ಫೆ.20: ಉಕ್ಕುಡ ಒತ್ತೆಸಾರು ಗೌಡರ ಕುಟುಂಬಸ್ಥರ ತರವಾಡು ಮನೆಯ ಜೀರ್ಣೋದ್ಧಾರ ಪೂರ್ವ ದೈವಗಳ ಬಾಲಾಲಯ ಪ್ರತಿಷ್ಠೆ
ವಿಟ್ಲ: ಉಕ್ಕುಡ ಒತ್ತೆಸಾರು ಗೌಡರ ಕುಟುಂಬಸ್ಥರ ತರವಾಡು ಮನೆಯ ಜೀರ್ಣೋದ್ಧಾರ ಪೂರ್ವ ದೈವಗಳ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಫೆ.20 ರಂದು ನಡೆಯಲಿದೆ. ಸುಮಾರು 300 ವರ್ಷಗಳ ಹಿಂದೆ ವಿಟ್ಲ ಅರಮನೆಯ ರಾಜರ ಆಳ್ವಿಕೆಯ ಕಾಲದಲ್ಲಿ ಜನರಿಗೆ ಹಾಗೂ ಕೃಷಿ ಬೆಳೆಗಳಿಗೆ ಪಕ್ಷಿ ಮೃಗಾದಿಗಳ ಉಪದ್ರವಗಳು ಜಾಸ್ತಿಯಾದಗ ಆಗಿನ ರಾಜರ ಸೂಚನೆ ಮೇರೆಗೆ ಒತ್ತೆಸಾರು ಕುಟುಂಬಸ್ಥರ ಹಿರಿಯರು ಹುಲಿ, ಹಂದಿ, ಪಕ್ಷಿ ಮೃಗಾದಿಗಳನ್ನು ಬೇಟೆಯಾಡಿ ಹಿಡಿದಿದ್ದರಿಂದ ರಾಜರಿಂದ ಪ್ರಶಸ್ತಿ ಲಭಿಸಿದ್ದು ಮತ್ತು ರಾಜರಿಂದ ಮಲರಾಯ, ಕಕ್ಕರಿ ಚಾಮುಂಡಿ ಎಂಬೀ […]










