ದೇಶ

ಅನ್ನಭಾಗ್ಯ ಯೋಜನೆ ಉಚಿತ 5 ಕೆ ಜಿ ಅಕ್ಕಿ ಬದಲಿಗೆ ಹಣ – ಸಂಪುಟ ಸಭೆಯಲ್ಲಿ ತೀರ್ಮಾನ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೆ ನೀಡಬೇಕಿರುವ ಅಕ್ಕಿಯ ಬದಲಿಗೆ ಹಣವನ್ನು ನೀಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಜೂನ್ 28ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಜುಲೈ 1 ರಿಂದಲೇ ಫಲಾನುಭವಿಗಳ (ಬಿಪಿಎಲ್ ಕಾರ್ಡ್ ದಾರರಿಗೆ )ಬ್ಯಾಂಕ್ ಖಾತೆಗಳಿಗೆ ಹಣ ಜಮಾವಣೆ ಮಾಡಲು ನಿರ್ಧರಿಸಲಾಗಿದೆ.

ಅನ್ನಭಾಗ್ಯ ಯೋಜನೆ ಉಚಿತ 5 ಕೆ ಜಿ ಅಕ್ಕಿ ಬದಲಿಗೆ ಹಣ – ಸಂಪುಟ ಸಭೆಯಲ್ಲಿ ತೀರ್ಮಾನ Read More »

ಪ್ರಧಾನಮಂತ್ರಿ ನರೇಂದ್ರ ಮೋದಿಗೆ 15 ಎಕ್ರೆ ಜಮೀನು ನೀಡಲು ಮುಂದೆ ಬಂದ 100 ರ ವೃದ್ಧೆ | ಸಾಮಾಜಿಕ ಜಾಲತಾಣದಲ್ಲಿ ವೈರಲ್

ಹೊಸದಿಲ್ಲಿ : ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಡೀ ವಿಶ್ವದ ಮನ್ನಣೆ ಪಡೆದ ಮಹಾನಾಯಕ ಆಗಿದ್ದಾರೆ. ಈ ನಾಯಕನಿಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಇದೀಗ ಇಲ್ಲೊಬ್ಬಳು ವೃದ್ಧೆ ಮಾತ್ರ ಮೋದಿ ಕುರಿತಾಗಿ ಅಪಾರ ಪ್ರಮಾಣದ ಅಭಿಮಾನ ಮತ್ತು ಗೌರವ ಇಟ್ಟುಕೊಂಡಿದ್ದು, ಮೋದಿಗಾಗಿ ತನ್ನೆಲ್ಲ ಜಮೀನು ನೀಡಲು ಮುಂದಾಗಿದ್ದಾರೆ. ಮಧ್ಯಪ್ರದೇಶದ ರಾಜ್‌ಗಢ್ ಜಿಲ್ಲೆಯ ಹರಿಪುರ ಗ್ರಾಮದಲ್ಲಿ ವಾಸವಾಗಿರುವ 100 ವರ್ಷದ ಮಂಗಿಬಾಯಿ ತನ್ವಾರ್ ಜಮೀನು ನೀಡಲು ಮುಂದೆ ಬಂದಿದ್ದು,   ಹಾಗಂತ ಆಕೆಗೆ ಮಕ್ಕಳಿಲ್ಲ ಎಂದು ಭಾವಿಸಬೇಡಿ.

ಪ್ರಧಾನಮಂತ್ರಿ ನರೇಂದ್ರ ಮೋದಿಗೆ 15 ಎಕ್ರೆ ಜಮೀನು ನೀಡಲು ಮುಂದೆ ಬಂದ 100 ರ ವೃದ್ಧೆ | ಸಾಮಾಜಿಕ ಜಾಲತಾಣದಲ್ಲಿ ವೈರಲ್ Read More »

ಭದ್ರತಾ ಪಡೆ –ಉಗ್ರರ ಗುಂಡಿನ ಕಾಳಗ | ಓರ್ವ ಉಗ್ರನ ಹತ್ಯೆ |ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ

ಕಾಶ್ಮೀರ: ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಓರ್ವ ಉಗ್ರನನ್ನು ಗುಂಡಿಕ್ಕಿ ಸಾಯಿಸಲಾದ ಘಟನೆ ಜಮ್ಮು ಕಾಶ್ಮೀರದ ಕುಲ್ಗಾಂವ್ ನಲ್ಲಿ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತಷ್ಟು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್ ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಒಳ ನುಸುಳುಕೋರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದರು.

ಭದ್ರತಾ ಪಡೆ –ಉಗ್ರರ ಗುಂಡಿನ ಕಾಳಗ | ಓರ್ವ ಉಗ್ರನ ಹತ್ಯೆ |ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ Read More »

ವಿಮಾನದ ಸೀಟಿನ ಮೇಲೆ ಮಲಮೂತ್ರ ಮಾಡಿದ ಪ್ರಯಾಣಿಕ | ಆರೋಪಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಹೊಸದಿಲ್ಲಿ: ಪ್ರಯಾಣಿಕನೋರ್ವ ವಿಮಾನದ ಸೀಟಿನ ಮೇಲೆ ಮಲಮೂತ್ರ ವಿಸರ್ಜಿಸಿದ ಅಸಹ್ಯಕರ ಘಟನೆ ಇಂಡಿಯಾ ಏರ್‍ ಲೈನ್ ವಿಮಾನದಲ್ಲಿ ನಡೆದಿದೆ. ಮುಂಬೈ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮಲಮೂತ್ರ ವಿಸರ್ಜಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈಯಿಂದ ದಿಲ್ಲಿಗೆ ತೆರಳುತ್ತಿದ್ದ ಏರ್ ಇಂಡಿಯಾದ ವಿಮಾನದ ಎಐಸಿ 866 ಫ್ಲೈಟ್ ನ ಸೀಟ್ ನಂ.17ಎಫ್ ನಲ್ಲಿ ಕುಳಿತಿದ್ದ ಪ್ರಯಾಣಿಕ ರಾಮ್ ಸಿಂಗ್ ಎಂಬಾತ ವಿಮಾನದೊಳಗೆ ಮಲಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ದುರ್ವರ್ತನೆಯನ್ನು ವಿಮಾನದ ಕ್ಯಾಬಿನ್ ಸಿಬ್ಬಂದಿ ಗಮಸನಿಸಿ ಆತನಿಗೆ ಮೌಖಿಕ ಎಚ್ಚರಿಕೆ ನೀಡಿದ

ವಿಮಾನದ ಸೀಟಿನ ಮೇಲೆ ಮಲಮೂತ್ರ ಮಾಡಿದ ಪ್ರಯಾಣಿಕ | ಆರೋಪಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು Read More »

ಕೊಳಚೆ ಗುಂಡಿಗೆ ಬೀಳುವುದನ್ನು ತಪ್ಪಿಸಲು ಹೋದ ಮಹಿಳೆ ವಿದ್ಯುತ್ ಕಂಬ ಹಿಡಿದು ವಿದ್ಯುತ್ ಶಾಕ್‍ಗೆ ಬಲಿ

ಹೊಸದಿಲ್ಲಿ: ಪುತ್ತೂರು: ಕೊಳಚೆ ಗುಂಡಿಗೆ ಬೀಳುವುದನ್ನು ತಪ್ಪಿಸಲು ವಿದ್ಯುತ್ ಕಂಬವನ್ನು ಹಿಡಿದ ಮಹಿಳೆಯೊಬ್ಬರು ವಿದ್ಯುತ್ ಆಘಾತದಿಂದ ಮೃತಪಟ್ಟ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಪೂರ್ವ ದೆಹಲಿಯ ಪ್ರೀತ್ ವಿಹಾರ್ ನಿವಾಸಿ ಸಾಕ್ಷಿ ಅಹುಜಾ ಮೃತಪಟ್ಟವರು. ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳೊಂದಿಗೆ ಬೆಳಿಗ್ಗೆ 5.30 ರ ಸುಮಾರಿ ರೈಲು ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಸಾಕ್ಷಿ ಅಹುಜಾ ಕೊಳಚೆ ಗುಂಡಿಗೆ ಬೀಳುವುದನ್ನು ತಪ್ಪಿಸಲು ವಿದ್ಯುತ್ ಕಂಬವನ್ನು ಹಿಡಿದಿದ್ದಾರೆ. ಈ ಸಂದರ್ಭ ಭಾರೀ ಪ್ರಮಾಣದ ವಿದ್ಯುತ್‍ ಪ್ರವಹಿಸಿ

ಕೊಳಚೆ ಗುಂಡಿಗೆ ಬೀಳುವುದನ್ನು ತಪ್ಪಿಸಲು ಹೋದ ಮಹಿಳೆ ವಿದ್ಯುತ್ ಕಂಬ ಹಿಡಿದು ವಿದ್ಯುತ್ ಶಾಕ್‍ಗೆ ಬಲಿ Read More »

ಮಂಗಳೂರು-ದುಬೈ ವಿಮಾನ ಯಾನ ದರ ಏರಿಕೆ | ರಜೆಯ ಸಮಯ ಬಳಕೆ ಮಾಡಿಕೊಂಡ ಇಂಡಿಯೋ ಮತ್ತು ಏರ್​ ಇಂಡಿಯಾ ಎಕ್ಸ್​ಪ್ರೆಸ್

ಮಂಗಳೂರು: ಮಂಗಳೂರು-ದುಬೈ ವಿಮಾನಯಾನ ದರ ಏರಿಕೆಯಾಗಿದ್ದು, ಈ ಮೂಲಕ ಕರಾವಳಿ ಭಾಗದಿಂದ ಉದ್ಯೋಗಕ್ಕೆಂದು ದುಬೈನಲ್ಲಿ ತೆರಳುವವರಿಗೆ ಶಾಕ್​ ಎದುರಾಗಿದೆ. ಬಕ್ರೀದ್​ ರಜೆಯಲ್ಲಿ ಊರಿಗೆ ಮರಳಬೇಕು ಎಂದುಕೊಂಡಿರುವ ಮಧ್ಯಮವರ್ಗದ ಭಾರತೀಯರು ವಿಮಾನಯಾನದ ದರ ಕೇಳಿ ಸುಸ್ತಾಗಿದ್ದಾರೆ. ದುಬೈನಲ್ಲಿ ಸೆಖೆ ವಿಪರೀತಗೊಳ್ಳುವ ಹಿನ್ನೆಲೆಯಲ್ಲಿ ಹಲವೆಡೆ ಬೇಸಿಗೆ ರಜೆ ಆರಂಭಗೊಂಡಿದೆ, ಅಲ್ಲದೇ ಬಕ್ರೀದ್​ ಹಬ್ಬ ಬೇರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ಅನೇಕರು ವೆಕೇಷನ್​ನಲ್ಲಿ ಊರಿಗೆ ಮರಳುವ ಸಿದ್ಧತೆಯಲ್ಲಿದ್ದಾರೆ. ಆದರೆ ಏಕಾಏಕಿ ಏರಿಕೆಗೊಂಡಿರುವ ವಿಮಾನಯಾನ ದರದಿಂದ ಊರಿಗೆ ಬರುವ ನಿರ್ಧಾರದಿಂದ ಹಿಂದೆ ಸರಿಯುವಂತಾಗಿದೆ.ದುಬೈ

ಮಂಗಳೂರು-ದುಬೈ ವಿಮಾನ ಯಾನ ದರ ಏರಿಕೆ | ರಜೆಯ ಸಮಯ ಬಳಕೆ ಮಾಡಿಕೊಂಡ ಇಂಡಿಯೋ ಮತ್ತು ಏರ್​ ಇಂಡಿಯಾ ಎಕ್ಸ್​ಪ್ರೆಸ್ Read More »

ಸಾವಿರಕ್ಕೂ ಅಧಿಕ ಮಹಿಳೆಯರ ಗುಂಪಿನಿಂದ ಸೇನಾ ನೆಲೆಯ ಮೇಲೆ ದಾಳಿ | ಸೆರೆಯಲ್ಲಿದ್ದ 12 ಬಂಡುಕೋರರ ಬಿಡುಗಡೆ

ಇಂಫಾಲ : ಮಹಿಳೆಯರ ಗುಂಪೊಂದು ಸೇನಾ ನೆಲೆಗೆ ಮುತ್ತಿಗೆ ಹಾಕಿ ಸೈನಿಕರ ಸೆರೆ ಹಿಡಿದಿದ್ದ 12 ಬಂಡುಕೋರರನ್ನು ಬಿಡಿಸಿಕೊಂಡು ಹೋದ ಘಟನೆ ಮಣಿಪುರದಲ್ಲಿ ನಡೆದಿದೆ. ಪೂರ್ವ ಇಂಫಾಲದ ಇಥಾಮ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಮಾರು 1200 ಕ್ಕೂ ಮಿಕ್ಕಿ ಮಹಿಳೆಯರ ಗುಂಪು ಸೇನಾ ಪಡೆಯನ್ನು ಸುತ್ತುವರಿದಿದ್ದು, ಬಂಡುಕೋರರನ್ನು ಬಿಡುವಂತೆ ಒತ್ತಾಯಿಸಿದೆ. ಹೆಚ್ಚಿನ ಅನಾಹುತ ತಪ್ಪಿಸಲು ಸೇವೆ ಅವರನ್ನು ಬಿಟ್ಟು ಕಳುಹಿಸಿದೆ ಎಂದು ಸೇನೆ ಟ್ವಿಟರ್ ಮೂಲಕ ತಿಳಿಸಿದೆ. ಮೆಟಾಯಿ ಬಂಡುಕೋರರ ಗುಂಪಿಗೆ ಸೇರಿದ 12

ಸಾವಿರಕ್ಕೂ ಅಧಿಕ ಮಹಿಳೆಯರ ಗುಂಪಿನಿಂದ ಸೇನಾ ನೆಲೆಯ ಮೇಲೆ ದಾಳಿ | ಸೆರೆಯಲ್ಲಿದ್ದ 12 ಬಂಡುಕೋರರ ಬಿಡುಗಡೆ Read More »

ಎರಡು ಬಸ್‍ ಗಳು ಮುಖಾಮುಖಿ ಡಿಕ್ಕಿ : ಏಳು ಸಾವು, 40 ಮಂದಿಗೆ ಗಾಯ

ತಮಿಳುನಾಡು : ತಮಿಳುನಾಡಿನ ಕಡಲೂರು ಜಿಲ್ಲೆಯ ಮೇಲ್ಪಟ್ಟಂಪಕ್ಕಂನಲ್ಲಿ ಸೋಮವಾರ ಬೆಳಗ್ಗೆ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಏಳು ಮಂದಿ ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಸ್‌ಗಳ ಡಿಕ್ಕಿಯ ಹಿಂದಿನ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಅಪಘಾತದಲ್ಲಿ ಭಾಗಿಯಾದವರ ಜೊತೆ ಮಾತನಾಡಿದ ನಂತರವಷ್ಟೇ ತಿಳಿಯಲಿದೆ ಎಂದು ಕಡಲೂರು ಪೊಲೀಸ್

ಎರಡು ಬಸ್‍ ಗಳು ಮುಖಾಮುಖಿ ಡಿಕ್ಕಿ : ಏಳು ಸಾವು, 40 ಮಂದಿಗೆ ಗಾಯ Read More »

ಅಖಿಲ ಭಾರತ ಶಾಸಕಾಂಗ ಸಮ್ಮೇಳನದಲ್ಲಿ ಭಾಗಿಯಾದ ಪುತ್ತೂರು ಶಾಸಕ ಅಶೋಕ್ ರೈ

ಪುತ್ತೂರು: ಮುಂಬಯಿಯ ಜಿಯೋ ಕನ್ವೆನ್ಸ್ಯನ್ ಸೆಂಟರ್ ನಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಅಖಿಲ ಭಾರತ ಶಾಸಕಾಂಗ ಸಮ್ಮೇಳನಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈ ಭಾಗವಹಿಸಿದರು. ಶಾಸಕರಿಗೆ ತರಬೇತಿ ಸೇರಿದಂತೆ ಶಾಸಕಾಂಗ ವಿಚಾರದಲ್ಲಿ ಮಾಹಿತಿ ಕಾರ್ಯಾಗಾರವೂ ಇಲ್ಲಿ ನಡೆಯುತ್ತದೆ. ದೇಶಾಧ್ಯಂತ ಸುಮಾರು‌2000 ಮಂದಿ ವಿವಿಧ ರಾಜ್ಯಗಳ ಶಾಸಕರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ನಾಳೆ ಶನಿವಾರ ಸಮಾವೇಶ ಕೊನೆಗೊಳ್ಳಲಿದೆ.

ಅಖಿಲ ಭಾರತ ಶಾಸಕಾಂಗ ಸಮ್ಮೇಳನದಲ್ಲಿ ಭಾಗಿಯಾದ ಪುತ್ತೂರು ಶಾಸಕ ಅಶೋಕ್ ರೈ Read More »

ಬಾಲಕಿಯರಿಗೆ ಕಿರುಕುಳ | ಮದ್ರಸಾ ಶಿಕ್ಷಕನ ಬಂಧನ

ಕಾಸರಗೋಡು: ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪಿ ಉಪ್ಪಿನಂಗಡಿ ಮೂಲದ ಮದ್ರಸಾ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಇಳಂತಿಲ ಹೌಸ್ ನಿವಾಸಿ ಅಬ್ದುಲ್ ಹಮೀದ್ (55) ಬಂಧಿತ ಆರೋಪಿ. ಕಾಸರಗೋಡಿನಲ್ಲಿ ಮದ್ರಸಾ ಶಿಕ್ಷಕನಾಗಿದ್ದ ಆರೋಪಿ 7-8 ನೇ ತರಗತಿ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿತ್ತು. ಆದೂರು ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಾಲಕಿಯರಿಗೆ ಕಿರುಕುಳ | ಮದ್ರಸಾ ಶಿಕ್ಷಕನ ಬಂಧನ Read More »

error: Content is protected !!
Scroll to Top