ದಕ್ಷಿಣ ಕನ್ನಡ

ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 201 ಮೊಬೈಲ್‌ ವಶ

ವಾರಿಸುದಾರರಿಲ್ಲದ ಬ್ಯಾಗ್‌ ಪರಿಶೀಲಿಸಿದಾಗ ಸಿಕ್ಕಿದ ಮೊಬೈಲ್‌ ಮಂಗಳೂರು: ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 201 ಹಳೆಯ ಮೊಬೈಲ್‌ಗಳನ್ನು ರೈಲ್ವೆ ರಕ್ಷಣಾ ದಳದವರು (ಆರ್‌ಪಿಎಫ್) ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಸೋಮವಾರ ವಶಪಡಿಸಿಕೊಂಡಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಣ್ಗಾವಲು ತೀವ್ರಗೊಳಿಸಿರುವ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಆರ್‌ಪಿಎಫ್ ರೈಲುಗಳ ಮೂಲಕ ನಗದು, ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳ ಅಕ್ರಮ ಸಾಗಾಟದ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆಯ ವೇಳೆ ಸುಮಾರು 10.05 ಲಕ್ಷ ರೂ. ಮೌಲ್ಯದ 201 ಹಳೆಯ ಮೊಬೈಲ್ […]

ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 201 ಮೊಬೈಲ್‌ ವಶ Read More »

ಚಿನ್ನಾಭರಣ ಕಳ್ಳತನ ಪ್ರಕರಣ : 24 ಗಂಟೆಯಲ್ಲಿ ಆರೋಪಿ ಅರೆಸ್ಟ್‌

ಮನೆಯಿಂದ ಹಾಡಹಗಲೇ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿ ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಸ್ ನಗರದಲ್ಲಿ ಮನೆಯಿಂದ ಹಾಡಹಗಲೇ ಚಿನ್ನಾಭರಣ ಕಳ್ಳತನವಾದ ಪ್ರಕರಣವನ್ನು ಪೊಲೀಸರು 24 ಗಂಟೆಯೊಳಗೆ ಭೇದಿಸಿ ಆರೋಪಿಯನ್ನು ಬಂಧಿಸಿ ಕಳವು ಮಾಡಿದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮಾರ್ಚ್ 7ರಂದು ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆ ಮನೆಯಲ್ಲಿದ್ದವರು ಹೊರಗಿದ್ದ ಸಂದರ್ಭದಲ್ಲಿ ಉಲ್ಲಾಸ್ ನಗರದ ಮನೆಯೊಂದರ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು 4,80,000 ರೂ. ಮೌಲ್ಯದ 39 ಗ್ರಾಂ ಚಿನ್ನಾಭರಣ ಹಾಗೂ

ಚಿನ್ನಾಭರಣ ಕಳ್ಳತನ ಪ್ರಕರಣ : 24 ಗಂಟೆಯಲ್ಲಿ ಆರೋಪಿ ಅರೆಸ್ಟ್‌ Read More »

4,175 ಲೀಟರ್‌ ಡೀಸೆಲ್‌ ಅಕ್ರಮ ದಾಸ್ತಾನು ಪತ್ತೆ

ಮನೆಯ ಶೆಡ್‌ನಲ್ಲಿ ಬ್ಯಾರಲ್‌ಗಳಲ್ಲಿ ಅಪಾಯಕಾರಿಯಾಗಿ ತುಂಬಿಸಿಟ್ಟಿದ್ದ ಡೀಸೆಲ್‌ ಉಪ್ಪಿನಂಗಡಿ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಇಂಧನ ಅಭಾವದ ಭೀತಿ ತಲೆದೋರಿರುವಂತೆಯೇ ಉಪ್ಪಿನಂಗಡಿಯಲ್ಲಿ 4 ಸಾವಿರ ಲೀಟರ್‌ಗೂ ಅಧಿಕ ಡೀಸೆಲ್‌ ಅಕ್ರಮವಾಗಿ ದಾಸ್ತಾನು ಇಟ್ಟಿರುವುದು ಪತ್ತೆಯಾಗಿದೆ. ಅಕ್ರಮವಾಗಿ ಶೇಖರಿಸಿದ್ದ ಸುಮಾರು 4,175 ಲೀಟರ್ ಡೀಸೆಲ್‌ನ್ನು ಪೊಲೀಸರು ಪತ್ತೆಹಚ್ಚಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಾರ್ಚ್ 9ರಂದು ರಾತ್ರಿ ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರೋಹಿಣಿ ಸಿ.ಕೆ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುದಲ್ತಿಯಾರ್

4,175 ಲೀಟರ್‌ ಡೀಸೆಲ್‌ ಅಕ್ರಮ ದಾಸ್ತಾನು ಪತ್ತೆ Read More »

ಬಂಟ್ವಾಳ : ಬಸ್ಸಿನಿಂದ ಲಕ್ಷಾಂತರ ರೂ. ಮೌಲ್ಯದ ಆಭರಣ ಕದ್ದಿದ್ದ ಆರೋಪಿ ಸೆರೆ

ಬಂಟ್ವಾಳ : ಹೋಟೆಲ್‌ ಎದುರು ನಿಲ್ಲಿಸಿದ್ದ ಬಸ್ಸಿನಿಂದ ದಂಪತಿಯ ಲಕ್ಷಾಂತರ ಮೌಲ್ಯದ ಆಭರಣಗಳನ್ನು ಕಳವು ಮಾಡಿದ್ದ ಆರೋಪಿ ಐದು ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಧ್ಯಪ್ರದೇಶದ ನಿವಾಸಿ ಸಮದ್‌ ಖಾನ್‌ (37) ಎಂಬಾತ ಆರೋಪಿ. ಅವನಿಂದ ಕಳವು ಮಾಡಿದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ ನವೆಂಬರ್‌ 19ರಂದು ದುರ್ಗಾಂಬಾ ಬಸ್‌ ಕಲ್ಲಡ್ಕ ಸಮೀಪ ಕುದ್ರಬೆಟ್ಟುವಿನಲ್ಲಿರುವ ಸಮುದ್ರ ಹೋಟೆಲ್‌ ಎದುರು ಪ್ರಯಾಣಿಕರಿಗೆ ಉಪಾಹಾರ ಸೇವಿಸಲೆಂದು ನಿಲ್ಲಿಸಿದ್ದ ವೇಳೆ ಬವ್ರಹ್ಮಾವರ ಮೂಲದ ದಂಪತಿಯ ಬ್ಯಾಗಿನಲ್ಲಿದ್ದ ಸುಮಾರು 20 ಲ.ರೂ.

ಬಂಟ್ವಾಳ : ಬಸ್ಸಿನಿಂದ ಲಕ್ಷಾಂತರ ರೂ. ಮೌಲ್ಯದ ಆಭರಣ ಕದ್ದಿದ್ದ ಆರೋಪಿ ಸೆರೆ Read More »

ಆಟೋರಿಕ್ಷಾಕ್ಕೆ ಕಾರು ಡಿಕ್ಕಿ : ತಂದೆ, ಐವರು ಮಕ್ಕಳಿಗೆ ಗಾಯ

ಉಪ್ಪಿನಂಗಡಿ: ವೇಗವಾಗಿ ಬಂದ ಕಾರು ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಒಂದೇ ಕುಟುಂಬದ ಐವರು ಮಕ್ಕಳು ಹಾಗೂ ಆಟೋ ಚಾಲಕರಾದ ಅವರ ತಂದೆ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಗಾಯಾಳುಗಳನ್ನು ಆಟೋ ಚಾಲಕ ಕಲಂದರ್ ಶಾಫಿ ಮತ್ತು ಅವರ ಮಕ್ಕಳಾದ ಮಹಮ್ಮದ್ ಜಾಝೀರ್ (13), ಮಹಮ್ಮದ್ ಇರ್ಷಾದ್ (11), ಮಹಮ್ಮದ್ ರಾಝೀಕ್ (9), ಮಹಮ್ಮದ್ ನೂರ್ (5) ಮತ್ತು ಸಝ್ಮಾ (4) ಎಂದು ಗುರುತಿಸಲಾಗಿದೆ. ಇವರಲ್ಲಿ ಕಲಂದರ್ ಶಾಫಿ, ಸಝ್ಮಾ ಮತ್ತು ಮಹಮ್ಮದ್ ಜಾಝೀರ್

ಆಟೋರಿಕ್ಷಾಕ್ಕೆ ಕಾರು ಡಿಕ್ಕಿ : ತಂದೆ, ಐವರು ಮಕ್ಕಳಿಗೆ ಗಾಯ Read More »

ಉಪ್ಪಿನಂಗಡಿ : ಕಾರು ಡಿಕ್ಕಿಯಾಗಿ ಬೈಕ್‌ ಸವಾರ ಸಾವು

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ 34ನೇ ನೆಕ್ಕಿಲಾಡಿ ಬೊಳ್ಳಾರ್ ಎಂಬಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಪದ್ಮುಂಜ ಸಹಕಾರಿ ಸಂಘದ ಹಿರಿಯ ಉದ್ಯೋಗಿ ಚಿದಾನಂದ ಗೌಡ (56) ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವನ್ನಪ್ಪಿದವರು. ಬಂದಾರು ಗ್ರಾಮದ ಕುರಾಯ ನಿವಾಸಿಯಾಗಿರುವ ಚಿದಾನಂದ ಗೌಡ ಕಾರ್ಯನಿಮಿತ್ತ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಬೊಳ್ಳಾರ್ ಎಂಬಲ್ಲಿ ಕಾರು ಡಿಕ್ಕಿ ಹೊಡೆಯಿತು. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ

ಉಪ್ಪಿನಂಗಡಿ : ಕಾರು ಡಿಕ್ಕಿಯಾಗಿ ಬೈಕ್‌ ಸವಾರ ಸಾವು Read More »

ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಸೆರೆ

ಪೊಲೀಸರಿಂದ ತಪ್ಪಿಸಿಕೊಳ್ಳಲು ಮತಾಂತರವಾಗಿದ್ದ ಕಿಲಾಡಿ ಮಂಗಳೂರು: ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಕೊಲೆ ಪ್ರಕರಣವೊಂದರ ಆರೋಪಿ, ಕುಖ್ಯಾತ ರೌಡಿಶೀಟರ್‌ನ ಸಹಚರನನ್ನು ಮಂಗಳೂರು ನಗರ ಅಪರಾಧ ಪತ್ತೆ ದಳ ಪೊಲೀಸರು ಬಂಧಿಸಿ ಮುಂದಿನ ತನಿಖೆಗಾಗಿ ಸುರತ್ಕಲ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತನನ್ನು ಬಳ್ಳಾರಿ ಮೂಲದ ಸೂಫೀಯಾನ್ ಹುಸೇನ್ ಅಲಿಯಾಸ್ ಕೊಟ್ರೇಶಿ (31) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಶ್ಯಾಮ ಪುರದ ಬೇಕರಿ ಸಮೀಪ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೂಫೀಯಾನ್ ಕಳೆದ ಹಲವು ವರ್ಷಗಳಿಂದ ಕಲಬುರಗಿ, ಬಳ್ಳಾರಿ, ಮುಂಬೈ ಮತ್ತು

ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಸೆರೆ Read More »

ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ : ಅಂಚೆ ಇಲಾಖೆ ವಿರುದ್ಧ ಕೇಸ್‌

ನೇತ್ರಾವತಿ ನದಿ ತೀರದಲ್ಲಿ ಕಂಡುಬಂದಿದ್ದ ರಾಶಿ ರಾಶಿ ಆಧಾರ್‌ ಕಾರ್ಡ್‌ ಬಂಟ್ವಾಳ : ಎರಡು ದಿನಗಳ ಹಿಂದೆ ಫರಂಗಿಪೇಟೆ ಸಮೀಪ ನೇತ್ರಾವತಿ ನದಿ ದಡದಲ್ಲಿ ಆಧಾರ್‌ ಕಾರ್ಡ್‌ ರಾಶಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಫರಂಗಿಪೇಟೆ ಅಂಚೆ ಇಲಾಖೆ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ಪುದು ಗ್ರಾಮದ ಸುಜೀರ್ ಎಂಬಲ್ಲಿ ನೇತ್ರಾವತಿ ನದಿ ದಡದಲ್ಲಿ ಮಾ.3ರಂದು ಸಮಯ ಸಂಜೆ ಸ್ಥಳೀಯ ನಿವಾಸಿಗಳ 2013ರಿಂದ 2023ರವರೇಗಿನ ಅಂದಾಜು 500 ಮೂಲ ಆಧಾರ್ ಕಾರ್ಡ್‌ಗಳು ಪತ್ತೆಯಾಗಿದ್ದವು. ಆಧಾರ್ ಕಾರ್ಡ್ ಪ್ರತಿಗಳಲ್ಲಿ ಫರಂಗಿಪೇಟೆಯ ಪೋಸ್ಟ್

ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ : ಅಂಚೆ ಇಲಾಖೆ ವಿರುದ್ಧ ಕೇಸ್‌ Read More »

ಪತ್ನಿಯ ಮೇಲೆ ಆ್ಯಸಿಡ್ ಹಾಕಿದ ಪತಿ

ಊಟ ತಂದು ಕೊಡಲಿಲ್ಲ ಎಂದು ಸಿಟ್ಟಿಗೆದ್ದ ಗಂಡನಿಂದ ಕೃತ್ಯ ಬೆಳ್ತಂಗಡಿ: ಪತಿಯೇ ಪತ್ನಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಗಾಯಗೊಳಿಸಿದ ಆಘಾತಕಾರಿ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಪ್ಲೊಟ್ಟುನಲ್ಲಿ ನಡೆದಿದೆ. ಕುಪ್ಲೊಟ್ಟು ನಿವಾಸಿ ಲಿಂಗಪ್ಪ ಪ್ರಕರಣದ ಆರೋಪಿಯಾಗಿದ್ದು, ಆ್ಯಸಿಡ್ ದಾಳಿಗೊಳಗಾದ ಆತನ ಪತ್ನಿ ಸರೋಜ(44) ಎಂಬವರು ಗಾಯಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಸರೋಜಾ ಗಂಡ ಊಟ ಕೇಳಿದ ಸಂದರ್ಭದಲ್ಲಿ ಊಟವನ್ನು ನೀಡಿರಲಿಲ್ಲ. ಬಳಿಕ ಪಕ್ಕದ ಸಂಬಂಧಿಕರ ಮನೆಯಲ್ಲಿ ಊಟ ಮಾಡಿ ಬಂದು ಮಲಗಿದ ಸಂದರ್ಭದಲ್ಲಿ

ಪತ್ನಿಯ ಮೇಲೆ ಆ್ಯಸಿಡ್ ಹಾಕಿದ ಪತಿ Read More »

ಡ್ರಗ್ಸ್‌ ಜಾಲ ಭೇದಿಸಿದ ಪೊಲೀಸರು : ಆರು ಆರೋಪಿಗಳ ಬಂದನ

ದುಬೈಯಿಂದ ಮಾದಕವಸ್ತು ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳು ಮಂಗಳೂರು: ಮಂಗಳೂರು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿರುವ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ದಕ್ಷಿಣ ಠಾಣೆ ವ್ಯಾಪ್ತಿಯಲ್ಲಿ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಉಡುಪಿ ಜಿಲ್ಲೆ ಕೋಟೇಶ್ವರ ನಿವಾಸಿ ಪ್ರಸ್ತುತ ಮಂಗಳೂರು ಪಾಂಡೇಶ್ವರದಲ್ಲಿ ವಾಸವಾಗಿರುವ ಮೊಹಮ್ಮದ್ ಸಯ್ಯದ್ ಆಫ್ರೀದಿ (26), ಅಹಮ್ಮದ್ ಅಲಿ ಅರ್ಷಾನ್ (22), ಮಂಗಳೂರು ಬಲ್ಮಠ ನಿವಾಸಿ ಮಕ್ಸೂದ್

ಡ್ರಗ್ಸ್‌ ಜಾಲ ಭೇದಿಸಿದ ಪೊಲೀಸರು : ಆರು ಆರೋಪಿಗಳ ಬಂದನ Read More »

error: Content is protected !!
Scroll to Top