ ಆರ್ಥಿಕತೆ, ಸಾಮಾಜಿಕ ಚೌಕಟ್ಟು ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ನಡೆಯುತ್ತಿರುವ ಅಂತಾರಾಷ್ಟ್ರೀಯ ಷಡ್ಯಂತ್ರದಲ್ಲಿ ಕಾಂಗ್ರೆಸ್‌ ಶಾಮೀಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಹರ್ಯಾಣ ಚುನಾವಣೆಯಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ನೀಡಿದ ಮತದಾರರಿಗೆ ಧನ್ಯವಾದ ಹೇಳಿದ ಮೋದಿ, ಕಾಂಗ್ರೆಸ್‌ ಮತ್ತು ಅದರ ಮಿತ್ರರು ದೇಶದ ಸಾಮಾಜಿಕ ಚೌಕಟ್ಟನ್ನು ನಾಶ ಮಾಡಲು ಬಯಸಿದ್ದಾರೆ. ಇದಕ್ಕಾಗಿ ಅವರು ಅಂತಾರಾಷ್ಟ್ರೀಯ ಕೂಟದೊಂದಿಗೆ ಕೈ ಮಿಲಾಯಿಸಿದ್ದಾರೆ. ದೇಶವನ್ನು ದುರ್ಬಲಗೊಳಿಸುವ ಆಟದಲ್ಲಿ ಕಾಂಗ್ರೆಸ್‌

ದೇಶವನ್ನು ದುರ್ಬಲಗೊಳಿಸುವ ಅಂತಾರಾಷ್ಟ್ರೀಯ ಕೂಟದೊಂದಿಗೆ ಕಾಂಗ್ರೆಸ್‌ ಶಾಮೀಲು : ಮೋದಿ Read More »

error: Content is protected !!
Scroll to Top