ದೇಶ

ಸಂಪಾದಕೀಯ – ವಕ್ಫ್‌ ಮಸೂದೆ ಅಂಗೀಕಾರ ಮೋದಿಯ ದಿಟ್ಟ ನಿರ್ಧಾರಕ್ಕೆ ಸಂದ ಜಯ

ಮಿತ್ರಪಕ್ಷಗಳ ಹಂಗಿನಲ್ಲಿದ್ದರೂ ದೇಶಕ್ಕೆ ಒಳಿತಾಗುವ ನಿರ್ಧಾರಗಳಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದುಕೊಳ್ಳಲು ಸಾಧ್ಯವಾಗದೆ ಮಿತ್ರಪಕ್ಷಗಳ ನೆರವಿನಿಂದ ಸರಕಾರ ರಚಿಸುವ ಅನಿವಾರ್ಯತೆಯಲ್ಲಿ ಸಿಲುಕಿದಾಗ ಈ ಅವಧಿಯಲ್ಲಿ ಬಿಜೆಪಿಯಿಂದ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಲಿಕ್ಕಿಲ್ಲ. ಎಲ್ಲ ವಿಚಾರಗಳಿಗೂ ಮಿತ್ರಪಕ್ಷಗಳ ಮನವೊಲಿಸಿ ಅಂಗಲಾಚಬೇಕಾಗಬಹುದು ಎಂಬ ಅಭಿಪ್ರಾಯವೊಂದು ಕೇಳಿಬಂದಿತ್ತು. ಆದರೆ ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಯಶಸ್ವಿಯಾಗಿ ಅಂಗೀಕಾರಗೊಂಡಿರುವುದು ಈ ಅಭಿಪ್ರಾಯವನ್ನು ಸುಳ್ಳಾಗಿಸಿದೆ. ಪೂರ್ಣ ಬಹುಮತ ಇಲ್ಲದಿದ್ದರೂ ದೇಶಕ್ಕೆ ಒಳಿತಾಗುವ ದಿಟ್ಟ ನಿರ್ಧಾರ […]

ಸಂಪಾದಕೀಯ – ವಕ್ಫ್‌ ಮಸೂದೆ ಅಂಗೀಕಾರ ಮೋದಿಯ ದಿಟ್ಟ ನಿರ್ಧಾರಕ್ಕೆ ಸಂದ ಜಯ Read More »

ಲೋಕಸಭೆಯಲ್ಲಿ ಪಾಸ್‌ ಆದ ವಕ್ಫ್‌ ಮಸೂದೆ : ಇಂದು ರಾಜ್ಯಸಭೆಯಲ್ಲಿ ಮಂಡನೆ

ಮಧ್ಯರಾತ್ರಿವರೆಗೂ ನಡೆದ ಬಿರುಸಿನ ಚರ್ಚೆ; ರಾತ್ರಿ 1.15ಕ್ಕೆ ಮತದಾನ ನವದೆಹಲಿ: ಲೋಕಸಭೆಯಲ್ಲಿ ಸತತ 12 ಗಂಟೆಗಳ ಕಾಲ ನಡೆದ ಚರ್ಚೆ ಬಳಿಕ ವಕ್ಫ್​ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆಯಿತು. ಇಂದು ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗಲಿದೆ. ಮಸೂದೆಯ ಪರವಾಗಿ 288 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 232 ಮತಗಳು ಚಲಾವಣೆಯಾದವು. ಸದನವು ವಿರೋಧ ಪಕ್ಷದ ಎಲ್ಲ ತಿದ್ದುಪಡಿಗಳನ್ನು ಧ್ವನಿಮತದ ಮೂಲಕ ತಿರಸ್ಕರಿಸಿತು. ವಿರೋಧ ಪಕ್ಷದ ಸಂಸದ ಎನ್.ಕೆ. ಪ್ರೇಮಚಂದ್ರನ್ ಅವರ ತಿದ್ದುಪಡಿ ಪ್ರಸ್ತಾವನೆಯ ಮೇಲೆ ಬೆಳಗಿನ ಜಾವ 1.15ಕ್ಕೆ ಮತದಾನ

ಲೋಕಸಭೆಯಲ್ಲಿ ಪಾಸ್‌ ಆದ ವಕ್ಫ್‌ ಮಸೂದೆ : ಇಂದು ರಾಜ್ಯಸಭೆಯಲ್ಲಿ ಮಂಡನೆ Read More »

ಗಡಿಯಲ್ಲಿ ಐವರು ನುಸುಳುಕೋರರು ಸೇನೆಯ ಗುಂಡಿಗೆ ಬಲಿ

ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿದ್ದ ಪಾಕ್‌ ಸೈನಿಕರು ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಗಡಿ ದಾಟಿ ಬರಲು ಯತ್ನಿಸಿದ ಐವರು ಪಾಕಿಸ್ಥಾನಿ ನುಸುಳುಕೋರರನ್ನು ಗಡಿ ಭದ್ರತಾ ಪಡೆಯವರು ಗುಂಡಿಕ್ಕಿ ಸಾಯಿಸಿದ್ದಾರೆ. ಪೂಂಛ್‌ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಷನ್‌ನಲ್ಲಿ ಪಾಕ್‌ ಕಡೆಯಿಂದ ಕದನ ವಿರಾಮ ಉಲ್ಲಂಘಿಸಿ ಗಡಿದಾಟಲು ಯತ್ನಿಸಲಾಗಿತ್ತು. ಅವರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದೇವೆ. 4-5 ಮಂದಿ ಸತ್ತಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ. ನಿನ್ನೆ ಬೆಳಗ್ಗಿನಿಂದ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯಿತ್ತು. ಅತ್ತ ಕಡೆಯಿಂದ ಪಾಕ್‌ ಸೈನಿಕರು ಗುಂಡು

ಗಡಿಯಲ್ಲಿ ಐವರು ನುಸುಳುಕೋರರು ಸೇನೆಯ ಗುಂಡಿಗೆ ಬಲಿ Read More »

ಈ ತಿಂಗಳಲ್ಲೇ ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷ?

ಜೆ.ಪಿ.ನಡ್ಡಾ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ್‌ ನಡ್ಡಾ ಅವರ ಉತ್ತರಾಧಿಕಾರಿಯ ಆಯ್ಕೆ ಈ ತಿಂಗಳಲ್ಲೇ ನಡೆಯಲಿದೆ ಎನ್ನಲಾಗಿದೆ. ಏ.4ಕ್ಕೆ ಸಂಸತ್‌ ಅಧಿವೇಶನ ಮುಗಿಯಲಿದ್ದು, ಬಳಿಕ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಬಿಜೆಪಿ ಚುರುಕುಗೊಳಿಸಲಿದೆ. ಬಹುತೇಕ ಏಪ್ರಿಲ್‌ ಮೂರನೇ ವಾರದಲ್ಲಿ ಹೊಸ ಅಧ್ಯಕ್ಷರ ಘೋಷಣೆಯಾಗುವ ಸಾಧ್ಯತೆಯಿದೆ. ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿ ಕೆಲವು ರಾಜ್ಯಗಳ ರಾಜ್ಯಾಧ್ಯಕ್ಷರ ಆಯ್ಕೆ ಬಾಕಿಯಿದ್ದು, ಅದನ್ನು ತ್ವರಿತವಾಗಿ ಮುಗಿಸಿದ ಬಳಿಕ ರಾಷ್ಟ್ರೀಯ

ಈ ತಿಂಗಳಲ್ಲೇ ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷ? Read More »

ಇಂದು ಲೋಕಸಭೆಯಲ್ಲಿ ಮಹತ್ವದ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

ಪಕ್ಷಗಳಿಂದ ವಿಪ್‌ ಜಾರಿ-ಭಾರಿ ಕೋಲಾಹಲದ ನಿರೀಕ್ಷೆ ನವದೆಹಲಿ: ಈಗಾಗಲೇ ಭಾರಿ ಪ್ರತಿಭಟನೆಗೆ ಕಾರಣವಾಗಿರುವ ಮಹತ್ವದ ವಕ್ಫ್‌ ಮಸೂದೆಯನ್ನು ಕೇಂದ್ರ ಸರಕಾರ ಇಂದು ವಿಪಕ್ಷಗಳು ಮತ್ತು ಮುಸ್ಲಿಮರ ವಿರೋಧದ ನಡುವೆ ಲೋಕಸಭೆಯಲ್ಲಿ ಮಂಡಿಸಲಿದೆ. ಮಧ್ಯಾಹ್ನ 12.15ಕ್ಕೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ವಕ್ಫ್‌ ತಿದ್ದುಪಡಿ ಮಸೂದೆ ಮಂಡಿಸಲಿದ್ದಾರೆ. ಮುಸ್ಲಿಮರು ವಕ್ಫ್‌ ಮಸೂದೆ ತಿದ್ದುಪಡಿಯನ್ನು ವಿರೋಧಿಸುತ್ತಿದ್ದು, ದೇಶದ ಹಲವೆಡೆ ಪ್ರತಿಭಟನೆಯೂ ನಡೆದಿದೆ. ವಕ್ಫ್ ಮಸೂದೆ ಮೇಲಿನ ವಿಸ್ತೃತ ಚರ್ಚೆಗಾಗಿ 8 ಗಂಟೆ ಮೀಸಲು ಇಡಲಾಗಿದೆ. ಈ ಮಸೂದೆಯನ್ನು ಎನ್‌ಡಿಎ

ಇಂದು ಲೋಕಸಭೆಯಲ್ಲಿ ಮಹತ್ವದ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ Read More »

ಗೂಡ್ಸ್‌ ರೈಲುಗಳ ಡಿಕ್ಕಿ : ಮೂವರು ಸಾವು

ಗುದ್ದಿದ ಬೆನ್ನಿಗೆ ಬೆಂಕಿ ಹತ್ತಿಕೊಂಡು ಇಂಜಿನ್‌ ಸುಟ್ಟು ಕರಕಲು ರಾಂಚಿ: ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿ ಎರಡು ಗೂಡ್ಸ್‌ ರೈಲುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ರೈಲುಗಳ ಇಂಜಿನ್‌ಗೆ ಬೆಂಕಿಹತ್ತಿಕೊಂಡು ಹೊತ್ತಿ ಉರಿದು ಇಬ್ಬರು ಲೋಕೊಪೈಲಟ್‌ ಸೇರಿದಂತೆ ಮೂವರು ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಅಪಘಾತದ ಬಿರುಸಿಗೆ ರೈಲುಗಳ ಇಂಜಿನ್‌ಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರ ಸಾವಾಗಿದೆ. ಅವಘಡದಲ್ಲಿ ಮೂವರು ಸಿಐಎಸ್‌ಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಫರಕ್ಕಾದಿಂದ ಲಾಲ್ಮಾಟಿಯಾಗೆ ಹೋಗುತ್ತಿದ್ದ ಗೂಡ್ಸ್ ರೈಲು ಬರ್ಹೆತ್‌ನಲ್ಲಿ ನಿಂತಿದ್ದ ಇನ್ನೊಂದು

ಗೂಡ್ಸ್‌ ರೈಲುಗಳ ಡಿಕ್ಕಿ : ಮೂವರು ಸಾವು Read More »

ಗ್ಯಾಸ್‌ ಸಿಲಿಂಡರ್‌ ಸ್ಫೋಟ : 7 ಮಂದಿ ಸಾವು

ಪಟಾಕಿಯ ಕಿಡಿ ತಗಲಿ ಸ್ಫೋಟಿಸಿದ ಸಿಲಿಂಡರ್‌ ಕೋಲ್ಕತ್ತಾ : ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯ ದೋಲಾಹಾತ್‌ ಎಂಬಲ್ಲಿ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ಮಕ್ಕಳು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಪಟಾಕಿ ಯಿಂದ ಸಿಡಿದ ಕಿಡಿ ಸಿಲಿಂಡರ್​ಗೆ ತಗಲಿ ಬೆಂಕಿಹತ್ತಿಕೊಂಡು ಸ್ಫೋಟಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಟ್ಟಡ ಬೆಂಕಿಗಾಹುತಿಯಾಗಿದೆ. ಬೆಂಕಿ ಅವಘಡದ ಬಳಿಕ ನಾಲ್ವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಮನೆಯಲ್ಲಿ ಪಟಾಕಿ ತಯಾರಿಸಲಾಗುತ್ತಿತ್ತು, ಈ

ಗ್ಯಾಸ್‌ ಸಿಲಿಂಡರ್‌ ಸ್ಫೋಟ : 7 ಮಂದಿ ಸಾವು Read More »

ಗ್ಯಾಸ್‌ ಸಿಲಿಂಡರ್‌ ಬೆಲೆ 41 ರೂ. ಇಳಿಕೆ

ನವದೆಹಲಿ : ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್ ಸಿಲಿಂಡರ್ ಬೆಲೆಯಲ್ಲಿ 41 ರೂ. ಇಳಿಕೆ ಮಾಡಿವೆ. ತೈಲ ಮಾರುಕಟ್ಟೆ ಕಂಪನಿಗಳು ಮಂಗಳವಾರ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಕಡಿತ ಘೋಷಿಸಿದ್ದು, ಅಡುಗೆ ಇಂಧನವನ್ನು ಅವಲಂಬಿಸಿರುವ ವ್ಯವಹಾರಗಳು ಮತ್ತು ಕೈಗಾರಿಕೆಗಳಿಗೆ ಇದರಿಂದ ಅನುಕೂಲವಾಗಲಿದೆ. ತಕ್ಷಣದಿಂದ ಜಾರಿಗೆ ಬರುವಂತೆ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 41 ರೂ. ಕಡಿಮೆ ಮಾಡಲಾಗಿದೆ. ದೆಹಲಿಯಲ್ಲಿ ಪರಿಷ್ಕೃತ ಚಿಲ್ಲರೆ ಮಾರಾಟ ಬೆಲೆ ಈಗ ಪ್ರತಿ ಸಿಲಿಂಡರ್‌ಗೆ 1,762 ರೂ. ಆಗಿದೆ.

ಗ್ಯಾಸ್‌ ಸಿಲಿಂಡರ್‌ ಬೆಲೆ 41 ರೂ. ಇಳಿಕೆ Read More »

ವಕ್ಫ್‌ ಮಸೂದೆಗೆ ವಿರೋಧ : ಮುಸ್ಲಿಮರಿಂದ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ

ದೇಶಾದ್ಯಂತ ಮಸೀದಿಗಳಲ್ಲಿ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಈದ್‌ ನಮಾಜು ಮಾಡಿದ ಮುಸ್ಲಿಮರು ಬೆಂಗಳೂರು : ದೇಶಾದ್ಯಂತ ಮುಸ್ಲಿಮರು ಕೇಂದ್ರದ ವಕ್ಫ್‌ ತಿದ್ದುಪಡಿ ಮಸೂದೆ ವಿರೋಧಿಸಿ ಈದ್-ಉಲ್-ಫಿತ್ ವಿಶೇಷ ಪ್ರಾರ್ಥನೆ ಸಂದರ್ಭ ಕೈಗಳಿಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ಮಾಡಿದ್ದಾರೆ. ಕೈಗೆ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ ಮಾಡುವಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮನವಿ ಮಾಡಿತ್ತು. ಈ ಹಿನ್ನೆಲೆ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ವಕ್ಫ್‌ ತಿದ್ದುಪಡಿ ಮಸೂದೆ ವಿರೋಧಿಸಿ ಮುಸ್ಲಿಮರು ಪ್ರಾರ್ಥನೆ ವೇಳೆ ಕೈಗೆ

ವಕ್ಫ್‌ ಮಸೂದೆಗೆ ವಿರೋಧ : ಮುಸ್ಲಿಮರಿಂದ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ Read More »

ಎಟಿಎಂ ವಿದ್‌ಡ್ರಾ ಶುಲ್ಕ ಹೆಚ್ಚಳ, ಎಸ್‌ಬಿ ಖಾತೆಯಲ್ಲಿರುವ ಹಣದ ಬಡ್ಡಿದರ ಏರಿಕೆ

ಹೊಸ ಹಣಕಾಸು ವರ್ಷದಿಂದ ಬ್ಯಾಂಕಿಂಗ್‌ ನಿಯಮಗಳಲ್ಲಿ ಹಲವು ಬದಲಾವಣೆ ನವದೆಹಲಿ: ಏಪ್ರಿಲ್ 1ರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ತರ ಬದಲಾವಣೆ ತಂದಿದ್ದು, ಎಟಿಎಂ ಕ್ಯಾಷ್ ವಿತ್​ಡ್ರಾ ಶುಲ್ಕ ಹೆಚ್ಚಳ, ಎಸ್‌ಬಿ ಖಾತೆ ಹಣಕ್ಕೆ ಹೆಚ್ಚು ಬಡ್ಡಿ ಸೇರಿದಂತೆ ಹಲವು ನಿಯಮಗಳಲ್ಲಿ ಪರಿಷ್ಕರಣೆ ತಂದಿದೆ.ಏಪ್ರಿಲ್ 1ರಿಂದ ಹೊಸ ಬ್ಯಾಂಕಿಂಗ್ ನಿಯಮಗಳು ಜಾರಿಗೆ ಬರುತ್ತಿದ್ದು, ಎಟಿಎಂ ಹಣ ಹಿಂಪಡೆಯುವಿಕೆ, ಉಳಿತಾಯ ಖಾತೆಗೆ ಸಂಬಂಧಿಸಿದ ನಿಯಮಗಳಲ್ಲಿ ಆರ್‌ಬಿಐ ಸಾಕಷ್ಟು ಬದಲಾವಣೆ ಮಾಡಿದೆ. ಎಟಿಎಂ ಹಣ ವಿತ್‌ಡ್ರಾಗೆ ಸಂಬಂಧಿಸಿದಂತೆ ವಿಧಿಸುತ್ತಿದ್ದ

ಎಟಿಎಂ ವಿದ್‌ಡ್ರಾ ಶುಲ್ಕ ಹೆಚ್ಚಳ, ಎಸ್‌ಬಿ ಖಾತೆಯಲ್ಲಿರುವ ಹಣದ ಬಡ್ಡಿದರ ಏರಿಕೆ Read More »

error: Content is protected !!
Scroll to Top