ದಕ್ಷಿಣ ಕನ್ನಡ

ಧರ್ಮಸ್ಥಳ ಪ್ರಕರಣ : ಮುಸುಕುಧಾರಿ ವ್ಯಕ್ತಿಯನ್ನು ಬಂಧಿಸಿದ ಎಸ್‌ಐಟಿ

ಧರ್ಮಸ್ಥಳ : ಧರ್ಮಸ್ಥಳ ಪ್ರಕರಣದ ಕೇಂದ್ರ ಬಿಂದುವಾಗಿದ್ದ ಮುಸುಕುಧಾರಿ ವ್ಯಕ್ತಿಯನ್ನು ಎಸ್‌ಐಟಿ ಇಂದು ಬೆಳಗ್ಗೆ ಬಂಧಿಸಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿದ್ದ ಮುಸುಕುಧಾರಿ ವ್ಯಕ್ತಿಯ ನಂಬಿ ಸರ್ಕಾರ ವಿಶೇಷ ತನಿಖಾ ತಂಡ ರಕ್ಷಿಸಿತ್ತು. ಈ ತಂಡ ಆತ ತೋರಿಸಿದ 17 ಜಾಗಗಳಲ್ಲಿ ಅಗೆದರೂ ಶವದ ಕುರುಹುಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಡೀ ಮುಸುಕುಧಾರಿಯನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಎಸ್‌ಐಟಿ ಮುಖ್ಯಸ್ಥ ಪ್ರಣವ್‌ ಮೊಹಾಂತಿ ಸ್ವತಹ ವಿಚಾರಣೆ ನಡೆಸಿದ್ದಾರೆ . ಬಳಿಕ ಎಸ್‌ಐಟಿ ಹೆಚ್ಚಿನ […]

ಧರ್ಮಸ್ಥಳ ಪ್ರಕರಣ : ಮುಸುಕುಧಾರಿ ವ್ಯಕ್ತಿಯನ್ನು ಬಂಧಿಸಿದ ಎಸ್‌ಐಟಿ Read More »

ಮಂಗಳೂರು : ಕ್ರೀಡಾಪಟುಗಳ ಹಾಸ್ಟೆಲ್‌ನ ಅಕ್ಕಿಯಲ್ಲಿ ಹುಳು ಪತ್ತೆ

ಲೋಕಾಯುಕ್ತ ದಾಳಿಯಿಂದ ಬಯಲಾದ ಹಾಸ್ಟೆಲ್‌ನ ಅವ್ಯವಸ್ಥೆ ಮಂಗಳೂರು: ನಗರದ ಮಣ್ಣಗುಡ್ಡೆಯಲ್ಲಿರುವ ದ.ಕ. ಜಿಲ್ಲಾ ಕ್ರೀಡಾ ಬಾಲಕ ಮತ್ತು ಬಾಲಕಿಯರ ವಸತಿ ಗೃಹಕ್ಕೆ ಮಂಗಳೂರು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕಿ ಡಾ. ಗಾನ ಪಿ. ಕುಮಾರ್ ಹಾಗೂ ಪೊಲೀಸ್ ನಿರೀಕ್ಷಕಿಯರಾದ ಭಾರತಿ ಜಿ, ರವಿ ಪವಾರ್ ನೇತೃತ್ವದ ತಂಡ ಶುಕ್ರವಾರ ದಾಳಿ ನಡೆಸಿದಾಗ ಅನೇಕ ಅವ್ಯವಸ್ಥೆಗಳು ಬೆಳಕಿಗೆ ಬಂದಿವೆ. ವಸತಿಗೃಹದ ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಇರಲಿಲ್ಲ. ಧವಸ ಧಾನ್ಯಗಳ ಸ್ಟಾಕ್ ಇರಲಿಲ್ಲ. ಅಕ್ಕಿಯಲ್ಲಿ ಹುಳುಗಳು ಕಂಡುಬಂದಿವೆ. ಸ್ಟಾಕ್ ರಿಜಿಸ್ಟ್ರರ್ ಕೂಡ

ಮಂಗಳೂರು : ಕ್ರೀಡಾಪಟುಗಳ ಹಾಸ್ಟೆಲ್‌ನ ಅಕ್ಕಿಯಲ್ಲಿ ಹುಳು ಪತ್ತೆ Read More »

ಮಗಳೇ ಇಲ್ಲ ಎಂದು ಹೇಳಿ ಕೆಲವೇ ತಾಸುಗಳಲ್ಲಿ ಉಲ್ಟಾ ಹೊಡೆದ ಸುಜಾತ ಭಟ್‌

ಕ್ಷಣಕ್ಕೊಂದು ಹೇಳಿಕೆ ನೀಡಿ ಪ್ರಕರಣವನ್ನು ಗೊಂದಲಮಯಗೊಳಿಸಿದ ವೃದ್ಧೆ ಮಂಗಳೂರು: ನನಗೆ ಅನನ್ಯಾ ಭಟ್‌ ಎಂಬ ಮಗಳೇ ಇಲ್ಲ. ನನಗೆ ಸುಳ್ಳು ದೂರು ನೀಡಲು ಹೇಳಿದ್ದರು. ಅವರು ಹೇಳಿದಂತೆ ದೂರು ನೀಡಿದ್ದೇನೆ ಎಂದು ನಿನ್ನೆ ಹೇಳಿದ್ದ ಸುಜಾತ ಭಟ್‌ ಕೆಲವೇ ತಾಸುಗಳಲ್ಲಿ ಉಲ್ಟಾ ಹೊಡೆದು ನನಗೆ ಅನನ್ಯಾ ಭಟ್ ಅಂತ ಮಗಳಿರೋದು ಸತ್ಯ ಎಂದು ಹೇಳಿ ಇಡೀ ಪ್ರಕರಣವನ್ನು ಗೊಂದಲಮಯಗೊಳಿಸಿದ್ದಾರೆ. ಶುಕ್ರವಾರ ಖಾಸಗಿ ವಾಹಿನಿಯೊಂದರ ಜೊತೆ ಕಾರಿನಲ್ಲಿ ಕುಳಿತು ಮಾತನಾಡಿದ್ದ ನಾನು ಹೇಳಿದ್ದೆಲ್ಲ ಕಟ್ಟುಕಥೆ. ಗಿರೀಶ್‌ ಮಟ್ಟಣ್ಣ, ಜಯಂಟ್‌

ಮಗಳೇ ಇಲ್ಲ ಎಂದು ಹೇಳಿ ಕೆಲವೇ ತಾಸುಗಳಲ್ಲಿ ಉಲ್ಟಾ ಹೊಡೆದ ಸುಜಾತ ಭಟ್‌ Read More »

ಮಹೇಶ್‌ ಶೆಟ್ಟಿ ತಿಮರೋಡಿ ಜಾಮೀನು ಅರ್ಜಿ ವಿಚಾರಣೆ ಇಂದು

ಬಿಜೆಪಿ ಮುಖಂಡ ಬಿ.ಎಲ್‌.ಸಂತೋಷ್‌ ನಿಂದನೆ ಪ್ರಕರಣದಲ್ಲಿ ಸೆರೆಯಾಗಿರುವ ತಿಮರೋಡಿ ಉಡುಪಿ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ ಜೈಲು ಸೇರಿರುವ ಮಹೇಶ್ ಶೆಟ್ಟಿ ತಿಮರೋಡಿಯ ಜಾಮೀನಿ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಗುರುವಾರ ಬ್ರಹ್ಮಾವರ ಪೊಲೀಸರು ತಿಮರೋಡಿಯನ್ನು ವಶಕ್ಕೆ ಪಡೆದು ಬಳಿಕ ಅರೆಸ್ಟ್ ಮಾಡಿದ್ದರು. ನಂತರ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ತಿಮರೋಡಿ ಹಿರಿಯಡ್ಕ ಸಬ್ ಜೈಲಿನಲ್ಲಿದ್ದಾರೆ. ಬಂಧಿಸುವ ವೇಳೆ ಉಜಿರೆಯಲ್ಲಿರುವ ತಿಮರೋಡಿ ಮನೆಯಲ್ಲಿ ಹೈಡ್ರಾಮಾ ನಡೆದಿತ್ತು. ಪೊಲೀಸರ

ಮಹೇಶ್‌ ಶೆಟ್ಟಿ ತಿಮರೋಡಿ ಜಾಮೀನು ಅರ್ಜಿ ವಿಚಾರಣೆ ಇಂದು Read More »

ಮಗಳು ನಾಪತ್ತೆ ಪ್ರಕರಣ ವಾಪಸ್‌ ಪಡೆಯಲು ಮುಂದಾದರಾ ಸುಜಾತ ಭಟ್‌?

ಆಡಿಯೋ ಹರಿಬಿಟ್ಟು ಪ್ರಕರಣ ಬಗ್ಗೆ ಮಾತನಾಡಿದ ವೃದ್ಧೆ ಧರ್ಮಸ್ಥಳ: ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದು, ಹುಡುಕಿಕೊಡಿ ಎಂದು ಹೇಳಿಕೊಂಡಿದ್ದ ಸುಜಾತ ಭಟ್‌ ಈಗ ದಿಢೀರ್‌ ಎಂದು ಕೇಸನ್ನು ವಾಪಸು ಪಡೆದುಕೊಳ್ಳುವುದಾಗಿ ಹೇಳಿದ್ದು, ಅವರ ಬಗ್ಗೆ ಇರುವ ಅನುಮಾನ ಇನ್ನಷ್ಟು ಹೆಚ್ಚವಾಗುವಂತೆ ಮಾಡಿದೆ. ಇತ್ತೀಚೆಗೆ ಸುಜಾತಾ ಭಟ್ ತಮ್ಮ ಮಗಳೆಂದು ಫೋಟೋವೊಂದನ್ನು​ ತೋರಿಸಿದ್ದರು. ಆದರೆ ಅದು ಅನನ್ಯಾ ಭಟ್ ಅಲ್ಲ, ಬದಲಿಗೆ ವಾಸಂತಿ ಎಂಬ ಸತ್ಯ ಹೊರಬಂದಿತ್ತು. ಹೀಗಿರುವಾಗ ಕೇಸ್ ವಾಪಸ್ ಪಡೆಯುವುದಾಗಿ ಸುಜಾತಾ ಭಟ್

ಮಗಳು ನಾಪತ್ತೆ ಪ್ರಕರಣ ವಾಪಸ್‌ ಪಡೆಯಲು ಮುಂದಾದರಾ ಸುಜಾತ ಭಟ್‌? Read More »

ಬಂಟ್ವಾಳ : ಬಾಲಕನಿಗೆ ಲೈಂಗಿಕ ಕಿರುಕುಳ

ತಲೆಮರೆಸಿಕೊಂಡ ಆರೋಪಿಗೆ ಶೋಧ ಬಂಟ್ವಾಳ : ಅಪ್ರಾಪ್ತ ಬಾಲಕನ ಮೇಲೆ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯ ಎಸಗಿದ ಕುರಿತು ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಾಗಿದೆ. ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕ ಪದವು ನಿವಾಸಿ ಅಬ್ದುಲ್ಲಾ ಯಾನೆ ಮೋನು ಯಾನೆ ಪಿಲಿಮೋನು ಎಂಬಾತ ಆರೋಪಿಯಾಗಿದ್ದು, ಈತನ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ. ಬಾಲಕ ಕೂದಲು ಕಟ್ ಮಾಡುವುದಕ್ಕಾಗಿ ಸಲೂನ್‌ಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿ ಪಿಲಿ ಮೋನು ಬಾಲಕನನ್ನು ತನ್ನ ಸ್ಕೂಟರ್‌ನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿ

ಬಂಟ್ವಾಳ : ಬಾಲಕನಿಗೆ ಲೈಂಗಿಕ ಕಿರುಕುಳ Read More »

ನಾಳೆ (ಆ.23): ಆಲಂಕಾರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 10ನೇ ವರ್ಷದ ಅಟ್ಟಿ ಮಡಿಕೆ ಒಡೆಯುವ ಉತ್ಸವ

ಆಲಂಕಾರು: ಹಿಂದೂ ಜಾಗರಣ ವೇದಿಕೆ ಆಲಂಕಾರು ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 10ನೇ ವರ್ಷದ ಅಟ್ಟಿ ಮಡಿಕೆ ಒಡೆಯುವ ಉತ್ಸವ ಆ.23 ಶನಿವಾರ ಮಧ್ಯಾಹ್ನ 2 ರಿಂದ ಆಲಂಕಾರು ಪೇಟೆಯಲ್ಲಿ ನಡೆಯಲಿದೆ. ಉತ್ಸವಕ್ಕೆ ಮಧ್ಯಾಹ್ನ 2 ಗಂಟೆಗೆ ಆಲಂಕಾರು ಮಾನಸ ಚಿಕಿತ್ಸಾಲಯದ ಡಾ.ಹರಿದಾಸ್ ಭಟ್‍ ಚಾಲನೆ ನೀಡಲಿದ್ದಾರೆ. ಸಂಜೆ 5.30 ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆಲಂಕಾರು ಅಟ್ಟಿಮಡಿಕೆ ಉತ್ಸವ ಸಮಿತಿ ಅಧ್ಯಕ್ಷ ದಾಮೋಧರ್ ಆಚಾರ್ಯ ಆಲಂಕಾರು

ನಾಳೆ (ಆ.23): ಆಲಂಕಾರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 10ನೇ ವರ್ಷದ ಅಟ್ಟಿ ಮಡಿಕೆ ಒಡೆಯುವ ಉತ್ಸವ Read More »

ದಿನಕ್ಕೊಂದು ಅನೂಹ್ಯ ತಿರುವು ಪಡೆಯುತ್ತಿರುವ ಧರ್ಮಸ್ಥಳ ಪ್ರಕರಣ

ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಎಂಟ್ರಿ – ಅಪಪ್ರಚಾರದ ವಿರುದ್ಧ ದೂರು ಧರ್ಮಸ್ಥಳ : ಧರ್ಮಸ್ಥಳದ ಶವ ಹೂತ ಪ್ರಕರಣ ದಿನಕಳೆದಂತೆ ಅನೂಹ್ಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ದಿನಕ್ಕೊಬ್ಬರಂತೆ ಎಂಟ್ರಿಯಾಗುತ್ತಿದ್ದು, ಎಸ್‌ಐಟಿ ಅಧಿಕಾರಿಗಳೇ ಗೊಂದಲಕ್ಕೊಳಗಾಗಿದ್ದಾರೆ. ಎಸ್‌ಐಟಿ ಅಧಿಕಾರಿಗಳಿಗೆ ಬಹು ಆಯಾಮದಲ್ಲಿ ತನಿಖೆ ನಡೆಸಲು ತನಿಖಾ ತಂಡ ಪ್ರಣವ್‌ ಮೊಹಾಂತಿ ಸೂಚಿಸಿದ್ದಾರೆ. ಈ ನಡುವೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಈ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ವಿಡಿಯೋ ಹಾಕಿದ್ದಾರೆ ಎಂದು ನಾಲ್ವರ

ದಿನಕ್ಕೊಂದು ಅನೂಹ್ಯ ತಿರುವು ಪಡೆಯುತ್ತಿರುವ ಧರ್ಮಸ್ಥಳ ಪ್ರಕರಣ Read More »

ಕುಡುಪು ಗುಂಪು ಹತ್ಯೆ ಪ್ರಕರಣ : ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಕ್ರಿಕೆಟ್‌ ಆಡುವಾಗ ಕೇರಳದ ವ್ಯಕ್ತಿಯನ್ನು ಗುಂಪುಕೂಡಿ ಥಳಿಸಿ ಕೊಂದ ಪ್ರಕರಣ ಮಂಗಳೂರು: ಮಂಗಳೂರಿನ ಕುಡುಪುವಿನಲ್ಲಿ ಕಳೆದ ಏ.27ರಂದು ಕೇರಳ ಮೂಲದ ಆಶ್ರಫ್ ಎಂಬವರನ್ನು ಗುಂಡು ಹತ್ಯೆ ಮಾಡಿದ ಪ್ರಕರಣದ 10 ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಆರೋಪಿಗಳಾದ ಅನಿಲ್ ಕುಮಾರ್, ಸಾಯಿದೀಪ್, ಅನಿಲ್ ಕುಮಾರ್, ಯತಿರಾಜ್, ಮನೀಶ್ ಶೆಟ್ಟಿ, ಪ್ರದೀಪ್, ವಿವಿಯನ್ ಆಲ್ವರಿಸ್, ಶ್ರೀದತ್ತ, ಧನುಷ್, ಕಿಶೋರ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಏ.27ರರಂದು ಸಂಜೆ 5.30ರ

ಕುಡುಪು ಗುಂಪು ಹತ್ಯೆ ಪ್ರಕರಣ : ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌ Read More »

ಸಮೀರ್‌ ವಿರುದ್ಧ ಇನ್ನೊಂದು ಕೇಸ್‌ ದಾಖಲು

ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರದ ಅವಹೇಳನ ಮಾಡಿದ ಆರೋಪ ಧರ್ಮಸ್ಥಳ: ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ವಿಡಿಯೋ ಮಾಡಿ ಸದ್ಯ ಜಾಮೀನು ಪಡೆದು ಬಂಧನದಿಂದ ಪಾರಾಗಿರುವ ಯೂಟ್ಯೂಬರ್ ಮೊಹಮ್ಮದ್‌ ಸಮೀರ್ ವಿರುದ್ಧ ವಿಶ್ವ ಹಿಂದೂ ಪರಿಷತ್ ಸದಸ್ಯ ಮಂಜು ಜೈನ್ ಎಂಬವರು ಚಿಕ್ಕಮಗಳೂರಿನ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರ

ಸಮೀರ್‌ ವಿರುದ್ಧ ಇನ್ನೊಂದು ಕೇಸ್‌ ದಾಖಲು Read More »

error: Content is protected !!
Scroll to Top