ದಕ್ಷಿಣ ಕನ್ನಡ

ಕೋಳಿ ಅಂಕಕ್ಕೆ ದಾಳಿ : ಮೂವರು ಪೊಲೀಸ್‌ ವಶ

ಬಂಟ್ವಾಳ : ವೀರಕಂಭ ಗ್ರಾಮದ ಪಾತ್ರತೋಟ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ಮೂವರನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ. ಇಡ್ಕಿದು ನಿವಾಸಿ ಉಮೇಶ (38), ಅನಂತಾಡಿ ನಿವಾಸಿ ಅಣ್ಣು (38), ವೀರಕಂಭ ನಿವಾಸಿ ಉಮೇಶ್ (30) ಎಂಬವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ. ಆರೋಪಿಗಳು ಅಕ್ರಮವಾಗಿ ಕೋಳಿಅಂಕದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಬಿ.ಎಸ್ ನಾಯಕ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ. […]

ಕೋಳಿ ಅಂಕಕ್ಕೆ ದಾಳಿ : ಮೂವರು ಪೊಲೀಸ್‌ ವಶ Read More »

ದೈವದ ಅಣಕ : ಬಾಲಿವುಡ್‌ ನಟ ರಣವೀರ್‌ ಸಿಂಗ್‌ ವಿರುದ್ಧ ದೈವಾರಾಧಕರ ಆಕ್ರೋಶ

ಹೊಗಳುವ ಭರದಲ್ಲಿ ಅಣಕಿಸಿ ವಿವಾದ ಮೈಮೇಲೆ ಎಳೆದುಕೊಂಡ ನಟ ಮಂಗಳೂರು: ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಂತಾರ – ಚಾಪ್ಟರ್‌ 1 ಸಿನೆಮಾವನ್ನು ಹೊಗಳುವ ಭರದಲ್ಲಿ ದೈವವನ್ನು ದೆವ್ವ ಎಂದು ಕರೆದಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ವಿರುದ್ಧ ಕರಾವಳಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ಭಾರಿ ಚರ್ಚೆಯಾಗುತ್ತಿದ್ದು, ಕೆಲವರು ಇದಕ್ಕೆಲ್ಲ ಅವಕಾಶ ಮಾಡಿಕೊಟ್ಟದ್ದು ರಿಷಬ್‌ ಶೆಟ್ಟಿ ಎಂದು ದೂಷಿಸುತ್ತಿದ್ದಾರೆ. ವೇದಿಕೆಯಲ್ಲಿ ದೈವಗಳನ್ನು ವಿಕೃತವಾಗಿ ಅನುಕರಣೆ ಮಾಡಿದ ನಟ ರಣ್‍ವೀರ್ ಸಿಂಗ್ ವಿರುದ್ಧ ದೈವಾರಾಧಕರು

ದೈವದ ಅಣಕ : ಬಾಲಿವುಡ್‌ ನಟ ರಣವೀರ್‌ ಸಿಂಗ್‌ ವಿರುದ್ಧ ದೈವಾರಾಧಕರ ಆಕ್ರೋಶ Read More »

ತಾಯಿಯನ್ನು ತಳ್ಳಿ ಚಪ್ಪಲಿಯಿಂದ ಹಲ್ಲೆ ಮಾಡಿದ ಮಗಳು : ವಿಡಿಯೋ ವೈರಲ್‌

ದೂರು ನೀಡಲು ಬಂದ ತಾಯಿಯ ಮೇಲೆ ಪಂಚಾಯತ್‌ ಕಚೇರಿಯಲ್ಲೇ ದೌರ್ಜನ್ಯ ಮಂಗಳೂರು : ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಆವರಣದಲ್ಲಿ ಮಗಳೇ ತನ್ನ ತಾಯಿಗೆ ಮನಬಂದಂತೆ ಥಳಿಸಿ, ಚಪ್ಪಲಿಯಿಂದ ಹೊಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಮೂಡುಶೆಡ್ಡೆಯ ಶಿವನಗರದಲ್ಲಿ ವಾಸಿಸುವ ತಾಯಿ ಮತ್ತು ಮಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ಹಿಂದೆ, ತಾಯಿ ಈ ವಿವಾದಗಳ ಕುರಿತು ಕಾವೂರು ಪೊಲೀಸ್

ತಾಯಿಯನ್ನು ತಳ್ಳಿ ಚಪ್ಪಲಿಯಿಂದ ಹಲ್ಲೆ ಮಾಡಿದ ಮಗಳು : ವಿಡಿಯೋ ವೈರಲ್‌ Read More »

ಧರ್ಮಸ್ಥಳ ಪ್ರಕರಣ : ತನಿಖೆ ಮುಂದುವರಿಸಲು ಎಸ್‌ಐಟಿಗೆ ಹೈಕೋರ್ಟ್‌ ಸೂಚನೆ

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಈಗ ನಡೆಯುತ್ತಿರುವ ಎಸ್.ಐ.ಟಿ ತನಿಖೆ ಮುಂದುವರಿಯಲಿ, ಅರ್ಜಿದಾರರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರಿಗೆ ಕಿರುಕುಳ ನೀಡಬಾರದು ಎಂದು ರಾಜ್ಯ ಉಚ್ಚ ನ್ಯಾಯಾಲಯ ಸೂಚನೆ ನೀಡಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ. ಶುಕ್ರವಾರ ಎಸ್‌.ಐ.ಟಿ ತನಿಖೆಗೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ, ಗರೀಶ್ ಮಟ್ಟಣ್ಣನವರ್, ಜಯಂತ್ ಟಿ, ವಿಠಲ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ದೂರುದಾರರ ಪರವಾದ ವಾದಗಳನ್ನು ಆಲಿಸಿದ ಬಳಿಕ ಎಸ್.ಐ.ಟಿ ತನಿಖೆ ಮುಂದುವರಿಯಲಿ ಎಂದು ಸೂಚಿಸಿದೆ. ಈ ಹಿಂದೆ

ಧರ್ಮಸ್ಥಳ ಪ್ರಕರಣ : ತನಿಖೆ ಮುಂದುವರಿಸಲು ಎಸ್‌ಐಟಿಗೆ ಹೈಕೋರ್ಟ್‌ ಸೂಚನೆ Read More »

ಉಪ್ಪಿನಂಗಡಿ : ಪಲ್ಟಿಯಾಗಿ ಬಸ್ಸಿಗೆ ಡಿಕ್ಕಿ ಹೊಡೆದ ಟೆಂಪೊ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಪರಿಸರದ ಕೆಂಪುಹೊಳೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಸರಕು ಸಾಗಿಸುತ್ತಿದ್ದ ಟೆಂಪೊ ಪಲ್ಟಿಯಾಗಿ, ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ನಡೆದಿದೆ. ಈ ಅಪಘಾತದಲ್ಲಿ ಟೆಂಪೊ ಚಾಲಕ ಗಾಯಗೊಂಡಿದ್ದು, ಘಟನೆಯಲ್ಲಿ ಬಸ್ಸಿನ ಮುಂಭಾಗ ಜಖಂಗೊಂಡಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಉಪ್ಪಿನಂಗಡಿ : ಪಲ್ಟಿಯಾಗಿ ಬಸ್ಸಿಗೆ ಡಿಕ್ಕಿ ಹೊಡೆದ ಟೆಂಪೊ Read More »

ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಸಂಬಂಧಿಕನಿಂದಲೇ ಅತ್ಯಾಚಾರ

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16 ವರ್ಷ ಪ್ರಾಯದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಬಾಲಕಿಯನ್ನು ಗರ್ಭಿಣಿಯಾಗಿಸಿದ ಬಗ್ಗೆ ಬಾಲಕಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಬಾಲಕಿ ವೇಣೂರು ಠಾಣಾ ವ್ಯಾಪ್ತಿಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದಾಗ ಅಲ್ಲಿದ್ದ ಬಾಲಕಿಯ ಅತ್ತೆಯ ಮಗ ಬಾಲಕಿಯನ್ನು ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ನಂಬಿಸಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ. ಇದಾದ ಬಳಿಕ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ, ಬಳಿಕ ಬಾಲಕಿ

ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಸಂಬಂಧಿಕನಿಂದಲೇ ಅತ್ಯಾಚಾರ Read More »

ಲಂಚ ಸ್ವೀಕರಿಸಿದ ಮೂವರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಹೊರಗುತ್ತಿಗೆ ನೌಕರನ ಸಂಬಳ ನೀಡಲು ಲಂಚ ಕೇಳಿದ್ದ ಭ್ರಷ್ಟ ಅಧಿಕಾರಿಗಳು ಮಂಗಳೂರು: ಹೊರಗುತ್ತಿಗೆ ನೌಕರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಮಂಗಳೂರು ಲೋಕಾಯುಕ್ತ ಪೊಲೀಸರು ಮೂವರು ಅಧಿಕಾರಿಗಳನ್ನು ಗುರುವಾರ ಬಂಧಿಸಿದ್ದಾರೆ. ಉಳ್ಳಾಲ ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೆಯರ್ ಕೃಷ್ಣಮೂರ್ತಿ, ಮಂಗಳೂರು ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ (ಎಡಿಎಲ್‌ಆರ್) ಬಿ.ಕೆ. ರಾಜು ಮತ್ತು ಸರ್ವೆ ಸುಪರ್‌ವೈಸರ್ ಎಸ್. ಧನಶೇಖರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಅಧಿಕಾರಿಗಳು. ಬಾಕಿ ಇರುವ ಸಂಬಳದ ಬಿಲ್ ಮಾಡಿಕೊಡಲು

ಲಂಚ ಸ್ವೀಕರಿಸಿದ ಮೂವರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ Read More »

ಸ್ಪೀಕರ್‌ ಖಾದರ್‌ಗೆ ಗೌರವ ಡಾಕ್ಟರೇಟ್‌ ಪ್ರದಾನ

ಡಾಕ್ಟರ್‌ ಆಗುವ ಕನಸು ನನಸಾಯಿತು ಎಂದು ಖುಷಿಪಟ್ಟ ಖಾದರ್‌ ಬೆಂಗಳೂರು: ವಿಧಾನಸಭೆಯ ಸ್ಪೀಕರ್‌ ಯು.ಟಿ.ಖಾದರ್‌ಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರವರು ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಾರೆ. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಪದವಿ ಪ್ರದಾನ ಮಾಡಲಾಯಿತು. ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಖಾದರ್‌, ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸ್ವೀಕರಿಸಿರುವುದು ಸಾಕಷ್ಟು ಹೆಮ್ಮೆ ಮತ್ತು ಸಂತಸದ ವಿಷಯವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಯಿಂದ ಗೌರವದ ಜೊತೆಗೆ ಜವಾಬ್ದಾರಿ ಕೂಡ

ಸ್ಪೀಕರ್‌ ಖಾದರ್‌ಗೆ ಗೌರವ ಡಾಕ್ಟರೇಟ್‌ ಪ್ರದಾನ Read More »

ಧರ್ಮಸ್ಥಳದಲ್ಲಿ ಭಕ್ತರ ಚಿನ್ನಾಭರಣ ಕದಿಯುತ್ತಿದ್ದ ಇಬ್ಬರು ಕಳ್ಳಿಯರ ಬಂಧನ

ಭಕ್ತರ ಸೋಗಿನಲ್ಲಿ ಬಂದು ಚಿನ್ನಾಭರಣ ಎಗರಿಸುತ್ತಿದ್ದ ತಾಯಿ-ಮಗಳು ಬೆಳ್ತಂಗಡಿ : ಧರ್ಮಸ್ಥಳದಲ್ಲಿ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳೆಯರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಸುಮಾರು 5.32 ಲಕ್ಷ ರೂ ಮೌಲ್ಯದ 76 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯ ಹುಬ್ಬಳಿ ನಗರದ 2ನೇ ಕ್ರಾಸ್ ಗಂಗಾಧರ ನಗರ ನಿವಾಸಿ ತಾಯಿ ಬೀಬಿಜಾನ್ (59) ಮತ್ತು ಮಗಳು ಮಸಾಭಿ ಅಲಿಯಾಸ್‌ ಆರತಿ (34) ಸೆರೆಯಾದ ಕಳ್ಳಿಯರು. ಆಂಧ್ರ ಪ್ರದೇಶದ ನೆಲ್ಲೂರು ನಿವಾಸಿ ಜೆ.ಲತಾ ಅವರು ಕುಟುಂಬ

ಧರ್ಮಸ್ಥಳದಲ್ಲಿ ಭಕ್ತರ ಚಿನ್ನಾಭರಣ ಕದಿಯುತ್ತಿದ್ದ ಇಬ್ಬರು ಕಳ್ಳಿಯರ ಬಂಧನ Read More »

ಯುವಕನ ಮೇಲೆ ಚೂರಿಯಿಂದ ದಾಳಿ : ಎಲ್ಲ 4 ಆರೋಪಿಗಳ ಬಂಧನ

ಎಡಪದವು ಬಳಿ ಹಲ್ಲೆ ನಡೆಸಿ ಪಲಾಯನ ಮಾಡಿದ್ದ ದುಷ್ಕರ್ಮಿಗಳು ಮಂಗಳೂರು: ಬಜಪೆ ಸಮೀಪ ಎಡಪದವು ಎಂಬಲ್ಲಿ ಅಖಿಲೇಶ್ ಎಂಬವರ‌ ಮೇಲೆ ಚೂರಿ ಇರಿದ ಪ್ರಕರಣ ಸಂಬಂಧ ಪೊಲೀಸರು ಎಲ್ಲ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳೂರು ಬಂದರು ನಿವಾಸಿ ಸಿನಾನ್, ವೇಣೂರು ನಿವಾಸಿ ಇರ್ಷಾದ್, ವಾಮಂಜೂರು ನಿವಾಸಿ ಸುಹೈಲ್ ಅಕ್ರಮ್ ಮತ್ತು‌ ವಾಮಂಜೂರು ಪಿಲಿಕುಳ ನಿವಾಸಿ ನಿಸಾನ್ ಬಂಧಿತರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಬಂಧಿತರ ಪೈಕಿ ಮಂಗಳೂರು ಬಂದರು ನಿವಾಸಿ ಸಿನಾನ್‌ನನ್ನು ಸಾರ್ವಜನಿಕರು

ಯುವಕನ ಮೇಲೆ ಚೂರಿಯಿಂದ ದಾಳಿ : ಎಲ್ಲ 4 ಆರೋಪಿಗಳ ಬಂಧನ Read More »

error: Content is protected !!
Scroll to Top