ದೇಶ

ಧಗಧಗಿಸುತ್ತಿದ್ದ ಬೆಂಕಿಯ ನಡುವಿನಿಂದ ಮಗುವನ್ನು ರಕ್ಷಿಸಿದ ʼದೈವʼ!

ಕಾಸರಗೋಡು: ನೀಲೇಶ್ವರದ ಅಂಜೂತಾಂಬಲಂ ವೀರರ್ಕಾವು ದೈವಸ್ಥಾನದಲ್ಲಿ ನಿನ್ನೆ ತಡರಾತ್ರಿ ವಾರ್ಷಿಕ ಕಳಿಯಾಟ್ಟಂ ಸಂದರ್ಭದಲ್ಲಿ ಸಂಭವಿಸಿದ ಭೀಕರ ಪಟಾಕಿ ದುರಂತದಲ್ಲಿ ಜನರನ್ನು ರಕ್ಷಿಸಲು ತಮ್ಮ ಪ್ರಾಣದ ಹಂಗು ತೊರೆದು ಶ್ರಮಿಸಿದವರ ಕಥೆಗಳು ಬೆಳಕಿಗೆ ಬರುತ್ತಿವೆ. ಎಲ್ಲಕ್ಕೂ ಮಿಗಿಲಾಗಿ ದೈವ ನರ್ತಕನೇ ತನ್ನ ಪ್ರಾಣಕ್ಕೆ ಅಪಾಯವಿದ್ದರೂ ಲೆಕ್ಕಿಸದೆ ಬೆಂಕಿಯ ನಡುವೆ ಸಿಕ್ಕಿಬಿದ್ದಿದ್ದ ಮಗುವೊಂದನ್ನು ರಕ್ಷಿಸಿದ್ದು ಸುದ್ದಿಯಾಗುತ್ತಿದೆ.ರಾತ್ರಿ 12.30 ವೇಳೆಗೆ ದೈವಸ್ಥಾನದಲ್ಲಿ ಭೀಕರ ದುರಂತ ಸಂಭವಿಸಿದೆ. ಈ ವೇಳೆ ತೆಯ್ಯಂ (ದೈವ) ಆವೇಶವಾಗಿ ನರ್ತನ ನಡೆಯುತ್ತಿತ್ತು. ಕಿವಿಗಡಚಿಕ್ಕುವ ಶಬ್ದದೊಂದಿಗೆ ದೈವಸ್ಥಾನದ ಪಕ್ಕವೇ […]

ಧಗಧಗಿಸುತ್ತಿದ್ದ ಬೆಂಕಿಯ ನಡುವಿನಿಂದ ಮಗುವನ್ನು ರಕ್ಷಿಸಿದ ʼದೈವʼ! Read More »

ಮುಂದುವರಿದ ಉಗ್ರ ಬೇಟೆ : ಇನ್ನೋರ್ವ ಭಯೋತ್ಪಾದಕ ಹತ್ಯೆ | ಸೇನೆಯ ಶ್ವಾನ ಫ್ಯಾಂಟಮ್‌ ಗುಂಡು ತಗಲಿ ಸಾವು

ಜಮ್ಮು: ಜಮ್ಮು ಪ್ರದೇಶದ ಅಖ್ನೂರ್ ಸೆಕ್ಟರ್‌ನಲ್ಲಿ ಇಂದು ಬೆಳಗ್ಗೆ ಮತ್ತೆ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಇಲ್ಲಿನ ಹಳ್ಳಿಯೊಂದರಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕನನ್ನು ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲ್ಲಿಯವರೆಗೆ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ಜೋಗ್ವಾನ್ ಗ್ರಾಮದ ಅಸ್ಸಾನ್ ದೇವಸ್ಥಾನದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಅಡಗಿರುವ ಮೂರನೇ ಉಗ್ರನನ್ನು ಮುಗಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ

ಮುಂದುವರಿದ ಉಗ್ರ ಬೇಟೆ : ಇನ್ನೋರ್ವ ಭಯೋತ್ಪಾದಕ ಹತ್ಯೆ | ಸೇನೆಯ ಶ್ವಾನ ಫ್ಯಾಂಟಮ್‌ ಗುಂಡು ತಗಲಿ ಸಾವು Read More »

ಸೇನಾ ವಾಹನದ ಮೇಲೆ ಭಯೋತ್ಪಾದಕರ ದಾಳಿ : ಓರ್ವ ಉಗ್ರ ಬಲಿ

ಶ್ರೀನಗರ : ಜಮ್ಮು-ಕಾಶ್ಮೀರದ ಅಕ್ನೂರ್‌ ವಲಯದಲ್ಲಿ ಸೇನೆಯ ವಾಹನದ ಮೇಲೆ ಉಗ್ರರು ದಾಳಿ ಮಾಡಿದ್ದು, ಈ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಉಗ್ರನನ್ನು ಸಾಯಿಸಲಾಗಿದೆ.ಅಕ್ನೂರ್‌ ಸಮೀಪ ಬಟಲ್‌ ಎಂಬಲ್ಲಿ ಮೂವರು ಉಗ್ರರು ಸೇನೆಯ ವಾಹನದ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಸೇನೆ ಕೂಡಲೇ ಈ ಪ್ರದೇಶವನ್ನು ಸುತ್ತುವರಿದು ಉಗ್ರರ ತಲಾಷೆ ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಬಲಿಯಾಗಿದ್ದಾನೆ.ದೀಪಾವಳಿ ಹಬ್ಬಕ್ಕಾಗಿ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಭಾರಿ ಬಂದೋಬಸ್ತು ಮಾಡಿದ್ದು, ಇದರ ನಡುವೆ

ಸೇನಾ ವಾಹನದ ಮೇಲೆ ಭಯೋತ್ಪಾದಕರ ದಾಳಿ : ಓರ್ವ ಉಗ್ರ ಬಲಿ Read More »

ಮುಂದಿನ ವರ್ಷ ಜನಗಣತಿ?

2021ರಲ್ಲಿ ಕೋವಿಡ್‌ ಕಾರಣದಿಂದ ಮುಂದೂಡಿಕೆಯಾಗಿದ್ದ ಪ್ರಕ್ರಿಯೆ ಹೊಸದಿಲ್ಲಿ: ದೇಶದ ಜನಸಂಖ್ಯೆಯ ಅಧಿಕೃತ ಸಮೀಕ್ಷೆಯಾದ ಜನಗಣತಿಯನ್ನು 2025ರಲ್ಲಿ ಆರಂಭಿಸುವ ನಿರೀಕ್ಷೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಜನಗಣತಿ ಪ್ರಕ್ರಿಯೆ 2025ರಲ್ಲಿ ಆರಂಭಗೊಂಡು 2026ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಜನಗಣತಿಯ ನಂತರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಕೆಲಸ ಆರಂಭಗೊಂಡು 2028ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಆಗಲಿದ್ದು ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ

ಮುಂದಿನ ವರ್ಷ ಜನಗಣತಿ? Read More »

ಮುಂಬಯಿ: ಬಾಂದ್ರ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 9 ಮಂದಿಗೆ ಗಾಯ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ರೈಲ್ವೆ ಸ್ಟೇಷನ್‌ ಮುಂಬಯಿ: ಉಪನಗರ ಬಾಂದ್ರ ಟರ್ಮಿನಸ್‌ ರೈಲು ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ ಕನಿಷ್ಠ 9 ಮಂದಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.ಬಾಂದ್ರ ಟರ್ಮಿನಸ್‌ನ ಪ್ಲಾಟ್‌ಫಾರ್ಮ್‌ 1ರಲ್ಲಿ ಕಾಲ್ತುಳಿತ ಸಂಭವಿಸಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರೈಲು ನಿಲ್ದಾಣದಲ್ಲಿ ಊರಿಗೆ ಹೋಗುವ ಪ್ರಯಾಣಿಕರ ದಟ್ಟಣೆಯಿತ್ತು. ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಯಾಣಿಕರು ಗಿಜಿಗುಡುತ್ತಿದ್ದರು. 1ನೇ ನಂಬರ್‌ ಪ್ಲಾಟ್‌ಫಾರ್ಮ್‌ನಲ್ಲಿ ಬಾಂದ್ರ-ಗೋರಖ್‌ಪುರ ಎಕ್ಸ್‌ಪ್ರೆಸ್‌ ರೈಲು ಹೊರಡುವ ತುಸು ಮುನ್ನ ಕಾಲ್ತುಳಿತ ಸಂಭವಿಸಿದೆ. 9 ಮಂದಿ ಗಾಯಗೊಂಡಿದ್ದು,

ಮುಂಬಯಿ: ಬಾಂದ್ರ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 9 ಮಂದಿಗೆ ಗಾಯ Read More »

ನ್ಯಾ.ಸಂಜೀವ್‌ ಖನ್ನಾ ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಾಧೀಶ

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯನ್ಯಾಯಾಧೀಶರಾಗಿ (ಸಿಜೆಐ) ನ್ಯಾ.ಸಂಜೀವ್‌ ಖನ್ನಾ ಆಯ್ಕೆಯಾಗಿದ್ದು, ಅವರನ್ನು ನೇಮಕ ಮಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಸೂಚನೆ ಹೊರಡಿಸಿದ್ದಾರೆ. ನವೆಂಬರ್‌ 11ರಂದು ಹಾಲಿ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್‌ ನಿವೃತ್ತಿಯಾಗಲಿದ್ದಾರೆ. ಅಂದೇ ಸಂಜೀವ್‌ ಖನ್ನಾ ಅಧಿಕಾರ ವಹಿಸಿಕೊಳ್ಳಲಿದ್ದು, 2025ರ ಮೇ 13ರ ವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ. 2019ರ ಜನವರಿ 18ರಂದು ನ್ಯಾ. ಸಂಜೀವ್‌ ಖನ್ನಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌‌ ಹುದ್ದೆಗೆ ನೇಮಿಸಲಾಗಿತ್ತು. 2022ರ ನವೆಂಬರ್ 8ರಂದು ಸಿಜೆಐ ಉದಯ್ ಉಮೇಶ್ ಲಲಿತ್

ನ್ಯಾ.ಸಂಜೀವ್‌ ಖನ್ನಾ ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಾಧೀಶ Read More »

ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ ಚಂಡಮಾರುತ

120 ಕಿ.ಮೀ. ಪ್ರಚಂಡ ವೇಗದ ಗಾಳಿ; 6 ಲಕ್ಷ ಮಂದಿ ಸ್ಥಳಾಂತರ ಭುವನೇಶ್ವರ : ಬಂಗಾಳಕೊಲ್ಲಿಯ ವಾಯವ್ಯ ಭಾಗದಲ್ಲಿ ಸೃಷ್ಟಿಯಾಗಿರುವ ಡಾನಾ ಚಂಡಮಾರುತ ನಿರೀಕ್ಷೆಯಂತೆ ಮಧ್ಯರಾತ್ರಿ ಒಡಿಶಾ ಕರಾವಳಿಗೆ ಅಪ್ಪಳಿಸಿದೆ. ಕೇಂದ್ರಪಾರ ಜಿಲ್ಲೆಯ ಭಿತರ್ಕಾನಿಕಾ ಮತ್ತು ಭದ್ರಕ್‌ನ ಧಮ್ರಾ ನಡುವೆ ಅಪ್ಪಳಿಸಿ ಜೋರು ಮಳೆಯಾಗುತ್ತಿದೆ. ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು ಒಡಿಶಾ, ಬಂಗಾಳದ ತೀರ ಪ್ರದೇಶಗಳಲ್ಲಿ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುತ್ತಿದೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಉತ್ತರ ವಾಯವ್ಯ ದಿಕ್ಕಿನತ್ತ ಚಲಿಸುತ್ತಿದೆ.ನೆರೆಯ ಪಶ್ಚಿಮ ಬಂಗಾಳದ

ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ ಚಂಡಮಾರುತ Read More »

ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪಿ ಬಂಧನ

5 ಕೋ.ರೂ. ಕೇಳಿ ಬೆದರಿಕೆಯೊಡ್ಡಿದ್ದ ತರಕಾರಿ ವ್ಯಾಪಾರಿ ಮುಂಬಯಿ: 5 ಕೋಟಿ ರೂ. ಕೊಡು ಇಲ್ಲದಿದ್ದರೆ ನಿನ್ನ ಸ್ಥಿತಿ ಬಾಬಾ ಸಿದ್ದಿಕಗಿಂತಲೂ ಘೋರವಾಗಿರಲಿದೆ ಎಂದು ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಹೆಸರಲ್ಲಿ ಧಮಕಿ ಹಾಕಿದ್ದ ಯುವಕನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಅ.18ರಂದು ಮುಂಬಯಿ ಪೊಲೀಸರಿಗೆ ವಾಟ್ಸಪ್‌ ಮೂಲಕ ಬೆದರಿಕೆ ಕರೆ ಬಂದಿತ್ತು. ಇದಕ್ಕೂ ಕೆಲವು ದಿನ ಮೊದಲು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿಯನ್ನು ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನ ಶೂಟರ್‌ಗಳು ದಸರಾ

ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪಿ ಬಂಧನ Read More »

ಲವ್‌ ಮಾಡ್ಬೇಕಾ, ಗಡ್ಡ ಬೋಳಿಸಿ : ಹುಡುಗಿಯರ ವಿಚಿತ್ರ ಬೇಡಿಕೆ

ಕ್ಲೀನ್‌ ಶೇವ್‌ ಮಾಡಿದ ಹುಡುಗರು ಬೇಕೆಂದು ಆಗ್ರಹಿಸಿ ರ‍್ಯಾಲಿ ಇಂದೋರ್‌ : ಈಗಿನ ಯುವಕರಿಗೆ ಗಡ್ಡ ಬಿಡುವುದು ಬಹಳ ಇಷ್ಟ. ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಕಾರ್ಪೋರೇಟ್‌ ಕಂಪನಿಯ ತನಕ ಎಲ್ಲಿ ನೋಡಿದರೂ ಗಡ್ಡಧಾರಿ ಸ್ಟೈಲಿಶ್‌ ಹುಡುಗರೇ ಹೆಚ್ಚಾಗಿ ಕಾಣಸಿಗುತ್ತಾರೆ. ಗಡ್ಡಕ್ಕೆ ಹುಡುಗಿಯರು ಬೇಗ ಬೌಲ್ಡ್‌ ಆಗುತ್ತಾರೆ ಎಂದು ಅವರು ಭಾವಿಸಿರಬಹುದು. ಆದರೆ ಎಲ್ಲ ಹುಡುಗಿಯರಿಗೆ ಗಡ್ಡ ಇಷ್ಟ ಆಗುವುದಿಲ್ಲ. ಇಂದೋರ್‌ನ ಕೆಲವು ಹುಡುಗಿಯರು ನಮಗೆ ಕ್ಲೀನ್‌ ಶೇವ್‌ ಹುಡುಗರೇ ಬೇಕೆಂದು ಆಗ್ರಹಿಸಿ ಬೀದಿಗಿಳಿರುವುದೇ ಇದಕ್ಕೆ ಸಾಕ್ಷಿ. ಇದರ

ಲವ್‌ ಮಾಡ್ಬೇಕಾ, ಗಡ್ಡ ಬೋಳಿಸಿ : ಹುಡುಗಿಯರ ವಿಚಿತ್ರ ಬೇಡಿಕೆ Read More »

ನಕಲಿ ಕೋರ್ಟ್‌ ಸ್ಥಾಪಿಸಿ ತೀರ್ಪು ನೀಡುತ್ತಿದ್ದ ನಕಲಿ ನ್ಯಾಯಾಧೀಶ ಸೆರೆ

ಐದು ವರ್ಷಗಳಿಂದ ಜನರಿಗೆ ಮೋಸ ಮಾಡುತ್ತಿದ್ದ ಈ ಮಹಾಕಿಲಾಡಿ ಅಹ್ಮದಾಬಾದ್‌: ನಕಲಿ ಪೊಲೀಸ್‌, ನಕಲಿ ಡಾಕ್ಟರ್‌ಗಳು ಜನರನ್ನು ಏಮಾರಿಸುವ ಘಟನೆಗಳು ಸಾಮಾನ್ಯ. ಆದರೆ ಗುಜರಾತಿನ ಈ ಕಿಲಾಡಿ ಪಾತಕಿ ಮಾತ್ರ ನ್ಯಾಯಾಧೀಶನ ಸೋಗುಹಾಕಿ ಕಳೆದ 5 ವರ್ಷಗಳಿಂದ ಜನರಿಗೆ ಮೋಸ ಮಾಡುತ್ತಿದ್ದ. ಇದಕ್ಕಾಗಿ ಆತ ನಕಲಿ ನ್ಯಾಯಾಲಯವನ್ನೂ ಸ್ಥಾಪಿಸಿದ್ದ. ಗುಜರಾತಿನ ಗಾಂಧಿನಗದರಲ್ಲಿ ಕಾರ್ಯಾಚರಿಸುತ್ತಿತ್ತು ನಕಲಿ ನ್ಯಾಯಾಧೀಶ ಮೋರಿಸ್‌ ಸಾಮ್ಯುವೆಲ್‌ ಕ್ರಿಶ್ಚಿಯನ್‌ ಎಂಬಾತನ ನ್ಯಾಯಾಲಯ. ಈತ ಮುಖ್ಯವಾಗಿ ಭೂ ವಿವಾದ ಹೊಂದಿರುವವರನ್ನು ಬಲೆಗೆ ಕೆಡವಿಕೊಂಡು ಮೋಸ ಮಾಡುತ್ತಿದ್ದ. ಭೂವಿವಾದ

ನಕಲಿ ಕೋರ್ಟ್‌ ಸ್ಥಾಪಿಸಿ ತೀರ್ಪು ನೀಡುತ್ತಿದ್ದ ನಕಲಿ ನ್ಯಾಯಾಧೀಶ ಸೆರೆ Read More »

error: Content is protected !!
Scroll to Top