ದೇಶ

ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಫೆ.15ರಿಂದ 10ನೇ ತರಗತಿ, ಫೆ.17ರಿಂದ 12ನೇ ತರಗತಿ ಪರೀಕ್ಷೆಗಳು ಆರಂಭ ಹೊಸದಿಲ್ಲಿ : ಸಿಬಿಎಸ್‌ಇ ಶಿಕ್ಷಣ ಮಂಡಳಿ 2025ನೇ ಸಾಲಿನ 10 ಮತ್ತು 12ನೇ ತರಗತಿ ಅಂತಿಮ ಬೋರ್ಡ್‌ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಸಿದೆ. ಆ ಪ್ರಕಾರ 10ನೇ ತರಗತಿ ಪರೀಕ್ಷೆ ಫೆಬ್ರವರಿ 15ರಿಂದ ಶುರುವಾಗಿ ಮಾರ್ಚ್‌ 18ರ ವರೆಗೆ ನಡೆಯಲಿದೆ. 12ನೇ ತರಗತಿ ಪರೀಕ್ಷೆಗಳು ಫೆಬ್ರವರಿ 17ರಿಂದ ಶುರುವಾಗಿ ಏಪ್ರಿಲ್‌ 4ರ ತನಕ ನಡೆಯಲಿವೆ. 10ನೇ ತರಗತಿಗೆ ಫೆ.15ರಂದು ಮೊದಲ ಪರೀಕ್ಷೆ ಇಂಗ್ಲಿಷ್‌ ಆಗಿರುತ್ತದೆ. ಅಂತೆಯೇ 12ನೇ […]

ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟ Read More »

ವಿಕ್ರಂ ಗೌಡನ ಹೆಂಡತಿಯೂ ನಕ್ಸಲ್‌ ನಾಯಕಿ

ಮೂರು ವರ್ಷಗಳಿಂದ ಕೇರಳದ ಜೈಲಿನಲ್ಲಿದ್ದಾಳೆ ವಿಕ್ರಂ ಗೌಡ ಪ್ರೀತಿಸಿ ಮದುವೆಯಾದ ನಕ್ಸಲ್‌ ಯುವತಿ ಕಾರ್ಕಳ : ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರುವ ನಕ್ಸಲ್‌ ನಾಯಕ ವಿಕ್ರಂ ಗೌಡನ ಹೆಂಡತಿಯೂ ನಕ್ಸಲ್‌ ಆಗಿದ್ದು, ಪ್ರಸ್ತುತ ಜೈಲಿನಲ್ಲಿದ್ದಾಳೆ. ನಕ್ಸಲ್‌ ಸಂಘಟನೆಯಲ್ಲೇ ಇದ್ದ ಸಾವಿತ್ರಿ (38) ಎಂಬ ಯುವತಿಯನ್ನು ಪ್ರೀತಿಸಿ ವಿಕ್ರಂ ಗೌಡ ಮದುವೆಯಾಗಿದ್ದ. ಇಬ್ಬರೂ ಅನೇಕ ವರ್ಷ ಮಾವೋವಾದಿ ಚಟುವಟಿಕೆಗಳಲ್ಲಿ ಜೊತೆಯಾಗಿ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಈಕೆಯೂ ವಿಕ್ರಂ ಗೌಡನ ಊರಿನವಳೇ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಖಚಿತವಾದ ಮಾಹಿತಿಗಳು ಇಲ್ಲ.ಸಾವಿತ್ರಿ

ವಿಕ್ರಂ ಗೌಡನ ಹೆಂಡತಿಯೂ ನಕ್ಸಲ್‌ ನಾಯಕಿ Read More »

ಮಹಾರಾಷ್ಟ್ರ, ಜಾರ್ಖಂಡ್‌ ಮತದಾನ ಪ್ರಾರಂಭ

ಭಾರಿ ಪೈಪೋಟಿಗೆ ವೇದಿಕೆಯಾದ ಎರಡು ರಾಜ್ಯಗಳ ಚುನಾವಣೆ ಮುಂಬಯಿ : ಮಹಾರಾಷ್ಟ್ರದ ಎಲ್ಲ 288 ಮತ್ತು ಮತ್ತು ಜಾರ್ಖಂಡ್‌ನ ಎರಡನೇ ಹಂತದ ಚುನಾವಣೆ ಇಂದು ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಶುರುವಾಗಿದ್ದು, ಜನರು ಬೆಳಗ್ಗಿನಿಂದಲೇ ಉತ್ಸಾಹದಿಂದ ಮತಗಟ್ಟೆಯತ್ತ ಧಾವಿಸುತ್ತಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳ 15 ವಿಧಾನಸಭಾ ಸ್ಥಾನಗಳಿಗೆ ಇಂದು ಉಪಚುನಾವಣೆಯೂ ನಡೆಯುತ್ತಿದೆ. ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 288 ಸ್ಥಾನಗಳಿಗೆ ಮತ್ತು ಜಾರ್ಖಂಡ್‌ನ ಎರಡನೇ ಹಂತದ 38 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ.

ಮಹಾರಾಷ್ಟ್ರ, ಜಾರ್ಖಂಡ್‌ ಮತದಾನ ಪ್ರಾರಂಭ Read More »

ಮಾಜಿ ಗೃಹ ಸಚಿವರಿಗೆ ಕಲ್ಲೇಟು : ಆಸ್ಪತ್ರೆಗೆ ದಾಖಲು

ಕಾರಿನ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು ಮುಂಬಯಿ: ವಿಧಾನಸಭೆ ಚುನಾವಣೆ ಕಾವು ತೀವ್ರವಾಗಿರುವ ಮಹಾರಾಷ್ಟ್ರದ ಕಟೋಲ್‌ನಲ್ಲಿ ಶರದ್ ಪವಾರ್ ಬಣದ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಕಾರಿನ ಮೇಲೆ ಕಲ್ಲು ತೂರಾಟ ನಡೆದು ಅನಿಲ್ ದೇಶಮುಖ್ ಗಾಯಗೊಂಡಿದ್ದಾರೆ. ದೇಶಮುಖ್ ಅವರ ತಲೆಗೆ ಕಲ್ಲು ತಾಗಿ ರಕ್ತಸ್ರಾವವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಳಿ ನಡೆಸಿದವರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.ಮಹಾರಾಷ್ಟ್ರ ಚುನಾವಣಾ ಪ್ರಚಾರದ ಕೊನೆಯ ದಿನವಾದ ಸೋಮವಾರ ಸಂಜೆ ಐದು ಗಂಟೆಗೆ

ಮಾಜಿ ಗೃಹ ಸಚಿವರಿಗೆ ಕಲ್ಲೇಟು : ಆಸ್ಪತ್ರೆಗೆ ದಾಖಲು Read More »

ಕೇವಲ ಎರಡು ತಾಸಿನಲ್ಲಿ ಸಿಗಲಿದೆ ತಿಮ್ಮಪ್ಪನ ದರ್ಶನ

ತಿರುಪತಿಯಲ್ಲಿ ತಾಸುಗಟ್ಟಲೆ ಕ್ಯೂ ನಿಲ್ಲುವ ಬವಣೆ ತಪ್ಪಿಸಲು ಹೊಸ ವ್ಯವಸ್ಥೆ ತಿರುಪತಿ: ವಿಶ್ವಪ್ರಸಿದ್ಧ ತಿರುಪತಿ ದೇಗುಲದಲ್ಲಿ ದೇವರ ದರ್ಶನಕ್ಕಾಗಿ ತಾಸುಗಟ್ಟಲೆ ಸರತಿ ಸಾಲಿನಲ್ಲಿ ಕಾದುನಿಲ್ಲುವ ಬವಣೆ ತಪ್ಪಲಿದೆ. ಎಲ್ಲ ಭಕ್ತರಿಗೆ ಕ್ಷಿಪ್ರವಾಗಿ ತಿಮ್ಮಪ್ಪನ ದರ್ಶನ ಸಿಗುವಂತಾಗಲು ದೇವಳದ ಆಡಳಿತ ನೋಡಿಕೊಳ್ಳುತ್ತಿರುವ ಟಿಟಿಡಿ ಹೊಸ ವ್ಯವಸ್ಥೆ ಮಾಡಲು ಮುಂದಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದ ಬಳಿಕ ಎಷ್ಟೇ ರಶ್‌ ಇದ್ದರೂ ಕೇವಲ ಎರಡರಿಂದ ಮೂರು ಗಂಟೆಗಳಲ್ಲಿ ಸಾಮಾನ್ಯ ಭಕ್ತರಿಗೂ ದೇವರ ದರ್ಶನ ಮಾಡಲು ಸಾಧ್ಯವಾಗಲಿದೆ.ಕೇವಲ 2ರಿಂದ 3 ಗಂಟೆಯೊಳಗೆ

ಕೇವಲ ಎರಡು ತಾಸಿನಲ್ಲಿ ಸಿಗಲಿದೆ ತಿಮ್ಮಪ್ಪನ ದರ್ಶನ Read More »

ಅಡಿಕೆ ಮೇಲೆ ಮತ್ತೆ ಕ್ಯಾನ್ಸರ್‌ ತೂಗುಗತ್ತಿ | ಬಾಯಿಕ್ಯಾನ್ಸರ್‌ಗೆ ಮುಖ್ಯ ಕಾರಣ ಅಡಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ

ಮಂಗಳೂರು : ಕರಾವಳಿ ಜನರ ಆರ್ಥಿಕತೆಯ ಜೀವನಾಡಿಯಾಗಿರುವ ಅಡಿಕೆ ಮೇಲೆ ಮತ್ತೆ ಕ್ಯಾನ್ಸರ್‌ ತೂಗುಗತ್ತಿ ನೇತಾಡಲಾರಂಭಿಸಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯ ಅಂಗ ಸಂಸ್ಥೆ ಇಂಟರ್‌ನ್ಯಾಷನಲ್‌ ಏಜೆನ್ಸಿ ಫಾರ್‌ ರೀಸರ್ಚ್ ಆ್ಯಂಡ್‌ ಕ್ಯಾನ್ಸರ್‌(ಐಎಆರ್‌ಸಿ) ಅಡಿಕೆ ಬಳಕೆ ನಿಯಂತ್ರಿಸಿದರೆ ವಿಶ್ವದಲ್ಲಿ ಬಾಯಿ ಕ್ಯಾನ್ಸರ್‌ ಪ್ರಮಾಣವನ್ನು ಬಹುತೇಕ ತಗ್ಗಿಸಬಹುದು ಎಂದು ಇತ್ತೀಚೆಗೆ ವರದಿ ನೀಡಿದೆ. ಈ ವರದಿ ಅಡಿಕೆ ಬಳಕೆ ಮೇಲೆ ನಿಯಂತ್ರಣ ಹೇರಲು ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಬೆಳೆಗಾರರಲ್ಲಿ ಆತಂಕ ಮೂಡಿದೆ. ಇಂಟರ್‌ ನ್ಯಾಷನಲ್‌ ಏಜೆನ್ಸಿ ಫಾರ್‌ ರೀಸರ್ಚ್ ಆ್ಯಂಡ್‌

ಅಡಿಕೆ ಮೇಲೆ ಮತ್ತೆ ಕ್ಯಾನ್ಸರ್‌ ತೂಗುಗತ್ತಿ | ಬಾಯಿಕ್ಯಾನ್ಸರ್‌ಗೆ ಮುಖ್ಯ ಕಾರಣ ಅಡಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ Read More »

ನರೇಂದ್ರ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ | ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್‌ಗೆ ಪಾತ್ರರಾದ ಪ್ರಧಾನಿ

ಹೊಸದಿಲ್ಲಿ : ನೈಜೀರಿಯಾ ಸರ್ಕಾರ ‘ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ ಪುರಸ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಿದೆ. ಇದು ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಗೌರವವಾಗಿದೆ. ಆ ಮೂಲಕ ಈ ಗೌರವ ಪಡೆದ ಎರಡನೇ ವಿದೇಶಿ ಗಣ್ಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ತಿನುಡು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಬಳಿಕ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ

ನರೇಂದ್ರ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ | ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್‌ಗೆ ಪಾತ್ರರಾದ ಪ್ರಧಾನಿ Read More »

ಸಗಣಿ ರಾಶಿಯಡಿಯಲ್ಲಿತ್ತು ಲಕ್ಷಗಟ್ಟಲೆ ರೂಪಾಯಿ!

ಭುವನೇಶ್ವರ:ಸಗಣಿ ರಾಶಿಯಲ್ಲಿ ಬಚ್ಚಿಟ್ಟಿದ್ದ 20 ಲಕ್ಷ ರೂ.ಯನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಒಡಿಶಾದ ಬಾಲಾಸೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಹೈದರಾಬಾದ್ ಮತ್ತು ಒಡಿಶಾ ಪೊಲೀಸ್ ತಂಡ ದಾಳಿ ನಡೆಸಿ ಕಮರ್ದಾ ಪೊಲೀಸ್ ಠಾಣಾ ವ್ಯಾಪ್ತಿಯ ಬಡಮಂಡರುಣಿ ಗ್ರಾಮದಲ್ಲಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗೋಪಾಲ್ ಎಂಬಾತ ಹೈದರಾಬಾದ್‌ನ ಕೃಷಿ ಆಧಾರಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಂಪನಿಯ ಲಾಕರ್‌ನಿಂದ 20 ಲಕ್ಷಕ್ಕೂ ಹೆಚ್ಚು ಹಣವನ್ನು ಕಳ್ಳತನ ಮಾಡಿದ್ದ. ಬಳಿಕ ತನ್ನ ಸೋದರ ಮಾವ ರವೀಂದ್ರ ಬೆಹೆರಾ ಮೂಲಕ

ಸಗಣಿ ರಾಶಿಯಡಿಯಲ್ಲಿತ್ತು ಲಕ್ಷಗಟ್ಟಲೆ ರೂಪಾಯಿ! Read More »

ಗೂಗಲ್‌ ಮ್ಯಾಪ್‌ ಅವಾಂತರ : ಮಿನಿ ಬಸ್‌ ಅಪಘಾತಕ್ಕೀಡಾಗಿ ಇಬ್ಬರು ಸಾವು

ತಿರುವನಂತಪುರ: ಗೂಗಲ್‌ ಮ್ಯಾಪ್‌ ನಂಬಿ ಹೋಗಿ ಮಿನಿ ಬಸ್‌ ಅಪಘಾತಕ್ಕೀಡಾಗಿ ಇಬ್ಬರು ರಂಗ ಕಲಾವಿದರು ದಾರುಣವಾಗಿ ಮೃತ್ಯುವಿಡಾಗಿರುವ ಘಟನೆ ಕೇರಳದಲ್ಲಿ ನಿನ್ನೆ ಸಂಭವಿಸಿದೆ. ಕಣ್ಣೂರು ಸಮೀಪದ ಕೆಲಕಮ್ ಬಳಿ ನಿನ್ನೆ ಈ ಅಪಘಾತ ಸಂಭವಿಸಿದೆ. ರಂಗಭೂಮಿಯ ಪ್ರಮುಖ ನಟಿಯರಾಗಿ ಗುರುತಿಸಿಕೊಂಡಿದ್ದ ಕಾಯಂಕುಲಂನ ಅಂಜಲಿ ಮತ್ತು ಕರುನಾಗಪಲ್ಲಿಯ ಜೆಸ್ಸಿ ಮೋಹನ್ ಸಾವನ್ನಪ್ಪಿರುವ ದುರ್ದೈವಿಗಳು.ಮಿನಿ ಬಸ್ ಚಾಲಕ ಗೂಗಲ್ ಮ್ಯಾಪ್ ಸಹಾಯದಿಂದ ಬಸ್ ಚಲಾಯಿಸುತ್ತಿದ್ದರು. ಗೂಗಲ್‌ ಮ್ಯಾಪ್‌ ಎಲ್ಲೆಲ್ಲೋ ಕರೆದುಕೊಂಡು ಹೋಗಿ ಇಕ್ಕಟ್ಟಿನ ಮಾರ್ಗಕ್ಕೆ ತಲುಪಿಸಿದೆ. ಮಾರ್ಗ ಕಡಿದಾಗಿದ್ದರಿಂದ ಅಪಘಾತ

ಗೂಗಲ್‌ ಮ್ಯಾಪ್‌ ಅವಾಂತರ : ಮಿನಿ ಬಸ್‌ ಅಪಘಾತಕ್ಕೀಡಾಗಿ ಇಬ್ಬರು ಸಾವು Read More »

ಆಸ್ಪತ್ರೆಯಲ್ಲಿ ಬೆಂಕಿ ಅವಘಡ : 10 ನವಜಾತ ಶಿಶುಗಳು ಜೀವಂತ ದಹನ

ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡು ಸಂಭವಿಸಿದ ಭೀಕರ ದುರಂತ ಲಖನೌ : ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಸ್ಥಳೀಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್‌ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ 10 ನವಜಾತ ಶಿಶುಗಳು ಸಜೀವ ದಹನವಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದ್ದು, ನಂತರ ಬೆಂಕಿಯ ಕೆನ್ನಾಲಿಗೆ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ಹರಡಿದೆ. ಬೆಂಕಿ ಹೊತ್ತಿಕೊಂಡಾಗ ಕಂಗೆಟ್ಟ ಮಕ್ಕಳ ಪೋಷಕರು ಜೋರಾಗಿ ಕಿರುಚಾಡತೊಡಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಕೂಡ ಆಘಾತಗೊಂಡಿದ್ದು,

ಆಸ್ಪತ್ರೆಯಲ್ಲಿ ಬೆಂಕಿ ಅವಘಡ : 10 ನವಜಾತ ಶಿಶುಗಳು ಜೀವಂತ ದಹನ Read More »

error: Content is protected !!
Scroll to Top