ವಿದೇಶ

ಲೆಬನಾನ್‌ ಮೇಲೆ ಇಸ್ರೇಲ್‌ ಮಾರಕ ದಾಳಿ : 492 ಮಂದಿ ಸಾವು

28 ವರ್ಷಗಳ ಬಳಿಕ ಲೆಬನಾನ್‌ ಮೇಲೆ ನಡೆದ ಭೀಕರ ದಾಳಿ ಬೇರುತ್:‌ ಲೆಬನಾನ್‌–ಇಸ್ರೇಲ್‌ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಆವರಿಸಿದೆ. ಲೆಬನಾನ್‌ನ ದಕ್ಷಿಣ ಹಾಗೂ ಪೂರ್ವ ಪ್ರಾಂತ್ಯದ ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿದ್ದು, ಇದಕ್ಕೆ ಪ್ರತೀಕಾರವಾಗಿ ಉತ್ತರ ಇಸ್ರೇಲ್‌ನ ಸೇನಾ ನೆಲೆಗಳ ಮೇಲೆ ಲೆಬನಾನ್‌ ನಡೆಸಿದೆ.ಪೇಜರ್‌, ವಾಕಿಟಾಕಿ ಸ್ಫೋಟಕ್ಕೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ ಇರಾನ್‌ ಬೆಂಬಲಿತ ಲೆಬನಾನ್‌ ಬಂಡುಕೋರ ಪಡೆಯ ಮೇಲೆ ಸೋಮವಾರ ಇಸ್ರೇಲ್‌ ಮಾರಣಾಂತಿಕ ದಾಳಿ ನಡೆಸಿದೆ. ಹಿಜ್ಜುಲ್ಲಾ […]

ಲೆಬನಾನ್‌ ಮೇಲೆ ಇಸ್ರೇಲ್‌ ಮಾರಕ ದಾಳಿ : 492 ಮಂದಿ ಸಾವು Read More »

ಪೇಜರ್‌ ಬಳಿಕ ಲೆಬನಾನ್‌ನಲ್ಲಿ ವಾಕಿಟಾಕಿ ಸ್ಫೋಟ : 20 ಮಂದಿ ಸಾವು

ಜಗತ್ತನ್ನು ಚಕಿತಗೊಳಿಸಿದ ಹೊಸ ರೀತಿಯ ಯುದ್ಧತಂತ್ರ ಬೇರುತ್‌ : ಮಂಗಳವಾರವಷ್ಟೇ ಲೆಬನಾನ್​ನಲ್ಲಿ ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಸಾವಿರಾರು ಪೇಜರ್​ಗಳು ಸ್ಫೋಟಗೊಂಡು 10 ಮಂದಿ ಸತ್ತು 3,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಈಗ ವಾಕಿಟಾಕಿಗಳು ಸ್ಫೋಟಗೊಂಡಿವೆ. ಮಂಗಳವಾರದ ಸ್ಫೋಟದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ಬುಧವಾರ ನಡೆಯುತ್ತಿರುವಾಗಲೇ ವಾಕಿಟಾಕಿಗಳು ಹಾಗೂ ಇತರ ಉಪಕರಣಗಳು ಸ್ಫೋಟಗೊಂಡು 20ಕ್ಕೂ ಅಧಿಕ ಮಂದಿ ಸಾವಿಒಗೀಡಾಗಿದ್ದಾರೆ ಹಾಗೂ 500ರಷ್ಟು ಮಂದಿ ಗಾಯಗೊಂಡಿದ್ದಾರೆ.ಇದು ಕೂಡ ಇಸ್ರೇಲ್‌ನದ್ದೇ ಕೃತ್ಯ ಎನ್ನಲಾಗಿದೆ. ಇಸ್ರೇಲ್‌ ಸಾರಿರುವ ಈ ಹೊಸ ಸಮರವನ್ನು

ಪೇಜರ್‌ ಬಳಿಕ ಲೆಬನಾನ್‌ನಲ್ಲಿ ವಾಕಿಟಾಕಿ ಸ್ಫೋಟ : 20 ಮಂದಿ ಸಾವು Read More »

ಬರಗಾಲದ ಹೊಡೆತದಿಂದ ತತ್ತರಿಸಿದ ಜಿಂಬಾಬ್ವೆಯಲ್ಲಿ ಆನೆ ಮಾಂಸ ಭಕ್ಷಣೆ

200 ಆನೆಗಳನ್ನು ಕೊಂದು ಜನರಿಗೆ ಮಾಂಸ ಪೂರೈಕೆ ಹರಾರೆ: ನಮೀಬಿಯ ಬಳಿಕ ಜಿಂಬಾಬ್ವೆ ಸರ್ಕಾರ ಕೂಡ ಜನರ ಹಸಿವು ತಣಿಸಲು ಕಾಡಾನೆ ಮತ್ತಿತರ ಕಾಡುಪ್ರಾಣಿಗಳನ್ನು ಸಾಯಿಸಿ ಮಾಂಸ ಹಂಚಲು ನಿರ್ಧರಿಸಿದೆ. ನಮೀಬಿಯದಂತೆ ಜಿಂಬಾಬ್ವೆ ಕೂಡ ಭೀಕರ ಬರಗಾಲವನ್ನು ಅನುಭವಿಸುತ್ತಿದೆ. ಮಳೆಯಾಗದೆ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ ಆಹಾರದ ತೀವ್ರ ಕೊರತೆ ತಲೆದೋರಿ ಜನರು ಹಸಿವಿನಿಂದ ಸಾಯತೊಡಗಿದ್ದಾರೆ. ಹೀಗಾಗಿ ಜಿಂಬಾಬ್ವೆ ಸರ್ಕಾರ ಕಾಡಾನೆ ಸಹಿತ ಕಾಡುಪ್ರಾಣಿಗಳನ್ನು ಕೊಂದು ಜನರಿಗೆ ಮಾಂಸ ಪೂರೈಸಲು ತೀರ್ಮಾನಿಸಿದೆ.1.63 ಕೋಟಿ ಜನಸಂಖ್ಯೆ ಹೊಂದಿರುವ ಜಿಂಬಾಬ್ವೆಐಲ್ಲಿ

ಬರಗಾಲದ ಹೊಡೆತದಿಂದ ತತ್ತರಿಸಿದ ಜಿಂಬಾಬ್ವೆಯಲ್ಲಿ ಆನೆ ಮಾಂಸ ಭಕ್ಷಣೆ Read More »

ಲೆಬನಾನ್‌ : 5 ತಿಂಗಳ ಹಿಂದೆ ತರಿಸಿದ ಪೇಜರ್‌ ಸ್ಫೋಟಿಸಿ 9 ಮಂದಿ ಸಾವು, 2,750 ಮಂದಿಗೆ ಗಾಯ

ಪುಟಾಣಿ ಪೇಜರ್‌ ಒಳಗೆ ಇಸ್ರೇಲ್‌ ತೆಳುವಾದ ಸ್ಫೋಟಕ ಅಳವಡಿಸಿದ ಅನುಮಾನ ಬೈರುತ್: ಲೆಬನಾನ್‌ ಮತ್ತು ಸಿರಿಯಾದಲ್ಲಿ ಹಿಜ್ಬುಲ್ಲಾ ಸಂಘಟನೆ ಸದಸ್ಯರ ಮೇಲೆ ರಹಸ್ಯ ದಾಳಿ ನಡೆದಿದೆ. ಉಗ್ರರು ಸಂವಹನಕ್ಕಾಗಿ ಬಳಸುತ್ತಿದ್ದ ಅಂಗೈಯೊಳಗಿರುವ ಪೇಜರ್‌ ಸಾಧನವೇ ಸ್ಫೋಟಗೊಂಡು ಕನಿಷ್ಠ 9 ಮಂದಿ ಸಾವನ್ನಪ್ಪಿ 2,750ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದು ಇಸ್ರೇಲ್‌ನ ಬೇಹುಪಡೆ ಮೊಸಾದ್‌ ನಡೆಸಿದ ಕೃತ್ಯ ಎಂಬ ಬಲವಾದ ಸಂಶಯವಿದೆ. ಹಿಜ್ಬುಲ್ಲಾ ಉಗ್ರರು ಸಂವಹನಕ್ಕಾಗಿ ಬಳಸುವ ಪುಟಾಣಿ ಪೇಜರ್‌ ಉಪಕರಣಗಳಲ್ಲಿ ಮೊಸಾದ್‌ ಐದು ತಿಂಗಳ ಹಿಂದೆಯೇ ಸ್ಫೋಟಕವನ್ನು

ಲೆಬನಾನ್‌ : 5 ತಿಂಗಳ ಹಿಂದೆ ತರಿಸಿದ ಪೇಜರ್‌ ಸ್ಫೋಟಿಸಿ 9 ಮಂದಿ ಸಾವು, 2,750 ಮಂದಿಗೆ ಗಾಯ Read More »

ಡೊನಾಲ್ಡ್‌ ಟ್ರಂಪ್‌ ಹತ್ಯೆಗೆ ಇನ್ನೊಂದು ಪ್ರಯತ್ನ

ಗಾಲ್ಫ್‌ ಆಡುತ್ತಿರುವಾಗ ಗುಂಡು ಹಾರಿಸಿದ ಬಂದೂಕುದಾರಿ ವಾಷಿಂಗ್ಟನ್‌ : ಅಮೆರಿಕದ ಮಾಜಿ ಅಧ್ಯಕ್ಷ, ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡೊನಾಲ್ಡ್‌ ಟ್ರಂಪ್‌ ಅವರನ್ನು ಸಾಯಿಸಲು ಇನ್ನೊಂದು ಪ್ರಯತ್ನ ನಡೆದಿದೆ. ಫ್ಲೋರಿಡಾದ ಗಾಲ್ಫ್‌ ಕ್ಲಬ್‌ನಲ್ಲಿ ಟ್ರಂಪ್‌ ಇರುವ ಸ್ಥಳದಲ್ಲಿ ಗುಂಡು ಹಾರಾಟ ನಡೆಸಲಾಗಿದೆ. ಆದರೆ ಈ ಹತ್ಯಾ ಯತ್ನದಿಂದ ಟ್ರಂಪ್‌ ಸ್ವಲ್ಪದರಲ್ಲೇ ಪಾರಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಮೆರಿಕದ ಗೂಢಚಾರಿಕೆ ಸಂಸ್ಥೆ ಎಫ್‌ಬಿಐ ಹೇಳಿಕೆ ಬಿಡುಗಡೆ ಮಾಡಿದೆ.ಗಾಲ್ಫ್‌ ಕ್ಲಬ್‌ ಬಳಿ ವ್ಯಕ್ತಿಯೊಬ್ಬ ಬಂದೂಕು ಜೊತೆ ಬಂದು

ಡೊನಾಲ್ಡ್‌ ಟ್ರಂಪ್‌ ಹತ್ಯೆಗೆ ಇನ್ನೊಂದು ಪ್ರಯತ್ನ Read More »

ಹಿಜಾಬ್‌ ಧರಿಸದ ಮಹಿಳೆಯರನ್ನು ನಡುರಸ್ತೆಯಲ್ಲಿ ಥಳಿಸಿದ ಗುಂಪು

ಢಾಕಾ: ಬಾಂಗ್ಲಾದೇಶದಲ್ಲಿ ಹಿಜಾಬ್​ ಧರಿಸಿಲ್ಲ ಎಂದು ನಡುರಸ್ತೆಯಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಸಿದ್ಧ ಕಾಕ್ಸ್​ ಬಜಾರ್​ನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ದೇಶಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿದ್ದು, ಬಾಂಗ್ಲಾದೇಶ ಇನ್ನೊಂದು ಅಫಘಾನಿಸ್ಥಾನವಾಗುತ್ತಿದೆ ಎಂದು ಆತಂಕ ವ್ಯಕ್ತವಾಗಿದೆ.ಹಿಜಾಬ್‌ ಧರಿಸದ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಪುರುಷರ ಗುಂಪೊಂದು ದಾಳಿ ನಡೆಸುತ್ತಿರುವುದು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡ ವಿಡಿಯೋಗಳಲ್ಲಿ ಕಾಣಿಸುತ್ತಿದೆ. ಓರ್ವ ಮಹಿಳೆಯನ್ನು ದೊಣ್ಣೆಯಿಂದ ಥಳಿಸಲಾಗಿದ್ದು, ಮತ್ತೋವ್ರ ಮಹಿಳೆಗೆ ಸಿಟ್​-ಅಪ್ ಶಿಕ್ಷೆ

ಹಿಜಾಬ್‌ ಧರಿಸದ ಮಹಿಳೆಯರನ್ನು ನಡುರಸ್ತೆಯಲ್ಲಿ ಥಳಿಸಿದ ಗುಂಪು Read More »

ಪೊಲೀಸ್‌ ಠಾಣೆಯೊಳಗೆ ನುಗ್ಗಿ ಹಿಂದೂ ಬಾಲಕನ ಮೇಲೆ ಬರ್ಬರ ಹಲ್ಲೆ

ಢಾಕ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಪೊಲೀಸ್​ ಠಾಣೆಯೊಳಗೆ ನುಗ್ಗಿ ಮುಸ್ಲಿಂ ಗುಂಪು ಹಿಂದೂ ಹುಡುಗನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಬಾಂಗ್ಲಾದೇಶದ 15 ವರ್ಷದ ಹಿಂದೂ ಬಾಲಕ ಉತ್ಸವ್ ಮಂಡಲ್ ಸಾಮಾಜಿಕ ಮಾಧ್ಯಮದಲ್ಲಿ ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾನೆ ಎಂದು ಆರೋಪಿಸಿ ಗುಂಪು ಪೊಲೀಸ್​ ಠಾಣೆಯೊಳಗೆ ನುಗ್ಗಿ ಅಮಾನುಷವಾಗಿ ಥಳಿಸಿದೆ. ಖುಲ್ನಾದ ಸೋನದಂಗ ವಸತಿ ಪ್ರದೇಶದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಉತ್ಸವ್‌ಗೆ

ಪೊಲೀಸ್‌ ಠಾಣೆಯೊಳಗೆ ನುಗ್ಗಿ ಹಿಂದೂ ಬಾಲಕನ ಮೇಲೆ ಬರ್ಬರ ಹಲ್ಲೆ Read More »

ಪ್ರವಾಹ ತಡೆಯಲು ವಿಫಲರಾದ 30 ಅಧಿಕಾರಿಗಳನ್ನು ಗಲ್ಲಿಗೇರಿಸಲು ಆದೇಶ

ಕಿಮ್ ಜೊಂಗ್ ಉನ್ ಆಡಳಿತದಲ್ಲಿ ಕರ್ತವ್ಯಲೋಪ ಮಾಡಿದರೆ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಕೊರಿಯಾ: ಕಳೆದ ಜುಲೈನಲ್ಲಿ ಉತ್ತರ ಕೊರಿಯಾದಲ್ಲಿ ಉಂಟಾಗಿದ್ದ ಭೀಕರ ಪ್ರವಾಹವನ್ನು ತಡೆಯಲು ವಿಫಲರಾದ ಆರೋಪ ಹೊರಿಸಿ 30 ಸರಕಾರಿ ಅಧಿಕಾರಿಗಳನ್ನು ಗಲ್ಲಿಗೇರಿಸಲು ಅಲ್ಲಿನ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಆದೇಶಿಸಿದ್ದಾರೆ.ಜುಲೈನಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 4000ಕ್ಕೂ ಅಧಿಕ ಜನ ಸಾವಿಗೀಡಾಗಿದ್ದರು. ಇದಕ್ಕೆ ಅಧಿಕಾರಿಗಳ ಕರ್ತವ್ಯಲೋಪ ಕಾರಣ ಎಂದು ಹೇಳಿರುವ ಕಿಮ್ ಜೊಂಗ್ ಉನ್ 30 ಅಧಿಕಾರಿಗಳನ್ನು ಹೊಣೆ ಮಾಡಿ ಅವರನ್ನು ಸಾಯಿಸಲು ಆದೇಶಿಸಿದ್ದಾರೆ ಎಂದು ಉತ್ತರ

ಪ್ರವಾಹ ತಡೆಯಲು ವಿಫಲರಾದ 30 ಅಧಿಕಾರಿಗಳನ್ನು ಗಲ್ಲಿಗೇರಿಸಲು ಆದೇಶ Read More »

14ರ ಬಾಲಕ ಹಾರಿಸಿದ ಗುಂಡಿಗೆ ಇಬ್ಬರು ಶಿಕ್ಷಕರ ಸಹಿತ 4 ಮಂದಿ ಬಲಿ

ವಾಷಿಂಗ್ಟನ್‌: ಅಮೆರಿಕದ ಜಾರ್ಜಿಯಾ ರಾಜ್ಯದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ. ಒಂಬತ್ತು ಮಂದಿ ಗಾಯಗೊಂಡಿದ್ದಾರೆ.ಬಂದೂಕುಧಾರಿ ಬಾಲಕ ಬಂಧನದಲ್ಲಿದ್ದಾನೆ. ಜಾರ್ಜಿಯಾದ ವಿಂಡರ್‌ನಲ್ಲಿರುವ ಅಪಾಲಾಚಿ ಹೈಸ್ಕೂಲ್‌ನ ಕೋಲ್ಟ್ ಕ್ರೇ (14) ಎಂಬ ವಿದ್ಯಾರ್ಥಿ ಗುಂಡಿನ ದಾಳಿ ನಡೆಸಿದಾತ ಎಂದು ಗುರುತಿಸಲಾಗಿದೆ.ಪೊಲೀಸರು ಗುಂಡಿನ ದಾಳಿ ಮತ್ತು ಅದರ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ವರ್ಷ ಅಮೆರಿಕದಲ್ಲಿ ಕನಿಷ್ಠ 385 ಗುಂಡಿನ ದಾಳಿ ಪ್ರಕರಣಗಳು ಸಂಭವಿಸಿವೆ.

14ರ ಬಾಲಕ ಹಾರಿಸಿದ ಗುಂಡಿಗೆ ಇಬ್ಬರು ಶಿಕ್ಷಕರ ಸಹಿತ 4 ಮಂದಿ ಬಲಿ Read More »

ಉದ್ಘಾಟನೆಯಾದ ದಿನವೇ ಲೂಟಿಯಾಗಿ ಹೋಯಿತು ಮಾಲ್‌

ಮಾಲ್‌ಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನೆಲ್ಲ ದೋಚಿಕೊಂಡು ಹೋದ ಪಾಕಿಸ್ಥಾನದ ಜನ ಕರಾಚಿ : ಪಾಕಿಸ್ಥಾನದ ಆರ್ಥಿಕ ಸ್ಥಿತಿ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಶುಕ್ರವಾರ ಅಲ್ಲಿನ ಮಾಲ್‌ನಲ್ಲಿ ನಡೆದ ಘಟನೆಯೇ ಸಾಕ್ಷಿ. ಮೂಲತಃ ಪಾಕಿಸ್ಥಾನೀಯರೇ ಆದ ವಿದೇಶಿ ಉದ್ಯಮಿಯೊಬ್ಬರು ಕರಾಚಿಯ ಗುಲಿಸ್ತಾನ್-ಎ-ಜೋಹರ್‌ನಲ್ಲಿ ಡ್ರೀಮ್‌ ಬಜಾರ್‌ ಎಂಬ ಅದ್ದೂರಿ ಮಾಲ್‌ ತೆರೆದಿದ್ದರು. ಶುಕ್ರವಾರ ಈ ಮಾಲ್‌ ಉದ್ಘಾಟನೆಗೊಂಡಿದ್ದು, ಮಾಲ್‌ಗೆ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಕೆಲವೊಂದು ವಸ್ತುಗಳ ಮೇಲೆ ರಿಯಾಯಿತಿಯನ್ನು ಘೋಷಿಸಲಾಗಿತ್ತು. ಆದರೆ ನಂತರ ಆದ ಕಥೆಯೇ ಬೇರೆ. ಮಾಲ್‌ಗೆ ಸಾಗರೋಪಾದಿಯಲ್ಲಿ

ಉದ್ಘಾಟನೆಯಾದ ದಿನವೇ ಲೂಟಿಯಾಗಿ ಹೋಯಿತು ಮಾಲ್‌ Read More »

error: Content is protected !!
Scroll to Top