ದಕ್ಷಿಣ ಕನ್ನಡ

ಚಲಿಸುತ್ತಿದ್ದ ಕಾರಿಗೆ ಹತ್ತಿಕೊಂಡ ಬೆಂಕಿ | ಅಪಾಯದಿಂದ ಪಾರು

ಬಂಟ್ವಾಳ:  ಕಾರೊಂದಕ್ಕೆ ಏಕಾಏಕಿ ಬೆಂಕಿ ಹತ್ತಿಕೊಂಡ ಘಟನೆ ಇಂದು ಬೆಳಿಗ್ಗೆ ಮೂಡುಬಿದಿಯ ರಾಯಿ ಕಂಗಿತ್ತಿಲು ಎಂಬಲ್ಲಿ ನಡೆದಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರಿನಲ್ಲಿದ್ದವರು ಇಳಿದಿದ್ದಾರೆ. ಬಳಿಕ ಸ್ಥಳೀಯರು ಹಾಗೂ ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಏಳಿಂಜೆಗುತ್ತು ಕೊಲ್ಲೆಟ್ಟು ಶರತ್ ಶೆಟ್ಟಿ ಅವರಿಗೆ ಸೇರಿದ ಡಸ್ಟರ್ ಕಾರಿನಲ್ಲಿ ಶಾರ್ಟ್‍ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕಾರಿನಲ್ಲಿ ಮಗು ಸಹಿತ ನಾಲ್ಕು ಮಂದಿ ಇದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು […]

ಚಲಿಸುತ್ತಿದ್ದ ಕಾರಿಗೆ ಹತ್ತಿಕೊಂಡ ಬೆಂಕಿ | ಅಪಾಯದಿಂದ ಪಾರು Read More »

ಗುತ್ತಿಗಾರಿನ ಯುವಕ ರೈಲಿನಡಿಗೆ ಬಿದ್ದು ಮೃತ್ಯು

ಮಂಗಳೂರು: ಸುಳ್ಯ ತಾಲೂಕಿನ ಗುತ್ತಿಗಾರಿನ ಯುವಕನೋರ್ವ ಮಂಗಳೂರಿನಲ್ಲಿ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಗುತ್ತಿಗಾರು ಗ್ರಾಮದ ಚನಿಲ ನಿವಾಸಿ ಸುಪ್ರೀತ್ ನಾಯ್ಕ ಮೃತ ಪಟ್ಟ ಯುವಕ. ಘಟನೆಗೆ ಕಾರಣಗಳು ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಗುತ್ತಿಗಾರಿನ ಯುವಕ ರೈಲಿನಡಿಗೆ ಬಿದ್ದು ಮೃತ್ಯು Read More »

ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ !

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಮಗುಚಿ ಬಿದ್ದ ಘಟನೆ ಜೋಡುಪಾಲ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಬೆಂಗಳೂರಿನಿಂದ ಸುಳ್ಯಕ್ಕೆ ಬರುತ್ತಿದ್ದ ಗೌರಿಶಂಕರ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಪರಿಣಾಮ ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ನಾಲ್ಕು ಜನ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿ ಲಭಿಸಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಷ್ಟೆ.

ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ! Read More »

ಅಕ್ರಮ ಮರಳುಗಾರಿಕೆ ಮೇಲೆ ಕಣ್ಗಾವಲು | ದ.ಕ.ಜಿಲ್ಲೆಯ 30 ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ

ಬಂಟ್ವಾಳ: ಇತ್ತೀಚಿನ ದಿನಗಳಲ್ಲಿ ಅಕ್ರಮ ಮರಳುಗಾರಿಕೆ ಕುರಿತು ದೂರುಗಳು ಬರುತ್ತಿದ್ದು, ಅತಿ ಹೆಚ್ಚಿನ ದೂರು ಬರುತ್ತಿದ್ದ ಪ್ರದೇಶಗಳಲ್ಲಿ ಸಿಸಿ ಕ್ಯಾಮರ ಮೂಲಕ ಕಣ್ಣಿಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ 30 ಕಡೆಗಳಲ್ಲಿ ಇಲಾಖೆಯು ಸೋಲಾ‌ರ್ ವಿದ್ಯುತ್ ಆಧಾರಿತ ಸಿಸಿ ಕ್ಯಾಮರಗಳನ್ನು ಅಳವಡಿಸಿದೆ. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ 4 ಕಡೆ ಹಾಗೂ ಉಳಿದಂತೆ ಮಂಗಳೂರು ಕಮಿಷನರೆಟ್ ವ್ಯಾಪ್ತಿಯ 26 ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ/ಸಾಗಾಟದ

ಅಕ್ರಮ ಮರಳುಗಾರಿಕೆ ಮೇಲೆ ಕಣ್ಗಾವಲು | ದ.ಕ.ಜಿಲ್ಲೆಯ 30 ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ Read More »

ಕಡಬ ತಾಲೂಕಿನ ಬಿಳಿನೆಲೆಗೆ ನಕ್ಸಲರ ತಂಡ ಭೇಟಿ

ಕಡಬ: ತಾಲೂಕಿನ ಬಿಳಿನೆಲೆಯಲ್ಲಿ ನಕ್ಸಲರ ಹೆಜ್ಜೆ ಮತ್ತೆ ಕಾಣಿಸಿಕೊಂಡಿದೆ. ಎಎನ್‌ಎಫ್ ಕೂಂಬಿಂಗ್ ಕಾರ್ಯಚರಣೆ ನಡುವೆ ಮತ್ತೆ ನಕ್ಸಲರು ಪ್ರತ್ಯಕ್ಷವಾಗಿದ್ದಾರೆ. ಶುಕ್ರವಾರ ರಾತ್ರಿ ವೇಳೆ ಬಿಳಿನೆಲೆ ಚೇರು ಎಂಬಲ್ಲಿ ನಕ್ಸಲರ ತಂಡ ಕಾಣಿಸಿಕೊಂಡಿದೆ. ಚೇರು ಗ್ರಾಮದ ಮನೆಯೊಂದಕ್ಕೆ 6 ಮಂದಿ ಶಸ್ತ್ರಸಜ್ಜಿತ ನಕ್ಸಲರ ತಂಡ ಭೇಟಿ ನೀಡಿದೆ. ಮನೆಗೆ ಬಂದು ಊಟ ಮಾಡಿ ಮೊಬೈಲ್ ಚಾರ್ಜ್ ಮಾಡಿ ತೆರಳಿದ್ದಾರೆ. ಅಷ್ಟು ಮಾತ್ರವಲ್ಲದೆ, ನಕ್ಸಲರು ಮನೆಯಿಂದ ಅಕ್ಕಿ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಮೋಸ್ಟ್ ವಾಂಡೆಟ್ ನಕ್ಸಲ್ ವಿಕ್ರಮ ಗೌಡ,

ಕಡಬ ತಾಲೂಕಿನ ಬಿಳಿನೆಲೆಗೆ ನಕ್ಸಲರ ತಂಡ ಭೇಟಿ Read More »

ಡಾ. ಅನುರಾಧಾ ಕುರುಂಜಿಯವರಿಗೆ ಕೇರಳ ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕೃತಿಕ ಉತ್ಸವದಲ್ಲಿ ಪ್ರತಿಷ್ಠಿತ “ಶತಶೃಂಗ” ಪ್ರಶಸ್ತಿ | ಅಂತಾರಾಜ್ಯ ಮಟ್ಟದ ಕವಿಗೋಷ್ಠಿಗೆ ಆಯ್ಕೆ

ಸುಳ್ಯ: ಉಪನ್ಯಾಸಕಿ, ವ್ಯಕ್ತಿತ್ವ ವಿಕಸನ ತರಬೇತುದಾರೆ ಸುಳ್ಯದ ಡಾ. ಅನುರಾಧಾ ಕುರುಂಜಿಯವರು ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನದವರು ನಡೆಸಲಿರುವ ಕೇರಳ ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕೃತಿಕೋತ್ಸವ 2024ರಲ್ಲಿ ಕೊಡ ಮಾಡಲಿರುವ ಶತಶೃಂಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಕೊಡಲ್ಪಡುವ ಈ ಪ್ರಶಸ್ತಿಗೆ  ಕೇರಳದ ನಾಲ್ವರು ಮತ್ತು ಕರ್ನಾಟಕದ ಇಬ್ಬರು ಆಯ್ಕೆಯಾಗಿದ್ದು, ಸುಳ್ಯದ ಡಾ. ಅನುರಾಧಾ ಕುರುಂಜಿಯವರನ್ನು ಸಾಹಿತ್ಯಕ, ಶೈಕ್ಷಣಿಕ  ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಮಾಡಿರುವ  ಸಾಧನೆಗಾಗಿ ಈ ಪ್ರಶಸ್ತಿಗೆ

ಡಾ. ಅನುರಾಧಾ ಕುರುಂಜಿಯವರಿಗೆ ಕೇರಳ ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕೃತಿಕ ಉತ್ಸವದಲ್ಲಿ ಪ್ರತಿಷ್ಠಿತ “ಶತಶೃಂಗ” ಪ್ರಶಸ್ತಿ | ಅಂತಾರಾಜ್ಯ ಮಟ್ಟದ ಕವಿಗೋಷ್ಠಿಗೆ ಆಯ್ಕೆ Read More »

ಮಂಗಳೂರಿನಲ್ಲಿ “ತುಳುನಾಡ ಅಮರ ಸುಳ್ಯ ಸಮರ-1837” ಸಂಸ್ಮರಣೆ ಹಾಗೂ ವಿಜಯ ದಿನಾಚರಣೆ

ಮಂಗಳೂರು: ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನಾ ಸಮಿತಿ ಹಾಗೂ ಮಂಗಳೂರು ತುಳುನಾಡ ರಕ್ಷಣಾ ವೇದಿಕೆ ಸಹಭಾಗಿತ್ವದಲ್ಲಿ ತುಳುನಾಡಿನ ವೀರ ರೈತರಿಂದ ನಡೆದ ಸ್ವಾತಂತ್ರ್ಯ ಸಂಗ್ರಾಮ “ತುಳುನಾಡ ಅಮರ ಸುಳ್ಯ ಸಮರ-1837” ಸಂಸ್ಮರಣೆ ಹಾಗೂ ವಿಜಯ ದಿನಾಚರಣೆ ಮಂಗಳೂರಿನ ಬಾವುಟಗುಡ್ಡೆಯಲ್ಲಿ ನಡೆಯಿತು. ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ. ಡಾ.ಧರ್ಮಪಾಲನಾಥ ಸ್ವಾಮೀಜಿಯವರು ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಡಿ.ಬಿ.ಬಾಲಕೃಷ್ಣ, ಕಿರಣ್‍ ಬುಡ್ಲೆಗುತ್ತು, ಯೋಗೀಶ್

ಮಂಗಳೂರಿನಲ್ಲಿ “ತುಳುನಾಡ ಅಮರ ಸುಳ್ಯ ಸಮರ-1837” ಸಂಸ್ಮರಣೆ ಹಾಗೂ ವಿಜಯ ದಿನಾಚರಣೆ Read More »

ಏ.24-ಮೇ.2 : ಕೆಡೆಂಜಿಗುತ್ತು ಧರ್ಮಚಾವಡಿಯಲ್ಲಿ ಪುನರ್ ಪ್ರತಿಷ್ಠಾ ಕಲಶ, ಗೃಹಪ್ರವೇಶ, ಶ್ರೀ ಮದ್ಭಾಗವತ ಸಪ್ತಾಹ | ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಆಮಂತ್ರಣದೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥನೆ

ಕಡಬ: ತಾಲೂಕಿನ ಕುದ್ಮಾರು ಗ್ರಾಮದ ಈರ್ವೆರ್ ಉಳ್ಳಾಕುಲು, ಕೆಡೆಂಜೋಡಿತ್ತಾಯ, ವ್ಯಾಘ್ರ ಚಾಮುಂಡಿ ಮತ್ತು ಕುಟುಂಬ ಸಂಬಂಧಪಟ್ಟ ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳ ಸಾನಿಧ್ಯ ಕೆಡೆಂಜಿಗುತ್ತು ಧರ್ಮಚಾವಡಿಯಲ್ಲಿ ಏ.24 ರಿಂದ ಮೇ 2 ರ ತನಕ ನಡೆಯುವ ಪುನರ್ ಪ್ರತಿಷ್ಠಾ ಕಲಶ, ಗೃಹಪ್ರವೇಶ ಹಾಗೂ ಶ್ರೀ ಮದ್ಭಾಗವತ ಸಪ್ತಾಹದ ಆಮಂತ್ರಣದೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾ ಕಲಶೋತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ್ ಭಟ್ ಕೊಯಕ್ಕುಡೆ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ

ಏ.24-ಮೇ.2 : ಕೆಡೆಂಜಿಗುತ್ತು ಧರ್ಮಚಾವಡಿಯಲ್ಲಿ ಪುನರ್ ಪ್ರತಿಷ್ಠಾ ಕಲಶ, ಗೃಹಪ್ರವೇಶ, ಶ್ರೀ ಮದ್ಭಾಗವತ ಸಪ್ತಾಹ | ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಆಮಂತ್ರಣದೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥನೆ Read More »

ಎರಡನೇ ಹೆರಿಗೆ ವೇಳೆ ಮಹಿಳೆ ಮೃತ್ಯು

ಬೆಳ್ತಂಗಡಿ: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ರಕ್ತ ಸ್ರಾವದಿಂದ  ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಲಾಯಿಲ ಗ್ರಾಮದ ಗಾಂಧಿನಗರ ನಿವಾಸಿ ಗಾಯತ್ರಿ (26) ಮೃತಪಟ್ಟವರು. ಗಾಯತ್ರಿ ಎರಡನೇ ಹೆರಿಗೆಗಾಗಿ ಏ.3 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಏ.4 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅದರೆ ಹೆರಿಗೆ ನಂತರ ವಿಪರೀತ ರಕ್ತ ಸ್ರಾವ ಉಂಟಾಗಿದ್ದು ರಾತ್ರಿ ಸಾವನ್ನಪ್ಪಿದ್ದಾರೆ . ಮೃತ ಮಹಿಳೆಗೆ  3 ವರ್ಷದ ಹೆಣ್ಣು ಮಗುವೊಂದಿದ್ದು ಇದೀಗ ಇಬ್ಬರು ಪುಟ್ಟ ಮಕ್ಕಳು ತಾಯಿಯನ್ನು ಕಳೆದುಕೊಂಡಂತಾಗಿದೆ.

ಎರಡನೇ ಹೆರಿಗೆ ವೇಳೆ ಮಹಿಳೆ ಮೃತ್ಯು Read More »

ಇಂದು ಸ್ವತಂತ್ರ ತುಳುನಾಡ ಆಳ್ವಿಕೆ ಆರಂಭಿಸಿದ ದಿನ | ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಪುಷ್ಪಾರ್ಚನೆಗೈದ ಪದ್ಮರಾಜ್ ಆರ್.

ಮಂಗಳೂರು: ಇಲ್ಲಿನ ಬಾವುಟಗುಡ್ಡೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಪುಷ್ಪಾರ್ಚನೆ ಮಾಡಿದರು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮೊದಲೇ ತುಳುನಾಡಿನಲ್ಲಿ ಸ್ವಾತಂತ್ರ್ಯ ಹೋರಾಟ ನಡೆದಿತ್ತು. ಇದನ್ನು ಅಮರ ಸುಳ್ಯದ ದಂಗೆ ಎಂದು ಕರೆದರೆ, ಇನ್ನೂ ಕೆಲವರು ತುಳುನಾಡ ಸ್ವಾತಂತ್ರ್ಯ ಸಂಗ್ರಾಮ ಎಂದೂ ಕರೆದದ್ದಿದೆ. ಈ ಹೋರಾಟದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈ ಹೋರಾಟದಲ್ಲಿ ಬ್ರಿಟಿಷರನ್ನು  ಪರಾಭವಗೊಳಿಸಿದ ತುಳುನಾಡ ಹೋರಾಟಗಾರರು ಮುಂದಿನ 13

ಇಂದು ಸ್ವತಂತ್ರ ತುಳುನಾಡ ಆಳ್ವಿಕೆ ಆರಂಭಿಸಿದ ದಿನ | ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಪುಷ್ಪಾರ್ಚನೆಗೈದ ಪದ್ಮರಾಜ್ ಆರ್. Read More »

error: Content is protected !!
Scroll to Top