ದಕ್ಷಿಣ ಕನ್ನಡ

ತಿಂಗಳ ಹಿಂದೆ ವಿವಾಹವಾಗಿದ್ದ ಪೊಲೀಸ್ ಕಾನ್’ಸ್ಟೇಬಲ್ ನೇಣಿಗೆ ಶರಣು!!

ಮಂಗಳೂರು: ಮಂಗಳೂರು ನಗರ ಪೊಲೀಸ್ ಸೇವೆಯಲ್ಲಿದ್ದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್‌ಟೇಬಲ್ ಓರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸವದತ್ತಿಯ ಮಹೇಶ್ (31) ಆತ್ಮಹತ್ಯೆ ಮಾಡಿಕೊಂಡವರು. ನಗರದ ದಕ್ಷಿಣ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೌಟುಂಬಿಕ ಕಲಹವೇ ಮಹೇಶ್ ಆತ್ಮಹತ್ಯೆಗೆ ಕಾರಣವೆಂದು ಶಂಕಿಸಲಾಗಿದೆ. ಒಂದೂವರೆ ತಿಂಗಳ ಹಿಂದೆಯಷ್ಟೇ ಮಹೇಶ್ ವಿವಾಹವಾಗಿದ್ದರು ಎನ್ನಲಾಗಿದ್ದು, ಕಪಿತಾನಿಯೋ ಬಳಿಯ ಮನೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿಂಗಳ ಹಿಂದೆ ವಿವಾಹವಾಗಿದ್ದ ಪೊಲೀಸ್ ಕಾನ್’ಸ್ಟೇಬಲ್ ನೇಣಿಗೆ ಶರಣು!! Read More »

ಕಾಡಿಗಟ್ಟಿದ್ದ ಕಾಡಾನೆಗಳ ಮುಗಿಯದ ಕಾಟ! | ಬುಧವಾರ ರಾತ್ರಿ ಅರಣ್ಯ ಇಲಾಖೆ ಕಾರ್ಯಾಚರಣೆ, ಗುರುವಾರ ಬೆಳಿಗ್ಗೆ ನಾಡಿನಲ್ಲಿ ಆನೆಗಳ ಕಾರ್ಯಾಚರಣೆ!!

ಬೆಳ್ತಂಗಡಿ: ಕಾಡಿಗಟ್ಟಿದ್ದಷ್ಟು ನಾಡಿಗೆ ದಾಳಿ ಇಡುವ ಆನೆಗಳ ಪರಾಕ್ರಮ ಮತ್ತೆ ಮುಂದುವರಿದಿದೆ. ಧರ್ಮಸ್ಥಳದ ಕಾಡಂಚಿನ ನಾಡಿಗೆ ಆನೆಗಳ ದಾಳಿ ಹೆಚ್ಚಾದಾಗ, ಅರಣ್ಯ ಇಲಾಖೆ ಆನೆಗಳನ್ನು ಕಾಡಿಗಟ್ಟುವ ಕೆಲಸ ನಿರ್ವಹಿಸಿದ್ದವು. ಆದರೆ ಹೀಗೆ ಅಟ್ಟಿದ ಕಾಡಾನೆಗಳು ಗುರುವಾರ ಬೆಳಿಗ್ಗೆ ಧರ್ಮಸ್ಥಳ ಆಸುಪಾಸಿನಲ್ಲಿ ಪ್ರತ್ಯಕ್ಷವಾಗಿವೆ. ಮಂಗಳವಾರ ರಾತ್ರಿ ಕಾಡಾನೆಗಳ ಹಿಂಡು ಧರ್ಮಸ್ಥಳದ ಕೆಲ ತೋಟಗಳಿಗೆ ನುಗ್ಗಿ, ಹಾಳು ಗೆಡವಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ, ಅರಣ್ಯ ಇಲಾಖೆ ಡಿಆರ್ ಎಫ್ಒ ಹರಿಪ್ರಸಾದ್, ರಾಜೇಶ್, ಗಸ್ತು ಪಾಲಕರಾದ ಸಂತೋಷ,

ಕಾಡಿಗಟ್ಟಿದ್ದ ಕಾಡಾನೆಗಳ ಮುಗಿಯದ ಕಾಟ! | ಬುಧವಾರ ರಾತ್ರಿ ಅರಣ್ಯ ಇಲಾಖೆ ಕಾರ್ಯಾಚರಣೆ, ಗುರುವಾರ ಬೆಳಿಗ್ಗೆ ನಾಡಿನಲ್ಲಿ ಆನೆಗಳ ಕಾರ್ಯಾಚರಣೆ!! Read More »

ನಾಪತ್ತೆಯಾಗಿದ್ದ ಗ್ರಾಪಂ ಕಾರ್ಯದರ್ಶಿ ಮನೆಗೆ ಆಗಮನ! | ಗ್ರೇಡ್ 1 ಕಾರ್ಯದರ್ಶಿಯ ನಾಪತ್ತೆಗೆ ಕಾರಣವೇನು?

ಬಂಟ್ವಾಳ: ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾಮ ಪಂಚಾಯಿತಿ ಸಿಬ್ಬಂದಿಯೊಬ್ಬರು ವೇಣೂರಿನಲ್ಲಿ ಪತ್ತೆಯಾಗಿದ್ದು, ಇದೀಗ ಮನೆ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯಿತಿಯಲ್ಲಿ ಗ್ರೇಡ್ 1 ಕಾರ್ಯದರ್ಶಿಯಾಗಿದ್ದ ಬಂಟ್ವಾಳ ತಾಲೂಕಿನ ಲಕ್ಷ್ಮೀನಾರಾಯಣ ಆಚಾರ್ಯ ಎಂಬವರು ನಾಪತ್ತೆಯಾಗಿದ್ದು ಅವರ ಮೊಬೈಲ್ ವಾಲ್ಪಾಡಿಯ ಕೊಯಕ್ಕುಡೆ ಚಡಾವ್ ಎಂಬಲ್ಲಿ ಪತ್ತೆಯಾಗಿತ್ತು. ನಾಪತ್ತೆ ಕುರಿತು ಅವರ ಪತ್ನಿ ವಂದನಾ ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹುಡುಕಾಟಕ್ಕಿಳಿದ ಪೊಲೀಸರು ಅವರ ಮೊಬೈಲ್ ಲೊಕೇಶನ್ ಹಾಕಿದಾಗ ವಾಲ್ಪಾಡಿ ಕೊಯಕುಡೆ ಚಡಾವ್ ತೋರಿಸುತ್ತಿತ್ತು.

ನಾಪತ್ತೆಯಾಗಿದ್ದ ಗ್ರಾಪಂ ಕಾರ್ಯದರ್ಶಿ ಮನೆಗೆ ಆಗಮನ! | ಗ್ರೇಡ್ 1 ಕಾರ್ಯದರ್ಶಿಯ ನಾಪತ್ತೆಗೆ ಕಾರಣವೇನು? Read More »

ಪುತ್ತೂರು: ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಂಸದ ನಳಿನ್

ಪುತ್ತೂರು: ಸಂಸದ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಪಿ.ಜಿ. ಜಗನ್ನೀವಾಸ್ ರಾವ್, ಪ್ರಮುಖರಾದ ಜೀವಂಧರ್ ಜೈನ್, ಚನಿಲ ತಿಮ್ಮಪ್ಪ ಶೆಟ್ಟಿ, ಎಸ್. ಅಪ್ಪಯ್ಯ ಮಣಿಯಾಣಿ, ಆರ್.ಸಿ. ನಾರಾಯಣ್, ಚಂದ್ರಶೇಖರ್ ರಾವ್, ಪುರುಷೋತ್ತಮ ಮುಂಗ್ಲಿಮನೆ, ನಿತೇಶ್ ಶಾಂತಿವನ ಮೊದಲಾದವರು ಉಪಸ್ಥಿತರಿದ್ದರು.

ಪುತ್ತೂರು: ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಂಸದ ನಳಿನ್ Read More »

ಪುತ್ತೂರಿನ ಪ್ರಜ್ಞಾ ಆಶ್ರಮದ ವಿಶೇಷ ಚೇತನರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರಮಾನಾಥ ರೈ

ಪುತ್ತೂರು: ಮಾಜಿ ಸಚಿವ ಬಿ. ರಮಾನಾಥ ರೈ ಅವರು ತಮ್ಮ 72ನೇ ಹುಟ್ಟು ಹಬ್ಬವನ್ನು ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ಆಚರಿಸಿಕೊಂಡರು. ಆಶ್ರಮದಲ್ಲಿನ ವಿಶೇಷ ಚೇತನರೊಂದಿಗೆ ಸಹಭೋಜನ ನಡೆಸಿ ತನ್ನ ಹುಟ್ಟುಹಬ್ಬ ಆಚರಿಸಿದ ರಮಾನಾಥ ರೈ ಅವರು, ನನ್ನ ರಾಜಕೀಯ ಬದುಕಿನಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದೇನೆ. ಅವೆಲ್ಲವನ್ನು ಸಮಾನವಾಗಿ ಸ್ವೀಕರಿಸುತ್ತಾ ಬಂದಿದ್ದೇನೆ. ಇಲ್ಲಿನ ಜನರು ನನಗೆ ನೀಡಿರುವ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದರು. ಸಾರ್ವಜನಿಕ ಬದುಕಿನಲ್ಲಿ ಪ್ರೀತಿ ವಿಶ್ವಾಸ ಹಂಚಿಕೊಳ್ಳುವುದು ಸಹಜ. ಪ್ರೀತಿಯ ಸಂಬಂಧಗಳು

ಪುತ್ತೂರಿನ ಪ್ರಜ್ಞಾ ಆಶ್ರಮದ ವಿಶೇಷ ಚೇತನರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರಮಾನಾಥ ರೈ Read More »

ಮುಂಡಾಜೆ: ನೆಲಮಾಳಿಗೆಯಲ್ಲಿಟ್ಟಿದ್ದ ಚಿನ್ನಾಭರಣ ಕಳವು | ಕಳವಾದ ಚಿನ್ನಾಭರಣದ ಮೌಲ್ಯ ಸುಮಾರು 5 ಲಕ್ಷ ರೂ.!

ಬೆಳ್ತಂಗಡಿ: ಇಲ್ಲಿನ ಮುಂಡಾಜೆಯ ಮನೆಯೊಂದರಿಂದ ಚಿನ್ನಾಭರಣ ಕಳವಾದ ಘಟನೆ ಸೆ. 12ರಂದು ಬೆಳಕಿಗೆ ಬಂದಿದೆ. ಕಳವಾದ ಚಿನ್ನಾಭರಣದ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮುಂಡಾಜೆ ಗ್ರಾಮದ ನಿವಾಸಿ ಕಡಂಬಳ್ಳಿಯ ಪ್ರಮೋದ್ ವಿ. ಭಿಡೆ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮನೆ ಕೆಲಸಕ್ಕೆ ಬಂದವರ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಾಗಿದೆ. ಜುಲೈ 5ರಂದು ಮನೆ ಸಾರಣೆ ಹಾಗೂ ಪೈಂಟಿಂಗ್ ಕೆಲಸ ಪ್ರಾರಂಭಿಸಿದ್ದು, ಸುಮಾರು 10ರಿಂದ 13 ಜನ

ಮುಂಡಾಜೆ: ನೆಲಮಾಳಿಗೆಯಲ್ಲಿಟ್ಟಿದ್ದ ಚಿನ್ನಾಭರಣ ಕಳವು | ಕಳವಾದ ಚಿನ್ನಾಭರಣದ ಮೌಲ್ಯ ಸುಮಾರು 5 ಲಕ್ಷ ರೂ.! Read More »

ಸೆ. 19ರಂದೇ ರಜೆ ಘೋಷಿಸಲು ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ | ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ದಿನೇಶ್ ಗುಂಡೂರಾವ್

ಪುತ್ತೂರು: ಗಣೇಶೋತ್ಸವದ ಸಾರ್ವತ್ರಿಕ ರಜೆಯ ಗೊಂದಲಕ್ಕೆ ತೆರೆ ಎಳೆಯಲು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು, ದ.ಕ. ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಸೆ. 19ರಂದು ಗಣೇಶೋತ್ಸವ ಹಬ್ಬ ಆಚರಣೆ ನಡೆಯಲಿದ್ದು, ಸೆ. 18ಕ್ಕೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಇದರಿಂದ ಕರಾವಳಿ ಭಾಗದಲ್ಲಿ ಗೊಂದಲ ಉಂಟಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿರುವ ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು, ಸರಕಾರಿ ರಜೆಯನ್ನು ಮಾರ್ಪಡಿಸಿ ಅನುಕೂಲವಾಗುವಂತೆ ಸೆ. 19ರಂದು ರಜೆ ಘೋಷಿಸುವ ಸಂಬಂಧ

ಸೆ. 19ರಂದೇ ರಜೆ ಘೋಷಿಸಲು ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ | ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ದಿನೇಶ್ ಗುಂಡೂರಾವ್ Read More »

ಸರ್ಕಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ ಜನರು ತಿರುಗಿಬೀಳುವಂತಾಗಿದೆ: ಸಂಜೀವ ಮಠಂದೂರು | ಹೋರಾಟದ ಕಾವು ತಗ್ಗಿಸಲು ಸಂಘಟನೆಗಳಿಗೆ ಹಣ ಪೂರೈಕೆ: ಪ್ರವೀಣ್ ಕುಂಟ್ಯಾನ ಆರೋಪ | ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಮಂಗಳೂರಿನಲ್ಲಿ ಜಿಲ್ಲಾ ಹೋರಾಟ ಸಮಿತಿಯಿಂದ ಪ್ರತಿಭಟನೆ

ಮಂಗಳೂರು: ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿತು. ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರ್ಕಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ ಜನರು ತಿರುಗಿ ಬೀಳುವಂತಾಗಿದೆ. ಇಂತಹ ಒಂದು ಹೋರಾಟವನ್ನು ಮಹೇಶ್ ಶೆಟ್ಟಿ ತಿಮರೋಡಿ ಅವರು ಸಂಘಟಿಸಿದ್ದಾರೆ. ನ್ಯಾಯಪರವಾದ ಇಂತಹ ಹೋರಾಟವನ್ನು ವಿರೋಧಿಸುವುದು ಎಷ್ಟು ಸರಿ? ಅಪರಾಧಿ ಯಾರೆಂದು ತಿಳಿಯಬೇಕು ತಾನೇ? ಪ್ರಜಾಪ್ರಭುತ್ವದಲ್ಲಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ಕೆಲಸವನ್ನು ಸರ್ಕಾರ

ಸರ್ಕಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ ಜನರು ತಿರುಗಿಬೀಳುವಂತಾಗಿದೆ: ಸಂಜೀವ ಮಠಂದೂರು | ಹೋರಾಟದ ಕಾವು ತಗ್ಗಿಸಲು ಸಂಘಟನೆಗಳಿಗೆ ಹಣ ಪೂರೈಕೆ: ಪ್ರವೀಣ್ ಕುಂಟ್ಯಾನ ಆರೋಪ | ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಮಂಗಳೂರಿನಲ್ಲಿ ಜಿಲ್ಲಾ ಹೋರಾಟ ಸಮಿತಿಯಿಂದ ಪ್ರತಿಭಟನೆ Read More »

ಸೆ. 15 – 19: ಇತಿಹಾಸ ಪ್ರಸಿದ್ಧ ಸುಳ್ಳಮಲೆ – ಬಲ್ಲಮಲೆಯಲ್ಲಿ ಪುಣ್ಯ ಗುಹಾ ತೀರ್ಥ ಸ್ನಾನ

ಮಾಣಿ: ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ತಂಗಿದ್ದರು ಎಂದು ನಂಬಲಾಗಿರುವ ಇತಿಹಾಸ ಪ್ರಸಿದ್ಧ ಅನಂತಾಡಿ ಸಮೀಪದ ಸುಳ್ಳಮಲೆ – ಬಲ್ಲಮಲೆಯಲ್ಲಿ ಸೆ. 15ರಿಂದ ಸೆ. 19ರವರೆಗೆ ಗುಹಾ ತೀರ್ಥ ಸ್ನಾನ ನಡೆಯಲಿದೆ. ಸೋಣ ಅಮಾವಾಸ್ಯೆಯಂದು ಗುಹಾ ತೀರ್ಥ ಸ್ನಾನಕ್ಕೆ ಸಂಪ್ರದಾಯ ಪ್ರಕಾರ ಕೇರ್ಪು (ಬಿದಿರಿನ ಏಣಿ) ಇಡುವ ಮೂಲಕ ಗುಹಾ ತೀರ್ಥಸ್ನಾನಕ್ಕೆ ಚಾಲನೆ ದೊರಕಲಿದೆ. ಶುಕ್ಲ ಪಕ್ಷದ ಚೌತಿಯವರೆಗೆ ಅಂದರೆ ಸೆ. 19ರವರೆಗೆ ತೀರ್ಥ ಸ್ನಾನಕ್ಕೆ ಇಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ

ಸೆ. 15 – 19: ಇತಿಹಾಸ ಪ್ರಸಿದ್ಧ ಸುಳ್ಳಮಲೆ – ಬಲ್ಲಮಲೆಯಲ್ಲಿ ಪುಣ್ಯ ಗುಹಾ ತೀರ್ಥ ಸ್ನಾನ Read More »

ಕೇರಳದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳ | ಮಂಗಳೂರು ಸೇರಿದಂತೆ ಕರ್ನಾಟಕ ಗಡಿಗಳಲ್ಲಿ ಕಟ್ಟೆಚ್ಚರ

ಮಂಗಳೂರು: ಕೇರಳದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ ನಾಲ್ಕಕ್ಕೇರಿಕೆಗೊಂಡಿದೆ. ಇದರ ಬೆನ್ನಲ್ಲೇ ಮಂಗಳೂರು ಸೇರಿದಂತೆ ಕರ್ನಾಟಕ – ಕೇರಳ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಂಗಳವಾರ ಕೇರಳದ ಕೋಝಿಕ್ಕೋಡಿನಲ್ಲಿ ನಿಫಾ ವೈರಸ್ ಪತ್ತೆಯಾಗಿತ್ತು. ಇಬ್ಬರಲ್ಲಿ ಸೋಂಕು ಸಾಧ್ಯತೆ ಪತ್ತೆಯಾದ ಬೆನ್ನಲ್ಲೇ, ಅವರ ಸಂಬಂಧಿಕರನ್ನು ಐಸಿಯು ನಿಗಾದಲ್ಲಿರಿಸಲಾಗಿತ್ತು. ಇದೀಗ ಸೋಂಕಿತರ ಸಂಖ್ಯೆ ಹೆಚ್ಚಳಗೊಂಡಿದ್ದು, ಕೇರಳ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ. ಇದರ ಬೆನ್ನಲ್ಲೇ ಕೇರಳ ರಾಜ್ಯಕ್ಕೆ ಹೊಂದಿಕೊಂಡಂತಿರುವ ಕರ್ನಾಟಕದ ಗಡಿಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಜಾಗೃತಿ ಮಾಹಿತಿ ರವಾನೆ ಮಾಡಿದ್ದು,

ಕೇರಳದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳ | ಮಂಗಳೂರು ಸೇರಿದಂತೆ ಕರ್ನಾಟಕ ಗಡಿಗಳಲ್ಲಿ ಕಟ್ಟೆಚ್ಚರ Read More »

error: Content is protected !!
Scroll to Top