ದಕ್ಷಿಣ ಕನ್ನಡ

ಪುತ್ತೂರು ಮೂಲದ ವ್ಯಕ್ತಿಯ ಮೃತದೇಹ ಮಂಗಳೂರಿನಲ್ಲಿ ಪತ್ತೆ

ಪುತ್ತೂರು: ಪುತ್ತೂರು ಮೂಲದ ವ್ಯಕ್ತಿಯ ಮೃತದೇಹ ಮಂಗಳೂರಿನ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಮೃತದೇಹದ ಜೊತೆ ಪತ್ತೆಯಾದ ಆಧಾರ್ ಕಾರ್ಡ್ ನಿಂದ ಮೃತರನ್ನು ಶಾಜು (52) ಎಂದು ಗುರುತಿಸಲಾಗಿದೆ. ಸದ್ಯ ವರಿಸುದಾರರ ಮಾಹಿತಿಯ ಕೊರತೆಯ ಹಿನ್ನಲೆ ಮೃತದೇಹವನ್ನು ವೆನ್ನಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ಮೂಲದ ವ್ಯಕ್ತಿಯ ಮೃತದೇಹ ಮಂಗಳೂರಿನಲ್ಲಿ ಪತ್ತೆ Read More »

ಯಕ್ಷರಂಗದ ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಇನ್ನಿಲ್ಲ

ಬಂಟ್ವಾಳ: ತಾಲೂಕಿನ ಮಂಚಕಲ್ಲು ‌ನಿವಾಸಿ, ಹಿರಿಯ ಯಕ್ಷಗಾನ ಕಲಾವಿದ, ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ (60) ಅವರು ಇಂದು ಮದ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಹನುಮಗಿರಿ ಮೇಳದಲ್ಲಿ ಇತ್ತೀಚೆಗಿನ ವರೆಗೆ ಬಣ್ಣದ ವೇಷಧಾರಿಯಾಗಿ ಪಾತ್ರ ನಿರ್ವಹಿಸುತ್ತಿದ್ದ ಸದಾಶಿವ ಶೆಟ್ಟಿಗಾರರು, ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಕಾಲ ಯಕ್ಷಗಾನ ರಂಗಕ್ಕೆ ಸೇವೆ ಸಲ್ಲಿಸಿದವರು. ರೆಂಜಾಳ ರಾಮಕೃಷ್ಣ ರಾವ್, ಬಣ್ಣದ ಮಾಲಿಂಗ ಮೊದಲಾದ ದಿಗ್ಗಜರಲ್ಲಿ ಯಕ್ಷಗಾನ ನಾಟ್ಯಾಭ್ಯಾಸ ಮಾಡಿದವರು. ಕಟೀಲು, ಧರ್ಮಸ್ಥಳ, ಹೊಸನಗರ, ಎಡನೀರು, ಹನುಮಗಿರಿ ಮೇಳಗಳಲ್ಲಿ ಸುಮಾರು

ಯಕ್ಷರಂಗದ ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಇನ್ನಿಲ್ಲ Read More »

2.75 ಕೋಟಿ ರೂ. ಬೆಲೆಯ ವಜ್ರದುಂಗುರ, ಸುಸಜ್ಜಿತ ಗ್ರಂಥಾಲಯ…

ಬಲು ರೋಚಕ ಬಹುಕೋಟಿ ಉದ್ಯಮಿ ರೋಷನ್‌ ಸಲ್ಡಾನನ ನಿಗೂಢ ಐಷಾರಾಮಿ ಬದುಕು ಮಂಗಳೂರು : ಉದ್ಯಮಿಗಳಿಗೆ ಬಹುಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಸೆರೆಯಾಗಿರುವ ಮಂಗಳೂರು ಜಪ್ಪಿನಮೊಗರಿನ ರೋಷನ್ ಸಲ್ಡಾನನ ಐಷಾರಾಮಿ ಜೀವನದ ಒಂದೊಂದೇ ರೋಚಕ ಮಾಹಿತಿ ಪೊಲೀಸ್‌ ವಿಚಾರಣೆ ಮುಂದುವರಿದಂತೆಲ್ಲ ಬಯಲಾಗಿ ಜನರನ್ನು ಬೆಚ್ಚಿಬೀಳಿಸುತ್ತಿದೆ. ಮಂಗಳೂರು ನಗರದಲ್ಲೂ ಈ ರೀತಿಯ ಒಬ್ಬ ವಂಚಕ ಇರಲು ಸಾಧ್ಯವೇ ಎಂದು ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ರೋಷನ್ ಸಲ್ಡಾನ ಹೆಣೆದಿರುವ ವಂಚನೆಯ ಮಾಯಾಜಾಲ ಕಂಡು ಸ್ವತಹ ಮಂಗಳೂರು ಪೊಲೀಸರೇ ದಂಗಾಗಿದ್ದಾರೆ. ರೋಷನ್

2.75 ಕೋಟಿ ರೂ. ಬೆಲೆಯ ವಜ್ರದುಂಗುರ, ಸುಸಜ್ಜಿತ ಗ್ರಂಥಾಲಯ… Read More »

ಭಾರಿ ಮಳೆ : ಮಂಗಳೂರು, ಬಂಟ್ವಾಳ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ

ಬಂಟ್ವಾಳ : ಭಾರಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಮತ್ತು ಮಂಗಳೂರು ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜು.19ರಂದು ಎಲ್ಲ ಅಂಗನವಾಡಿ, ಸರ್ಕಾರ, ಅನುದಾನಿತ, ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆವರೆಗೆ ರಜೆ ನೀಡಿ ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ. ಮಂಗಳೂರು ತಾಲೂಕಿನಲ್ಲಿ ಪದವಿಪೂರ್ವ ತರಗತಿಗಳಿಗೂ ರಜೆ ನೀಡಲಾಗಿದೆ.

ಭಾರಿ ಮಳೆ : ಮಂಗಳೂರು, ಬಂಟ್ವಾಳ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ Read More »

ಕೋಲ್ಕತ್ತಾ, ಲಖನೌ ತನಕವೂ ಹರಡಿತ್ತು ರೋಶನ್‌ ಸಲ್ಡಾನನ ವಂಚನಾ ಜಾಲ

ಈತನ ಭವ್ಯ ಬಂಗಲೆ, ವಿದೇಶಿ ಹುಡುಗಿಯರು, ಶರಾಬು ಬಾಟಲಿಗಳನ್ನು ನೋಡಿಯೇ ಬಲೆಗೆ ಬೀಳುತ್ತಿದ್ದರು ಉದ್ಯಮಿಗಳು ಮಂಗಳೂರು: ಸಾಲ, ಜಾಗ ಕೊಡಿಸುವುದಾಗಿ ನಂಬಿಸಿ ಉದ್ಯಮಿಗಳಿಗೆ ಕೋಟಿಗಟ್ಟಲೆ ವಂಚಿಸಿರುವ ಮಂಗಳೂರಿನ ರೋಷನ್ ಸಲ್ಡಾನನ (43) ವಂಚನಾ ಜಾಲ ಮುಂಬಯಿ, ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕೋಲ್ಕತ್ತಾ, ಸಾಂಗ್ಲಿ, ಲಖನೌ, ಬಾಗಲಕೋಟೆ ಮತ್ತಿತರೆಡೆ ಹರಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಚಿತ್ರದುರ್ಗ ಮತ್ತು ಮುಂಬೈಯಲ್ಲಿ ಅವನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆರೋಪಿ ರೋಷನ್ ಸಲ್ಡಾನ ತಾನು ಉದ್ಯಮಿಯೆಂದು ಬಿಂಬಿಸಿ ಹೊರರಾಜ್ಯ, ಹೊರಜಿಲ್ಲೆಯಲ್ಲಿರುವ

ಕೋಲ್ಕತ್ತಾ, ಲಖನೌ ತನಕವೂ ಹರಡಿತ್ತು ರೋಶನ್‌ ಸಲ್ಡಾನನ ವಂಚನಾ ಜಾಲ Read More »

ಅರಂತೋಡು ಘನ ತ್ಯಾಜ್ಯ ಘಟಕ ಮರುಸ್ಥಾಪನೆಗೆ ಕಿಶೋರ್ ಕುಮಾರ್ ಪುತ್ತೂರು ನೆರವು |  5 ಲಕ್ಷ ರೂ. ಅನುದಾನ ಮಂಜೂರು

ಮಂಗಳೂರು: ಆಕಸ್ಮಿಕ ಬೆಂಕಿಯಿಂದ ಸಂಪೂರ್ಣವಾಗಿ ಹಾನಿಗೊಳಗಾದ ಸುಳ್ಯದ ಅರಂತೋಡು ಘನ ತ್ಯಾಜ್ಯ ನಿರ್ವಹಣಾ ಘಟಕದ ಮರುಸ್ಥಾಪನೆಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ತಮ್ಮ ಶಾಸಕರ ಅಭಿವೃದ್ಧಿ ನಿಧಿಯ ಅನುದಾನದಿಂದ 5 ಲಕ್ಷ ಹಣವನ್ನು ಮಂಜೂರು ಮಾಡಿದ್ದಾರೆ. ಈ ಕುರಿತು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯನ್ನು ಭೇಟಿ ಮಾಡಿದ ಶಾಸಕರು, ಈ ಘಟಕದ ಪುನರ್ ನಿರ್ಮಾಣಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ತಕ್ಷಣ ಕೈಗೊಳ್ಳಲು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ಬ್ರಿಜೇಶ್ ಚೌಟ ಹಾಗೂ

ಅರಂತೋಡು ಘನ ತ್ಯಾಜ್ಯ ಘಟಕ ಮರುಸ್ಥಾಪನೆಗೆ ಕಿಶೋರ್ ಕುಮಾರ್ ಪುತ್ತೂರು ನೆರವು |  5 ಲಕ್ಷ ರೂ. ಅನುದಾನ ಮಂಜೂರು Read More »

ಹೆಬ್ಬಾವು ಮಾರಾಟ ಜಾಲ ಪತ್ತೆ : ಕಾಲೇಜು ವಿದ್ಯಾರ್ಥಿ ಸೇರಿ ನಾಲ್ವರು ಸೆರೆ

ಮಂಗಳೂರು ನಗರದೊಳಗೆ ನಡೆಯುತ್ತಿತ್ತು ಪ್ರಾಣಿಗಳ ಅಕ್ರಮ ದಂಧೆ ಮಂಗಳೂರು: ಹೆಬ್ಬಾವು ಮಾರಾಟ ಜಾಲವೊಂದನ್ನು ಭೇದಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಅಪ್ರಾಪ್ತ ವಯಸ್ಸಿನ ಓರ್ವ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರಿನ ಬಡಗ ಉಳಿಪ್ಪಾಡಿ ನಿವಾಸಿ ವಿಹಾಲ್ ಎಚ್. ಶೆಟ್ಟಿ (18), ಉಳ್ಳಾಲ ಮುನ್ನೂರಿನ ಸಾಕುಪ್ರಾಣಿ ಅಂಗಡಿ ಮಾಲೀಕ ಇಬ್ರಾಹಿಂ ಶಕೀಲ್ ಇಸ್ಮಾಯಿಲ್ (35), ಉಳ್ಳಾಲ ಹರೇಕಳ ಅಂಗಡಿಯ ಉದ್ಯೋಗಿ ಮೊಹಮ್ಮದ್ ಮುಸ್ತಫಾ (22) ಮತ್ತು ಮಂಗಳೂರಿನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿರುವ ವಿದ್ಯಾರ್ಥಿ 16 ವರ್ಷದ ಬಾಲಕ

ಹೆಬ್ಬಾವು ಮಾರಾಟ ಜಾಲ ಪತ್ತೆ : ಕಾಲೇಜು ವಿದ್ಯಾರ್ಥಿ ಸೇರಿ ನಾಲ್ವರು ಸೆರೆ Read More »

ಸವಣೂರು-ಪುಣ್ಚತ್ತಾರು ರಸ್ತೆ ಬದಿ ಗಿಡ ನೆಡುವ ಯೋಜನೆ | ವಿದ್ಯುತ್‍ ತಂತಿ ಹಾದು ಹೋಗುವ ಕೆಳಭಾಗದಲ್ಲೇ ಗಿಡ ನಾಟಿ | ಸಂಬಂಧಪಟ್ಟವರು ಪರಿಶೀಲನೆ ನಡೆಸಬೇಕೆಂದು ಸ್ಥಳೀಯರ ಆಗ್ರಹ

ಕಾಣಿಯೂರು: ಸುಬ್ರಹ್ಮಣ್ಯ-ಕಾಣಿಯೂರು ರಾಜ್ಯ ಹೆದ್ದಾರಿಯ ಸವಣೂರಿನಿಂದ ಪುಣ್ಯತ್ತಾರುವರೆಗೆ ಅರಣ್ಯ ಇಲಾಖೆಯಿಂದ ರಸ್ತೆ ಬದಿಯಲ್ಲಿ ಗಿಡ ನೆಡುವ ಯೋಜನೆ ಹಾಕಿಕೊಳ್ಳಲಾಗಿದ್ದು, ಗಿಡಗಳನ್ನು ನೆಡಲಾಗಿದೆ. ಆದರೆ ರಸ್ತೆಗೆ ಸಮೀಪ, ವಿದ್ಯುತ್ ತಂತಿ ಹಾದು ಹೋಗುವ ಜಾಗದ ಕೆಳ ಭಾಗದಲ್ಲೇ ಗಿಡಗಳನ್ನು ನೆಡಲಾಗಿದ್ದು, ಅವೈಜ್ಞಾನಿಕವಾಗಿ ಗಿಡನೆಡಲಾಗಿದೆ. ಮುಂದೆ ಗಿಡ ಬೆಳೆದು ಮರವಾದಾಗ ಅಪಾಯ ಸಂಭವ ಗ್ಯಾರಂಟಿ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಜೊತೆಗೆ ಜೆ ಜೆ ಎಂ

ಸವಣೂರು-ಪುಣ್ಚತ್ತಾರು ರಸ್ತೆ ಬದಿ ಗಿಡ ನೆಡುವ ಯೋಜನೆ | ವಿದ್ಯುತ್‍ ತಂತಿ ಹಾದು ಹೋಗುವ ಕೆಳಭಾಗದಲ್ಲೇ ಗಿಡ ನಾಟಿ | ಸಂಬಂಧಪಟ್ಟವರು ಪರಿಶೀಲನೆ ನಡೆಸಬೇಕೆಂದು ಸ್ಥಳೀಯರ ಆಗ್ರಹ Read More »

ಕೊಕ್ಕಡ ಆನೆ ದಾಳಿಗೆ  ವ್ಯಕ್ತಿ ಮೃತ್ಯು : ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

ಬೆಳ್ತಂಗಡಿ: ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕದ ಆನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಅವರ ಮನೆಗೆ ಭೇಟಿ ನೀಡಿದ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಮೃತರ ಕುಟುಂಬಕ್ಕೆ ಸಾಂತ್ವಾನ  ಹೇಳಿದರು. ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರೊಂದಿಗೆ ಸಮಾಲೋಚಿಸಿ, ಮೃತರ ಕುಟುಂಬಕ್ಕೆ  ಗರಿಷ್ಠ ಪರಿಹಾರವನ್ನು ಒದಗಿಸುವ ಬಗ್ಗೆ  ಅರಣ್ಯ ಸಚಿವ ಈಶ್ವರ ಖಂಡ್ರೆಯವರ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು ಹಾಗೂ ಕುಟುಂಬದ ಸದಸ್ಯರೋರ್ವರಿಗೆ ಸರಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಿದರು. ಅರಣ್ಯ ಇಲಾಖೆಯ ವತಿಯಿಂದ ಪರಿಹಾರ ಸೌಲಭ್ಯಗಳನ್ನು ತುರ್ತಾಗಿ

ಕೊಕ್ಕಡ ಆನೆ ದಾಳಿಗೆ  ವ್ಯಕ್ತಿ ಮೃತ್ಯು : ಶಾಸಕಿ ಭಾಗೀರಥಿ ಮುರುಳ್ಯ ಭೇಟಿ Read More »

ಮಂಗಳೂರು : ಉದ್ಯಮಿಗಳಿಗೆ 200 ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದಾತ ಸೆರೆ

ಬಂಗಲೆಯಲ್ಲಿದ್ದ ವಿದೇಶಿ ಯುವತಿಯೂ ಪೊಲೀಸರ ವಶ ಯಾವುದೇ ಬಾಲಿವುಡ್‌ ಸಿನೆಮಾ ಸೆಟ್‌ಗಿಂತಲೂ ಅದ್ದೂರಿಯಾಗಿದೆ ಮಂಗಳೂರಿನ ಈ ವಂಚಕನ ಬಂಗಲೆ ಮಂಗಳೂರು : ಮನೆಯೆಂದರೆ ಅದು ಮನೆಯಲ್ಲ ಭವ್ಯವಾದ ಬಂಗಲೆ. ಒಳಗಿದೆ ಯಾವುದೇ ಫೈವ್‌ಸ್ಟಾರ್‌ ಹೋಟೆಲನ್ನು ನಾಚಿಸುವಂಥ ಐಷಾರಾಮಿ ವ್ಯವಸ್ಥೆ. ಎರಡು ಮೂರು ಅಡಗುತಾಣಗಳು, ಅಲ್ಲಲ್ಲಿ ಸಿಸಿ ಕ್ಯಾಮೆರಗಳು. ರೂಮ್‌ಗಳಲ್ಲಿ ಗೋಡೆಗಳಿದ್ದರೂ ಅವುಗಳು ಕೆಲವೊಮ್ಮೆ ರಹಸ್ಯ ಕೋಣೆಗಳ ಬಾಗಿಲುಗಳೂ ಆಗುತ್ತವೆ.ಕಬೋರ್ಡ್‌ಗಳ ರೀತಿ ಕಾಣುವುದನ್ನು ತಟ್ಟಿದರೆ ಅದು ಇನ್ನೊಂದು ನಿಗೂಢ ಕೋಣೆಯತ್ತ ಸಾಗುವ ಮೆಟ್ಟಿಲುಗಳನ್ನು ತೋರಿಸುತ್ತವೆ. ಮನೆಯ ಗೇಟ್‌ ತೆರೆದುಕೊಳ್ಳುವ

ಮಂಗಳೂರು : ಉದ್ಯಮಿಗಳಿಗೆ 200 ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದಾತ ಸೆರೆ Read More »

error: Content is protected !!
Scroll to Top