ವಿದೇಶ

ಬಹರೈನಿನಲ್ಲಿ ಕಾರು ಅಪಘಾತ; ಸುಳ್ಯ ಮೂಲದ ಮಗು ಮೃತ್ಯು!

ಕಾರು ಅಪಘಾತದಲ್ಲಿ ಸುಳ್ಯ ಮೂಲದ ಕುಟುಂಬವೊಂದು ಗಂಭೀರ ಗಾಯಗೊಂಡು, ಮಗು ಮೃತಪಟ್ಟ ಘಟನೆ ಬಹರೈನ್‌ನಿಂದ ವರದಿಯಾಗಿದೆ. ಸುಳ್ಯ ಮೂಲದ ದೇವಚಳ್ಳ ಗ್ರಾಮದ ಎಲಿಮಲೆ ಮೆತ್ತಡ್ಕ ನಿವಾಸಿ ಅಶ್ರಫ್ ಮೆತ್ತಡ್ಕ ಅವರ ಮೂರು ವರ್ಷದ ಅಯಾನ್ ಅಬ್ದುಲ್ಲಾ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ದಂಪತಿಗಳು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಗಾಯಗೊಂಡಿರುವ ಅಶ್ರಫ್ ಮತ್ತು ಅವರ ಪತ್ನಿ ಬಹರೈನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬಹರೈನಿನಲ್ಲಿ ಕಾರು ಅಪಘಾತ; ಸುಳ್ಯ ಮೂಲದ ಮಗು ಮೃತ್ಯು! Read More »

ತನ್ನದೇ ಗ್ರಾಮದ ಮೇಲೆ ಬಾಂಬ್ ದಾಳಿ ನಡೆಸಿದ ರಶ್ಯ!

ಮಾಸ್ಕೋ: ಉಕ್ರೇನ್ ಗಡಿ ಸಮೀಪದಲ್ಲಿರುವ ತನ್ನದೇ ಪ್ರಾಂತವಾದ ದಕ್ಷಿಣ ವೊರೊನೆಝ್ನ ಗ್ರಾಮವೊಂದರ ಮೇಲೆ ರಶ್ಯ ವಾಯುಪಡೆ ಮಂಗಳವಾರ ಪ್ರಮಾದವಶಾತ್ ಬಾಂಬ್ ದಾಳಿ ನಡೆಸಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲವೆಂದು ವರದಿಯಾಗಿದೆ. ಬಾಂಬ್ ದಾಳಿಗೆ ಗುರಿಯಾದ ಪೆಟ್ರೊಪವ್ಲೋವ್ಕಾ ಗ್ರಾಮವು ಉಕ್ರೇನ್ ಗಡಿಯಿಂದ 93 ಮೈಲು ಪೂರ್ವದಲ್ಲಿದೆ. ಆಕಸ್ಮಿಕ ಬಾಂಬ್ ಎಸೆತದಿಂದಾಗಿ ಆರು ಮನೆಗಳಿಗೆ ಹಾನಿಯಾಗಿವೆಯೆಂದು ರಶ್ಯನ್ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ‘‘ಈ ಘಟನೆಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಯುತ್ತಿದೆ. ಹಾನಿಯ ರೀತಿಯನ್ನು ಅಂದಾಜಿಸಲು ಆಯೋಗವೊಂದು ಕೆಲಸ

ತನ್ನದೇ ಗ್ರಾಮದ ಮೇಲೆ ಬಾಂಬ್ ದಾಳಿ ನಡೆಸಿದ ರಶ್ಯ! Read More »

ಇಸ್ರೇಲ್ ಪರ ಬೇಹುಗಾರಿಕೆ?: 33 ಜನರ ಬಂಧನ

ಇಸ್ತಾನ್ ಬುಲ್: ಇಸ್ರೇಲ್ನ ವಿದೇಶಿ ಗುಪ್ತಚರ ಸೇವೆ ಮೊಸಾದ್ ಪರವಾಗಿ ಬೇಹುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಶಂಕೆಯ ಮೇಲೆ ಟರ್ಕಿ ಅಧಿಕಾರಿಗಳು 33 ಜನರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಅನಾಡೋಲು ಸುದ್ದಿ ಸಂಸ್ಥೆ ಭದ್ರತಾ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಬಂಧಿತ ಶಂಕಿತರು ಮೊಸಾದ್ ಪರವಾಗಿ ಕಣ್ಗಾವಲು, ಹಲ್ಲೆ ಮತ್ತು ಅಪಹರಣದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಇಸ್ತಾಂಬುಲ್ ಪ್ರಾಸಿಕ್ಯೂಟರ್ ಕಚೇರಿಯ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ತನಿಖಾ ಬ್ಯೂರೊ ತನಿಖೆ ನಡೆಸುತ್ತಿದೆ

ಇಸ್ರೇಲ್ ಪರ ಬೇಹುಗಾರಿಕೆ?: 33 ಜನರ ಬಂಧನ Read More »

ರನ್‌ವೇಯಲ್ಲೇ ಸುಟ್ಟು ಭಸ್ಮವಾದ ವಿಮಾನ!!

ವಿಮಾನ ಆಗಷ್ಟೇ ಭೂಮಿಯನ್ನು ಸ್ಪರ್ಶಿಸಿತ್ತು. ಅಷ್ಟರಲ್ಲೇ ಕಾಣಿಸಿಕೊಂಡಿತು ಬೆಂಕಿ. ವಿಮಾನದ ರೆಕ್ಕೆಯಲ್ಲಿ ಕಾಣಿಸಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಇಡೀಯ ವಿಮಾನವನ್ನು ಆಹುತಿ ತೆಗೆದುಕೊಂಡಿತು. ಇದು ನಡೆದದ್ದು ಜಪಾನಿನ ನರೆಡಾ ವಿಮಾನ ನಿಲ್ದಾಣದಲ್ಲಿ. ವಿಮಾನದಲ್ಲಿ 379 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಹೇಳಲಾಗಿದೆ. ಜಪಾನಿನ ಮಾಧ್ಯಮಗಳು ಪ್ರಸಾರ ಮಾಡಿರುವ ವೀಡಿಯೋದಲ್ಲಿ ಕಂಡುಬಂದಂತೆ, ರನ್ ವೇಯಲ್ಲಿ ಬೆಂಕಿಯುಂಡೆ ಉಗುಳತ್ತ ವಿಮಾನ ಚಲಿಸುತ್ತಿರುವುದು ಕಂಡುಬರುತ್ತಿದೆ. ಕಿಟಕಿ ಮೂಲಕ ದಟ್ಟ ಹೊಗೆ ಹೊರಹೋಗುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.

ರನ್‌ವೇಯಲ್ಲೇ ಸುಟ್ಟು ಭಸ್ಮವಾದ ವಿಮಾನ!! Read More »

ಸ್ಫೋಟದಲ್ಲಿ ಜೈಶ್​ ಮುಖ್ಯಸ್ಥ ಮಸೂದ್ ಅಜರ್ ಹತ್ಯೆ? ಸಾಮಾಜಿಕ ಜಾಲತಾಣದಲ್ಲಿದೆ ವಿಡಿಯೋ!!

ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್ (55) ಸಾವನ್ನಪ್ಪಿದ್ದಾನೆ. ಮಂಗಳವಾರ ಬೆಳಗ್ಗೆ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಬಾಂಬ್ ದಾಳಿಯಲ್ಲಿ ಮಸೂದ್ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಆದರೆ ಈ ಕುರಿತಾಗಿ ಯಾವುದೇ ಅಧಿಕೃತವಾದ ಮಾಹಿತಿ ಕೂಡ ಲಭ್ಯವಾಗಿಲ್ಲ. ಮೊಹಮ್ಮದ್ ಮಸೂದ್ ಅಜರ್ ಅಲ್ವಿ, ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಸ್ಥಾಪಕ. ಸೋಮವಾರ ಬೆಳಗ್ಗೆ ಭಾವಲ್‌ಪುರ ಮಸೀದಿಯಿಂದ ವಾಪಸಾಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಆತನ ಮೇಲೆ ಬಾಂಬ್ ಎಸೆದಿದ್ದಾರೆ ಎಂದು ವರದಿಯಾಗಿದೆ. ಮಸೂದ್ ಅಜರ್ ಸಾವಿನ ಕುರಿತು ಅಧಿಕೃತ ಘೋಷಣೆ

ಸ್ಫೋಟದಲ್ಲಿ ಜೈಶ್​ ಮುಖ್ಯಸ್ಥ ಮಸೂದ್ ಅಜರ್ ಹತ್ಯೆ? ಸಾಮಾಜಿಕ ಜಾಲತಾಣದಲ್ಲಿದೆ ವಿಡಿಯೋ!! Read More »

ಅಪ್ಪಳಿಸಿದ 1ರಿಂದ 2 ಅಡಿ ಎತ್ತರದ ಸುನಾಮಿಯ ಮೊದಲ ಅಲೆ!!

ಸೋಮವಾರ ಬೆಳಗ್ಗೆ ಸಂಭವಿಸಿದ ಪ್ರಬಲ ಭೂಕಂಪನದ ಬಳಿಕ ಜಪಾನ್ ಕರಾವಳಿಗೆ ಸುನಾಮಿಯ ಮೊದಲ ಅಲೆಗಳು ಅಪ್ಪಳಿಸಿವೆ ಎಂದು ಹೇಳಲಾಗಿದೆ. ಸೋಮವಾರ ಮಧ್ಯ ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲವಾದ  ಭೂಕಂಪ ಸಂಭವಿಸಿದ್ದು, ಅಮೆರಿಕ ಭೂ ಸರ್ವೇಕ್ಷಣಾ ಇಲಾಖೆ ಸುನಾಮಿ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಜಪಾನ್ ಕರಾವಳಿ ತೀರಕ್ಕೆ 1ರಿಂದ 2 ಅಡಿ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿವೆ ಎಂದು ಹೇಳಲಾಗಿದೆ. ಜಪಾನ್ ಇಶಿಕಾವಾ ಪ್ರಾಂತ್ಯದ ವಾಜಿಮಾ ನಗರಕ್ಕೆ 1.2 ಮೀಟರ್‌ ನಿಂದ 2 ಮೀಟರ್ ಗಳಷ್ಟು

ಅಪ್ಪಳಿಸಿದ 1ರಿಂದ 2 ಅಡಿ ಎತ್ತರದ ಸುನಾಮಿಯ ಮೊದಲ ಅಲೆ!! Read More »

ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ : ಆಸ್ಪತ್ರೆಗೆ ದಾಖಲು

ಆರೋಗ್ಯ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಟ್ಟುನಿಟ್ಟಿನ ಭದ್ರತೆಯಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಆಸ್ಪತ್ರೆಯ ಮಹಡಿಯಲ್ಲಿ ದಾವೂದ್ ನನ್ನು ಮಾತ್ರ ಇರಿಸಲಾಗಿದ್ದು ಹತ್ತಿರದ ಕುಟುಂಬ ಸದಸ್ಯರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿದೆ. ಆತ ವಿಷ ಸೇವಿಸಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೂ ಯಾವುದೇ ದೃಢೀಕರಣವಿಲ್ಲ. ಕ್ರಿಮಿನಲ್ ಚಟುವಟಿಕೆಗಳಿಗೆ ಹೆಸರಾದ ಕುಖ್ಯಾತ ವ್ಯಕ್ತಿ ಕಳೆದ ಎರಡು ದಿನಗಳಿಂದ ವೈದ್ಯಕೀಯ ಆರೈಕೆಯಲ್ಲಿದ್ದು, ವಿಷ ಸೇವಿಸಿರಬಹುದು

ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ : ಆಸ್ಪತ್ರೆಗೆ ದಾಖಲು Read More »

ಗಾಝಾದಲ್ಲಿ ಕದನ ವಿರಾಮ ಪರ ಭಾರತ ಮತ!

ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಕದನ ವಿರಾಮ ಘೋಷಿಸುವ ಮತ್ತು ಎಲ್ಲಾ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸುವ ಕರಡು ನಿರ್ಣಯದ ಪರವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಮತ ಚಲಾಯಿಸಿದೆ. 193 ಸದಸ್ಯರ ಸಾಮಾನ್ಯ ಸಭೆಯಲ್ಲಿ 153 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ ಕೇವಲ 10 ದೇಶಗಳು ಮಾತ್ರ ವಿರುದ್ಧವಾಗಿ ಮತ ಚಲಾಯಿಸಿದ್ದವು. 23 ದೇಶಗಳು ಮತದಾನದಿಂದ ಹೊರಗುಳಿದವು. ನಿರ್ಣಯವನ್ನು ವಿರೋಧಿಸಿ ಅಮೆರಿಕ, ಇಸ್ರೇಲ್ ಜೊತೆಗೆ ಆಸ್ಟ್ರಿಯಾ, ಝೆಕ್ಚಿಯಾ, ಗ್ವಾಟೆಮಾಲಾ, ಲೈಬೀರಿಯಾ, ಮೈಕ್ರೋನ್ಸಿಯಾ, ನೌರು,

ಗಾಝಾದಲ್ಲಿ ಕದನ ವಿರಾಮ ಪರ ಭಾರತ ಮತ! Read More »

ತೈಲ ದಾಸ್ತಾನು ಮಾಡಿದರೆ ಜೈಲು!

ತೈಲದ ತೀವ್ರ ಕೊರತೆ ತಲೆದೋರಿದ ಹಿನ್ನೆಲೆಯಲ್ಲಿ ಲೈಸೆನ್ಸ್ ಪಡೆಯದೆ 180 ಲೀಟರಿಗಿಂತ ಅಧಿಕ ಪೆಟ್ರೋಲ್ ಸಂಗ್ರಹಿಸಿಟ್ಟುಕೊಂಡವರಿಗೆ ಜೈಲುಶಿಕ್ಷೆ ವಿಧಿಸುವುದಾಗಿ ವಿಧಿಸುವುದಾಗಿ ಮ್ಯಾನ್ಮಾರ್ ಸೇನಾಡಳಿತ ಘೋಷಿಸಿದೆ. ಲೈಸೆನ್ಸ್ ಪಡೆಯದೆ ಪೆಟ್ರೋಲ್ ಉತ್ಪನ್ನಗಳ ಸಂಗ್ರಹಣೆ ಮತ್ತು ಸಾಗಣೆ ಮಾಡುವುದನ್ನು ಪರಿಶೀಲಿಸುವ ಕಾರ್ಯಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ನಿಯಂತ್ರಣ ಪ್ರಾಧಿಕಾರ ರವಿವಾರ ಚಾಲನೆ ನೀಡಿದೆ. ಲೈಸೆನ್ಸ್ ಇಲ್ಲದೆ 180 ಲೀಟರ್ ಗೂ ಅಧಿಕ ಪೆಟ್ರೋಲಿಯಂ ಉತ್ಪನ್ನಗಳನ್ನು ಸಂಗ್ರಹಿಸುವಾಗ ಅಥವಾ ಸಾಗಿಸುವಾಗ ಸಿಕ್ಕಿಬಿದ್ದವರಿಗೆ 1 ವರ್ಷ ಜೈಲುಶಿಕ್ಷೆ, 2,370 ಡಾಲರ್ ದಂಡ ವಿಧಿಸಲಾಗುವುದು ಎಂದು

ತೈಲ ದಾಸ್ತಾನು ಮಾಡಿದರೆ ಜೈಲು! Read More »

ಟಿಬೆಟ್‌ ಹೆಸರನ್ನೇ ಬದಲಿಸಿದ ಚೀನಾ!

ಟಿಬೆಟ್‌ ಮೇಲಿನ ತನ್ನ ಆಕ್ರಮಣವನ್ನು ಮತ್ತಷ್ಟು ಮುಂದುವರೆಸಿರುವ ಚೀನಾ ಸರ್ಕಾರ, ಇದೀಗ ಟಿಬೆಟ್ ಹೆಸರನ್ನೇ ಬದಲಾಯಿಸಿದೆ. ಬಹಳ ವರ್ಷಗಳಿಂದಲೂ ಟಿಬೆಟ್‌ ಮೇಲೆ ನಿಯಂತ್ರಣ ಸಾಧಿಸಿದ್ದರೂ, ಟಿಬೆಟ್‌ ಕುರಿತ ಮಾಹಿತಿ ನೀಡುವಾಗ ಟಿಬೆಟ್‌ ಎಂದೇ ಪ್ರಸ್ತಾಪಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಟಿಬೆಟ್‌ ಕುರಿತ ಶ್ವೇತಪತ್ರದಲ್ಲಿ ಟಿಬೆಟ್‌ನ ಹೆಸರಿನ ಇಂಗ್ಲಿಷ್‌ ಭಾವಾನುವಾದ `ಕ್ಸಿ ಜಾಂಗ್‌’ ಎಂದು ಪ್ರಸ್ತಾಪಿಸಲಾಗಿದೆ. ಈ ಮೂಲಕ ಟಿಬೆಟ್‌ ಹೆಸರನ್ನು ಅಧಿಕೃತವಾಗಿ ಬದಲಾಯಿಸುವ ಹುನ್ನಾರ ನಡೆಸಿದೆ ಎನ್ನಲಾಗಿದೆ. ಚೀನಾ ಈ ಹೆಸರನ್ನು ಶ್ವೇತಪತ್ರಗಳಲ್ಲಿ ಬಳಸಿರುವ ಹಿನ್ನೆಲೆಯಲ್ಲಿ

ಟಿಬೆಟ್‌ ಹೆಸರನ್ನೇ ಬದಲಿಸಿದ ಚೀನಾ! Read More »

error: Content is protected !!
Scroll to Top