ದಕ್ಷಿಣ ಕನ್ನಡ

ಈಜು ಸ್ಪರ್ಧೆ : ಸಿಯಾ ಭಾವಿನ್ ಸವಜಾನಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಬೆಂಗಳೂರು : ರಾಮಮೂರ್ತಿ ನಗರದಲ್ಲಿರುವ ಜೈಗೋಪಾಲ್ ಗರೋಡಿಯ ರಾಷ್ಟೋತ್ಥಾನ ವಿದ್ಯಾಕೇಂದ್ರದಲ್ಲಿ ಆ. 17ರಂದು ನಡೆದ ವಿದ್ಯಾ ಭಾರತಿ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಪುತ್ತೂರು ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 9ನೇ ತರಗತಿ ವಿದ್ಯಾರ್ಥಿನಿ ಸಿಯಾ ಭಾವಿನ್ ಸವಜಾನಿ ಅವರು 200 ಮೀಟರ್ ಫ್ರೀ ಸ್ಟೈಲ್ ಮತ್ತು 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 100 ಮೀಟರ್ ಬ್ಯಾಕ್ ಸ್ಟ್ರೋಕ್, 4×100 ರಿಲೇ ಫ್ರೀ ಸ್ಟೈಲ್ ನಲ್ಲಿ ಬೆಳ್ಳಿಪದಕ ಪಡೆದು ರಾಷ್ಟ್ರ ಮಟ್ಟಕ್ಕೆ […]

ಈಜು ಸ್ಪರ್ಧೆ : ಸಿಯಾ ಭಾವಿನ್ ಸವಜಾನಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ Read More »

ಮಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಮಂಗಳೂರು : ಮಂಗಳೂರಿನಲ್ಲಿ  ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ ಅನುಮತಿ ನೀಡಿದ ವಿಚಾರವನ್ನ ಖಂಡಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಯಿತು. ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಕಾಲ್ನಡಿಗೆ ಜಾಥ ಆರಂಭಿಸಿ. ಸಾವಿರಾರು ಸಂಖ್ಯೆಯಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿಯಿಂದ ಕಾರ್ಯಕರ್ತರು ಆಗಮಿಸಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ನಾರಾಯಣ ಗುರು ವೃತ್ತದಿಂದ ಕಾಲ್ನಡಿಗೆ ಜಾಥಾ ಆರಂಭವಾಗಿ ಪಾಲಿಕೆ ಮುಂಭಾಗದ ವರೆಗೆ ಆಗಮಿಸಿ. ಸಭೆ ನಡೆಯಿತು. ಈ ವೇಳೆ ಪ್ರತಿಭಟನೆಯಲ್ಲಿ ಎಂ ಎಲ್ ಸಿ ಐವನ್ ಡಿಸೋಜ,

ಮಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ Read More »

ಆಟೋ ಚಾಲಕನಿಗೆ ಚೂರಿ ಇರಿತ | ಆರೋಪಿ ಪೊಲೀಸ್ ವಶ

ಪುತ್ತೂರು : ಆಟೋ ಚಾಲಕನಿಗೆ ಚೂರಿಯಿಂದ ಇರಿತ ಘಟನೆ ನಡೆದಿದೆ.ಕಾರ್ಯಡಿ ನಿವಾಸಿ ರವೂಫ್ ಎಂಬವರ ಪುತ್ರ ಆಪೀ ಬಂಧಿತ ಆರೋಪಿ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಉರಿಮಜಲು ಜಂಕ್ಷನ್‌ನಲ್ಲಿ ಇಡ್ಕಿದು ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಘಟನೆ ನಡೆದಿದೆ. ಆಟೋ ಚಾಲಕ ಶರೀಫ್ ಗಾಯಗೊಂಡವರಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೋ ಚಾಲಕನಿಗೆ ಚೂರಿ ಇರಿತ | ಆರೋಪಿ ಪೊಲೀಸ್ ವಶ Read More »

ಕೇನ್ಯ : ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಶಾಲಾ ಬಾವಿಯಲ್ಲಿ ಪತ್ತೆ

 ಕೇನ್ಯ : ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹವು ಕೇನ್ಯ ಶಾಲಾ ಬಾವಿಯಲ್ಲಿ ಪತ್ತೆಯಾಗಿದೆ. ಕೇನ್ಯ ಶಾಲೆಯ ಬಳಿಯ ನಿವಾಸಿ ಬಾಬು ಪೂಜಾರಿ ಎಂಬುವರು ಇಂದು ಬೆಳಿಗ್ಗೆ 3:30 ರ ವೇಳೆಗೆ ಮನೆಯಿಂದ ನಾಪತ್ತೆಯಾಗಿದ್ದಾರೆ. ಮನೆಯವರು ಹುಡುಕಾಟ ನಡೆಸಿದಾಗ ಕೇನ್ಯ ಸ.ಕಿ.ಪ್ರಾ. ಶಾಲಾ ಬಾವಿ ಕಟ್ಟೆಯಲ್ಲಿ ಬಾಬು ಪೂಜಾರಿಯವರ ಲುಂಗಿ,ಟಾರ್ಚ್ ಮತ್ತು ಚಪ್ಪಲಿ ಪತ್ತೆಯಾಯಿತು.

ಕೇನ್ಯ : ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಶಾಲಾ ಬಾವಿಯಲ್ಲಿ ಪತ್ತೆ Read More »

ಸವಣೂರು ಮೆಸ್ಕಾಂನಲ್ಲಿ ಮೆಕ್ಯಾನಿಕ್ ಹುದ್ದೆಯಲ್ಲಿದ್ದ ಉಮೇಶ್ ಪದೋನ್ನತಿ ಹೊಂದಿ ಬಿಳಿನೆಲೆ ವಿಭಾಗಕ್ಕೆ ವರ್ಗಾವಣೆ

ಸವಣೂರು :  ಮೆಕ್ಯಾನಿಕ್  ಹುದ್ದೆಯಲ್ಲಿ  ಇದ್ದು ಚಾರ್ವಾಕ ಲೈನ್ ನಲ್ಲಿ ಕಾರ್ಯ ನಿರ್ವಹಿಸುತಿದ್ದ  ಉಮೇಶ ಪದೋನ್ನತಿ  ಹೊಂದಿ ಬಿಳಿನೆಲೆ ವಿಭಾಗಕ್ಕೆ ವರ್ಗಾವಣೆ ಗೊಂಡಿದ್ದಾರೆ.  ಆರೆಲ್ತಡಿ,  ಕೆಡೆಂಜಿ, ಕುದ್ಮಾರಿನಿಂದ   ದೈಪಿಲ , ಕಾಪಿನಕಾಡು,  ಖಂಡಿಗ, ಅಂಬುಲ,  ಕುಂಬ್ಲಾಡಿ,  ನಾನಿಲ, ಕರಂದ್ಲಾಜೆ,  ಅರುವ‌‌  ಮುದ್ವ , ಉದನಡ್ಕ, ಕಪಿಲೇಶ್ವರ, ಅಭಿಕಾರ ,ಇಲ್ಲಿನ ವಿದ್ಯುತ್ ಬಳಕೆ ದಾರರ ಸಮಸ್ಯೆ ಗಳಿಗೆ ಉಮೇಶ್ ಅವರು  ತಕ್ಷಣ ಸ್ಪಂದಿಸುತಿದ್ದರು. ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಎಲ್ಲರಿಗೂ ಪ್ರೀತಿ ಪಾತ್ರರಾಗಿ ದುಡಿದು, ಯಾವುದೇ ಫಲಾಪೇಕ್ಷೆಯನ್ನು ಬಯಸದ  “ಉಮೇಶ

ಸವಣೂರು ಮೆಸ್ಕಾಂನಲ್ಲಿ ಮೆಕ್ಯಾನಿಕ್ ಹುದ್ದೆಯಲ್ಲಿದ್ದ ಉಮೇಶ್ ಪದೋನ್ನತಿ ಹೊಂದಿ ಬಿಳಿನೆಲೆ ವಿಭಾಗಕ್ಕೆ ವರ್ಗಾವಣೆ Read More »

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಪತ್ನಿಯಿಂದ ಕೊರಗಜ್ಜನಿಗೆ ಹರಿಕೆಯ ಅಗೆಲು ಸೇವೆ.

ಉಳ್ಳಾಲ:  ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರ ಪತ್ನಿ ದಾಟಿ ಸದಾನಂದ ಗೌಡ ಅವರು ತೊಕ್ಕೊಟ್ಟು ರೈಲ್ವೇ ಓವರ್ ಬ್ರಿಡ್ಜ್ ಬಳಿಯ ಸಾರ್ವಜನಿಕ ಕೊರಗಜ್ಜನ ಕ್ಷೇತ್ರಕ್ಕೆ ಶನಿವಾರ ಭೇಟಿ ನೀಡಿ ಹರಕೆಯ ಅಗೆಲು ಸೇವೆಯನ್ನು ಸಲ್ಲಿಸಿದರು. ಕೊರಗಜ್ಜನಿಗೆ ಹರಿಕೆ ಹೊತ್ತ ಮನದ ಇಷ್ಟಾರ್ಥ ನೆರವೇರಿದಕ್ಕಾಗಿ ದಾಟಿ ಸದಾನಂದ ಗೌಡ ಅವರು ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ಕೊರಗಜ್ಜನ ಕ್ಷೇತ್ರಕ್ಕೆ ಆಗಮಿಸಿ ಹರಿಕೆಯ ಸಾಮೂಹಿಕ ಅಗೆಲು ಸೇವೆ ಸಲ್ಲಿಸಿದ್ದಾರೆ. ಓವರ್ ಬ್ರಿಡ್ಜ್ ಕೊರಗಜ್ಜ ಸೇವಾ ಸಮಿತಿ ವತಿಯಿಂದ

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಪತ್ನಿಯಿಂದ ಕೊರಗಜ್ಜನಿಗೆ ಹರಿಕೆಯ ಅಗೆಲು ಸೇವೆ. Read More »

ಸ್ಕೂಟರ್ ಅಪಘಾತ : ಯುವಕ‌ ಸ್ಥಳದಲ್ಲೇ ಮೃತ್ಯು

ಕಟಪಾಡಿ : ಬೆಳಪು‌ ವಿನಯ‌ನಗರ ಸ್ಮಶಾನದ ಬಳಿ ಸ್ಕೂಟರ್ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಎಲ್ಲೂರು ಗ್ರಾಮದ ಕುಂಡೇಲು ಬಂಡಸಾಲೆ ನಿವಾಸಿ ಮೇಸ್ತ್ರಿ ಅಶೋಕ್ ಮೂಲ್ಯ ಎಂಬವರ ಪುತ್ರ ಜಗದೀಶ್ (33) ಮೃತ ಯುವಕ. ಪುಂಚಲಕಾಡುವಿಗೆ ತೆರಳಿದ್ದ ಅವರು  ಅಲ್ಲಿಂದ ಬೆಳಪು ಮಾರ್ಗವಾಗಿ ಮನೆಗೆ ತೆರಳುತ್ತಿದ್ದ ವೇಳೆ ತಿರುವಾದ ರಸ್ತೆಯಲ್ಲಿ ಅವರು ಚಲಾಯಿಸುತ್ತಿದ್ದ‌ ಜುಪಿಟರ್  ಸ್ಕೂಟಿ ಸ್ಕಿಡ್ ಆಗಿ ಮೋರಿಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.  ಢಿಕ್ಕಿಯ ರಭಸಕ್ಕೆ ಮೋರಿಗೆ ಬಡಿದು

ಸ್ಕೂಟರ್ ಅಪಘಾತ : ಯುವಕ‌ ಸ್ಥಳದಲ್ಲೇ ಮೃತ್ಯು Read More »

ಬೈಕ್‌ ಅಪಘಾತ ದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

ಬೆಳ್ತಂಗಡಿ : ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ತಾಲೂಕಿನ ಬೆಳಾಲು ಗ್ರಾಮದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಓದುತ್ತಿದ್ದ ವಿಧ್ಯಾರ್ಥಿ ಜೀವಾ ಮೃತಪಟ್ಟವರು. ಆಗಸ್ಟ್ 13ರ ಬೆಳಿಗ್ಗೆ ಕಾಲೇಜಿಗೆ ಬೈಕ್ ನಲ್ಲಿ ಹೋಗುವಾಗ ನಡೆದ ಟೆಂಪೋ ಮತ್ತು ಬೈಕ್‌ ನಡುವಿನ ಭೀಕರ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಉಮೇಶ್ ಮಂಜೊತ್ತು ಮತ್ತು ಕವಿತಾ ದಂಪತಿ ಪುತ್ರ ಅಪಘಾತಕ್ಕೆ ಈಡಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಬೈಕ್‌ ಅಪಘಾತ ದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು Read More »

ಖಾಸಗಿ ಬಸ್ ಪಲ್ಟಿ | ಹಲವರಿಗೆ ಗಂಭೀರ ಗಾಯ

ಬಂಟ್ವಾಳ: ಫರಂಗಿಪೇಟೆ ಸಮೀಪ ಖಾಸಗಿ ಬಸ್ ಪಲ್ಟಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.ಬೆಂಗಳೂರಿನಿಂದ ಮಂಗಳೂರಿನತ್ತ ಸಾಗುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ 10 ಕ್ಕೂ ಅಧಿಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಘಟನೆಗೆ ಸ್ಪಷ್ಟವಾದ ಕಾರಣ ಇನ್ನೂ ಕೂಡ ತಿಳಿದು ಬಂದಿಲ್ಲ. ಘಟನೆಯಿಂದ ಗಾಯಗೊಂಡವರ ಹೆಸರು ವಿಳಾಸದ ಮಾಹಿತಿ ಯಾವುದು ಕೂಡಾ ‌ಲಭ್ಯವಾಗಿಲ್ಲ. ಗಾಯಗೊಂಡ ಎಲ್ಲರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಯುವಕರು ಗಾಯಗೊಂಡವರನ್ನು ಬಸ್ಸಿನಿಂದ ಹೊರತೆಗೆದು ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳಲ್ಲಿ ಆಸ್ಪತ್ರೆಗೆ

ಖಾಸಗಿ ಬಸ್ ಪಲ್ಟಿ | ಹಲವರಿಗೆ ಗಂಭೀರ ಗಾಯ Read More »

ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ

ಮಾಣಿಲ: ಭರತ ಭೂಮಿಯಲ್ಲಿ ಜನ್ಮತಳೆದ ನಮ್ಮ ಬಾಳು ಧನ್ಯ ಎಂದು ವಿಶ್ರಾಂತ ಪ್ರಾಧ್ಯಾಪಕ ಗೋವಿಂದ ಭಟ್ ಕನ್ನಡಗುಳಿ ಹೇಳಿದ್ದಾರೆ. ಅವರು ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ 78ನೇ  ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಮರ್ಪಣಾ ಭಾವ ಅಗತ್ಯ ಎಂದ ಅವರು ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಪ್ರಜ್ಞಾವಂತ ನಾಗರಿಕರಾಗಲು ಕರೆ ನೀಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಶಿವಪ್ರಸಾದ್ ಸೊರಂಪಳ್ಳ ಧ್ವಜಾರೋಹಣ ಮಾಡಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ

ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ Read More »

error: Content is protected !!
Scroll to Top