ದಕ್ಷಿಣ ಕನ್ನಡ

ವಿದ್ಯಾರ್ಥಿ ಶ್ರೇಯಸ್ ಮಂಗಳೂರಿನಲ್ಲಿ ಪತ್ತೆ !!

ಸುಳ್ಯ: ವಿದ್ಯಾರ್ಥಿಯೋರ್ವ ಮನೆಯಿಂದ ಶಾಲೆಗೆ ಹೊರಟವ ಶಾಲೆಗೆ ಹೋಗದೆ, ಮನೆಗೂ ಬಾರದೆ ಕಾಣೆಯಾದ ಕುರಿತು ಪ್ರಕರಣ ದಾಖಲಾಗಿದ್ದು, ಇದೀಗ ಮಂಗಳೂರಿನಲ್ಲಿ ಬಂದರ್ ಪೊಲೀಸರು ಅಂಗಡಿಯೊಂದರಲ್ಲಿ ಪತ್ತೆ ಮಾಡಿದ್ದಾರೆ. ಲೋಕನಾಥ್‍ ಎಂಬವರ ಪುತ್ರ ಕಾಣಿಯೂರು ಖಾಸಗಿ ಶಾಲಾ 8ನೇ ತರಗತಿ ವಿದ್ಯಾರ್ಥಿ ಶ್ರೇಯಸ್ (15) ಕಾಣೆಯಾಗಿದ್ದು, ಈತನ ಸುಳಿವು ಸಿಕ್ಕಿದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯೂ ಹೊರಡಿಸಲಾಗಿತ್ತು. ಇದೀಗ ಮಂಗಳೂರಿನಲ್ಲಿ ಪತ್ತೆಯಾಗಿರುವ ಕುರಿತು ಆತನ ಮನೆಯವರಿಗೆ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿ ಶ್ರೇಯಸ್ ಮಂಗಳೂರಿನಲ್ಲಿ ಪತ್ತೆ !! Read More »

ವಿದ್ಯಾರ್ಥಿ ಶ್ರೇಯಸ್ ನಾಪತ್ತೆ !!

ಸುಳ್ಯ: ವಿದ್ಯಾರ್ಥಿಯೋರ್ವ ಮನೆಯಿಂದ ಶಾಲೆಗೆ ಹೊರಟವ ಶಾಲೆಗೆ ಹೋಗದೆ, ಮನೆಗೂ ಬಾರದೆ ಕಾಣೆಯಾದ ಕುರಿತು ಪ್ರಕರಣ ದಾಖಲಾಗಿದೆ. ಲೋಕನಾಥ್‍ ಎಂಬವರ ಪುತ್ರ ಕಾಣಿಯೂರು ಖಾಸಗಿ ಶಾಲಾ 8ನೇ ತರಗತಿ ವಿದ್ಯಾರ್ಥಿ ಶ್ರೇಯಸ್ (15) ಕಾಣೆಯಾದವ. 5 ಅಡಿ ಎತ್ತರ, ಸಪೂರ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಗುಲಾಬಿ ಬಣ್ಣದ ಶರ್ಟ್‍, ಕಪ್ಪು ಟೈ, ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈತನ ಸುಳಿವು ಸಿಕ್ಕಿದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಸುಳ್ಯ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿ ಶ್ರೇಯಸ್ ನಾಪತ್ತೆ !! Read More »

ಯಕ್ಷಗಾನ ಕಲಾವಿದ ನಾರಾಯಣ ನಾಯಕ್ ತೋಟಚಾವಡಿ ಆತ್ಮಹತ್ಯೆ !

ಸುಳ್ಯ: ಪ್ರಸಿದ್ಧ ಯಕ್ಷಗಾನ ಕಲಾವಿದರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಮರ್ಕಂಜದಲ್ಲಿ ನಡೆದಿದೆ. ಕೃಷಿಕ ನಾರಾಯಣ ನಾಯಕ್ ತೋಟಚಾವಡಿ (52) ಆತ್ಮಹತ್ಯೆ ಮಾಡಿಕೊಂಡ ಯಕ್ಷಗಾನ ಕಾಲವಿದರು. ಯಕ್ಷಗಾನದ ಹಿಮ್ಮೇಳದಲ್ಲಿ ಚೆಂಡೆ, ಮದ್ದಳೆ ವಾದಕರಾಗಿ ಪ್ರಸಿದ್ಧರಾಗಿದ್ದ ನಾರಾಯಣ ನಾಯಕ್ ಅವರ ಮನೆಯಲ್ಲಿ ಮುಂಜಾನೆ ಬಾಗಿಲು ತೆರೆಯದಿರುವುದನ್ನು ಗಮನಿಸಿದ ಪಕ್ಷದ ಮನೆಯವರು ಮನೆ ಬಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಪತ್ನಿ ಮಗಳ ಮನೆಗೆ ಹೋಗಿದ್ದ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತರಿಗೆ ಇಬ್ಬರು ಪುತ್ರಿಯರಿದ್ದು,

ಯಕ್ಷಗಾನ ಕಲಾವಿದ ನಾರಾಯಣ ನಾಯಕ್ ತೋಟಚಾವಡಿ ಆತ್ಮಹತ್ಯೆ ! Read More »

ನಾಳೆ ಆಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠೆ | ಜೀವನದಿ ನೇತ್ರಾವತಿ ನದಿ ಮಧ್ಯೆ ನಡೆಯಿತು ಶ್ರೀ ಸತ್ಯನಾರಾಯಣ ಪೂಜೆ

ಬಂಟ್ವಾಳ: ಜ.22 ರಂದು ಅಯೋಧ್ಯೆ ರಾಮಂದಿರದಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠೆ ಅಂಗವಾಗಿ ಮುನ್ನಾ ದಿನ ಭಾನುವಾರ ಜೀವನದಿ ನೇತ್ರಾವತಿ ನದಿ ಮಧ್ಯೆ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಮಾಜಿ ಪುರಸಭೆ ಸದಸ್ಯ, ರಾಮಭಕ್ತ ಎ.ಗೊವಿಂದ ಪ್ರಭು ಎಂಬವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜಿಲ್ಲೆಯ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಬಳಿಯ ನೇತ್ರಾವತಿ ನದಿ ನದಿ ಮಧ್ಯೆ ಭಾನುವಾರ ರಾತ್ರಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಪುರಸಭೆಯ ಹಿರಿಯ ಸದಸ್ಯ

ನಾಳೆ ಆಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠೆ | ಜೀವನದಿ ನೇತ್ರಾವತಿ ನದಿ ಮಧ್ಯೆ ನಡೆಯಿತು ಶ್ರೀ ಸತ್ಯನಾರಾಯಣ ಪೂಜೆ Read More »

ಇಂದು ಮಧ್ಯರಾತ್ರಿಯಿಂದ ಜ.23 ಮುಂಜಾನೆ ತನಕ ಮದ್ಯದಂಗಡಿ ಬಂದ್ | ಆದೇಶ ನೀಡಿದ ಜಿಲ್ಲಾಧಿಕಾರಿ

ಮಂಗಳೂರು: ನಾಳೆ ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠೆ ಅಂಗವಾಗಿ ಇಂದು ಮಧ್ಯರಾತ್ರಿಯಿಂದ ಜ.23 ರ ಮುಂಜಾನೆ ತನಕ ದ.ಕ.ಜಿಲ್ಲಾಧ್ಯಂತ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶಿಸಿದ್ದಾರೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಜ್ಯಾರಿಗೊಳಿಸುವಂತೆ ಉಪವಿಭಾಗಗಳಿಗೆ ಜಿಲ್ಲಾಧಿಕಾರಿಯವರು ಪ್ರಕಟಣೆ ನೀಡಿದ್ದಾರೆ. ಈ ಅವಧಿಯಲ್ಲಿ ಆಯಾ ಉಪವಿಭಾಗಗಳಲ್ಲಿ ಬಾರ್ ಹಾಗೂ ವೈನ್‍ ಶಾಪ್‍ಗಳಿಗೆ ಅಬಕಾರಿ ಇಲಾಖೆಯ ಮೊಹರು ಹಾಕಿ ಮುಚ್ಚುವಂತೆ ನೋಡಿಕೊಳ್ಳಬೇಕು ಎಂದು ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.

ಇಂದು ಮಧ್ಯರಾತ್ರಿಯಿಂದ ಜ.23 ಮುಂಜಾನೆ ತನಕ ಮದ್ಯದಂಗಡಿ ಬಂದ್ | ಆದೇಶ ನೀಡಿದ ಜಿಲ್ಲಾಧಿಕಾರಿ Read More »

ಮರ್ಕಂಜ ಸರಕಾರಿ ಪ್ರೌಢಶಾಲೆಗೆ ಬೆಂಗಳೂರು ಉಜ್ಜೀವನ್ ಬ್ಯಾಂಕ್‍ ಮೂಲಕ ಹಳೆ ವಿದ್ಯಾರ್ಥಿ ಪ್ರದೀಪ್ ಜೈನ್ ರಿಂದ 9 ಕಂಪ್ಯೂಟರ್ ಹಸ್ತಾಂತರ

ಸುಳ್ಯ: ತಾಲೂಕಿನ ಮರ್ಕಂಜ ಸರಕಾರಿ ಪ್ರೌಢ ಶಾಲೆ ಹಳೆ ವಿದ್ಯಾರ್ಥಿ ಪ್ರದೀಪ್ ಜೈನ್ ಬಲ್ನಾಡುಪೇಟೆ ಅವರು ಶಾಲೆಗೆ 9 ಕಂಪ್ಯೂಟರನ್ನು ಬೆಂಗಳೂರು ಉಜ್ಜೀವನ್ ಬ್ಯಾಂಕ್‍ ಮೂಲಕ ಕೊಡುಗೆಯಾಗಿ ನೀಡಿದರು. ಪ್ರಸ್ತುತ ಬೆಂಗಳೂರಿನ ಉಜ್ಜೀವನ್ ಬ್ಯಾಂಕ್ ನ ಹೌಸಿಂಗ್ ಲೋನ್ ವಿಭಾಗದಲ್ಲಿ ನ್ಯಾಷನಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರದೀಪ್‍ ಜೈನ್ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ಕಂಪ್ಯೂಟರ್ ಕಲಿಕೆಯಲ್ಲಿ ಮುಂದೆ ಬರಬೇಕು ಎಂಬ ಆಶಯದೊಂದಿಗೆ ತಾನು ಕಲಿತ ಶಾಲೆಗೆ 9 ಕಂಪ್ಯೂಟರ್ ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮರ್ಕಂಜ ಗ್ರಾಮ

ಮರ್ಕಂಜ ಸರಕಾರಿ ಪ್ರೌಢಶಾಲೆಗೆ ಬೆಂಗಳೂರು ಉಜ್ಜೀವನ್ ಬ್ಯಾಂಕ್‍ ಮೂಲಕ ಹಳೆ ವಿದ್ಯಾರ್ಥಿ ಪ್ರದೀಪ್ ಜೈನ್ ರಿಂದ 9 ಕಂಪ್ಯೂಟರ್ ಹಸ್ತಾಂತರ Read More »

ಸರಕಾರಿ ಜಾಗ ಒತ್ತುವರಿ ತೆರವು ವೇಳೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ !!

ಬೆಳ್ತಂಗಡಿ: ಸರಕಾರಿ ಜಾಗದ ಒತ್ತುವರಿಯನ್ನು ತೆರವು ಗೊಳಿಸಲು ತೆರಳಿದ್ದ ತಹಶೀಲ್ದಾರರ ಮೇಲೆ ತಂಡವೊಂದು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿದ  ಘಟನೆ ಕುವೆಟ್ಟು ಗ್ರಾಮದ ಮದ್ದಡ್ಕ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಕುವೆಟ್ಟು ಗ್ರಾಮದ ಮದ್ದಡ್ಕ ಎಂಬಲ್ಲಿ ಸರಕಾರಿ ಜಾಗ ಒತ್ತುವರಿಯಾಗಿರುವ ಕುರಿತು ಮಾಹಿತಿ ಬಂದ ಹಿನ್ನಲೆಯಲ್ಲಿ ಪರಿಶೀಲನೆಗೆಂದು ಕಂದಾಯ ನಿರೀಕ್ಷಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ತೆರಳಿದ್ದರು. ಈ ಸಂದರ್ಭ ಜಾಗವನ್ನು

ಸರಕಾರಿ ಜಾಗ ಒತ್ತುವರಿ ತೆರವು ವೇಳೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ !! Read More »

ಬಸ್ಸಿನಲ್ಲಿ ಚಿನ್ನದ ಸರವಿದ್ದ ಬ್ಯಾಗ್‍ ಕಳವು | ಪ್ರಕರಣ ದಾಖಲು

ಪುತ್ತೂರು: ಚಿನ್ನದ ಸರ ಖರೀದಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬ್ಯಾಗ್‍ ಕಳವಾದ ಘಟನೆ ನಡೆದಿದೆ. ಪುತ್ತೂರಿನ ಜಯರಾಮ ಭಟ್‍ ಪಿ. ಎಂಬವರು ಮಂಗಳೂರಿನ ಜ್ಯುವೆಲ್ಲರಿ ಒಂದರಿಂದ 1.60 ಲಕ್ಷ ರೂ. ಮೌಲ್ಯದ ಚಿನ್ನ ಖರೀದಿಸಿ ಬ್ಯಾಗ್‍ನಲ್ಲಿರಿಸಿ ಪುತ್ತೂರಿಗೆ ಕೆ ಎಸ್‍ ಆರ್ ಟಿಸಿ ಬಸ್ ಮೂಲಕ ಬರುತ್ತಿದ್ದಾಗ ಮಂಗಳೂರು ಬಂಟ್ಸ್ ಹಾಸ್ಟೇಲ್ ತಲುಪುತ್ತಿದ್ದಂತೆ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಚಿಲ್ಲರೆ ಹಣ ಬೀಳಿಸಿ ಅವರ ಗಮನ ಬೇರೆಡೆ ಸೆಳೆದಿದ್ದಾಳೆ. ಆ ಬಳಿಕ ಮಹಿಳೆ ಇನ್ನೋರ್ವ ಮಹಿಳೆಯೊಂದಿಗೆ ಬಸ್ಸಿನಿಂದ ಇಳಿದು

ಬಸ್ಸಿನಲ್ಲಿ ಚಿನ್ನದ ಸರವಿದ್ದ ಬ್ಯಾಗ್‍ ಕಳವು | ಪ್ರಕರಣ ದಾಖಲು Read More »

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ | ಮೂವರು ಪೊಲೀಸ್ ವಶಕ್ಕೆ

ಮಂಗಳೂರು: ಭಿನ್ನ ಸಮುದಾಯದ ವಿದ್ಯಾರ್ಥಿಗಳ ಮೇಲೆ ತಂಡವೊಂದು ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ಘಟನೆ ಮಂಗಳೂರು ಕದ್ರಿ ಪಾರ್ಕ್‍ ನಲ್ಲಿ ನಡೆದಿದ್ದು ಈ ಸಂಬಂಧ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶುಕ್ರವಾರ ಮಂಗಳೂರಿನ ಕಾಲೇಜೊಂದರ ಯುವಕ ಹಾಗೂ ನರ್ಸಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿ ಜತೆಯಾಗಿ ಬಸ್‍ ನಲ್ಲಿ ಮಂಗಳೂರಿಗೆ ಬಂದಿದ್ದರು. ಬಸ್‍ನಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದ ತಂಡ ಕದ್ರಿ ಪಾರ್ಕ್‍ ತಲುಪುತ್ತಿದ್ದಂತೆ ರಸ್ತೆಯಲ್ಲಿ ತಡೆದು ನೈತಿಕ ಪೊಲೀಸ್ ಗಿರಿ ನಡೆಸಿದೆ ಎನ್ನಲಾಗಿದೆ. ಈ ಸಂದರ್ಭ ಸ್ಥಳದಲ್ಲಿ ಜನ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ | ಮೂವರು ಪೊಲೀಸ್ ವಶಕ್ಕೆ Read More »

ನೇಣು ಬಿಗಿದು ಮಹಿಳೆ ಆತ್ಮಹತ್ಯೆ !

ಬೆಳ್ತಂಗಡಿ: ಉದ್ಯಮಿಯೋರ್ವರ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಅಳದಂಗಡಿಯಲ್ಲಿ ಗುರುವಾರ ನಡೆದಿದೆ. ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪದ ಕುಬಲಾಜೆ ನಿವಾಸಿ ಉದ್ಯಮಿ ಸುನಿಲ್ ಎಂಬವರ ಪತ್ನಿ ಕಾವ್ಯ (32) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಮಧ್ಯಾಹ್ನ ಮನೆಯಲ್ಲಿ ಈ ಘಟನೆ ನಡೆದಿದೆ. ಮೃತರಿಗೆ ಪತಿ, ಪುತ್ರ, ಪುತ್ರಿ ಇದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ನೇಣು ಬಿಗಿದು ಮಹಿಳೆ ಆತ್ಮಹತ್ಯೆ ! Read More »

error: Content is protected !!
Scroll to Top