ವಿದೇಶ

ಹಿಜಾಬ್ ನಿಷೇಧಿಸಿದ ಮುಸ್ಲಿಂ ರಾಷ್ಟ್ರ ತಜಕಿಸ್ಥಾನ

ಭಾರತದಲ್ಲಿ ಒಂದು ಸಮುದಾಯದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಹೋರಾಟ ಮಾಡುತ್ತಿದ್ದಾರೆ ಆದರೆ ಪೂರ್ಣ ಮುಸ್ಲಿಂ ರಾಷ್ಟ್ರವಾಗಿರುವ ತಜಕಿಸ್ಥಾನ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ನಿಷೇಧಿಸಲು ಆದೇಶ ಹೊರಡಿಸಿದೆ. ತಜಕಿಸ್ಥಾನ ಮುಸ್ಲಿಂ ರಾಷ್ಟ್ರವಾಗಿದ್ದರೂ ಸಾಂವಿಧಾನಿಕವಾಗಿ ಜಾತ್ಯಾತೀತ ರಾಷ್ಟ್ರವಾಗಿದೆ. ಇಲ್ಲಿನ ಸಂಸತ್ ಹಿಜಾಬ್ ಅನ್ನು ನಿಷೇಧಿಸುವ ಮಸೂದೆಯನ್ನು ಅನುಮೋದಿಸಿದೆ. ಶಾಲೆಗಳಲ್ಲಿ ಮಾತ್ರವಲ್ಲ ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲೂ ಹಿಜಾಬ್‌ ಧರಿಸುವುದನ್ನು ನಿಷೇಧಿಸಲಾಗಿದೆ. ಗಡ್ಡ ಬೆಳೆಸುವುದನ್ನೂ ಕೂಡ ತಜಿಕಿಸ್ಥಾನದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ದೇಶದಲ್ಲಿ ಶೇ. 95ರಷ್ಟು ಮುಸ್ಲಿಂ ಜನರಿದ್ದಾರೆ, ಆದರೆ […]

ಹಿಜಾಬ್ ನಿಷೇಧಿಸಿದ ಮುಸ್ಲಿಂ ರಾಷ್ಟ್ರ ತಜಕಿಸ್ಥಾನ Read More »

ಹಜ್ ಯಾತ್ರೆ ಸಂದರ್ಭ ಭಾರೀ ದುರಂತ l 550 ಮಂದಿ ಮೃತ್ಯು, 2 ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥ

ಹಜ್ ಯಾತ್ರೆಗೆ ಹೋಗಿದ್ದ ವಿವಿಧ ದೇಶಗಳ 550 ಯಾತ್ರಾರ್ಥಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಉಷ್ಣಾಂಶ ಏರಿಕೆಯಿಂದ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಮೆಕ್ಕಾದ ರಸ್ತೆ ಬೀದಿಯಲ್ಲಿ ಯಾತ್ರಾರ್ಥಿಗಳು ಅಸ್ವಸ್ಥರಾಗಿ ಮಲಗಿದ್ದಾರೆ. ಯಾತ್ರೆಯಲ್ಲಿ ಉಸಿರು ಬಿಟ್ಟ ಯಾತ್ರಾರ್ಥಿಗಳ ಶವಗಳನ್ನು ವಿಲೇವಾರಿ ಮಾಡಿಲ್ಲ ಅನ್ನೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮೆಕ್ಕಾದಲ್ಲಿ ಕಳೆದ ವರ್ಷ 240 ಮಂದಿ ಸಾವನ್ನಪ್ಪಿದ್ದರು. ಈ ಬಾರಿ ಈಜಿಪ್ಟ್ ದೇಶದ 323 ಮಂದಿ, ಜೋರ್ಡಾನ್ ದೇಶದ 60 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೆಕ್ಕಾದಲ್ಲಿ ವರ್ಷದಿಂದ ವರ್ಷಕ್ಕೆ ಉಷ್ಣಾಂಶ

ಹಜ್ ಯಾತ್ರೆ ಸಂದರ್ಭ ಭಾರೀ ದುರಂತ l 550 ಮಂದಿ ಮೃತ್ಯು, 2 ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥ Read More »

ಗೂಗಲ್‌ ಕ್ಲೌಡ್ ಸಂಸ್ಥೆಯ ಉಪಾಧ್ಯಕ್ಷರಾಗಿ ರಾಜ್‌ ಪೈ ನೇಮಕ

ಮಣಿಪಾಲ : ಪೈ ಕುಟುಂಬದ ಸದಸ್ಯ ರಾಜ್‌ ಪೈ (ರಜನೇಶ್‌ ಪೈ) ಅವರು ಅಮೆರಿಕದ  ಗೂಗಲ್‌ ಕ್ಲೌಡ್ ಸಂಸ್ಥೆಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಜ್‌ ಪೈ ಅವರು ಕ್ಲೌಡ್ ಕೃತಕ ಬುದ್ಧಿ ಮತ್ತು  ತಂಡದ ನಿರ್ವಹಣೆಯನ್ನು ನೋಡಿಕೊಳ್ಳುವವರು ಆಗಿದ್ದರು. ಗೂಗಲ್‌ ಸಂಸ್ಥೆ ಕ್ಲೌಡ್ ವ್ಯವಹಾರಕ್ಕೆ ಪ್ರಾಶಸ್ತ್ಯ ನೀಡ ಬಯಸಿರುವುದು ಈ ನೇಮಕಾತಿಯ ಸಂಕೇತವಾಗಿದೆ. ಪೈಯವರು ಅಮೆಜಾನ್‌, ಸಿಯಾಟಲ್‌ನಿಂದ ಈ ಹುದ್ದೆಗೆ ಬಂದಿದ್ದಾರೆ. ಅವರು ಅಮೆಜಾನ್‌ ಎಡಬ್ಲ್ಯುಎಸ್‌ ಉಪಾಧ್ಯಕ್ಷರಾಗಿದ್ದರು. ಅಮೆಜಾನ್‌ ಸಂಸ್ಥೆಯಲ್ಲಿ ಆರಂಭದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಹಿಂದೆ ಮೈಕ್ರೋಸಾಫ್ಟ್,

ಗೂಗಲ್‌ ಕ್ಲೌಡ್ ಸಂಸ್ಥೆಯ ಉಪಾಧ್ಯಕ್ಷರಾಗಿ ರಾಜ್‌ ಪೈ ನೇಮಕ Read More »

ಕುವೈತ್‍ ನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಭಾರತೀಯರು ಸೇರಿದಂತೆ 35 ಮಂದಿ ಸಜೀವ ದಹನ

ಕುವೈತ್‍ ನಲ್ಲಿ ಮಲಯಾಳಿ ಉದ್ಯಮಿಗೆ ಸೇರಿದ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ನಾಲ್ವರು ಭಾರತೀಯರು ಸೇರಿದಂತೆ 35 ಮಂದಿ ಸಜೀವ ದಹನವಾದ ಘಟನೆ ನಡೆದಿದೆ. ದಕ್ಷಿಣ ಕುವೈತ್‌ನ ಮಂಗಾಫ್ ನಗರದ ಕಟ್ಟಡದಲ್ಲಿ ಅವಘಡ ಸಂಭವಿಸಿದ್ದು, ಈ ಕಟ್ಟಡದಲ್ಲಿರುವವರು ಹೆಚ್ಚಿನವರು ಮಲಯಾಳಿಗಳು ಎನ್ನಲಾಗಿದೆ. ಮೃತರಲ್ಲಿ ಇಬ್ಬರು ತಮಿಳುನಾಡು ಮತ್ತು ಉತ್ತರ ಭಾರತದವರು ಎನ್ನಲಾಗಿದೆ. ಕುವೈತ್ ಆರೋಗ್ಯ ಸಚಿವಾಲಯ ನೀಡಿದ ಹೇಳಿಕೆ ಪ್ರಕಾರ, ಗಂಭೀರ ಸ್ಥಿತಿಯಲ್ಲಿರುವ ಎಲ್ಲಾ ಗಾಯಾಳುಗಳನ್ನು ಅಗತ್ಯ ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.

ಕುವೈತ್‍ ನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಭಾರತೀಯರು ಸೇರಿದಂತೆ 35 ಮಂದಿ ಸಜೀವ ದಹನ Read More »

ಚೆನ್ನೈ ಏರ್ ಪೋರ್ಟ್ ನಲ್ಲಿ ಜೀವಂತ ಗುಂಡುಗಳ ಸಮೇತ ಸಿಕ್ಕಿಬಿದ್ದ ನಟ ಕರುಣಾಸ್

ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಕರೆಗಳು ಬರುತ್ತಿರುವುದರಿಂದ  ವಿಮಾನ ನಿಲ್ದಾಣದಲ್ಲಿ ಎಲ್ಲರನ್ನೂ ಕೂಲಂಕುಷವಾಗಿ ತಪಾಸಣೆ ಮಾಡಲಾಗುತ್ತದೆ. ಜನಸಾಮಾನ್ಯರಷ್ಟೇ ಸೆಲೆಬ್ರಿಟಿಗಳಿಗೂ ಇದು ತಪ್ಪಿದ್ದಲ್ಲ. ಕೆಲವೊಮ್ಮೆ ನಕಲಿ ಪ್ರಕರಣಗಳೆಂದು ನಿರ್ಲಕ್ಷಿಸಲಾಗುತ್ತದೆ. ಇತ್ತೀಚೆಗಷ್ಟೇ ವಿಮಾನ ನಿಲ್ದಾಣದಲ್ಲಿ ಜನಪ್ರಿಯ ನಟರೊಬ್ಬರ ಬ್ಯಾಗ್​ನಲ್ಲಿ 40 ಜೀವಂತ ಬುಲೆಟ್​ಗಳು ಪತ್ತೆಯಾಗಿದ್ದು, ಭಾರೀ ಗೊಂದಲಕ್ಕೆ ಕಾರಣವಾಗಿದೆ. ಕರುಣಾಸ್ ತಮ್ಮ ಹಾಸ್ಯದ ಮೂಲಕ ತಮಿಳು ಇಂಡಸ್ಟ್ರಿಯಲ್ಲಿ ಉತ್ತಮ ಖ್ಯಾತಿಯನ್ನು ಗಳಿಸಿದ್ದಾರೆ. ಆ ನಂತರ ರಾಜಕೀಯ ಪ್ರವೇಶಿಸಿ ಶಾಸಕರಾಗಿ ಗೆದ್ದರು. ನಂತರ ಸ್ಪರ್ಧಿಸಿ ಸೋತರು. ಇಂದು ಬೆಳಗ್ಗೆ ತಿರುಚ್ಚಿಗೆ ತೆರಳಲು

ಚೆನ್ನೈ ಏರ್ ಪೋರ್ಟ್ ನಲ್ಲಿ ಜೀವಂತ ಗುಂಡುಗಳ ಸಮೇತ ಸಿಕ್ಕಿಬಿದ್ದ ನಟ ಕರುಣಾಸ್ Read More »

ಉತ್ತರ ಗಾಝಾದ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ 70 ಶವಗಳು ಪತ್ತೆ !

ಗಾಝಾ : ಉತ್ತರ ಗಾಝಾದ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಕನಿಷ್ಠ 70 ಫೆಲೆಸ್ತೀನೀಯರು ಮೃತಪಟ್ಟಿದ್ದು, ಸುಮಾರು ಮೂರು ವಾರಗಳ ದಾಳಿಯ ನಂತರ ಇಸ್ರೇಲ್ ತನ್ನ ಸಶಸ್ತ್ರ ಪಡೆಗಳನ್ನು ಹಿಂತೆಗೆದುಕೊಂಡಿದೆ. ಆಂಬ್ಯುಲೆನ್ಸ್ ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿ ಶಿಬಿರದಿಂದ 20 ಮಕ್ಕಳು ಸೇರಿದಂತೆ ಸುಮಾರು 70 ಶವಗಳನ್ನು ಹೊರತೆಗೆದಿದ್ದಾರೆ ಎಂದು ಸ್ಥಳೀಯ ವೈದ್ಯಕೀಯ ಮೂಲಗಳು ಶುಕ್ರವಾರ ತಿಳಿಸಿವೆ. ಕಾರ್ಯಾಚರಣೆಯಲ್ಲಿ ಇಸ್ರೇಲಿ ವಾಯು ಮತ್ತು ಫಿರಂಗಿ ದಾಳಿಯಿಂದಾಗಿ ಮನೆಗಳು, ಆಶ್ರಯಗಳು ಮತ್ತು ಆಸ್ಪತ್ರೆಗಳ ಅವಶೇಷಗಳ ಅಡಿಯಲ್ಲಿ ಹಲವಾರು ಜನರು ಕಾಣೆಯಾಗಿದ್ದಾರೆ

ಉತ್ತರ ಗಾಝಾದ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ 70 ಶವಗಳು ಪತ್ತೆ ! Read More »

ಇರಾನ್ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪಥನ | ಪ್ರಯಾಣಿಕರೆಲ್ಲರೂ ದುರ್ಮರಣ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ವಿದೇಶಾಂಗ ಸಚಿವ ಹುಸೇನ್ ಅಮಿರಾಬೊಲ್ಲಿಯನ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತದ ಸ್ಥಳದಲ್ಲಿ ಬದುಕುಳಿದವರು ಕಂಡುಬಂದಿಲ್ಲ ಎಂದು ಇರಾನಿನ ಸರ್ಕಾರಿ ಮಾಧ್ಯಮ ಸೋಮವಾರ ತಿಳಿಸಿದೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಪತ್ತೆಯಾಗಿದೆ ಆದರೆ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಇರಾನ್ ನ ರೆಡ್ ಕ್ರೆಸೆಂಟ್ ಮುಖ್ಯಸ್ಥರು ಹೇಳಿದ್ದಾರೆ. ಅಧ್ಯಕ್ಷ ರೈಸಿ ಮತ್ತು ಅಜೆರ್ಬೈಜಾನ್ ಅಧ್ಯಕ್ಷ ಇಲ್ಲಾಮ್ ಅಲಿಯನ್ ತಮ್ಮ ಹಂಚಿಕೆಯ ಗಡಿಯಲ್ಲಿರುವ ಕ್ವಿಜ್ ಖಲಾಸಿ ಅಣೆಕಟ್ಟನ್ನು ಉದ್ಘಾಟಿಸಿದ ನಂತರ ಅಧ್ಯಕ್ಷ

ಇರಾನ್ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪಥನ | ಪ್ರಯಾಣಿಕರೆಲ್ಲರೂ ದುರ್ಮರಣ Read More »

ಭಾರತದ ಎರಡು ಮಸಾಲೆ ಪದಾರ್ಥಗಳನ್ನು ನಿಷೇಧ ಮಾಡಿದ ನೇಪಾಳ

ವಿದೇಶ: ಭಾರತದ ಎ೦ಡಿಎಚ್ ಹಾಗೂ ಎವರೆಸ್ಟ್ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬ೦ದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು ಈ ಎರಡು ಮಸಾಲೆ ಪದಾರ್ಥಗಳಿಗೆ ನಿಷೇಧ ಹೇರಿದೆ. ಎವರೆಸ್ಟ್ ಮತ್ತು ಎ೦ಡಿಹೆಚ್ ಬ್ರಾ೦ಡ್ ಮಸಾಲೆಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ನಾವು ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ಸಹ ನಿಷೇಧಿಸಿದ್ದೇವೆ ಎ೦ದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈ ಎರಡು ನಿರ್ದಿಷ್ಟ ಬ್ರಾಂಡ್‌ಗಳ ಮಸಾಲೆಗಳಲ್ಲಿ ರಾಸಾಯನಿಕಗಳ ಪರೀಕ್ಷೆಗಳು ನಡೆಯುತ್ತಿವೆ. ಅಂತಿಮ ವರದಿ ಬರುವವರೆಗೆ ನಿಷೇಧವು ಜಾರಿಯಲ್ಲಿರುತ್ತದೆ ಎ೦ದು

ಭಾರತದ ಎರಡು ಮಸಾಲೆ ಪದಾರ್ಥಗಳನ್ನು ನಿಷೇಧ ಮಾಡಿದ ನೇಪಾಳ Read More »

ಪ್ಯಾರಾಗ್ಲೀಡಿಂಗ್‍ : ಶಿಕ್ಷಕಿ ಮೃತ್ಯು

ಥಾಯ್ಲೆಂಡ್: ಕೇರಳದ ಶಿಕ್ಷಕಿಯೊಬ್ಬರು ಪ್ಯಾರಾಗ್ಲೀಡಿಂಗ್‍ ಮಾಡುವಾಗ ಥಾಯ್ಲೆಂಡ್‌ನಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಚಿರಂಚಿರ ಸರಕಾರಿ ಯುಪಿ ಶಾಲೆಯ ಮುಖ್ಯ ಶಿಕ್ಷಕಿ ರಾಣಿ ಮ್ಯಾಥ್‍ ಮೃತಪಟ್ಟವರು. ರಾಣಿ ಮ್ಯಾಥ್ ಅವರ ಪತಿ ಕೂಡ ಥಾಯ್ಲೆಂಡ್‌ನಲ್ಲಿದ್ದಾರೆ. ಅವರು ರಜೆಯಲ್ಲಿ ಸುತ್ತಾಡಲು ಥಾಯ್ಲೆಂಡ್ ಗೆ ಹೋಗಿದ್ದರು.. ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರದ ನಂತರ ಮೃತದೇಹವನ್ನು ಮನೆಗೆ ತರಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಪ್ಯಾರಾಗ್ಲೀಡಿಂಗ್‍ : ಶಿಕ್ಷಕಿ ಮೃತ್ಯು Read More »

ದುಬೈಯಲ್ಲಿ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ಥ

ದುಬೈ : ದುಬೈನಲ್ಲಿ ಧಾರಾಕಾರ ಮಳೆಯು ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ (ಏಪ್ರಿಲ್ 16) ಸುರಿದ ಭಾರಿ ಮಳೆಗೆ ರಸ್ತೆ, ಮನೆ, ಮಾಲ್ ಗಳು ಜಲಾವೃತಗೊಂಡಿರುತ್ತದೆ. ಭಾರೀ ಮಳೆಯಿಂದಾಗಿ ದುಬೈನಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೊಲ್ಲಿಯಲ್ಲಿ ಚಂಡಮಾರುತದಿಂದಾಗಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇವೆಗಳ ವ್ಯತ್ಯಯ ಉಂಟಾಯಿತು. ಹಲವಾರು ಗಂಟೆಗಳ ಕಾಲ ಇಲ್ಲಿಂದ ವಿಮಾನಗಳು ಟೇಕಾಫ್ ಆಗಲಿಲ್ಲ. ರನ್‌ವೇ ಮೊಣಕಾಲಿನ ಆಳದಲ್ಲಿ ನೀರಿತ್ತು. ಮಳೆಯಿಂದಾಗಿ 50ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ದುಬೈ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಪ್ರವಾಹದ

ದುಬೈಯಲ್ಲಿ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ಥ Read More »

error: Content is protected !!
Scroll to Top