ದುಬೈಯಿಂದ ಅಕ್ರಮ ಚಿನ್ನ ಸಾಗಾಟ | ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ
ಮಂಗಳೂರು: ಪ್ರಯಾಣಿಕರೊಬ್ಬರು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಕೊಂಡ ಘಟನೆ ನಡೆದಿದೆ. ದುಬೈಯಿಂದ ಪ್ರಯಾಣಿಸುತ್ತಿದ್ದ ಭಟ್ಕಳ ಮೂಲದ ಪ್ರಯಾಣಿಕರಿಂದ ಚಿನ್ನ ವಶಪಡಿಸಿಕೊಂಡಿದ್ದು, ಚಿನ್ನವನ್ನು ಪೇಸ್ಟ್ ಆಗಿ ಪರಿವರ್ತಿಸಿ ಎರಡು ಲೇಯರ್ ಕಂದು ಕಾಗದದ ಹಾಳೆಗಳ ನಡುವೆ ಬಚ್ಚಿಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 96 ಗ್ರಾಂ ಚಿನ್ನದ ಮೌಲ್ಯ 6.19 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ದುಬೈಯಿಂದ ಅಕ್ರಮ ಚಿನ್ನ ಸಾಗಾಟ | ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ Read More »










