ವಿದೇಶ

ಬಾಂಗ್ಲಾ ಪ್ರಧಾನಿಯಾಗಿ ಶೇಖ್ ಹಸೀನಾ ಮರು ಆಯ್ಕೆ

ಢಾಕಾ: ಭಾನುವಾರ ಬಾಂಗ್ಲಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್ 300 ಸ್ಥಾನಗಳಲ್ಲಿ ಮೂರನೇ ಎರಡರಷ್ಟು ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಶೇಖ್ ಹಸೀನಾ ಅವರು ಸತತ ಐದನೇ ಬಾರಿಗೆ ಪ್ರಧಾನಿಯಾಗಿ ಮರು ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಚುನಾವಣಾ ಫಲಿತಾಂಶದಲ್ಲಿ ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್ 300 ಸಂಸದೀಯ ಸ್ಥಾನಗಳ ಪೈಕಿ 224 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಾಂಗ್ಲಾದೇಶದ ರಾಷ್ಟ್ರೀಯ ಪಕ್ಷವು ನಾಲ್ಕು ಸ್ಥಾನಗಳನ್ನು ಗೆದ್ದಿದೆ. ಪಕ್ಷೇತರರು 62 ಸ್ಥಾನಗಳಲ್ಲಿ ಗೆಲುವು […]

ಬಾಂಗ್ಲಾ ಪ್ರಧಾನಿಯಾಗಿ ಶೇಖ್ ಹಸೀನಾ ಮರು ಆಯ್ಕೆ Read More »

ನೌಕಪಡೆಯ ಯಶಸ್ವಿ ಕಾರ್ಯಾಚರಣೆ: ಅಪಹರಣಕ್ಕೊಳಗಾದ 15 ಭಾರತೀಯರ ರಕ್ಷಣೆ

ಅರಬ್ಬಿ ಸಮುದ್ರದಲ್ಲಿ ಹೈಜಾಕ್ ಆದ ಹಡಗಿನಲ್ಲಿದ್ದ ಎಲ್ಲಾ 15 ಭಾರತೀಯರನ್ನು ಭಾರತೀಯ ನೌಕಪಡೆಯ ಕಮಾಂಡೋಗಳು ರಕ್ಷಿಸಿದ್ದಾರೆ. ಸರಕು ಹಡಗು ಎಂವಿ ಲೀಲಾ ನಾರ್ಫೋಕ್ ನ್ನು ಗುರುವಾರ ಸಂಜೆ ಸೊಮಾಲಿಯಾ ಕರಾವಳಿಯಲ್ಲಿ ಅಪಹರಿಸಲಾಗಿತ್ತು. ಇದರಲ್ಲಿ 15 ಭಾರತೀಯರಿದ್ದರು. ಹಡಗಿನಲ್ಲಿ ಐದರಿಂದ ಆರು ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಇದ್ದರು ಎಂದು ತಿಳಿದು ಬಂದಿತ್ತು. ಘಟನೆಯ ಬಗ್ಗೆ ತಿಳಿದ ನಂತರ, ಯುದ್ಧನೌಕೆ ಐಎನ್ಎಸ್ ಚೆನ್ನೈ ಸೊಮಾಲಿ ಕರಾವಳಿಯಲ್ಲಿ ಅಪಹರಣಕ್ಕೊಳಗಾದ ಹಡಗು ಎಂವಿ ಲೀಲಾ ನಾರ್ಫೋಕ್ಷ್ಯ ಸಮೀಪಿಸುತ್ತಿತ್ತು ಮತ್ತು ಅಪಹರಣಕ್ಕೊಳಗಾದ ಹಡಗನ್ನ ಬಿಡುಗಡೆ

ನೌಕಪಡೆಯ ಯಶಸ್ವಿ ಕಾರ್ಯಾಚರಣೆ: ಅಪಹರಣಕ್ಕೊಳಗಾದ 15 ಭಾರತೀಯರ ರಕ್ಷಣೆ Read More »

ಸೊಮಾಲಿಯಾ: ಭಾರತೀಯರಿದ್ದ ಹಡಗು ಹೈಜಾಕ್!! | ರಕ್ಷಣೆಗೆ ತೆರಳಿದ ಯುದ್ಧನೌಕೆ INS ಚೆನ್ನೈ!

ಭಾರತೀಯರಿದ್ದ ಲೈಬೀರಿಯನ್ ಧ್ವಜದ ಹಡಗನ್ನು ಸೊಮಾಲಿಯಾ ಕರಾವಳಿಯ ಬಳಿ ಅಪಹರಣ ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ. ಲೈಬೀರಿಯನ್ ಧ್ವಜದ ಹಡಗು ‘ಎಂವಿ ಲೀಲಾ ನಾರ್ಫೋಕ್’ ಎಂದು ಗುರುತಿಸಲಾಗಿದ್ದು, ಇದರಲ್ಲಿ 15 ಭಾರತೀಯ ಸಿಬ್ಬಂದಿಗಳು ಇದ್ದರು ಎನ್ನಲಾಗಿದ್ದು, ಹಡಗನ್ನು ಭಾರತೀಯ ನೌಕಾಪಡೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿದುಬಂದಿದೆ. ಅಪಹರಣಕ್ಕೊಳಗಾದ ಹಡಗಿನ ಚಲನವಲನಗಳ ಮೇಲೆ ಜಾಗರೂಕ ನಿಗಾ ಇಡಲು ಭಾರತೀಯ ನೌಕಾಪಡೆಯ ವಿಮಾನಗಳನ್ನು ನಿಯೋಜಿಸಲಾಗಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ INS ಚೆನ್ನೈಯಿಂದ ಅಪಹರಣಕ್ಕೊಳಗಾದ ಹಡಗಿನ ಕಡೆಗೆ ಚಲಿಸುತ್ತಿದೆ ಎಂದು

ಸೊಮಾಲಿಯಾ: ಭಾರತೀಯರಿದ್ದ ಹಡಗು ಹೈಜಾಕ್!! | ರಕ್ಷಣೆಗೆ ತೆರಳಿದ ಯುದ್ಧನೌಕೆ INS ಚೆನ್ನೈ! Read More »

5 ಲಕ್ಷ ವಲಸಿಗರನ್ನು ದೇಶದಿಂದ ಹೊರ ಹಾಕಿದ ಪಾಕ್: ವರದಿ

ಲಾಹೋರ್: ಪಾಕಿಸ್ತಾನ ಸರ್ಕಾರದ ಗಡಿಪಾರು ಕಾರ್ಯಾಚರಣೆಯ ಭಾಗವಾಗಿ ಈಗಾಗಲೇ ಸುಮಾರು 5,00,000ಕ್ಕೂ ಅಧಿಕ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಪಾಕಿಸ್ತಾನ ಸರ್ಕಾರ ಸಂಸತ್ ನಲ್ಲಿ ಮಾಹಿತಿ ನೀಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಪಾಕಿಸ್ತಾನದ ಆಂತರಿಕ ಸಚಿವಾಲಯ ಸೆನೆಟ್ ಅಥವಾ ಸಂಸತ್ತಿನ ಮೇಲ್ಮನೆಗೆ ಗಡಿಪಾರು ಕಾರ್ಯಾಚರಣೆಯ ಮಾಹಿತಿ ನೀಡಿದ್ದು, ಅದರಂತೆ ಪಾಕಿಸ್ತಾನದಲ್ಲಿದ್ದ ಸುಮಾರು 5 ಲಕ್ಷಕ್ಕೂ ಅಧಿಕ ವಲಸಿಗರನ್ನು ದೇಶದಿಂದ ಹೊರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದೆ. ವಾಪಸಾತಿ ಮತ್ತು ಗಡೀಪಾರು ಅಭಿಯಾನದ

5 ಲಕ್ಷ ವಲಸಿಗರನ್ನು ದೇಶದಿಂದ ಹೊರ ಹಾಕಿದ ಪಾಕ್: ವರದಿ Read More »

ಬಹರೈನಿನಲ್ಲಿ ಕಾರು ಅಪಘಾತ; ಸುಳ್ಯ ಮೂಲದ ಮಗು ಮೃತ್ಯು!

ಕಾರು ಅಪಘಾತದಲ್ಲಿ ಸುಳ್ಯ ಮೂಲದ ಕುಟುಂಬವೊಂದು ಗಂಭೀರ ಗಾಯಗೊಂಡು, ಮಗು ಮೃತಪಟ್ಟ ಘಟನೆ ಬಹರೈನ್‌ನಿಂದ ವರದಿಯಾಗಿದೆ. ಸುಳ್ಯ ಮೂಲದ ದೇವಚಳ್ಳ ಗ್ರಾಮದ ಎಲಿಮಲೆ ಮೆತ್ತಡ್ಕ ನಿವಾಸಿ ಅಶ್ರಫ್ ಮೆತ್ತಡ್ಕ ಅವರ ಮೂರು ವರ್ಷದ ಅಯಾನ್ ಅಬ್ದುಲ್ಲಾ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ದಂಪತಿಗಳು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಗಾಯಗೊಂಡಿರುವ ಅಶ್ರಫ್ ಮತ್ತು ಅವರ ಪತ್ನಿ ಬಹರೈನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬಹರೈನಿನಲ್ಲಿ ಕಾರು ಅಪಘಾತ; ಸುಳ್ಯ ಮೂಲದ ಮಗು ಮೃತ್ಯು! Read More »

ತನ್ನದೇ ಗ್ರಾಮದ ಮೇಲೆ ಬಾಂಬ್ ದಾಳಿ ನಡೆಸಿದ ರಶ್ಯ!

ಮಾಸ್ಕೋ: ಉಕ್ರೇನ್ ಗಡಿ ಸಮೀಪದಲ್ಲಿರುವ ತನ್ನದೇ ಪ್ರಾಂತವಾದ ದಕ್ಷಿಣ ವೊರೊನೆಝ್ನ ಗ್ರಾಮವೊಂದರ ಮೇಲೆ ರಶ್ಯ ವಾಯುಪಡೆ ಮಂಗಳವಾರ ಪ್ರಮಾದವಶಾತ್ ಬಾಂಬ್ ದಾಳಿ ನಡೆಸಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲವೆಂದು ವರದಿಯಾಗಿದೆ. ಬಾಂಬ್ ದಾಳಿಗೆ ಗುರಿಯಾದ ಪೆಟ್ರೊಪವ್ಲೋವ್ಕಾ ಗ್ರಾಮವು ಉಕ್ರೇನ್ ಗಡಿಯಿಂದ 93 ಮೈಲು ಪೂರ್ವದಲ್ಲಿದೆ. ಆಕಸ್ಮಿಕ ಬಾಂಬ್ ಎಸೆತದಿಂದಾಗಿ ಆರು ಮನೆಗಳಿಗೆ ಹಾನಿಯಾಗಿವೆಯೆಂದು ರಶ್ಯನ್ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ‘‘ಈ ಘಟನೆಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಯುತ್ತಿದೆ. ಹಾನಿಯ ರೀತಿಯನ್ನು ಅಂದಾಜಿಸಲು ಆಯೋಗವೊಂದು ಕೆಲಸ

ತನ್ನದೇ ಗ್ರಾಮದ ಮೇಲೆ ಬಾಂಬ್ ದಾಳಿ ನಡೆಸಿದ ರಶ್ಯ! Read More »

ಇಸ್ರೇಲ್ ಪರ ಬೇಹುಗಾರಿಕೆ?: 33 ಜನರ ಬಂಧನ

ಇಸ್ತಾನ್ ಬುಲ್: ಇಸ್ರೇಲ್ನ ವಿದೇಶಿ ಗುಪ್ತಚರ ಸೇವೆ ಮೊಸಾದ್ ಪರವಾಗಿ ಬೇಹುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಶಂಕೆಯ ಮೇಲೆ ಟರ್ಕಿ ಅಧಿಕಾರಿಗಳು 33 ಜನರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಅನಾಡೋಲು ಸುದ್ದಿ ಸಂಸ್ಥೆ ಭದ್ರತಾ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಬಂಧಿತ ಶಂಕಿತರು ಮೊಸಾದ್ ಪರವಾಗಿ ಕಣ್ಗಾವಲು, ಹಲ್ಲೆ ಮತ್ತು ಅಪಹರಣದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಇಸ್ತಾಂಬುಲ್ ಪ್ರಾಸಿಕ್ಯೂಟರ್ ಕಚೇರಿಯ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ತನಿಖಾ ಬ್ಯೂರೊ ತನಿಖೆ ನಡೆಸುತ್ತಿದೆ

ಇಸ್ರೇಲ್ ಪರ ಬೇಹುಗಾರಿಕೆ?: 33 ಜನರ ಬಂಧನ Read More »

ರನ್‌ವೇಯಲ್ಲೇ ಸುಟ್ಟು ಭಸ್ಮವಾದ ವಿಮಾನ!!

ವಿಮಾನ ಆಗಷ್ಟೇ ಭೂಮಿಯನ್ನು ಸ್ಪರ್ಶಿಸಿತ್ತು. ಅಷ್ಟರಲ್ಲೇ ಕಾಣಿಸಿಕೊಂಡಿತು ಬೆಂಕಿ. ವಿಮಾನದ ರೆಕ್ಕೆಯಲ್ಲಿ ಕಾಣಿಸಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಇಡೀಯ ವಿಮಾನವನ್ನು ಆಹುತಿ ತೆಗೆದುಕೊಂಡಿತು. ಇದು ನಡೆದದ್ದು ಜಪಾನಿನ ನರೆಡಾ ವಿಮಾನ ನಿಲ್ದಾಣದಲ್ಲಿ. ವಿಮಾನದಲ್ಲಿ 379 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಹೇಳಲಾಗಿದೆ. ಜಪಾನಿನ ಮಾಧ್ಯಮಗಳು ಪ್ರಸಾರ ಮಾಡಿರುವ ವೀಡಿಯೋದಲ್ಲಿ ಕಂಡುಬಂದಂತೆ, ರನ್ ವೇಯಲ್ಲಿ ಬೆಂಕಿಯುಂಡೆ ಉಗುಳತ್ತ ವಿಮಾನ ಚಲಿಸುತ್ತಿರುವುದು ಕಂಡುಬರುತ್ತಿದೆ. ಕಿಟಕಿ ಮೂಲಕ ದಟ್ಟ ಹೊಗೆ ಹೊರಹೋಗುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.

ರನ್‌ವೇಯಲ್ಲೇ ಸುಟ್ಟು ಭಸ್ಮವಾದ ವಿಮಾನ!! Read More »

ಸ್ಫೋಟದಲ್ಲಿ ಜೈಶ್​ ಮುಖ್ಯಸ್ಥ ಮಸೂದ್ ಅಜರ್ ಹತ್ಯೆ? ಸಾಮಾಜಿಕ ಜಾಲತಾಣದಲ್ಲಿದೆ ವಿಡಿಯೋ!!

ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್ (55) ಸಾವನ್ನಪ್ಪಿದ್ದಾನೆ. ಮಂಗಳವಾರ ಬೆಳಗ್ಗೆ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಬಾಂಬ್ ದಾಳಿಯಲ್ಲಿ ಮಸೂದ್ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಆದರೆ ಈ ಕುರಿತಾಗಿ ಯಾವುದೇ ಅಧಿಕೃತವಾದ ಮಾಹಿತಿ ಕೂಡ ಲಭ್ಯವಾಗಿಲ್ಲ. ಮೊಹಮ್ಮದ್ ಮಸೂದ್ ಅಜರ್ ಅಲ್ವಿ, ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಸ್ಥಾಪಕ. ಸೋಮವಾರ ಬೆಳಗ್ಗೆ ಭಾವಲ್‌ಪುರ ಮಸೀದಿಯಿಂದ ವಾಪಸಾಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಆತನ ಮೇಲೆ ಬಾಂಬ್ ಎಸೆದಿದ್ದಾರೆ ಎಂದು ವರದಿಯಾಗಿದೆ. ಮಸೂದ್ ಅಜರ್ ಸಾವಿನ ಕುರಿತು ಅಧಿಕೃತ ಘೋಷಣೆ

ಸ್ಫೋಟದಲ್ಲಿ ಜೈಶ್​ ಮುಖ್ಯಸ್ಥ ಮಸೂದ್ ಅಜರ್ ಹತ್ಯೆ? ಸಾಮಾಜಿಕ ಜಾಲತಾಣದಲ್ಲಿದೆ ವಿಡಿಯೋ!! Read More »

ಅಪ್ಪಳಿಸಿದ 1ರಿಂದ 2 ಅಡಿ ಎತ್ತರದ ಸುನಾಮಿಯ ಮೊದಲ ಅಲೆ!!

ಸೋಮವಾರ ಬೆಳಗ್ಗೆ ಸಂಭವಿಸಿದ ಪ್ರಬಲ ಭೂಕಂಪನದ ಬಳಿಕ ಜಪಾನ್ ಕರಾವಳಿಗೆ ಸುನಾಮಿಯ ಮೊದಲ ಅಲೆಗಳು ಅಪ್ಪಳಿಸಿವೆ ಎಂದು ಹೇಳಲಾಗಿದೆ. ಸೋಮವಾರ ಮಧ್ಯ ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲವಾದ  ಭೂಕಂಪ ಸಂಭವಿಸಿದ್ದು, ಅಮೆರಿಕ ಭೂ ಸರ್ವೇಕ್ಷಣಾ ಇಲಾಖೆ ಸುನಾಮಿ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಜಪಾನ್ ಕರಾವಳಿ ತೀರಕ್ಕೆ 1ರಿಂದ 2 ಅಡಿ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿವೆ ಎಂದು ಹೇಳಲಾಗಿದೆ. ಜಪಾನ್ ಇಶಿಕಾವಾ ಪ್ರಾಂತ್ಯದ ವಾಜಿಮಾ ನಗರಕ್ಕೆ 1.2 ಮೀಟರ್‌ ನಿಂದ 2 ಮೀಟರ್ ಗಳಷ್ಟು

ಅಪ್ಪಳಿಸಿದ 1ರಿಂದ 2 ಅಡಿ ಎತ್ತರದ ಸುನಾಮಿಯ ಮೊದಲ ಅಲೆ!! Read More »

error: Content is protected !!
Scroll to Top