ದೇಶ

ರೈತರಿಗೆ ವರದಾನವಾದ ಕೇಂದ್ರ ಸರಕಾರದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ| ರೈತರ ಖಾತೆಗೆ ಲಕ್ಷಕ್ಕಿಂತಲೂ ಅಧಿಕ ಜಮೆಯಾದ ಮೊತ್ತ | ದೇಶದ ಬೆನ್ನೆಲುಬಾದ ರೈತ ಫುಲ್ ಖುಷ್

ಹೊಸದಿಲ್ಲಿ: ಕೇಂದ್ರ ಸರಕಾರದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಮೊತ್ತ ಬಿಡುಗಡೆಗೊಂಡಿದ್ದು, ಲಕ್ಷಕ್ಕಿಂತಲೂ ಅಧಿಕ ಮೊತ್ತ ರೈತರ ಖಾತೆಗೆ ಜಮೆಯಾಗುತ್ತಿದೆ. ಪರಿಣಾಮ ರೈತ ವರ್ಗದಲ್ಲಿ ಸಂತಸ ಉಂಟು ಮಾಡಿದೆ. 2016 ರಲ್ಲಿ ಕೇಂದ್ರ ಸರಕಾರದ ಯೋಜನೆಯಾದ ಹವಾಮಾನ ಆಧಾರಿತ ಬೆಳೆವಿಮೆ  ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜ್ಯಾರಿಗೊಳಿಸಿದ್ದು, ರೈತರಿಗೆ ವರದಾನವಾಗಿ ಪರಿಣಮಿಸಿದೆ. ಈ ಯೋಜನೆಯಡಿ ಸರಕಾರದ ರೈತರ ಬೆಳೆಗಳಿಗೆ ವಿಮೆ ಲಾಭವನ್ನು ನೀಡುತ್ತದೆ. ಪ್ರಾಕೃತಿಕ ವಿಕೋಪದಿಂದ ರೈತನ ಬೆಳೆ ನಾಶವಾದರೆ ರೈತನಿಗೆ ಪರಿಹಾರ ನೀಡುವ ಯೋಜನೆಯಾಗಿದೆ. ಸಂಕಷ್ಟ […]

ರೈತರಿಗೆ ವರದಾನವಾದ ಕೇಂದ್ರ ಸರಕಾರದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ| ರೈತರ ಖಾತೆಗೆ ಲಕ್ಷಕ್ಕಿಂತಲೂ ಅಧಿಕ ಜಮೆಯಾದ ಮೊತ್ತ | ದೇಶದ ಬೆನ್ನೆಲುಬಾದ ರೈತ ಫುಲ್ ಖುಷ್ Read More »

ಕೇರಳದಲ್ಲಿ ಕೊರೊನಾಗೆ ಮತ್ತೆ ಮೂವರು ಬಲಿ

ತಿರುವನಂತಪುರಂ: ಕೇರಳದಲ್ಲಿ ಕೊರೊನಾ ಆರ್ಭಟಿಸುತ್ತಿದ್ದು, ಇಲ್ಲಿ ಮತ್ತೆ ಮೂವರು ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 292 ಹೊಸ ಕೋವಿಡ್ -19 ಸೋಂಕುಗಳು ಮತ್ತು ಮೂರು ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಇಂದು ಬೆಳಗ್ಗೆ 8 ಗಂಟೆಯವರೆಗೆ ದೇಶಾದ್ಯಂತ ವರದಿಯಾದ 341 ಕೋವಿಡ್ ಸೋಂಕುಗಳಲ್ಲಿ 292 ಕೇರಳದಿಂದ ಬಂದಿದ್ದು, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,041 ಕ್ಕೆ ತಲುಪಿದೆ ಎಂದು ಸಚಿವಾಲಯದ ವೆಬ್‍ಸೈಟ್ ತಿಳಿಸಿದೆ. ಈ

ಕೇರಳದಲ್ಲಿ ಕೊರೊನಾಗೆ ಮತ್ತೆ ಮೂವರು ಬಲಿ Read More »

ಕುಲದೇವತೆ ಅಂತ ರೈತರು ಪೂಜಿಸಿದ್ದು ಕಲ್ಲು ಅಲ್ಲ, ಡೈನೋಸಾರ್ ಮೊಟ್ಟೆ! | ಹೊರಬಿತ್ತು ಮಿಲಿಯನ್ ವರ್ಷಗಳ ಮಹಾ ರಹಸ್ಯ!

ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ನಡೆದ ಘಟನೆಯೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ನೂರಾರು ವರ್ಷಗಳಿಂದ ಒಂದು ಕುಟುಂಬವು ಕುಲದೇವತೆಯ ರೂಪದಲ್ಲಿ ಕೆಲವು ಕಲ್ಲಿನ ಚೆಂಡುಗಳನ್ನು ಪೂಜಿಸುತ್ತಿದೆ. ಆದ್ರೆ ಇಂದು ಅದರ ಹಿಂದಿನಿ ಸತ್ಯ ತಿಳಿದು ಇದೀಗ ಬೆಚ್ಚಿಬಿದ್ದಿದ್ದಾರೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ನಡೆದ ಘಟನೆಯೊಂದು ಒಂದು ಕುಟುಂಬವನ್ನು ಬೆಚ್ಚಿಬೀಳುವಂತೆ ಮಾಡಿದೆ. ನೂರಾರು ವರ್ಷಗಳಿಂದ ಒಂದು ಕುಟುಂಬವು ಕುಲದೇವತೆಯ ರೂಪದಲ್ಲಿ ಕೆಲವು ಕಲ್ಲಿನ ಚೆಂಡುಗಳನ್ನು ಪೂಜಿಸುತ್ತಿತ್ತು. ಆದ್ರೆ ಅದರ ಹಿಂದಿರುವ ಸತ್ಯ ಏನೆಂಬುದು ಆ ಕುಟುಂಬಕ್ಕೂ ಗೊತ್ತಿರಲಿಲ್ಲ. ಇತ್ತೀಚೆಗೆ ಅವುಗಳನ್ನು ಪರೀಕ್ಷಿಸಿದ ವಿಜ್ಞಾನಿಗಳು,

ಕುಲದೇವತೆ ಅಂತ ರೈತರು ಪೂಜಿಸಿದ್ದು ಕಲ್ಲು ಅಲ್ಲ, ಡೈನೋಸಾರ್ ಮೊಟ್ಟೆ! | ಹೊರಬಿತ್ತು ಮಿಲಿಯನ್ ವರ್ಷಗಳ ಮಹಾ ರಹಸ್ಯ! Read More »

ದೇಶದಲ್ಲಿ ಮತ್ತೆ ಕೋವಿಡ್-19 ಹೊಸ ತಳಿ ಆರ್ಭಟ | ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರದಿಂದ ರಾಜ್ಯ ಸರಕಾರಕ್ಕೆ ಸೂಚನೆ

ಮತ್ತೆ ದೇಶದಲ್ಲಿ ಕೋವಿಡ್-19 ಹೊಸ ತಳಿ ಆರ್ಭಟ ಶುರುವಿಟ್ಟುಕೊಂಡಿದ್ದು, ಮುಂಜಾಗ್ರತಾ ಕ್ರಮ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಸರಕಾರಕ್ಕೆ ಕೊರೊನಾ ನಿಯಂತ್ರಣಕ್ಕೆ ಸಲಹೆ ಸೂಚನೆಗಳನ್ನು ನೀಡಿದೆ. ಮುಂಬರುವ ಹಬ್ಬಗಳ ಬಗ್ಗೆ ನಿಗಾ ವಹಿಸುವ ಜತೆಗೆ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದೆ. ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಿಗಾ ವಹಿಸಬೇಕು, ನಿಯಮಿತವಾಗಿ ವೈರಲ್ ತರಹದ ಕಾಯಿಲೆಗಳ ಬಗ್ಗೆ ಎಚ್ಚರ ವಹಿಸಬೇಕು. ತೀವ್ರತರವಾದ ಉಸಿರಾಟದ ಕಾಯಿಲೆ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಬೇಕು. ರೋಗ ಲಕ್ಷಣಗಳಿದ್ದರೆ ಪರೀಕ್ಷೆ ಮಾಡಬೇಕು. ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಮಾದರಿ

ದೇಶದಲ್ಲಿ ಮತ್ತೆ ಕೋವಿಡ್-19 ಹೊಸ ತಳಿ ಆರ್ಭಟ | ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರದಿಂದ ರಾಜ್ಯ ಸರಕಾರಕ್ಕೆ ಸೂಚನೆ Read More »

ಸಂಸತ್ ಭದ್ರತಾ ವೈಫಲ್ಯ | ಮತ್ತೋರ್ವ ಆರೋಪಿ ಬಂಧನ

ನವದೆಹಲಿ: ಸಂಸತ್ ಭವನದಲ್ಲಿ ನಡೆದಿದ್ದ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಮಹೇಶ್ ಕುಮಾವತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ದೆಹಲಿಯ ಪಟಿಯಾಲ ಹೌಸ್‌ ಕೋರ್ಟ್‌ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಡಿ.14ರ ರಾತ್ರಿ ಲಲಿತ್ ಝಾ ಪೊಲೀಸರಿಗೆ ಶರಣಾಗಿದ್ದು, ಇದೇ ವೇಳೆ ಝಾ ಜೊತೆಗಿದ್ದ ಮಹೇಶ್ ಕುಮಾವತ್ ನನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ರಾಜಸ್ಥಾನದಲ್ಲಿ ಝಾ ಅಡಗಿಕೊಳ್ಳಲು ಮಹೇಶ್ ನೆರವಾಗಿದ್ದರು ಎಂದು ಹೇಳಲಾಗಿದೆ. ವಿಚಾರಣೆಗೆ ಒಳಗಾಗಿರುವ ಮಹೇಶ್, ಸಂಸತ್ತಿನ ಭದ್ರತೆ ಉಲ್ಲಂಘಿಸಿದ ತಂಡದ

ಸಂಸತ್ ಭದ್ರತಾ ವೈಫಲ್ಯ | ಮತ್ತೋರ್ವ ಆರೋಪಿ ಬಂಧನ Read More »

ವೀರಪ್ಪನ್‌ ಸಹಚರ ಜ್ಞಾನಪ್ರಕಾಶ್‌ ನಿಧನ | ಬಾಂಬ್‌ ಸ್ಪೋಟ ಪ್ರಕರಣದಲ್ಲಿ 29 ವರ್ಷ ಜೈಲಿನಲ್ಲಿದ್ದ ಆರೋಪಿ

ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಅನಾರೋಗ್ಯದ ಕಾರಣಕ್ಕೆ ಜಾಮೀನು ಪಡೆದು ಜೈಲಿನಿಂದ ಹೊರ ಬಂದ, ವೀರಪ್ಪನ್ ಸಹಚರ ಜ್ಞಾನಪ್ರಕಾಶ್ (69) ಕೊನೆಯುಸಿರೆಳೆದಿದ್ದಾರೆ. 1993ರಲ್ಲಿ ನಡೆದಿದ್ದ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕಾಡುಗಳ್ಳ ವೀರಪ್ಪನ್, ಬಿಲವೇಂದ್ರನ್ ಸೈಮನ್, ಮೀಸೆಕಾರ ಮಾದಯ್ಯ ಅವರೊಂದಿಗೆ ಭಾಗಿಯಾಗಿದ್ದ ಆರೋಪದ ಮೇಲೆ ಮೈಸೂರಿನ ಟಾಡಾ ನ್ಯಾಯಾಲಯ 1997ರಲ್ಲಿ ಜ್ಞಾನಪ್ರಕಾಶ್‌ ಗೆ ಗಲ್ಲು ಶಿಕ್ಷೆ ವಿಧಿಸಿತ್ತು. 2014ರಲ್ಲಿ ಸುಪ್ರಿಂ ಕೋರ್ಟ್ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ಆದೇಶಿಸಿತ್ತು. ಈ ವೇಳೆ

ವೀರಪ್ಪನ್‌ ಸಹಚರ ಜ್ಞಾನಪ್ರಕಾಶ್‌ ನಿಧನ | ಬಾಂಬ್‌ ಸ್ಪೋಟ ಪ್ರಕರಣದಲ್ಲಿ 29 ವರ್ಷ ಜೈಲಿನಲ್ಲಿದ್ದ ಆರೋಪಿ Read More »

ಸಂಸತ್ ಸದನಕ್ಕೆ ನುಗ್ಗಿ ಆತಂಕ ಸೃಷ್ಟಿ | ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲು

ನವದೆಹಲಿ: ಬುಧವಾರ ಸಂಸತ್ ಸದನಕ್ಕೆ ನುಗ್ಗಿ ಆತಂಕ ಸೃಷ್ಟಿಸಿದವರ ವಿರುದ್ದ ಯುಎಪಿಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಯುಎಪಿಎ ಕಾಯ್ದೆ : ಯುಎಪಿಎಯ ಸೆಕ್ಷನ್ 15 ಭಯೋತ್ಪಾದಕ ಚಟುವಟಿಕೆಯನ್ನು ವ್ಯಾಖ್ಯಾನಿಸುತ್ತದೆ. ಈ ಕಾನೂನಿನ ಅಡಿಯಲ್ಲಿ, ಕನಿಷ್ಠ 5 ವರ್ಷಗಳು ಮತ್ತು ಗರಿಷ್ಠ ಜೀವಾವಧಿ ಶಿಕ್ಷೆಯ ಅವಕಾಶವಿದೆ. ಭಯೋತ್ಪಾದಕ ಘಟನೆಯಲ್ಲಿ ಯಾರಾದರೂ ಪ್ರಾಣ ಕಳೆದುಕೊಂಡರೆ, ತಪ್ಪಿತಸ್ಥರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶವಿದೆ. ಯಾವುದೇ ವ್ಯಕ್ತಿ ಭಯೋತ್ಪಾದನೆಯನ್ನು ಹರಡುವ ಉದ್ದೇಶದಿಂದ ದೇಶದ ಸಮಗ್ರತೆ, ಏಕತೆ, ಭದ್ರತೆ ಮತ್ತು

ಸಂಸತ್ ಸದನಕ್ಕೆ ನುಗ್ಗಿ ಆತಂಕ ಸೃಷ್ಟಿ | ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲು Read More »

ಸಂಸತ್ ದಾಳಿಕೋರ ಆರು ಮಂದಿಯಲ್ಲಿ ಇನ್ನಿಬ್ಬರಿಗಾಗಿ ಶೋಧ! | ಸಂಸದ ಪ್ರತಾಪ್ ಸಿಂಹ ಕಚೇರಿ ಮುಂಭಾಗ ಪ್ರತಿಭಟನೆ!!

ಬುಧವಾರ ಸಂಸತ್ ಮೇಲೆ ದಾಳಿ ನಡೆಸಿದ ಆರು ಮಂದಿಯಲ್ಲಿ ಇನ್ನಿಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮೈಸೂರು ಮೂಲದ ಮನೋರಂಜನ್ ಸಹಿತ ಇತರ ನಾಲ್ವರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆರು ಮಂದಿಯ ಬೇರೆ ಬೇರೆ ರಾಜ್ಯದವರಾಗಿರುವುದರಿಂದ ಯಾವುದೋ ಉದ್ದೇಶವಿಟ್ಟುಕೊಂಡೇ ಈ ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇವರ ಹಿಂದಿರುವವರ್ಯಾರು ಎಂಬ ಹಿನ್ನೆಲೆಯಲ್ಲೂ ಚರ್ಚೆ ನಡೆಯುತ್ತಿದ್ದು, ತನಿಖೆ ನಡೆಯುತ್ತಿದೆ. ಈ ನಡುವೆ ಸಂಸದ ಪ್ರತಾಪ್ ಸಿಂಹ ಅವರ ಬಂಧನಕ್ಕೆ ಆಗ್ರಹಿಸಿ ಮೈಸೂರಿನ ಅವರ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಯುವ ಕಾಂಗ್ರೆಸ್

ಸಂಸತ್ ದಾಳಿಕೋರ ಆರು ಮಂದಿಯಲ್ಲಿ ಇನ್ನಿಬ್ಬರಿಗಾಗಿ ಶೋಧ! | ಸಂಸದ ಪ್ರತಾಪ್ ಸಿಂಹ ಕಚೇರಿ ಮುಂಭಾಗ ಪ್ರತಿಭಟನೆ!! Read More »

ಆಧಾರ್‌ ನವೀಕರಣದ ಗಡುವು ವಿಸ್ತರಣೆ!

ಸರಕಾರಿ ಪೋರ್ಟಲ್‌ ಮೂಲಕ ಆಧಾರ್‌ ನವೀಕರಣದ ಗಡುವನ್ನು ವಿಸ್ತರಿಸಲಾಗಿದೆ. ಮೈ ಆಧಾರ್‌ ಪೋರ್ಟಲ್‌ ಮೂಲಕ ತಮ್ಮ ಆಧಾರ್‌ ವಿವರಗಳನ್ನು ಉಚಿತವಾಗಿ ನವೀಕರಿಸಲು ಜನರಿಗೆ ಹೆಚ್ಚಿನ ಸಮಯವನ್ನು ನೀಡುವ ವಿಸ್ತರಣೆಯನ್ನು ಪ್ರಾಧಿಕಾರ ಹೊರಡಿಸಿದೆ. ಯುಐಡಿಎಐ ಡಿಸೆಂಬರ್‌ 11ರಂದು ಕಚೇರಿ ಜ್ಞಾಪಕ ಪತ್ರವನ್ನು ಹೊರಡಿಸಿ, ವಿಸ್ತರಣೆಯ ಬಗ್ಗೆ ಮಾಹಿತಿ ನೀಡಿತು. ದೇಶದ ಜನತೆಯಿಂದ ಆಧಾರ್‌ ತಿದ್ದುಪಡಿಗೆ ಗಡುವು ವಿಸ್ತರಣೆ ಮಾಡುವಂತೆ ಮನವಿಗಳನ್ನು ಸ್ವೀಕರಿಸಲಾಯಿತು. ಈ ಹಿನ್ನಲೆಯಲ್ಲಿ ಇನ್ನೂ 3 ತಿಂಗಳು ಅಂದರೆ ಡಿ. 15ರಿಂದ 2024ರ ಮಾರ್ಚ್ 14ರವರೆಗೆ ವಿಸ್ತರಿಸಲು

ಆಧಾರ್‌ ನವೀಕರಣದ ಗಡುವು ವಿಸ್ತರಣೆ! Read More »

“ದೆಹಲಿಗೆ ಹೋಗುತ್ತೇನೆ ಎಂದಷ್ಟೇ ಹೇಳಿದ್ದ”: ಮನೋರಂಜನ್ ತಂದೆ | ಸಂಸತ್ ಭವನಕ್ಕೆ ನುಗ್ಗಿದ ದುಷ್ಕರ್ಮಿಗಳಲ್ಲೊಬ್ಬ ಮನೋರಂಜನ್

ತಾನು ದೆಹಲಿಗೆ ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ್ದ. ಏನು ಕೆಲಸ ಮಾಡುತ್ತಿದ್ದೇನೆ, ಯಾಕಾಗಿ ಹೋಗುತ್ತಿದ್ದೇನೆ ಎಂದೆಲ್ಲಾ ಹೇಳುತ್ತಿರಲಿಲ್ಲ ಎಂದು ಸಂಸತ್ ಭವನಕ್ಕೆ ನುಗ್ಗಿದ ದುಷ್ಕರ್ಮಿಗಳಲ್ಲೊಬ್ಬನಾದ ಮೈಸೂರು ಮೂಲದ ಮನೋರಂಜನ್ ತಂದೆ ದೇವರಾಜೇಗೌಡ ತಿಳಿಸಿದ್ದಾರೆ. ರೈತರಾಗಿರುವ ದೇವರಾಜೇಗೌಡ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ, ಮನೋರಂಜನ್ ಮನೆಗೆ, ಸಮಾಜಕ್ಕೆ ಮನೋರಂಜನ್ ಒಳ್ಳೆಯ ಹುಡುಗ. ಕೆಟ್ಟ ಹುಡುಗನಾಗಿದ್ರೆ ಮನೆ ಬಾಗಿಲಿಗೆ ಸೇರಿಸುತ್ತಿರಲಿಲ್ಲ. ಒಳ್ಳೆಯ ಕೆಲಸ ಮಾಡುತ್ತೇನೆ ಎಂದೇ ಹೇಳುತ್ತಿದ್ದ. ಯಾಕೆ ಹೀಗೆ ಮಾಡಿದ ಎಂದೇ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತನಗೆ

“ದೆಹಲಿಗೆ ಹೋಗುತ್ತೇನೆ ಎಂದಷ್ಟೇ ಹೇಳಿದ್ದ”: ಮನೋರಂಜನ್ ತಂದೆ | ಸಂಸತ್ ಭವನಕ್ಕೆ ನುಗ್ಗಿದ ದುಷ್ಕರ್ಮಿಗಳಲ್ಲೊಬ್ಬ ಮನೋರಂಜನ್ Read More »

error: Content is protected !!
Scroll to Top