ದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬ ಇಂದು ರಜೆ ನಾಳೆ

ಜ.15ರಂದು ಸರ್ಕಾರಿ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಘೋಷಿಸಲಾದ ಸರ್ಕಾರಿ ರಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಜನವರಿ 15ರಂದು ರಜೆ ನೀಡಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಜಿಲ್ಲೆಯಲ್ಲಿ ಜನವರಿ 14ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತಿದ್ದು, ಜನವರಿ 15ರಂದು ಸರ್ಕಾರಿ ರಜೆ ನಿಗದಿಪಡಿಸಿರುವುದಕ್ಕೆ ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಸ್ಪೀಕರ್ ಯು.ಟಿ. ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಈ ವಿಷಯವನ್ನು ಸರ್ಕಾರದ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬ ಇಂದು ರಜೆ ನಾಳೆ Read More »

ರಬ್ಬರ್‌ ತೋಟದಲ್ಲಿ ಮೂರು ಮರಿಗಳೊಂದಿಗೆ ಚಿರತೆ ಠಿಕಾಣಿ

ಬೆಳ್ತಂಗಡಿ: ತಾಲೂಕಿನ ಮುಂಡಾಜೆಯ ಮಚ್ಚಿಮಲೆ ಅನಂತ ಭಟ್ ಎಂಬವರ ರಬ್ಬರ್ ತೋಟದಲ್ಲಿ ಮೂರು ಮರಿಗಳೊಂದಿಗೆ ತಾಯಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಟ್ಯಾಪಿಂಗ್ ಕೆಲಸದವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಕೆಲಸದವರು ಬೆಳಗ್ಗೆ ತೋಟಕ್ಕೆ ಹೋದಾಗ ಚಿರತೆಗಳು ಕಾಣಿಸಿರುವುದಾಗಿ ತಿಳಿದು ಬಂದಿದೆ. ಅವರು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾರೆ. ಮುಂಡಾಜೆ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಓಡಾಟದ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದರು.‌ ಇಲ್ಲೇ ಸಮೀಪದ ಕಾಯರ್ತೋಡಿಯಲ್ಲಿ ನದಿಬದಿಯಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಸ್ಥಳೀಯ ಜನರು ಮಾಹಿತಿ ನೀಡಿದ್ದಾರೆ. ಮರಿಗಳೊಂದಿಗೆ

ರಬ್ಬರ್‌ ತೋಟದಲ್ಲಿ ಮೂರು ಮರಿಗಳೊಂದಿಗೆ ಚಿರತೆ ಠಿಕಾಣಿ Read More »

ಟ್ಯಾಂಕರ್‌ಗೆ ಗೂಡ್ಸ್ ವಾಹನ ಢಿಕ್ಕಿ

ಕಲ್ಲಡ್ಕ: ಗೂಡ್ಸ್ ವಾಹನವೊಂದು ನಿಲ್ಲಿಸಿದ್ದ ಟ್ಯಾಂಕರ್‌ಗೆ ಗುದ್ದಿದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಹೊಟೇಲ್ ಸಮುದ್ರ ಬಳಿ ಈ ಘಟನೆ ನಡೆದಿದೆ. ಪರಿಣಾಮ ಗೂಡ್ಸ್ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಯಾವುದೇ ದೊಡ್ಡ ಮಟ್ಟದ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಟ್ಯಾಂಕರ್‌ಗೆ ಗೂಡ್ಸ್ ವಾಹನ ಢಿಕ್ಕಿ Read More »

ಜಾರ್ಖಂಡ್ ವ್ಯಕ್ತಿಗೆ ಹಲ್ಲೆ ಪ್ರಕರಣ : ಮೂವರು ಆರೋಪಿಗಳ ಸೆರೆ

ಬಾಂಗ್ಲಾದೇಶದವನು ಎಂದು ಭಾವಿಸಿ ಹಲ್ಲೆ ಮಂಗಳೂರು: ಬಾಂಗ್ಲಾದೇಶದ ಪ್ರಜೆ ಎಂದು ಭಾವಿಸಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ತಾಲೂಕಿನ ಕೂಳೂರು ಗ್ರಾಮ ನಿವಾಸಿಗಳಾದ ರತೀಶ್ ದಾಸ್ ಯಾನೆ ಲಾಲು (32), ಧನುಷ್ (24) ಮತ್ತು ಸಾಗರ್ (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಜ.11ರಂದು ಸಂಜೆ ನಾಲ್ವರು ಆರೋಪಿಗಳು ಜಾರ್ಖಂಡ್ ಮೂಲದ ದಿಲ್ಜಾನ್ ಅನ್ಸಾರಿ ಎಂಬವರನ್ನು ತಡೆದು ನಿಲ್ಲಿಸಿ, ನೀನು

ಜಾರ್ಖಂಡ್ ವ್ಯಕ್ತಿಗೆ ಹಲ್ಲೆ ಪ್ರಕರಣ : ಮೂವರು ಆರೋಪಿಗಳ ಸೆರೆ Read More »

ಶಬರಿಮಲೆಯಲ್ಲಿ ಹೃದಯಾಘಾತದಿಂದ ಉಳ್ಳಾಲದ ಉದ್ಯಮಿ ಸಾವು

ಎರಿಮಲೆ ಬೆಟ್ಟ ಏರುತ್ತಿದ್ದಾಗ ಹೃದಯಾಘಾತವಾಗಿ ಕುಸಿದು ಬಿದ್ದ ಉದ್ಯಮಿ ಮಂಗಳೂರು: ಶಬರಿಮಲೆ ಯಾತ್ರೆ ಕೈಗೊಂಡಿದ್ದ ಉಳ್ಳಾಲದ ಅಯ್ಯಪ್ಪ ವ್ರತಧಾರಿಯೋರ್ವರು ಕೇರಳದ ಎರಿಮಲೆ ಬೆಟ್ಟ ಏರುತ್ತಿದ್ದಾಗ ಹೃದಯಾಘಾತಕ್ಕೆ ಬಲಿಯಾದ ಘಟನೆ ನಡೆದಿದೆ. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ದೇಲಂತಬೆಟ್ಟು ನಿವಾಸಿ ಉದ್ಯಮಿ ಚಂದ್ರಹಾಸ್ ಶೆಟ್ಟಿ (55) ಮೃತ ವ್ಯಕ್ತಿ. ಚಂದ್ರಹಾಸ್ ಅವರು ಅಯ್ಯಪ್ಪ ವ್ರತಾಧಾರಿಗಳ ಜೊತೆ ಶನಿವಾರ ಅರ್ಕುಳ ತುಪ್ಪೆಕಲ್ಲಿನಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಸೋಮವಾರ ಬೆಳಗ್ಗೆ ಚಂದ್ರಹಾಸ್ ಎರಿಮಲೆಯಿಂದ ಕಾಡಿನ ದಾರಿಯಾಗಿ ಪಂಪೆಗೆ ಪ್ರಯಾಣ ಬೆಳೆಸಿದ್ದ ವೇಳೆ

ಶಬರಿಮಲೆಯಲ್ಲಿ ಹೃದಯಾಘಾತದಿಂದ ಉಳ್ಳಾಲದ ಉದ್ಯಮಿ ಸಾವು Read More »

4 ಕೋ. ರೂ. ಮೌಲ್ಯದ ಡ್ರಗ್ಸ್‌ ವಶ : ಉಗಾಂಡದ ಮಹಿಳೆ ಬಂಧನ

ಬೆಂಗಳೂರಿನಿಂದ ಮಂಗಳೂರಿಗೆ ಮಾದಕವಸ್ತು ಪೂರೈಸುತ್ತಿದ್ದ ಜಾಲದ ಪ್ರಮುಖ ಸೂತ್ರಧಾರಿ ಮಹಿಳೆ ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ವ್ಯವಸ್ಥಿತ ರೀತಿಯಲ್ಲಿ ಮಾದಕ ದ್ರವ್ಯ ಎಂಡಿಎಂಎ ಸರಬರಾಜು ಮಾಡುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಅವಳಿಂದ ಸುಮಾರು 4 ಕೋ. ರೂ. ಮೌಲ್ಯದ 4 ಕೆಜಿ ಡ್ರಗ್ಸ್‌ ವಸ್ತು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಹೊರವಲಯದ ಜಿಗಾನಿಯಲ್ಲಿ 4 ಕೆಜಿ ಎಂಡಿಎಂಎ ಜೊತೆ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಆರೋಪಿಯನ್ನು ಜಲಿಯಾ ಝಲ್ವಾಂಗೊ ಎಂದು ಗುರುತಿಸಲಾಗಿದ್ದು, ವಶಪಡಿಸಿಕೊಂಡ ಅಕ್ರಮ ವಸ್ತುಗಳ ಮೌಲ್ಯ

4 ಕೋ. ರೂ. ಮೌಲ್ಯದ ಡ್ರಗ್ಸ್‌ ವಶ : ಉಗಾಂಡದ ಮಹಿಳೆ ಬಂಧನ Read More »

ಕಡಬ: ಮನೆಯಂಗಳದಿಂದ ನಾಯಿಯನ್ನು ಹೊತ್ತೊಯ್ದ ಚಿರತೆ

ಬೃಹತ್‌ ಗಾತ್ರದ ಚಿರತೆಯ ಓಡಾಟ ಸಿಸಿಟಿವಿಯಲ್ಲಿ ಸೆರೆ ಕಡಬ : ಎಡಮಂಗಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಸುಮ ನೂಜಿಲ ಅವರ ಮನೆಯಂಗಳಕ್ಕೆ ಜ.7ರಂದು ಬಂದ ಬೃಹತ್ ಗಾತ್ರದ ಚಿರತೆಯೊಂದು ಸಾಕುನಾಯಿಯನ್ನು ಹೊತ್ತೊಯ್ದಿದೆ. ಪಂಜ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಟ್ಟ ಎಡಮಂಗಲ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜ.7ರಂದು ಸುಮ ನೂಜಿಲ ಅವರ ಕುಟುಂಬದವರು ಕಾರ್ಯಕ್ರಮವೊಂದಕ್ಕೆ ತೆರಳಿದ್ದರಿಂದ ಮನೆಗೆ ಬೀಗ ಹಾಕಲಾಗಿತ್ತು. ಸಾಯಂಕಾಲ ಸುಮಾರು 7 ಗಂಟೆಯ ಹೊತ್ತಿಗೆ

ಕಡಬ: ಮನೆಯಂಗಳದಿಂದ ನಾಯಿಯನ್ನು ಹೊತ್ತೊಯ್ದ ಚಿರತೆ Read More »

ಟೋಲ್‌ಗೇಟ್‌ ವಿರುದ್ಧ ಭಾರಿ ಪ್ರತಿಭಟನೆ : ಕಾಸರಗೋಡು-ಮಂಗಳೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ

ಆರಿಕ್ಕಾಡಿಯಲ್ಲಿ ಟೋಲ್‌ ವಸೂಲಿ ಶುರುವಾದ ದಿನವೇ ಪ್ರತಿಭಟನೆಯ ಬಿಸಿ ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂಬಳೆ ಸಮೀಪ ಆರಿಕ್ಕಾಡಿಯಲ್ಲಿ ಟೋಲ್‌ ವಸೂಲು ಮಾಡುವುದನ್ನು ಪ್ರತಿಭಟಿಸಲು ಸೋಮವಾರ ಬೆಳಗ್ಗೆಯೇ ಸಾವಿರಾರು ಜನರು ಜಮಾಯಿಸಿದ ಪರಿಣಾಮವಾಗಿ ಮಂಗಳೂರು-ಕಾಸರಗೋಡು ನಡುವೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಆರಿಕ್ಕಾಡಿಯಲ್ಲಿ ಇಂದಿನಿಂದ ಟೋಲ್‌ ವಸೂಲಿ ಶುರುವಾಗಿದೆ. ಈಗಾಗಲೇ ಕೇರಳ-ಕರ್ನಾಟಕ ಗಡಿಯಾಗಿರುವ ತಲಪ್ಪಾಡಿಯಲ್ಲಿ ಟೋಲ್‌ಗೇಟ್‌ ಇದ್ದು, ಇಲ್ಲಿಂದ ಬರೀ 20 ಕಿ.ಮೀ. ದೂರದಲ್ಲಿರುವ ಆರಿಕ್ಕಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ನೊಂದು ಟೋಲ್‌ಗೇಟ್‌ ಹಾಕಿದೆ. ಎರಡು ಟೋಲ್‌ಗೇಟ್‌ಗಳ

ಟೋಲ್‌ಗೇಟ್‌ ವಿರುದ್ಧ ಭಾರಿ ಪ್ರತಿಭಟನೆ : ಕಾಸರಗೋಡು-ಮಂಗಳೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ Read More »

ಬಾಂಗ್ಲಾದೇಶದವ ಎಂದು ಜಾರ್ಖಂಡ್‌ನ ಕಾರ್ಮಿಕನ ಮೇಲೆ ಹಲ್ಲೆ

ದೈಹಿಕ, ಮಾನಸಿಕ ಹಿಂಸೆ ನೀಡಿದ ನಾಲ್ವರ ವಿರುದ್ಧ ಕೇಸ್‌ ಮಂಗಳೂರು : ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನನ್ನು ಬಾಂಗ್ಲಾದೇಶಿ ಪ್ರಜೆ ಎಂದು ಭಾವಿಸಿ ನಾಲ್ವರು ವ್ಯಕ್ತಿಗಳು ಮಾನಸಿಕ ಹಿಂಸೆ ನೀಡಿ ಹಲ್ಲೆ ನಡೆಸಿದ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೂಳೂರು ನಿವಾಸಿಗಳಾದ ಸಾಗರ್, ಧನುಷ್, ಲಾಲು ಯಾನೆ ರತೀಶ್, ಮೋಹನ್ ಹಲ್ಲೆ ಮಾಡಿದವರು ಎಂದು ಗುರುತಿಸಲಾಗಿದೆ. ಜಾರ್ಖಂಡ್ ಮೂಲದ ಗಿರಿಜಾ ಅನ್ಸಾರಿ ಕಳೆದ 10–15 ವರ್ಷಗಳಿಂದ ವಲಸೆ ಕಾರ್ಮಿಕನಾಗಿ ಜೀವನ ನಡೆಸುತ್ತಿದ್ದು, ಸ್ಥಳೀಯರಾದ ನಾಲ್ವರು

ಬಾಂಗ್ಲಾದೇಶದವ ಎಂದು ಜಾರ್ಖಂಡ್‌ನ ಕಾರ್ಮಿಕನ ಮೇಲೆ ಹಲ್ಲೆ Read More »

ಮಂಗಳೂರು : ಸುಟ್ಟ ಗಾಯಕ್ಕೊಳಗಾಗಿದ್ದ ಎಎಸ್‌ಐ ಸಾವು

ಮಂಗಳೂರು: ಸುಟ್ಟ ಗಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪಾಂಡೇಶ್ವರ ಠಾಣೆಯ ಎಎಸ್‌ಐ ಹರಿಶ್ಚಂದ್ರ ಬೇರಿಕೆ (57) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಅವರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ನಗರದ ಕೆಪಿಟಿ ಬಳಿಯ ವ್ಯಾಸ ನಗರದ ಮನೆಯಲ್ಲಿ ಡಿ.28ರಂದು ತರಗೆಲೆಯನ್ನು ಸುಡುವ ವೇಳೆ ಬೆಂಕಿ ಅವಘಡಕ್ಕೊಳಗಾಗಿ ತೀವ್ರ ತರದ ಸುಟ್ಟ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕಾಸರಗೋಡು ಜಿಲ್ಲೆಯ ಕಾವುಗೋಳಿಯ ನಿವಾಸಿಯಾಗಿದ್ದ ಹರಿಶ್ಚಂದ್ರ ಬೈಕಂಪಾಡಿಯಲ್ಲಿ ನೆಲೆಸಿದ್ದರು. ಕೆಲವು ವರ್ಷಗಳ ಹಿಂದೆ

ಮಂಗಳೂರು : ಸುಟ್ಟ ಗಾಯಕ್ಕೊಳಗಾಗಿದ್ದ ಎಎಸ್‌ಐ ಸಾವು Read More »

error: Content is protected !!
Scroll to Top