ವಿದೇಶ

ದಕ್ಷಿಣ ಕೊರಿಯಾ ವಿಮಾನ ದುರಂತ : 179 ಮಂದಿ ಸಾವು?

ಯಾರೂ ಬದುಕುಳಿದಿಲ್ಲ ಎಂದ ಅಧಿಕಾರಿಗಳು ಸಿಯೋಲ್: ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಭೀಕರ ವಿಮಾನ ಅವಘಡದಲ್ಲಿ 179 ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಇಬ್ಬರನ್ನು ಮಾತ್ರ ಜೀವ ಸಹಿತ ರಕ್ಷಿಸಲು ಸಾಧ್ಯವಾಗಿದ್ದು, ಉಳಿದ ಎಲ್ಲರೂ ಸಾವಿಗೀಡಾಗಿದ್ದಾರೆ. ಈ ಕುರಿತು ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.175 ಪ್ರಯಾಣಿಕರು ಮತ್ತು 6 ವೈಮಾನಿಕ ಸಿಬ್ಬಂದಿಯಿದ್ದ ವಿಮಾನ ಇಂದು ಬೆಳಗ್ಗೆ 9.05ಕ್ಕೆ (ಅಲ್ಲಿನ ಕಾಲಮಾನ) ಲ್ಯಾಂಡಿಂಗ್‌ ಗಿಯರ್‌ […]

ದಕ್ಷಿಣ ಕೊರಿಯಾ ವಿಮಾನ ದುರಂತ : 179 ಮಂದಿ ಸಾವು? Read More »

ಲ್ಯಾಂಡಿಂಗ್‌ ಆಗುತ್ತಿದ್ದ ವಿಮಾನ ಅಪಘಾತ : 62 ಮಂದಿ ಸಾವು

ಲ್ಯಾಂಡಿಂಗ್‌ ಗೇರ್‌ ವಿಫಲಗೊಂಡು ತಡೆಗೋಡೆಗೆ ಡಿಕ್ಕಿ ಹೊಡೆದ ವಿಮಾನ ಸಿಯೋಲ್‌ : ದಕ್ಷಿಣ ಕೊರಿಯಾದಲ್ಲಿ 175 ಪ್ರಯಾಣಿಕರು ಮತ್ತು 6 ಸಿಬ್ಬಂದಿಯಿದ್ದ ವಿಮಾನವೊಂದು ಪತನಗೊಂಡಿದ್ದು, ಇದುವರೆಗೆ 62 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ವಿಮಾನ ಸಂಪೂರ್ಣ ನಾಶವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದಕ್ಷಿಣ ಕೊರಿಯಾದ ನಗರವಾದ ಮುವಾನ್‌ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಭಾನುವಾರ ಜೆಜು ಏರ್ ವಿಮಾನ ಲ್ಯಾಂಡಿಂಗ್ ಆಗುವಾಗ ಬೆಂಕಿ ಕಾಣಿಸಿಕೊಂಡಿದೆ. ವಿಮಾನವು ಬ್ಯಾಂಕಾಕ್‌ನಿಂದ ಹಿಂತಿರುಗುತ್ತಿತ್ತು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.ಕಳೆದ ವಾರ ಕಜಾಕಿಸ್ಥಾನದ ಅಕ್ಟೌ

ಲ್ಯಾಂಡಿಂಗ್‌ ಆಗುತ್ತಿದ್ದ ವಿಮಾನ ಅಪಘಾತ : 62 ಮಂದಿ ಸಾವು Read More »

ಕ್ರೈಸ್ತರ 19 ಮನೆಗಳಿಗೆ ಬೆಂಕಿಹಚ್ಚಿದ ದುಷ್ಕರ್ಮಿಗಳು

ಕ್ರಿಸ್‌ಮಸ್‌ ಪ್ರಾರ್ಥನೆಗಾಗಿ ಚರ್ಚ್‌ಗೆ ಹೋದ ವೇಳೆ ದುಷ್ಕೃತ್ಯ ಢಾಕಾ: ಬಾಂಗ್ಲಾದೇಶದಲ್ಲಿ ಕ್ಷಿಪ್ರ ಕ್ರಾಂತಿ ನಡೆದು ಮಧ್ಯಂತರ ಸರ್ಕಾರ ಬಂದ ಬಳಿಕ ಅಲ್ಪಸಂಖ್ಯಾತ ಹಿಂದುಗಳ ಮೇಲೆ ದಾಳಿ ಮಾಡುತ್ತಿದ್ದ ಮುಸ್ಲಿಂ ಮೂಲಭೂತವಾದಿಗಳು ಈಗ ಕ್ರೈಸ್ತ ಸಮುದಾಯದವರನ್ನೂ ಗುರಿ ಮಾಡಿಕೊಂಡಿದ್ದಾರೆ. ಚಿತ್ತಗಾಂಗ್ ಪ್ರದೇಶದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ ವೇಳೆ ಕ್ರಿಶ್ಚಿಯನ್ ಸಮುದಾಯದ 19 ಮನೆಗಳಿಗೆ ಬೆಂಕಿ ಹಚ್ಚಿ ಲೂಟಿಗೈದಿದ್ದಾರೆ. ಬಂದರ್ಬನ್ ಜಿಲ್ಲೆಯ ನೋಟುನ್ ತೊಂಗ್‌ಹಿರಿ ತ್ರಿಪುರಾ ಪರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 17 ಮನೆಗಳು ಸಂಪೂರ್ಣ ಭಸ್ಮವಾಗಿದ್ದು, ಎರಡು ಮನೆಗಳು

ಕ್ರೈಸ್ತರ 19 ಮನೆಗಳಿಗೆ ಬೆಂಕಿಹಚ್ಚಿದ ದುಷ್ಕರ್ಮಿಗಳು Read More »

ಜನನಿಬಿಡ ಮಾರುಕಟ್ಟೆಗೆ ಕಾರು ನುಗ್ಗಿಸಿ ಇಬ್ಬರ ಹತ್ಯೆ : ಸೌದಿ ಮೂಲದ ವೈದ್ಯ ಸೆರೆ

ಹೊಸವರ್ಷ, ಕ್ರಿಸ್‌ಮಸ್‌ ಖರೀದಿಗಾಗಿ ತುಂಬಿ ತುಳುಕುತ್ತಿದ್ದ ಮಾರುಕಟ್ಟೆಯಲ್ಲಿ ಭಯೋತ್ಪದನಾ ಕೃತ್ಯ ಬರ್ಲಿನ್‌: ಪೂರ್ವ ಜರ್ಮನಿಯ ಮ್ಯಾಗ್ಡೆಬರ್ಗ್ ನಗರದಲ್ಲಿ ಶುಕ್ರವಾರ ರಾತ್ರಿ ಜನನಿಬಿಡ ಕ್ರಿಸ್‌ಮಸ್ ಮಾರುಕಟ್ಟೆಗೆ ಕಾರೊಂದು ನುಗ್ಗಿ ಇಬ್ಬರು ಮೃತಪಟ್ಟು ಕನಿಷ್ಠ 60 ಮಂದಿ ಗಾಯಗೊಂಡಿದ್ದಾರೆ. ಇದೊಂದು ಉದ್ದೇಶಪೂರ್ವಕ ಭಯೋತ್ಪಾದಕ ದಾಳಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೊಸವರ್ಷ ಮತ್ತು ಕ್ರಿಸ್‌ಮಸ್‌ ಪ್ರಯುಕ್ತ ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿತ್ತು. ರಾತ್ರಿ 7 ಗಂಟೆ ಸುಮಾರಿಗೆ ಮಾರುಕಟ್ಟೆಯಲ್ಲಿ ಕಾರು ಜನರನ್ನು ಗುದ್ದಿಕೊಂಡು ಹೋಗಿದೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ

ಜನನಿಬಿಡ ಮಾರುಕಟ್ಟೆಗೆ ಕಾರು ನುಗ್ಗಿಸಿ ಇಬ್ಬರ ಹತ್ಯೆ : ಸೌದಿ ಮೂಲದ ವೈದ್ಯ ಸೆರೆ Read More »

ಕ್ಯಾನ್ಸರ್‌ ತಡೆಯುವ ಲಸಿಕೆ ಕೊನೆಗೂ ಸಿಕ್ಕಿತು

ರಷ್ಯಾದಲ್ಲಿ ಕ್ಯಾನ್ಸರ್‌ ಪ್ರತಿಬಂಧಕ ಲಸಿಕೆ ಸಂಶೋಧನೆ ಮಾಸ್ಕೊ: ಮನುಕುಲವನ್ನು ಹೆಮ್ಮಾರಿಯಂತೆ ಕಾಡುತ್ತಿರುವ ಮಾರಕ ಕ್ಯಾನ್ಸರ್‌ ರೋಗಕ್ಕೆ ಕೊನೆಗೂ ಲಸಿಕೆ ಸಿಕ್ಕಿದೆ. ರಷ್ಯಾದ ಆರೋಗ್ಯ ಸಚಿವಾಲಯದ ಮಾತನ್ನು ನಂಬುವುದಾದರೆ ಮುಂದಿನ ವರ್ಷವೇ ಮನುಷ್ಯನಿಗೆ ಕ್ಯಾನ್ಸರ್‌ ರೋಗ ಬಾರದಂತೆ ತಡೆಯುವ ಲಸಿಕೆ ಮಾರುಕಟ್ಟೆಗೆ ಬರಲಿದೆ. ಕ್ಯಾನ್ಸರ್ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದಾಗಿ ರಷ್ಯಾದ ಆರೋಗ್ಯ ಸಚಿವಾಲಯ ಘೋಷಿಸಿದೆ. ಇಷ್ಟು ಮಾತ್ರವಲ್ಲ ಅದನ್ನು ತನ್ನ ನಾಗರಿಕರಿಗೆ ಉಚಿತವಾಗಿ ನೀಡಲಾಗುವುದೂ ಎಂದೂ ಹೇಳಿದೆ. ರಷ್ಯಾದ ಆರೋಗ್ಯ ಸಚಿವಾಲಯದ ವಿಕಿರಣ ಶಾಸ್ತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ಮುಖ್ಯಸ್ಥ

ಕ್ಯಾನ್ಸರ್‌ ತಡೆಯುವ ಲಸಿಕೆ ಕೊನೆಗೂ ಸಿಕ್ಕಿತು Read More »

ಪಾಕಿಸ್ಥಾನದಲ್ಲಿ 22 ಭಯೋತ್ಪಾದಕರ ಹತ್ಯೆ

ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ 6 ಸೈನಿಕರ ಸಾವು ಇಸ್ಲಾಮಾಬಾದ್‌: ವಾಯುವ್ಯ ಪಾಕಿಸ್ಥಾನದ ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದಲ್ಲಿ ಎರಡು ದಿನಗಳ ಕಾಲ ನಡೆದ ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 22 ಭಯೋತ್ಪಾದಕರನ್ನು ಪಾಕಿಸ್ಥಾನದ ಭದ್ರತಾ ಪಡೆ ಹತ್ಯೆಗೈದಿದೆ. ಈ ಕಾರ್ಯಾಚರಣೆಯಲ್ಲಿ ಆರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ಥಾನದ ಸೇನೆಯ ಮಾಧ್ಯಮ ವಿಭಾಗ ತಿಳಿಸಿದೆ.ಗುಪ್ತಚರ ಮಾಹಿತಿ ಆಧಾರದ ಮೇಲೆ ಖೈಬರ್ ಪುಖ್ತುನ್‌ಖ್ವಾದ ಟ್ಯಾಂಕ್, ಉತ್ತರ ವಜಿರಿಸ್ಥಾನ್ ಮತ್ತು ಥಾಲ್ ಜಿಲ್ಲೆಗಳಲ್ಲಿ ಡಿ.6 ಮತ್ತು 7ರಂದು ಈ ಕಾರ್ಯಾಚರಣೆ ನಡೆಸಲಾಗಿದೆ. ಟ್ಯಾಂಕ್ ಜಿಲ್ಲೆಯಲ್ಲಿ,

ಪಾಕಿಸ್ಥಾನದಲ್ಲಿ 22 ಭಯೋತ್ಪಾದಕರ ಹತ್ಯೆ Read More »

ಕುವೈಟ್‌ನ ಬ್ಯಾಂಕಿಗೇ 700 ಕೋ. ರೂ. ವಂಚಿಸಿದ ಮಲಯಾಳಿಗಳು

ಸಾಲ ಪಡೆದು ಸ್ವದೇಶಕ್ಕೆ ಪಲಾಯನ ತಿರುವನಂತಪುರ: ಕುವೈಟ್‌ಗೆ ಉದ್ಯೋಗಕ್ಕೆ ತೆರಳಿದ ಕೇರಳದವರು ಅಲ್ಲಿನ ಗಲ್ಫ್‌ ಬ್ಯಾಂಕ್‌ಗೆ 700 ಕೋ. ರೂ.ಅಧಿಕ ಮೊತ್ತ ವಂಚಿಸಿ ಪಲಾಯನ ಮಾಡಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಗಲ್ಫ್‌ ಬ್ಯಾಂಕ್‌ನ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಕೇರಳಕ್ಕೆ ಬಂದು ಈ ಕುರಿತು ದೂರು ನೀಡಿದ ಬಳಿಕ ಕೇರಳ ಪೊಲೀಸರು ವಂಚನೆ ಕುರಿತು ತನಿಖೆ ಪ್ರಾರಂಭಿಸಿದ್ದಾರೆ. ವಿಶೇಷವೆಂದರೆ ಸಾಲ ಪಡೆದು ವಂಚಿಸಿದವರಲ್ಲಿ ಬಹುತೇಕ ಮಂದಿ ನರ್ಸ್‌ ಕೆಲಸಕ್ಕಾಗಿ ಕುವೈಟ್‌ಗೆ ಹೋದ ಮಹಿಳೆಯರು. ಗಲ್ಫ್‌ ಬ್ಯಾಂಕ್‌ನ ಕುವೈಟ್‌ ಷೇರ್‌

ಕುವೈಟ್‌ನ ಬ್ಯಾಂಕಿಗೇ 700 ಕೋ. ರೂ. ವಂಚಿಸಿದ ಮಲಯಾಳಿಗಳು Read More »

ಭಾರತದ ಮೇಲೆ ಮತ್ತೆ ದಾಳಿ : ಉಗ್ರ ಮಸೂದ್ ಅಜರ್ ಉಗ್ರ ಪ್ರತಿಜ್ಞೆ

ಪಾಕಿಸ್ಥಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭಾರತ ಹೊಸದಿಲ್ಲಿ: ಭಾರತದ ಮೇಲೆ ಮತ್ತೆ ದಾಳಿ ಮಾಡುತ್ತೇನೆ ಎಂದು ಪಾಕಿಸ್ಥಾನದ ಉಗ್ರಗಾಮಿ ಸಂಘಟನೆ ಜೈಶ್‌ ಎ ಮೊಹಮ್ಮದ್‌ನ ಮುಖಂಡ ಮಸೂದ್‌ ಅಜರ್‌ ಉಗ್ರ ಪ್ರತಿಜ್ಞೆ ಮಾಡಿದ್ದಾನೆ. ನಿಷೇಧಿತ ಭಯೋತ್ಪಾದನಾ ಸಂಘಟನೆಯಾಗಿರುವ ಜೈಶ್-ಎ-ಮೊಹಮ್ಮದ್ 2011ರ ಸಂಸತ್ ದಾಳಿಯಂತಹ ಭಯೋತ್ಪಾದಕ ಕೃತ್ಯಗಳನ್ನು ಎಸಗಿದ್ದು, ಈ ದಾಳಿಗಳ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಆಗಿದ್ದಾನೆ. ಅವನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ಥಾನವನ್ನು ಭಾರತ ಒತ್ತಾಯಿಸಿದೆ. ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಬಹವಾಲ್‌ಪುರದ ಇಸ್ಲಾಮಿಕ್ ಸೆಮಿನರಿಯಲ್ಲಿ

ಭಾರತದ ಮೇಲೆ ಮತ್ತೆ ದಾಳಿ : ಉಗ್ರ ಮಸೂದ್ ಅಜರ್ ಉಗ್ರ ಪ್ರತಿಜ್ಞೆ Read More »

ಜೋಡಿ ಕೊಲೆ ಕೃತ್ಯ : ಬಾಲಿವುಡ್‌ ನಟಿಯ ಸಹೋದರಿ ಬಂಧನ

ಕಟ್ಟಡಕ್ಕೆ ಬೆಂಕಿಹಚ್ಚಿ ಪ್ರಿಯಕರ, ಆತನ ಸ್ನೇಹಿತನ ಹತ್ಯೆ ಮುಂಬಯಿ: ಪ್ರಿಯಕರ ಹಾಗೂ ಆತನ ಸ್ನೇಹಿತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್‌ನ ಜನಪ್ರಿಯ ನಟಿ ನರ್ಗಿಸ್‌ ಫಕ್ರಿಯ ಸಹೋದರಿ ಅಲಿಯಾ ಫಕ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದಿಯ ರಾಕ್‌ಸ್ಟಾರ್‌ ಸೇರಿದಂತೆ ಹಲವು ಭಾರತೀಯ ಸಿನೆಮಾಗಳಲ್ಲಿ ನಟಿಸಿರುವ ನರ್ಗಿಸ್‌ ಫಕ್ರಿ ಮೂಲತಃ ಅಮೆರಿಕದವರು. ಅವರ ಸಹೋದರಿ ಅಲಿಯಾ ಫಕ್ರಿ ಕೂಡ ಸೆಲೆಬ್ರಿಟಿಯಾಗಿದ್ದು, ಆಕೆಯ ಮೇಲೆ ನ್ಯೂಯಾರ್ಕ್‌ನಲ್ಲಿ ಬಾಯ್‌ಫ್ರೆಂಡ್‌ ಮತ್ತು ಆತನ ಗೆಳೆಯನನ್ನು ಕೊಂದ ಆರೋಪವಿದೆ. ಬಾಯ್‌ಫ್ರೆಂಡ್‌ ಎಡ್ವರ್ಡ್‌ ಜೇಕಬ್‌ (35) ಮತ್ತು

ಜೋಡಿ ಕೊಲೆ ಕೃತ್ಯ : ಬಾಲಿವುಡ್‌ ನಟಿಯ ಸಹೋದರಿ ಬಂಧನ Read More »

ಫುಟ್‌ಬಾಲ್‌ ಪಂದ್ಯಾಟದಲ್ಲಿ ಮಾರಾಮಾರಿ : 100ಕ್ಕೂ ಅಧಿಕ ಮಂದಿ ಸಾವು

ಅಂಪಾಯರ್‌ ತೀರ್ಪಿನಿಂದ ಕೆರಳಿ ಹೊಡೆದಾಡಿಕೊಂಡ ಅಭಿಮಾನಿಗಳು ಗಿನಿಯ : ಗಿನಿಯಾದ ಎರಡನೇ ದೊಡ್ಡ ನಗರವಾದ ಝೆರೆಕೋರ್‌ ಎಂಬಲ್ಲಿ ಫುಟ್‌ಬಾಲ್‌ ಪಂದ್ಯಾಟವೊಂದರಲ್ಲಿ ಅಭಿಮಾನಿಗಳ ನಡುವೆ ನಡೆದ ಭೀಕರ ಹೊಡೆದಾಟದಲ್ಲಿ 100ಕ್ಕೂ ಅಧಿಕ ಮಂದಿ ಸಾವಿಗೀಡಾದ ಘಟನೆ ಸಂಭವಿಸಿದೆ. ರೆಫರಿಯ ವಿವಾದಾತ್ಮಕ ತೀರ್ಪೊಂದು ಎರಡು ತಂಡಗಳ ಅಭಿಮಾನಿಗಳ ನಡುವೆ ಹೊಡೆದಾಟಕ್ಕೆ ಕಾರಣವಾಯಿತು. ಸ್ಟೇಡಿಯಂಗಿಳಿದು ಅಭಿಮಾನಿಗಳು ಮಾರಾಮಾರಿ ನಡೆಸಿದ ಪರಿಣಾಮ ರಕ್ತದೋಕುಳಿಯೇ ಹರಿಯಿತು ಎಂದು ವರದಿಗಳು ತಿಳಿಸಿವೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಶವಗಳು ರಾಶಿ ಬಿದ್ದಿದ್ದವು. ಶವಾಗಾರಗಳು ತುಂಬಿ ಶವಗಳನ್ನು ಸ್ಥಳ ಇರುವಲ್ಲೆಲ್ಲ

ಫುಟ್‌ಬಾಲ್‌ ಪಂದ್ಯಾಟದಲ್ಲಿ ಮಾರಾಮಾರಿ : 100ಕ್ಕೂ ಅಧಿಕ ಮಂದಿ ಸಾವು Read More »

error: Content is protected !!
Scroll to Top