ವಿದೇಶ

ಇರಾನ್‌ನ ಪರಮೋಚ್ಚ ನಾಯಕನಾಗಿ ಖಮೇನಿ ಪುತ್ರ ಆಯ್ಕೆ

ದೇವ ಪ್ರಭುತ್ವ ಪರಂಪರೆಯ ಮುಂದುವರಿಕೆಯಾಗಿ ಮೊಜ್ತಬಾ ಖಮೇನಿಗೆ ಪರಮಾಧಿಕಾರ ಟೆಹ್ರಾನ್‌: ಇಸ್ರೇಲ್‌-ಅಮೆರಿಕದ ಪ್ರತೀಕಾರದ ದಾಳಿಯ ನಡುವೆ ಇರಾನ್‌ ಹೊಸ ನಾಯಕನನ್ನು ಆಯ್ಕೆ ಮಾಡಿದೆ. ತಜ್ಞರ ಸಭೆಯು ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಇರಾನ್‌ನ ಹೊಸ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಿದೆ ಎಂದು ಇರಾನ್‌ನ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. 56 ವರ್ಷದ ಮೊಜ್ತಬಾ ಅವರನ್ನು ದೇಶದ ನಿಯಂತ್ರಣ ವಹಿಸಿಕೊಳ್ಳಲು ಆಯ್ಕೆ ಮಾಡಲಾಗಿದ್ದು, ದೀರ್ಘಕಾಲದ ನಾಯಕನಾಗಿ ಮುಂದುವರಿಯಲು ಎದುರು ನೋಡುತ್ತಿದ್ದಾರೆ. ಇದಕ್ಕೂ […]

ಇರಾನ್‌ನ ಪರಮೋಚ್ಚ ನಾಯಕನಾಗಿ ಖಮೇನಿ ಪುತ್ರ ಆಯ್ಕೆ Read More »

ಅನಗತ್ಯವಾಗಿ ಓಡಾಡದಂತೆ ಇರಾನಿನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿಯಿಂದ ಸೂಚನೆ

ತೆಹ್ರಾನ್: ಇರಾನ್ ಮತ್ತು ಅಮೆರಿಕಾ, ಇಸ್ರೇಲ್ ನಡುವಿನ ಜಟಾಪಟಿಯಲ್ಲಿ ಇರಾನಿನ ಪರಿಸ್ಥಿತಿ ಹದೆಗೆಟ್ಟಿದೆ. ಭದ್ರತಾ ಪರಿಸ್ಥಿತಿ ಬಿಗುವಾಗಿದೆ. ಯುದ್ಧದ ಭೀತಿಯ ಕಾರಣಕ್ಕಾಗಿ ಅಲ್ಲಿನ ಭಾರತೀಯರಿಗೆ ಸಂಬಂಧಿಸಿದ ಹಾಗೆ ಭಾರತೀಯ ರಾಯಭಾರ ಕಚೇರಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಇರಾನಿನಲ್ಲಿರುವ ಎಲ್ಲಾ ಭಾರತೀಯರು ಅನಗತ್ಯ ಓಡಾಟ ತಪ್ಪಿಸಿ, ಆದಷ್ಟು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಸ್ಥಳೀಯ ಸುದ್ದಿಗಳು, ರಾಯಭಾರ ಕಚೇರಿಯ ಪ್ರಕಟಣೆಗಳನ್ನು ಗಮನಿಸುವಂತೆ ತಿಳಿಸಲಾಗಿದೆ. ಸಾರ್ವಜನಿಕ ಸ್ಥಳಗಳು, ಪ್ರತಿಭಟನೆ ನಡೆವ ಸ್ಥಳಗಳಿಂದ ದೂರವಿರುವಂತೆಯೂ ಎಚ್ಚರಿಕೆ

ಅನಗತ್ಯವಾಗಿ ಓಡಾಡದಂತೆ ಇರಾನಿನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿಯಿಂದ ಸೂಚನೆ Read More »

ಘನಘೋರ ಸಮರ : ಇರಾನ್‌ನಲ್ಲಿ ಮಕ್ಕಳ ಸಹಿತ 700ಕ್ಕೂ ಅಧಿಕ ಮಂದಿ ಸಾವು

ತೀವ್ರಗೊಂದ ಸೇನಾ ಕಾರ್ಯಾಚರಣೆ, ಮಿಸೈಲ್‌, ಡ್ರೋನ್‌, ಫೈಟರ್‌ ವಿಮಾನಗಳ ಆರ್ಭಟ ಟೆಹ್ರಾನ್‌ : ಇದು ಸದ್ಯಕ್ಕೆ ಮುಗಿಯುವ ಯುದ್ಧವಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ ಬೆನ್ನಿಗೆ ಅಮೆರಿಕ ಹಾಗೂ ಇಸ್ರೇಲ್ ಸೇನೆಗಳು ಇರಾನ್ ಮೇಲಿನ ಯುದ್ಧವನ್ನು ತೀವ್ರಗೊಳಿಸಿದ್ದು, ಹಲವು ತಾಣಗಳನ್ನು ಗುರಿಯಾಗಿಸಿ ಬಾಂಬ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ. ಇರಾನ್ ಕೂಡ ಪ್ರತೀಕಾರದ ದಾಳಿ ಮುಂದುವರಿಸಿರುವುದರಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುತ್ತಿದೆ. ಗಲ್ಫ್‌ ರಾಷ್ಟ್ರಗಳ ಮೇಲಿನ ದಾಳಿಯನ್ನು ಇರಾನ್‌ ಮುಂದುವರಿಸಿದೆ. ಇರಾನ್‌ನ ಕ್ಷಿಪಣಿ

ಘನಘೋರ ಸಮರ : ಇರಾನ್‌ನಲ್ಲಿ ಮಕ್ಕಳ ಸಹಿತ 700ಕ್ಕೂ ಅಧಿಕ ಮಂದಿ ಸಾವು Read More »

ಪಾಕಿಸ್ತಾನದ ನೂರ್‌ ಖಾನ್‌ ವಾಯುನೆಲೆ ಮೇಲೆ ಅಫ್ಘಾನಿಸ್ತಾನ ದಾಳಿ

ಆಪರೇಷನ್‌ ಸಿಂದೂರ ಕಾರ್ಯಾಚರಣೆ ವೇಳೆ ದಾಳಿಗೊಳಗಾಗಿದ್ದ ವಾಯುನೆಲೆ ಇಸ್ಲಾಮಾಬಾದ್ : ಆಪರೇಷನ್ ಸಿಂದೂರ ಕಾರ್ಯಾಚರಣೆ ಸಂದರ್ಭದಲ್ಲಿ ಭಾರತ ದಾಳಿ ಮಾಡಿದ್ದ ಪಾಕಿಸ್ತಾನದ ನೂರ್‌ ಖಾನ್‌ ವಾಯುನೆಲೆ ಮೇಲೆ ಇದೀಗ ಅಫಘಾನಿಸ್ತಾನ ಕೂಡ ದಾಳಿ ಮಾಡಿ ಭಾರಿ ಹಾನಿ ಎಸಗಿದೆ. ಭಾರತ ನಡೆಸಿದ ದಾಳಿಯಿಂದ ಕುಸಿದು ಬಿದ್ದು, ಬಳಿಕ ಎದ್ದು ನಿಂತಿದ್ದ ಪಾಕಿಸ್ತಾನದ ರಾವಲ್ಪಿಂಡಿಯ ಚಕ್ಲಾಲಾ ಪ್ರದೇಶದ ನೂರ್ ಖಾನ್ ವಾಯುನೆಲೆಯ ಮೇಲೆ ಅಫ್ಘಾನಿಸ್ತಾನದಿಂದ ವಾಯುದಾಳಿ ನಡೆದಿದೆ. ಕಳೆದ ಮೇ ತಿಂಗಳಿನಲ್ಲಿ ಭಾರತವು ಇದೇ ವಾಯುನೆಲೆ ಮೇಲೆ ದಾಳಿ

ಪಾಕಿಸ್ತಾನದ ನೂರ್‌ ಖಾನ್‌ ವಾಯುನೆಲೆ ಮೇಲೆ ಅಫ್ಘಾನಿಸ್ತಾನ ದಾಳಿ Read More »

ಒಂದು ಹೊಡೆತಕ್ಕೆ 40 ಇರಾನ್‌ ನಾಯಕರು ಸಾವು

ಯುದ್ಧ ನಿರೀಕ್ಷೆಗಿಂತಲೂ ವೇಗವಾಗಿ ಯಶಸ್ಸು ಪಡೆಯುತ್ತಿದೆ ಎಂದು ಬಣ್ಣಿಸಿದ ಟ್ರಂಪ್‌ ವಾಷಿಂಗ್ಟನ್‌: ಅಮೆರಿಕದ ಒಂದೇ ಹೊಡೆತದಲ್ಲಿ ಇರಾನ್‌ನ 48 ನಾಯಕರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇರಾನ್‌ ಮೇಲೆ ನಡೆಯುತ್ತಿರುವ ಅಮೆರಿಕ – ಇಸ್ರೇಲ್‌ ಜಂಟಿ ದಾಳಿ ಕುರಿತು ಮಾತನಾಡಿದ ಅವರು, ಈ ಕಾರ್ಯಾಚರಣೆ ಅತ್ಯಂತ ಯಶಸ್ವಿಯಾಗಿ ಮತ್ತು ನಿರೀಕ್ಷೆಗಿಂತ ವೇಗವಾಗಿ ಮುಂದುವರಿದಿದೆ ಎಂದು ಬಣ್ಣಿಸಿದ್ದಾರೆ. ನಿಜಕ್ಕೂ ನಾವು ಪಡೆಯುತ್ತಿರುವ ಯಶಸ್ಸು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. ಒಂದೇ ಹೊಡೆತದಲ್ಲಿ 48 ಇರಾನ್‌ನ ನಾಯಕರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆ

ಒಂದು ಹೊಡೆತಕ್ಕೆ 40 ಇರಾನ್‌ ನಾಯಕರು ಸಾವು Read More »

ನೆತನ್ಯಾಹುಗೆ ಮೋದಿ ಕರೆ : ಯುದ್ಧ ನಿಲ್ಲಿಸಲು ಮನವಿ

ಯುದ್ಧದಿಂದಾಗಿ ಜಾಗತಿಕವಾಗಿ ಆತಂಕ ಸೃಷ್ಟಿ ಎಂದು ಮನವರಿಕೆ ಮಾಡಿದ ಮೋದಿ ನವದೆಹಲಿ : ಇರಾನ್‌-ಇಸ್ರೇಲ್‌, ಅಮೆರಿಕ ಯುದ್ಧದಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿ ಕುರಿತು ಚರ್ಚಿಸಿದರು ಯುದ್ಧ ತಕ್ಷಣ ನಿಲ್ಲಿಸುವ ಅಗತ್ಯವಿದೆ ಎಂದು ಭಾರತ ಪುನರುಚ್ಚರಿಸಿರುವುದಾಗಿ ಮೋದಿ ತಿಳಿಸಿದ್ದಾರೆ. ಇಸ್ರೇಲ್‌-ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್‌ ಕ್ಷಿಪಣಿ ದಾಳಿ ಮುಂದುವರಿಸಿರುವ ಹಿನ್ನೆಲೆ ಪ್ರಾದೇಶಿಕ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿರುವುದಾಗಿ ಪ್ರಧಾನಿ

ನೆತನ್ಯಾಹುಗೆ ಮೋದಿ ಕರೆ : ಯುದ್ಧ ನಿಲ್ಲಿಸಲು ಮನವಿ Read More »

ಇರಾನ್‌ನ ಪ್ರಧಾನ ಸೇನಾ ಕಚೇರಿ ನಾಶ

ಮುಂದುವರಿದ ಯುದ್ಧ ; ಮಧ್ಯಪ್ರಾಚ್ಯ ನಿಗಿ ನಿಗಿ ಕೆಂಡ ಟೆಹ್ರಾನ್ : ಇರಾನ್‌ನ ಅತ್ಯಂತ ಪ್ರಮುಖ ಸೇನಾ ವಿಭಾಗವಾದ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (ಐಆರ್‌ಜಿಸಿ) ಪ್ರಧಾನ ಕಚೇರಿಯನ್ನೇ ದಾಳಿಯಲ್ಲಿ ನಾಶಪಡಿಸಲಾಗಿದೆ ಎಂದು ಅಮೆರಿಕ ದೃಢಪಡಿಸಿದೆ. ಕಳೆದ 47 ವರ್ಷಗಳಲ್ಲಿ 1,000ಕ್ಕೂ ಹೆಚ್ಚು ಅಮೆರಿಕನ್ನರ ಸಾವಿಗೆ ಐಆರ್​ಜಿಸಿ ಕಾರಣವಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿದೆ. ಈ ಕ್ರಮವನ್ನು “ಹಾವಿನ ತಲೆಯನ್ನು ಕತ್ತರಿಸುವುದು” ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಬಣ್ಣಿಸಿದೆ ಮತ್ತು ಯುಎಸ್ ವಿಶ್ವದ ಅತ್ಯಂತ

ಇರಾನ್‌ನ ಪ್ರಧಾನ ಸೇನಾ ಕಚೇರಿ ನಾಶ Read More »

ಮಿಸೈಲ್‌ ದಾಳಿಗೆ ಖಮೇನಿ ಪುತ್ರಿ, ಅಳಿಯ, ಮೊಮ್ಮಗಳೂ ಬಲಿ

ಖಮೇನಿ ಅಧಿಕೃತ ನಿವಾಸವನ್ನು ಗುರಿ ಮಾಡಿಕೊಂಡ ನಡೆದ ಕ್ಷಿಪಣಿ ದಾಳಿ ಟೆಹ್ರಾನ್‌ : ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದ ದೃಢಪಟ್ಟ ಬೆನ್ನಿಗೆ ವೈಮಾನಿಕ ದಾಳಿಯಲ್ಲಿ ಖಮೇನಿ ಅವರ ಪುತ್ರಿ, ಅಳಿಯ ಮತ್ತು ಮೊಮ್ಮಗಳೂ ಕೂಡ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಕ್ಷಿಪಣಿ ದಾಳಿಗೆ ಬಲಿಯಾದ ಇರಾನ್‌ ರಕ್ಷಣಾ ಸಚಿವ ಅಮೀರ್‌ ನಾಸಿರ್ಜಾದೆ ಅವರ ಮೃತದೇಹ ಪತ್ತೆಯಾಗಿದೆ ಎಂದೂ ಇಸ್ರೇಲ್‌ ಮಾಧ್ಯಮಗಳು ವರದಿ

ಮಿಸೈಲ್‌ ದಾಳಿಗೆ ಖಮೇನಿ ಪುತ್ರಿ, ಅಳಿಯ, ಮೊಮ್ಮಗಳೂ ಬಲಿ Read More »

ಇರಾನ್‌ನ ಪರಮೋಚ್ಚ ನಾಯಕ ಅಯಾತೊಲ್ಲ ಖಮೇನಿ ಹತ್ಯೆ

ಕ್ಷಿಪಣಿ ದಾಳಿಗೆ ಬಲಿ ಎಂಉದ ಅಮೆರಿಕ ಘೋಷಣೆ; ದೃಢಪಡಿಸಿದ ಇರಾನ್‌ ಟೆಹ್ರಾನ್: ಇರಾನ್‌ನ ಸರ್ವೋಚ್ಛ ನಾಯಕ ಅಯಾತೊಲ್ಲ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ ಕೆಲವೇ ಗಂಟೆಗಳಲ್ಲಿ ಇರಾನ್‌ ಮಾಧ್ಯಮ ಕೂಡ ಹತ್ಯೆಯನ್ನು ದೃಢಪಡಿಸಿದೆ. ಇಸ್ರೇಲ್-ಇರಾನ್-ಅಮೆರಿಕ ನಡುವಿನ ಯುದ್ಧದಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿನ ಕುರಿತಾದ ವದಂತಿಗಳು ಜಗತ್ತಿನಾದ್ಯಂತ ಸಂಚಲನ ಮೂಡಿಸಿವೆ. ಇಸ್ರೇಲ್‌ನ ಪ್ರಮುಖ ಮಾಧ್ಯಮ ಸಂಸ್ಥೆಗಳು ವರದಿ ಮಾಡಿರುವ ಪ್ರಕಾರ, ಇಸ್ರೇಲ್

ಇರಾನ್‌ನ ಪರಮೋಚ್ಚ ನಾಯಕ ಅಯಾತೊಲ್ಲ ಖಮೇನಿ ಹತ್ಯೆ Read More »

ಪ್ರಧಾನಿ ಮೋದಿ ದ್ವಿದಿನ ಇಸ್ರೇಲ್‌ ಭೇಟಿ : ಗುರುವಾರ ಸಂಸತ್ತಿನಲ್ಲಿ ಭಾಷಣ

ಭಾರತದ ಪ್ರಧಾನಿ ಭೇಟಿಗೆ ಇಸ್ರೇಲ್‌ನಲ್ಲಿ ಸಡಗರ; ಸಂಸತ್ತಿನ ತ್ರಿವರ್ಣ ದೀಪಾಲಂಕಾರ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ಇಸ್ರೇಲ್ ಪ್ರವಾಸ ಕೈಗೊಂಡಿದ್ದಾರೆ. ಮೋದಿ ಆಗಮನಕ್ಕೂ ಮುನ್ನ ಇಸ್ರೇಲ್‌ ಸಂಸತ್‌ನಲ್ಲಿ ತ್ರಿವರ್ಣ ದೀಪಗಳು ಕಂಗೊಳಿಸಿವೆ. ಪ್ರಧಾನಿ ಮೋದಿ ಫೆಬ್ರವರಿ 26ರಂದು ಇಸ್ರೇಲ್ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದು, ಅಲ್ಲಿನ ಪ್ರಮುಖ ಪತ್ರಿಕೆ ಜೆರುಸಲೇಂ ಪೋಸ್ಟ್​​ನ ಮುಖಪುಟದಲ್ಲಿ ಪ್ರಧಾನಿಯದ್ದೇ ಸುದ್ದಿ ಪ್ರಕಟವಾಗಿದೆ. ಇದೇ ವೇಳೆ ಭಾರತದಲ್ಲಿ ಮೋದಿಯ ಇಸ್ರೇಲ್‌ ಭೇಟಿಯನ್ನು ಕಾಂಗ್ರೆಸ್‌ ಸೇರಿದಂತೆ ಒಂದು ವರ್ಗ ವಿರೋಧಿಸುತ್ತಿದೆ.

ಪ್ರಧಾನಿ ಮೋದಿ ದ್ವಿದಿನ ಇಸ್ರೇಲ್‌ ಭೇಟಿ : ಗುರುವಾರ ಸಂಸತ್ತಿನಲ್ಲಿ ಭಾಷಣ Read More »

error: Content is protected !!
Scroll to Top