1300 ವರ್ಷ ಹಳೆಯ ಶಾಸನ ಪತ್ತೆ| ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶಾಸನ- ಶೋಧನ- ಅಧ್ಯಯನ -ಸಂರಕ್ಷಣ ತಂಡದಿಂದ ಕುರುಹುಗಳ ಪರಿಶೀಲನೆ
ಬೆಳ್ಳಾರೆ: ಬೆಳ್ಳಾರೆಯ ಗೌರಿಪುರಂ ಎಂಬಲ್ಲಿ ಶ್ರೀ ರಾಜರಾಜೇಶ್ವರಿ ಸಾನಿಧ್ಯವಿರುವ ಕ್ಷೇತ್ರದ ಪರಿಸರದಲ್ಲಿ ಪತ್ತೆಯಾದ ಕೆಲವು ಶಾಸನ ಇತ್ಯಾದಿ ಪರಿಕರ ಕುರುಹು ಗಳ ಪರಿಶೀಲನೆಗೆ ಶಾಸನ ತಜ್ಞರಾದ ಡಾ.ಉಮಾನಾಥ್ ಶೆಣೈ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಭೇಟಿ ನೀಡಿ ಪರಿಶೀಲಿಸಿದರು. ಪರಿಶೀಲನೆಯ ಸಮಯದಲ್ಲಿ ಪುರಾತನ ಕಾಲದಲ್ಲಿ ವೈಭವದಲ್ಲಿ ಮೆರೆದ ದೇವಸ್ಥಾನದ ಕುರುಹುಗಳು, ಪಾಣಿಪೀಠ, ಸೋಮಸೂತ್ರ, ಬಲಿಕಲ್ಲು, ಇತ್ಯಾದಿಗಳು ಪತ್ತೆಯಾಗಿವೆ. ಮಾತ್ರವಲ್ಲದೆ ವಿಶೇಷವಾಗಿ ದೇವಸ್ಥಾನವಿರುವ ಸ್ಥಳದಿಂದ ಸುಮಾರು 300 ಮೀಟರ್ ದೂರದ ದೇವರ […]










