ವಿದೇಶ

ಯುದ್ಧದ ಕುರಿತು ಅಪಪ್ರಚಾರ : 19 ಭಾರತೀಯರ ಬಂಧನಕ್ಕೆ ಯುಎಇ ಆದೇಶ

ದಾರಿ ತಪ್ಪಿಸುವ, ಪ್ರಚೋದಿಸುವ ಸುಳ್ಳು ಮಾಹಿತಿ ಹರಡಿದ ಆರೋಪ ಅಬುಧಾಬಿ: ಅಮೆರಿಕ-ಇಸ್ರೇಲ್‌, ಇರಾನ್‌ ನಡುವಿನ ಯುದ್ಧದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ 19 ಭಾರತೀಯರು ಸೇರಿದಂತೆ 35 ಮಂದಿಯ ಬಂಧನಕ್ಕೆ ಯುಎಇ ಆದೇಶ ಹೊರಡಿಸಿದೆ.‌ ಪ್ರಾದೇಶಿಕ ಉದ್ವಿಗ್ನತೆಗೆ ಸಂಬಂಧಿಸಿದ ದೃಶ್ಯಾವಳಿಗಳು ಮತ್ತು ನಿರೂಪಣೆಗಳನ್ನು ಪ್ರಸಾರ ಮಾಡಲು ಆರೋಪಿಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಆರೋಪಿಗಳು ತ್ವರಿತ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ. ಜನರ ದಾರಿ […]

ಯುದ್ಧದ ಕುರಿತು ಅಪಪ್ರಚಾರ : 19 ಭಾರತೀಯರ ಬಂಧನಕ್ಕೆ ಯುಎಇ ಆದೇಶ Read More »

ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸಾವಿನ ಸುದ್ದಿ ನಿರಾಕರಿಸಿದ ಇಸ್ರೇಲ್‌

ನೆತನ್ಯಾಹು ಕ್ಷೇಮವಾಗಿದ್ದಾರೆ ಎಂದು ಪ್ರಧಾನಿ ಕಚೇರಿಯಿಂದ ಸ್ಪಷ್ಟನೆ ಜೆರುಸಲೇಂ: ಇರಾನ್‌ ದಾಳಿಯಲ್ಲಿ ಇಸ್ರೇಲ್‌ ಪ್ರಧಾನಮಂತ್ರಿ ಬೆಂಜಮಿನ್‌ ನೆತನ್ಯಾಹು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯನ್ನು ಇಸ್ರೇಲ್‌ ನಿರಾಕರಿಸಿದೆ. ನೆತನ್ಯಾಹು ಕ್ಷೇಮವಾಗಿದ್ದಾರೆ, ಅವರು ಸಾವನ್ನಪ್ಪಿದ್ದಾರೆಂಬ ವರದಿ ಸುಳ್ಳು ಎಂದು ಪ್ರಧಾನಿ ಕಚೇರಿ ಸ್ಪಷ್ಟಪಡಿಸಿದೆ. ನೆತನ್ಯಾಹು ತಮ್ಮ ಎಕ್ಸ್ ಖಾತೆಯಲ್ಲಿ, ಯುದ್ಧದ ಕುರಿತು ಪತ್ರಿಕಾಗೋಷ್ಠಿಯ ವೀಡಿಯೊವನ್ನು ಹಂಚಿಕೊಂಡಿದ್ದರು. ಈ ವೀಡಿಯೊದಲ್ಲಿ ನೆತನ್ಯಾಹು ಅವರ ಬಲಗೈಯಲ್ಲಿ ಆರು ಬೆರಳುಗಳಿರುವಂತೆ ಕಾಣಿಸುತ್ತದೆ. ಈ ವೀಡಿಯೊವನ್ನು ಕೃತಕ ಬುದ್ಧಿಮತ್ತೆಯಿಂದ ರಚಿಸಲಾಗಿದೆ. ನೆತನ್ಯಾಹು ಈಗ ಇಲ್ಲ ಎಂಬ ವದಂತಿ

ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸಾವಿನ ಸುದ್ದಿ ನಿರಾಕರಿಸಿದ ಇಸ್ರೇಲ್‌ Read More »

ಹಾರ್ಮುಜ್‌ ಜಲಸಂಧಿ ದಾಟಿದ ಎಲ್‌ಪಿಜಿ ತುಂಬಿರುವ ಎರಡು ಭಾರತೀಯ ಹಡಗುಗಳು

ದೇಶದಲ್ಲಿ ಗ್ಯಾಸ್‌ ಟ್ರಬಲ್‌ ತುಸು ಕಡಿಮೆಯಾಗುವ ಸಾಧ್ಯತೆ ನವದೆಹಲಿ: ಮದ್ಯಪ್ರಾಚ್ಯದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರಿದಿರುವಂತೆಯೇ ಭಾರತೀಯ ನೌಕಾ ಪಡೆಯ ಬೆಂಗಾವಲಿನೊಂದಿಗೆ 40,000 ಮೆಟ್ರಿಕ್ ಟನ್‌ಗೂ ಹೆಚ್ಚು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (LPG) ಹೊತ್ತ ಭಾರತದ ಶಿವಾಲಿಕ್ ಹಡಗು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ. ಇರಾನ್‌ ಬಂದ್‌ ಮಾಡಿರುವ ಹಾರ್ಮುಜ್ ಜಲಸಂಧಿಯಲ್ಲಿ ನೌಕಾಪಡೆಯ ಬೆಂಗಾವಲಿನಲ್ಲಿ ಶಿವಾಲಿಕ್‌ ಸಂಚರಿಸಿ ನಂತರ ಮುಕ್ತ ಸಮುದ್ರಕ್ಕೆ ಯಶಸ್ವಿಯಾಗಿ ಸಾಗಿದೆ ಎಂದು ವರದಿಯಾಗಿದೆ. ಈ ಹಡಗು ಎರಡು ದಿನಗಳ ಒಳಗಡೆ ಮುಂಬೈ ಅಥವಾ ಕಾಂಡ್ಲಾ

ಹಾರ್ಮುಜ್‌ ಜಲಸಂಧಿ ದಾಟಿದ ಎಲ್‌ಪಿಜಿ ತುಂಬಿರುವ ಎರಡು ಭಾರತೀಯ ಹಡಗುಗಳು Read More »

ರಷ್ಯಾದಿಂದ ತೈಲ ಖರೀದಿಸಲು ಭಾರತದ ಬಳಿ ಅಮೆರಿಕ ಬೇಡಿಕೊಂಡಿತ್ತು

ಇರಾನ್‌ ವಿದೇಶಾಂಗ ಸಚಿವ ಬಹಿರಂಗಪಡಿಸಿದ ರಹಸ್ಯ ಟೆಹ್ರಾನ್‌: ರಷ್ಯಾದಿಂದ ತೈಲ ಖರೀದಿಸುವಂತೆ ಭಾರತಕ್ಕೆ ಅಮೆರಿಕ ಅನುಮತಿ ನೀಡಿದ್ದಲ್ಲ ಬದಲಾಗಿ ಬೇಡಿಕೊಂಡದ್ದು ಎಂದು ಇರಾನ್‌ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಬಹಿರಂಗಪಡಿಸಿದ್ದಾರೆ. ಭಾರತವೂ ಸೇರಿದಂತೆ ವಿವಿಧ ದೇಶಗಳ ಬಳಿ ಈಗ ರಷ್ಯಾದಿಂದ ಕಚ್ಚಾತೈಲ ಖರೀದಿಸಲು ಬೇಡಿಕೊಳ್ಳುವ ಸ್ಥಿತಿಗೆ ಅಮೆರಿಕವನ್ನು ತಂದು ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ. ಮದ್ಯಪ್ರಾಚ್ಯ ಯುದ್ಧ ಶುರುವಾದ ಬಳಿಕ ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಅನುಮತಿ ನೀಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದು,

ರಷ್ಯಾದಿಂದ ತೈಲ ಖರೀದಿಸಲು ಭಾರತದ ಬಳಿ ಅಮೆರಿಕ ಬೇಡಿಕೊಂಡಿತ್ತು Read More »

ಇರಾನ್‌ನ ದ್ವೀಪದ ಮೇಲೆ ಭೀಕರ ಬಾಂಬ್‌ ದಾಳಿ ಮಾಡಿದ ಅಮೆರಿಕ

ಇರಾನ್‌ ಆರ್ಥಿಕತೆಯ ಬೆನ್ನೆಲುಬಾದ ಖಾರ್ಗ್‌ ದ್ವೀಪ ಸರ್ವನಾಶ ಟೆಹ್ರಾನ್ : ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಭೀಕರ ಬಾಂಬ್ ದಾಳಿಯನ್ನು ಅಮೆರಿಕ ಇರಾನ್ ಮೇಲೆ ಮಾಡಿದೆ. ಇರಾನ್‌ನ ಮಿಲಿಟರಿ ಶಕ್ತಿ ಮತ್ತು ಆರ್ಥಿಕತೆಯ ಮೇಲೆ ಅಮೆರಿಕದ ಸೇನೆ ಮರಣಾಂತಿಕ ಪೆಟ್ಟು ನೀಡಿದ್ದು, ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತ ಘೋಷಣೆ ಮಾಡಿದ್ದಾರೆ. ಇರಾನ್‌ನ ಆರ್ಥಿಕತೆಯ ಬೆನ್ನೆಲುಬು ಎನ್ನಲಾದ ಖಾರ್ಗ್ ದ್ವೀಪದ ಮೇಲೆ ಅಮೆರಿಕ ಅತ್ಯಂತ ಶಕ್ತಿಶಾಲಿ ಬಾಂಬ್‌ಗಳ ಮಳೆ ಸುರಿಸಿದೆ. ಇದರಿಂದ ಇರಾನ್‌ನ ತೈಲ

ಇರಾನ್‌ನ ದ್ವೀಪದ ಮೇಲೆ ಭೀಕರ ಬಾಂಬ್‌ ದಾಳಿ ಮಾಡಿದ ಅಮೆರಿಕ Read More »

ಇಸ್ರೇಲ್‌ ದಾಳಿಯಲ್ಲಿ ಮೊಜ್ತಬ ಖಮೇನಿಗೆ ಗಂಭೀರ ಗಾಯ?

ಕಾಲು ಕಟ್‌ ಆಗಿ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದ ವರದಿಗಳು ಟೆಹ್ರಾನ್‌: ಇರಾನ್‌ನ ನೂತನ ಪರಮೋಚ್ಚ ನಾಯಕ ಮೊಜ್ತಬ ಖಮೇನಿ ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಅವರ ಒಂದು ಕಾಲು ತುಂಡಾಗಿದೆ ಹಾಗೂ ಈಗ ಕೋಮಾ ಸ್ಥಿತಿಯಲ್ಲಿ ಇದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಯಾತೊಲ್ಲಾ ಖಮೇನಿ ಇಸ್ರೇಲ್‌ ದಾಳಿಯಲ್ಲಿ ಸಾವಿಗೀಡಾದ ಬಳಿಕ ಮೊಜ್ತಾಬ ಖಮೇನಿ ಇರಾನ್‌ನ ಸರ್ವೋಚ್ಚ ನಾಯಕನಾಗಿ ಆಯ್ಕೆಯಾಗಿದ್ದರು. ಇದರ ಬೆನ್ನಿಗೆ ಇಸ್ರೇಲ್‌ ಮೊಜ್ತಬ ಖಮೇನಿಯನ್ನು ಗುರಿ ಮಾಡಿಕೊಂಡು ದಾಳಿ ನಡೆಸಿದೆ ಎಂದು

ಇಸ್ರೇಲ್‌ ದಾಳಿಯಲ್ಲಿ ಮೊಜ್ತಬ ಖಮೇನಿಗೆ ಗಂಭೀರ ಗಾಯ? Read More »

ಪ್ರವಾಸೋದ್ಯಮ, ಡ್ರೈಫ್ರುಟ್ಸ್‌ ವಹಿವಾಟು ಕುಂಠಿತಗೊಳಿಸಿದ ಯುದ್ಧ

ಎಲ್ಲ ಕ್ಷೇತ್ರಗಳಿಗೂ ತಟ್ಟುತ್ತಿದೆ ಮಧ್ಯಪ್ರಾಚ್ಯದ ಯುದ್ಧದ ಬಿಸಿ ಮಂಗಳೂರು: ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಘನಘೋರ ಕದನ ಹದಿನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸದ್ಯಕ್ಕೆ ಈ ಯುದ್ಧ ನಿಲ್ಲುವ ಸಾಧ್ಯತೆ ಗೋಚರಿಸುತ್ತಿಲ್ಲ. ಈಗಾಗಲೇ ಯುದ್ಧ ಜಗತ್ತಿನಾದ್ಯಂತ ಪ್ರತಿಕೂಲ ಪರಿಣಾಮ ಬೀರತೊಡಗಿದೆ. ಭಾರತದಲ್ಲಿ ಗ್ಯಾಸ್‌ ಅಭಾವದಿಂದ ಹೋಟೆಲ್, ಕ್ಯಾಟರಿಂಗ್‌ ಉದ್ಯಮ ಹೊಡೆತ ತಿಂದಿದೆ. ರಫ್ತು, ಆಮದು ವಹಿವಾಟುಗಳು ಇನ್ನಿಲ್ಲದಂತೆ ಸಂಕಷ್ಟಕ್ಕೀಡಾಗಿವೆ. ಪ್ರವಾಸೋದ್ಯಮ, ಡ್ರೈಫ್ರೂಟ್ಸ್‌ ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ವಿಮಾನ ವ್ಯತ್ಯಯದಿಂದಾಗಿ ವಿದೇಶಿ ಪ್ರವಾಸಿಗರ ಸಂಖ್ಯೆ ಭಾರಿ

ಪ್ರವಾಸೋದ್ಯಮ, ಡ್ರೈಫ್ರುಟ್ಸ್‌ ವಹಿವಾಟು ಕುಂಠಿತಗೊಳಿಸಿದ ಯುದ್ಧ Read More »

ಇರಾನ್‌ನ ಪ್ರತಿ ವ್ಯಕ್ತಿಯ ಸಾವಿಗೆ ಪ್ರತೀಕಾರ : ಮೊಜ್ತಬಾ ಖಮೇನಿ ಘೋಷಣೆ

ಅಮೆರಿಕ, ಇಸ್ರೇಲ್‌, ಗಲ್ಫ್‌ ದೇಶಗಳಿಗೆ ಕಠಿಣ ಎಚ್ಚರಿಕೆ ಟೆಹ್ರಾನ್‌ : ಮಧ್ಯಪ್ರಾಚ್ಯ ಸಮರ ತೀವ್ರ ಸ್ವರೂಪ ಪಡೆದುಕೊಂಡಿರುವಂತೆಯೇ ಇರಾನ್‌ನ ಹೊಸ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡ ನಂತರ ಜಗತ್ತಿಗೆ ಮೊದಲ ಸಂದೇಶ ರವಾನಿಸಿರುವ ಮೊಜ್ತಬಾ ಖಮೇನಿ, ಅಮೆರಿಕ ಮತ್ತು ಇಸ್ರೇಲ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ ದಾಳಿಗಳಲ್ಲಿ ಮೃತಪಟ್ಟ ಇರಾನಿಯನ್ನರ ಪ್ರತಿ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲಾಗುತ್ತದೆ. ಅಗತ್ಯವಿದ್ದರೆ ಸಂಘರ್ಷ ಹೊಸ ಮಜಲುಗಳನ್ನು ಪಡೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಇರಾನ್ ತನ್ನ ಹುತಾತ್ಮರ ರಕ್ತದ ಸೇಡು ತೀರಿಸಿಕೊಳ್ಳುವುದರಿಂದ ಹಿಂದೆ ಸರಿಯುವುದಿಲ್ಲ.

ಇರಾನ್‌ನ ಪ್ರತಿ ವ್ಯಕ್ತಿಯ ಸಾವಿಗೆ ಪ್ರತೀಕಾರ : ಮೊಜ್ತಬಾ ಖಮೇನಿ ಘೋಷಣೆ Read More »

ಯುದ್ಧ ನಿಲ್ಲಿಸಲು ಇರಾನ್‌ ಮೂರು ಷರತ್ತು

ಹೀಗಾದರೆ ಮಾತ್ರ ಯುದ್ಧ ನಿಲ್ಲುತ್ತದೆ ಟೆಹ್ರಾನ್‌: ಅಮೆರಿಕ, ಇಸ್ರೇಲ್‌-ಇರಾನ್‌ ಮಧ್ಯೆ ನಡುವೆ ನಡೆಯುತ್ತಿರುವ ಯುದ್ಧ ಇನ್ನಷ್ಟು ತೀವ್ರಗೊಂಡು ಜಗತ್ತಿನಲ್ಲಿ ತೈಲ ಮತ್ತು ಇಂಧನಕ್ಕಾಗಿ ಹಾಹಾಕಾರ ಉಂಟಾಗಿದೆ. ಈ ನಡುವೆ ಇರಾನ್‌ ಯುದ್ಧ ನಿಲ್ಲಿಸಲು ಜಗತ್ತಿನೆದುರು ಮೂರು ಷರತ್ತುಗಳನ್ನಿಟ್ಟಿದೆ. ಅಮೆರಿಕದ ನೆಲೆಗಳು ಮತ್ತು ಮಧ್ಯಪ್ರಾಚ್ಯ ದೇಶಗಳ ಮೇಲೆ ನಡೆಯುತ್ತಿರುವ ದಾಳಿ ಕೊನೆಯಾಗಬೇಕಾದರೆ ನಮ್ಮ ಮೂರು ಷರತ್ತನ್ನುಗಳನ್ನು ಒಪ್ಪಿಕೊಳ್ಳಬೇಕೆಂದು ಇರಾನ್‌ ಹೇಳಿದೆ ಇರಾನ್‌ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಬೇಕು, ಸಂಘರ್ಷದ ಸಮಯದಲ್ಲಿ ಉಂಟಾದ ಹಾನಿಗಳಿಗೆ ಪರಿಹಾರ

ಯುದ್ಧ ನಿಲ್ಲಿಸಲು ಇರಾನ್‌ ಮೂರು ಷರತ್ತು Read More »

ಇರಾನ್‌ ಯುದ್ಧ ಶೀಘ್ರ ಮುಕ್ತಾಯ : ಟ್ರಂಪ್‌ ಹೇಳಿಕೆ

ಇರಾನ್‌ ವಾಯುನೆಲೆ, ನೌಕಾನೆಲೆ ಧ್ವಂಸ, ಸಂಪರ್ಕ ಕಡಿತ ಎಂದ ಅಧ್ಯಕ್ಷ ಅಮೆರಿಕ: ಅಮೆರಿಕ, ಇಸ್ರೇಲ್‌ ಹಾಗೂ ಇರಾನ್‌ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಜಗತ್ತಿನಾದ್ಯಂತ ಕೋಲಾಹಲ ಸೃಷ್ಟಿಸಿರುವಂತೆಯೇ ಡೊನಾಲ್ಡ್‌ ಟ್ರಂಪ್‌ ಯುದ್ಧ ನಿಲ್ಲಿಸುವ ಕುರಿತು ಮಾತನಾಡಿದ್ದಾರೆ. ಫೆಬ್ರವರಿ 28ರಿಂದ ನಡೆಯುತ್ತಿರುವ ಅಮೆರಿಕ, ಇಸ್ರೇಲ್ ಮತ್ತು ಇರಾನ್ ಮೇಲಿನ ಸಂಘರ್ಷ ಕೊನೆಯಾಗುವ ಸುದ್ದಿ ಸಿಕ್ಕಿದೆ. ಇರಾನ್ ಯುದ್ಧ ಶೀಘ್ರ ಕೊನೆಗೊಳ್ಳಲಿದೆ ಎಂದು ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿಕೆ ನೀಡಿದ್ದಾರೆ. ಫ್ಲೋರಿಡಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಟೆಹ್ರಾನ್ ಯಾವುದೇ

ಇರಾನ್‌ ಯುದ್ಧ ಶೀಘ್ರ ಮುಕ್ತಾಯ : ಟ್ರಂಪ್‌ ಹೇಳಿಕೆ Read More »

error: Content is protected !!
Scroll to Top