ದಕ್ಷಿಣ ಕನ್ನಡ

ದೇವಸ್ಥಾನದ ಸುತ್ತ ಕೇಸರಿ ಧ್ವಜ: ಶರಣ್ ಪಂಪ್‌ವೆಲ್ ವಿರುದ್ಧ ಪ್ರಕರಣ!

ಮಂಗಳೂರು: ಮಂಗಳಾದೇವಿ ದೇವಸ್ಥಾನದ ಸುತ್ತ ಕೇಸರಿ ಧ್ವಜ ಅಳವಡಿಸಿದ್ದಕ್ಕಾಗಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್’ವೆಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಚಟುವಟಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ಮಂಗಳೂರು ನಗರ ಪೊಲೀಸರು ಶರಣ್ ಪಂಪ್’ವೆಲ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳೂರು ಮಂಗಳಾದೇವಿ ದೇವಸ್ಥಾನದ ಸುತ್ತಮುತ್ತಲಿನ ಹಿಂದೂಗಳು ನಡೆಸುತ್ತಿದ್ದ ಅಂಗಡಿಗಳ ಮೇಲೆ ಕೇಸರಿ ಧ್ವಜ ಅಳವಡಿಸಿದ್ದರು. ಈ ಕ್ರಮ ಧಾರ್ಮಿಕ ವೈಷಮ್ಯವನ್ನು ಕೆರಳಿಸುವ ಸಾಮರ್ಥ್ಯ ಹೊಂದಿವೆ ಎಂದು ಪೊಲೀಸ್ ಕಮೀಷನರ್ […]

ದೇವಸ್ಥಾನದ ಸುತ್ತ ಕೇಸರಿ ಧ್ವಜ: ಶರಣ್ ಪಂಪ್‌ವೆಲ್ ವಿರುದ್ಧ ಪ್ರಕರಣ! Read More »

ಪಿಲಿಗೊಬ್ಬು 2023ಕ್ಕೆ ರಾಜ್ ಬಿ. ಶೆಟ್ಟಿ, ದಿಗಂತ್ ಸೇರಿದಂತೆ ತಾರಾ ಮೆರುಗು | ಪಿಲಿಗೊಬ್ಬು, ಫುಡ್ ಫೆಸ್ಟ್ ವೈಭವವನ್ನು ಬಣ್ಣಿಸಿದ ಸಹಜ್ ರೈ, ಪುತ್ತೂರು ಉಮೇಶ್ ನಾಯಕ್

ಪುತ್ತೂರು: ವಿಜಯ ಸಾಮ್ರಾಟ್ ನೇತೃತ್ವದಲ್ಲಿ ಪುತ್ತೂರುದ ಪಿಲಿಗೊಬ್ಬು 2023 ಹಾಗೂ ಫುಡ್ ಫೆಸ್ಟ್ ಅಕ್ಟೋಬರ್ 22ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಆಯೋಜಿಸಲಾಗಿದೆ ಎಂದು ಪುತ್ತೂರು ಪಿಲಿಗೊಬ್ಬು ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ನಾಡಿನ ಧಾರ್ಮಿಕ ಹಿನ್ನೆಲೆ ಇರುವ ಜಾನಪದ ಕಲೆ. ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪುತ್ತೂರುದ ಪಿಲಿಗೊಬ್ಬು ಹಾಗೂ ಫುಡ್ ಫೆಸ್ಟ್  ಅಥವಾ ಹುಲಿ ವೇಷ ಕುಣಿತ ಸ್ಪರ್ಧೆ ಹಾಗೂ ಅಹಾರ ಮೇಳ,

ಪಿಲಿಗೊಬ್ಬು 2023ಕ್ಕೆ ರಾಜ್ ಬಿ. ಶೆಟ್ಟಿ, ದಿಗಂತ್ ಸೇರಿದಂತೆ ತಾರಾ ಮೆರುಗು | ಪಿಲಿಗೊಬ್ಬು, ಫುಡ್ ಫೆಸ್ಟ್ ವೈಭವವನ್ನು ಬಣ್ಣಿಸಿದ ಸಹಜ್ ರೈ, ಪುತ್ತೂರು ಉಮೇಶ್ ನಾಯಕ್ Read More »

ಲಂಚ ಸ್ವೀಕಾರ : ಇಂಜಿನಿಯರ್ ಲೋಕಾಯುಕ್ತ ಬಲೆಗೆ

ಮಂಗಳೂರು : ಕಾಮಗಾರಿ ನಡೆದ ಬಳಿಕ ಸ್ಥಳದಲ್ಲಿರುವ ಮೆಟೀರಿಯಲ್ ಪರಿಶೀಲನೆ ನಡೆಸಿ ವರದಿ ನೀಡಲು ಗುತ್ತಿಗೆದಾರರೊಬ್ಬರಿಂದ ಲಂಚ ಬೇಡಿಕೆ ಇಟ್ಟಿದ್ದ ಮಂಗಳೂರು ಲೋಕೋಪಯೋಗಿ ಸಹಾಯಕ ಕಾರ್ಯಪಾಲ ಇಂಜಿನಿಯರ್ ಕಚೇರಿಯ ಗುಣ ಭರವಸೆ ಉಪವಿಭಾಗದ ಕಿರಿಯ ಇಂಜಿನಿಯರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಿರಿಯ ಇಂಜಿನಿಯರ್ -2 ಅಗಿರುವ ರೋನಾಲ್ಡ್ ಲೋಬೋ ಲೋಕಾಯುಕ್ತ ಬಲೆಗೆ ಬಿದ್ದವರು. ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಕಾಮಗಾರಿ ನಡೆಸಿದ ಬಳಿಕ ಸ್ಥಳದಲ್ಲಿದ್ದ ಮೆಟೀರಿಯಲ್ ಪರಿಶೀಲನೆಗೆ ಬೆಳ್ತಂಗಡಿಯ ಗುತ್ತಿಗೆದಾರರೊಬ್ಬರಿಂದ 20 ಸಾವಿರ ರೂ. ಲಂಚದ ಬೇಡಿಕೆ

ಲಂಚ ಸ್ವೀಕಾರ : ಇಂಜಿನಿಯರ್ ಲೋಕಾಯುಕ್ತ ಬಲೆಗೆ Read More »

ತಾಲೂಕಿನ ಏಕೈಕ ಬೀಕೊನ್ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿದ ಶಾಸಕ ಅಶೋಕ್ ರೈ | ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿದ ಗ್ರಾಪಂ

ಪುತ್ತೂರು: ಕಾನೂನಿನ ಹಿಂದೆ ನಾವು ಹೋಗುವುದಲ್ಲ. ಕಾನೂನು ತೊಡಕು ಪರಿಹರಿಸಿಕೊಂಡು ಜನರ ಕೆಲಸ ಮಾಡಿಕೊಡಬೇಕು. ಸರಿಯಾದ ಮತ್ತು ಪ್ರಾಮಾಣಿಕ ಸೇವೆ ನೀಡುವುದು ಜನಪ್ರತಿನಿಧಿಗಳು ಮತ್ತು ಪಂಚಾಯಿತಿ ಸಿಬ್ಬಂದಿಗಳ ಕರ್ತವ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಆರ್ಯಾಪು ಗ್ರಾ.ಪಂ. ಅಮೃತ ಉದ್ಯಾನವನ ಹಾಗೂ ತಾಲೂಕಿನ ಏಕೈಕ ಬೀಕೊನ್ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ಹಳ್ಳಿಯ ಜನರೂ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಮತ್ತು ವಿದ್ಯುತ್‌ನಿಂದ ವಂಚಿತರಾಗಬಾರದು. ಇದಕ್ಕಾಗಿ ನಾನು ಹೋರಾಟ ಮಾಡಲೂ ಸಿದ್ಧನಿದ್ದೇನೆ.

ತಾಲೂಕಿನ ಏಕೈಕ ಬೀಕೊನ್ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿದ ಶಾಸಕ ಅಶೋಕ್ ರೈ | ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿದ ಗ್ರಾಪಂ Read More »

ನಾಳ ಕ್ಷೇತ್ರದಲ್ಲಿ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

ನಾಳ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆಯ ಪ್ರಯುಕ್ತ ಪಕ್ಷ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಿತು. ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ದೀಪ ಬೆಳಗಿಸಿ ಉದ್ಘಾಟಿಸಿ, ದೇವಳದ ಒಳ ಭಾಗದಲ್ಲಿ ನವರಾತ್ರಿ ಪೂಜೆಯು ವಿದ್ಯುಕ್ತವಾಗಿ ನಡೆದಂತೆ ದೇವಿಯ ಪ್ರೀತ್ಯರ್ಥವಾಗಿ ಸಂಗೀತ, ಭಜನೆ, ಯಕ್ಷಗಾನ, ಪಾರಾಯಣ ಕಾರ್ಯಕ್ರಮಗಳು ನಡೆಯಲಿರುವುದು ಸಂಪ್ರದಾಯವಾಗಿದೆ ಎಂದು ತಿಳಿಸಿದರು. ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಭುವನೇಶ. ಜಿ, ಭಜನಾ ಮಂಡಳಿಯ ಅಧ್ಯಕ್ಷ ಉಮೇಶ ಶೆಟ್ಟಿ ಸಂಬೊಳ್ಯ, ಕಲಾವಿದ

ನಾಳ ಕ್ಷೇತ್ರದಲ್ಲಿ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ Read More »

ಪಡಿತರ ಚೀಟಿ ತಿದ್ದುಪಡಿ ಅವಧಿ ವಿಸ್ತರಣೆ

ಮಂಗಳೂರು: ಪಡಿತರ ಚೀಟಿ ತಿದ್ದುಪಡಿಗೆ ನೀಡಿದ್ದ ಗಡುವನ್ನು ವಿಸ್ತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಅವಧಿಯನ್ನು ಅ. 19ರಿಂದ ಅ. 21ರವರೆಗೆ ನಿಗದಿ ಮಾಡಲಾಗಿದೆ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸರ್ವರ್ ಸಮಸ್ಯೆ ಉಂಟಾಗಿದ್ದ ಕೆಲವು ಜಿಲ್ಲೆಗಳಲ್ಲಿ ಈ ತಿದ್ದುಪಡಿ ವಿಸ್ತರಣೆಗೆ ಅವಕಾಶ ನೀಡಲಾಗಿದೆ. ತಿದ್ದುಪಡಿ ವೇಳೆ ಮೃತರ ಹೆಸರನ್ನು ತೆಗೆದು ಹಾಕುವುದು ಹಾಗೂ ವಿವಾಹವಾಗಿ ಬಂದವರ ಹೆಸರನ್ನು ಪಡಿತರ ಚೀಟಿಗೆ ಸೇರ್ಪಡೆಗೊಳಿಸಲು ಅವಕಾಶ ಇರುತ್ತದೆ. ಸೂಕ್ತ ದಾಖಲೆಗಳೊಂದಿಗೆ

ಪಡಿತರ ಚೀಟಿ ತಿದ್ದುಪಡಿ ಅವಧಿ ವಿಸ್ತರಣೆ Read More »

ಮಂಗಳೂರು : ಮನೆಗೆ ಸಿಡಿಲು ಬಡಿದು ತಾಯಿ ಮತ್ತು ಮಗುವಿಗೆ ಗಾಯ

ಮಂಗಳೂರು : ಮನೆಗೆ ಸಿಡಿಲು ಬಡಿದು ಮನೆಯಲ್ಲಿದ್ದ ತಾಯಿ ಮತ್ತು ಮಗು ಗಾಯಗೊಂಡ ಘಟನೆ ಮಂಗಳೂರು ನಗರದ ಹೊರವಲಯದ ವಾಮಾಂಜೂರಿನಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಶ್ವೇತಾ ಹಾಗೂ 5 ವರ್ಷದ ಮಗುವಿನ ಕಿವಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಸಂದರ್ಭ ಮನೆಯಲ್ಲಿದ್ದ ನಾಲ್ವರು ಸದಸ್ಯರಿದ್ದು ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು : ಮನೆಗೆ ಸಿಡಿಲು ಬಡಿದು ತಾಯಿ ಮತ್ತು ಮಗುವಿಗೆ ಗಾಯ Read More »

ದ.ಕ. ಜಿಲ್ಲೆ ಪೂರ್ಣ ಬರಪೀಡಿತ: ಘೋಷಣೆಗೆ ರೈತ ಸಂಘ, ಹಸಿರುಸೇನೆ ಆಗ್ರಹ

ಪುತ್ತೂರು: ಮೂಡಬಿದಿರೆ ಹಾಗೂ ಮಂಗಳೂರು ತಾಲೂಕನ್ನು ಮಾತ್ರ ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನು ಕೈಬಿಟ್ಟಿರುವುದು ಜಿಲ್ಲೆಯ ರೈತರು ಹಾಗೂ ಸಮಸ್ತ ನಾಗರಿಕರಿಗೆ ಮಾಡಿದ ದ್ರೋಹ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಆರೋಪಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ, ದಕ್ಷಿಣ ಕನ್ನಡ, ಮಂಗಳೂರಿಗೆ ನೀರುಣಿಸುವ ನೇತ್ರಾವತಿಯನ್ನೇ ತಿರುಗಿಸಿ ಎತ್ತಿನಹೊಳೆ ಯೋಜನೆಯನ್ನು ಮಾಡಿ ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಬರಗಾಲ ಪ್ರದೇಶವನ್ನಾಗಿ ಮಾಡಲು ಸಂಚು

ದ.ಕ. ಜಿಲ್ಲೆ ಪೂರ್ಣ ಬರಪೀಡಿತ: ಘೋಷಣೆಗೆ ರೈತ ಸಂಘ, ಹಸಿರುಸೇನೆ ಆಗ್ರಹ Read More »

ಮೂಡುಬಿದಿರೆ ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ, ಯುವ ನ್ಯಾಯವಾದಿ ನಿಧನ

ಮೂಡುಬಿದಿರೆ : ಮೂಡುಬಿದಿರೆ ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ, ಜಯಕಿರಣ ಪತ್ರಿಕೆಯ ತಾಲೂಕು ವರದಿಗಾರ ಹಾಗೂ ಯುವ ನ್ಯಾಯವಾದಿ ವೇಣುಗೋಪಾಲ (30) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಚ್ಚೇರಿಪೇಟೆಯ ಆನಂದ ಪೂಜಾರಿ ಅವರ ಪುತ್ರರಾಗಿರುವ ವೇಣುಗೋಪಾಲ ಅವಿವಾಹಿತರಾಗಿದ್ದಾರೆ. ಕ್ರಿಯಾಶೀಲ ಪತ್ರಕರ್ತರಾಗಿದ್ದ ಅವರು ಮೂಡುಬಿದಿರೆಯಲ್ಲಿ ಯುವ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದರು. ಪತ್ರಿಕಾ ಕ್ಷೇತ್ರ ಮಾತ್ರವಲ್ಲದೆ ಸಾಂಸ್ಕೃತಿಕ ಹಾಗೂ ಇತರ ಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದ ವೇಣುಗೋಪಾಲ ಅವರು, ಭಾನುವಾರ ಸಂಜೆ ತನ್ನ ಸಹೋದರಿಯ ಮನೆಗೆ ಹೋಗಿದ್ದರು. ಇಂದು ಬೆಳಿಗ್ಗೆ ಅವರಿಗೆ ಹೃದಯಾಘಾತ

ಮೂಡುಬಿದಿರೆ ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ, ಯುವ ನ್ಯಾಯವಾದಿ ನಿಧನ Read More »

ಕೆನರಾ ಕಾಲೇಜಿಗೆ ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿ ಪ್ರದಾನ

ಮಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ  ರಾಷ್ಟ್ರೀಯ ಸೇವಾ ಯೋಜನಾ ಕೋಶದಿಂದ ನೀಡಲ್ಪಡುವ ಎನ್ನೆಸ್ಸೆಸ್ಸ್ 2021-22ನೇ ಸಾಲಿನ ರಾಜ್ಯ ಪ್ರಶಸ್ತಿ ಮಂಗಳೂರಿನ ಕೆನರಾ ಕಾಲೇಜಿಗೆ ಲಭಿಸಿದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಸಲ್ಲಿಸಿರುವ ಅನುಪಮ ಸೇವೆಗಾಗಿ 2021-22ನೇ ಸಾಲಿನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ರಾಜ್ಯ ಪ್ರಶಸ್ತಿಯನ್ನು ಸಂಸ್ಥೆಯ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಸೀಮಾ ಪ್ರಭು ಎಸ್.  ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ

ಕೆನರಾ ಕಾಲೇಜಿಗೆ ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿ ಪ್ರದಾನ Read More »

error: Content is protected !!
Scroll to Top