ದಕ್ಷಿಣ ಕನ್ನಡ

ಕುಡಿತದ ಅಮಲಿನಲ್ಲಿ ವ್ಯಕ್ತಿಗೆ ಹೊಡೆತ : ವ್ಯಕ್ತಿ ಸ್ಥಳದಲ್ಲೇ ಮೃತ್ಯು

ನೆಲ್ಯಾಡಿ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬರಿಗೆ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಕೊಕ್ಕಡದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಪೈಕ ನಿವಾಸಿ ಕೃಷ್ಣ (55) ಹೊಡೆತದಿಂದ ಮೃತಪಟ್ಟವರು. ಅನಾರೋಗ್ಯದ ಹಿನ್ನೆಲೆಯಲ್ಲಿ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಸೋಮವಾರ ಸಂಜೆ ಡಿಸ್ಚಾರ್ಜ್ ಆಗಿ ಕೊಕ್ಕಡಕ್ಕೆ ಬಸ್ಸಿನಲ್ಲಿ ಬಂದಿದ್ದರು. ಕೊಕ್ಕಡದಲ್ಲಿ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ಸಂದರ್ಭ ಪಶು ವೈದ್ಯಾಧಿಕಾರಿಯಾಗಿದ್ದ ಡಾ.ಕುಮಾರ್ ಎಂಬವರು  ಕೃಷ್ಣ ಅವರ ಕೆನ್ನೆಗೆ ಬಲವಾಗಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ […]

ಕುಡಿತದ ಅಮಲಿನಲ್ಲಿ ವ್ಯಕ್ತಿಗೆ ಹೊಡೆತ : ವ್ಯಕ್ತಿ ಸ್ಥಳದಲ್ಲೇ ಮೃತ್ಯು Read More »

ಗ್ರಾಹಕರ ನ್ಯಾಯಾಲಯ : ಸೇವಾ ಕೊರತೆ ಆರೋಪ | ಪರಿಹಾರಕ್ಕೆ ಆದೇಶ 

ಮಂಗಳೂರು : ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿಯ ಸೇವಾ ನ್ಯೂನ್ಯತೆ ಆರೋಪದ ಪ್ರಕರಣವೊಂದರ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ ಪರಿಹಾರಕ್ಕೆ ಆದೇಶ ನೀಡಿದೆ. ಕೃಷಿಕರಾಗಿರುವ  ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ  ನಿವಾಸಿ ಶ್ರೀನಿವಾಸ ಪೂಜಾರಿಯವರು   ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರೆನ್ಸ್  ವಿಮಾ ಕಂಪನಿಯ ಪಾಲಿಸಿ ಸಂಖ್ಯೆ OG-19-3125-6401-00000446 ಜೊತೆಗೆ ಮೆಡಿಕ್ಲೈಮ್ ಪಾಲಿಸಿಯನ್ನು ಹೊಂದಿದ್ದು, ಈ ಪಾಲಿಸಿಯು ದಿನಾಂಕ 19.02.2019 ರಿಂದ ಪ್ರಾರಂಭವಾಗಿ,ನಂತರ ಕಾಲಕಾಲಕ್ಕೆ ಅಗತ್ಯವಾದ ಪ್ರೀಮಿಯಂ ಪಾವತಿಸುವ ಮೂಲಕ ಮುಂದುವರಿಸಲಾಗಿತ್ತು. ಹೀಗಿರುವಾಗ,ಶ್ರೀನಿವಾಸ ಪೂಜಾರಿಯವರ ಕಾಲಿಗೆ ವಿದ್ಯುತ್

ಗ್ರಾಹಕರ ನ್ಯಾಯಾಲಯ : ಸೇವಾ ಕೊರತೆ ಆರೋಪ | ಪರಿಹಾರಕ್ಕೆ ಆದೇಶ  Read More »

ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ.

ಉಪ್ಪಿನಂಗಡಿ: ತೆಂಕು ಮತ್ತು ಬಡಗು ತಿಟ್ಟುಗಳ ಮೇಳಗಳಲ್ಲಿ 47 ವರ್ಷಗಳ ತಿರುಗಾಟ ಮಾಡಿದ ಅಪೂರ್ವ ಸ್ತ್ರೀ ವೇಷದಾರಿ ಅಂಬಾಪ್ರಸಾದ್ ಪಾತಾಳ ಇವರಿಗೆ 60ರ ಅಭಿನಂದನ ಕಾರ್ಯಕ್ರಮವು ಪಾತಾಳ ಪೂರ್ಣ ಶ್ರೀ ನಿಲಯದಲ್ಲಿ ಜರಗಿತು. ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಉಮೇಶ ಶೆಣೈ, ಗುರಿಕಾರ ಸತ್ಯನಾರಾಯಣ ಭಟ್ ಆರ್ಲ, ನಿವೃತ್ತ ಮುಖ್ಯ ಶಿಕ್ಷಕ ಬಿ. ಸುಬ್ರಮಣ್ಯ ರಾವ್ ಪಾತಾಳ ಅಂಬಾಪ್ರಸಾದ್ ಮತ್ತು ಜಯಂತಿ ಪ್ರಸಾದ್ ಪಾತಾಳ ಸನ್ಮಾನಿಸಿದರು. ದಿವಾಕರ

ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ. Read More »

ನೆಟ್ಟಾರು ನಿವಾಸಿ ವಿದ್ಯಾರ್ಥಿ ಆತ್ಮಹತ್ಯೆ

ಬೆಳ್ಳಾರೆ: ಸುಳ್ಯದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಟ್ಟಾರಿನಿಂದ ವರದಿಯಾಗಿದೆ. ನೆಟ್ಟಾರು ನಿವಾಸಿ ಚರಣ್ ಆತ್ಮಹತ್ಯೆ ಮಾಡಿಕೊಂಡವರು. ಚರಣ್ ಸುಳ್ಯದ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿ ಎಂದು ತಿಳಿದು ಬಂದಿದ್ದು,  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ  ಪರಿಶೀಲನೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ನೆಟ್ಟಾರು ನಿವಾಸಿ ವಿದ್ಯಾರ್ಥಿ ಆತ್ಮಹತ್ಯೆ Read More »

ರಸ್ತೆಗೆ ಅಡ್ಡ ಬಂದ ಆನೆ: ಬೊಲೇರೊ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ

ಬೆಳ್ತಂಗಡಿ: ಒಂಟಿ ಸಲಗವೊಂದು  ರಸ್ತೆ ಮಧ್ಯೆ ಬಂದು ಬೊಲೇರೊ ವಾಹನಕ್ಕೆ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ನಡೆದಿದೆ. ಒಂಟಿ ಸಲಗವೊಂದು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ತಿರುಗಾಡುತ್ತಿತ್ತು, ನಿನ್ನೆ ಚಾರ್ಮಾಡಿ ಘಾಟ್ ಒಂದನೇ ತಿರುವಿನಲ್ಲಿ ಒಂಟಿ ಸಲಗ ಮತ್ತೆ ಪ್ರತ್ಯಕ್ಷವಾಗಿದೆ. ಬೊಲೇರೊ ವಾಹನಕ್ಕೆ ಒಂಟಿ ಸಲಗ ಅಡ್ಡ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಚಿಕ್ಕಮಗಳೂರಿನಿಂದ ಮಂಗಳೂರು

ರಸ್ತೆಗೆ ಅಡ್ಡ ಬಂದ ಆನೆ: ಬೊಲೇರೊ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ Read More »

ಅನಾರೋಗ್ಯದಿಂದ ಯುವಕ ನಿಧನ

ಬಂಟ್ವಾಳ : ಯುವಕನೋರ್ವ ಅನಾರೋಗ್ಯದಿಂದ ಆಕಸ್ಮಿಕವಾಗಿ ಮೃತಪಟ್ಟ ಘಟನೆ ಕುತ್ತಾರು ಎಂಬಲ್ಲಿ ನಡೆದಿದೆ. ಬಾಯಾರು ನಿವಾಸಿ ಮೌನೇಶ್ ಜೋಗಿ (24) ಮೃತಪಟ್ಟ ಯುವಕ. ನೇಮಕ್ಕೆ ಹೋಗಿ ಬಂದು ಕುತ್ತಾರು ಬಾಡಿಗೆ ಮನೆಯಲ್ಲಿ ಮಲಗಿದ್ದ ಮೌನೇಶ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಅನಾರೋಗ್ಯದಿಂದ ಯುವಕ ನಿಧನ Read More »

ಚಿಪ್ಪು ಹೆಕ್ಕಲು ಹೋದ ಯುವಕ ಅಭಿಲಾಷ್ ನೀರು ಪಾಲು | ಮುಂದುವರಿದ ಶೋಧ ಕಾರ್ಯ

ಮಂಗಳೂರು: ಚಿಪ್ಪು ಹೆಕ್ಕಲು ಹೋದ ಯುವಕರ ತಂಡದ ಓರ್ವ ನೀರು ಪಾಲಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಷ್ (24) ನೀರು ಪಾಲಾದವರು. ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ ಯುವಕರ ತಂಡ ಚಿಪ್ಪು ಹೆಕ್ಕಲು ಹೋಗಿದ್ದು, ಈ ಸಂದರ್ಭ ಯುವಕ ನೀರು ಪಾಲಾಗಿದ್ದಾರೆ. ಭಾನುವಾರ ಬೆಳಗ್ಗೆ ಬಜಪೆಯ ಆದ್ಯಪಾಡಿಯ ಹಾಗೂ ಹತ್ತಿರದ ಪ್ರದೇಶದ ಸುಮಾರು 10 ಮಂದಿ

ಚಿಪ್ಪು ಹೆಕ್ಕಲು ಹೋದ ಯುವಕ ಅಭಿಲಾಷ್ ನೀರು ಪಾಲು | ಮುಂದುವರಿದ ಶೋಧ ಕಾರ್ಯ Read More »

ಚಂದಳಿಕೆ ಯುವಕೇಸರಿ ಅಬೀರಿ- ಅತಿಕಾರಬೈಲು ಸಂಘಟನೆ ವತಿಯಿಂದ ಸಹಾಯಧನ ಹಸ್ತಾಂತರ

ವಿಟ್ಲ: ಕಷ್ಟದಲ್ಲಿರುವ ದಾಮೋದರ ಗೌಡರಿಗೆ ಚಂದಳಿಕೆ ಯುವಕೇಸರಿ ಅಬೀರಿ- ಅತಿಕಾರಬೈಲು ಸಂಘಟನೆ ವತಿಯಿಂದ 10,000 ರೂ. ಚೆಕ್‍ ಹಾಗೂ ದೈನಂದಿನ ಖರ್ಚಿಗಾಗಿ 26 ಕೆ. ಜಿ ಅಕ್ಕಿಯನ್ನು ಹಸ್ತಾಂತರಿಸಲಾಯಿತು. ವಿಟ್ಲ ಮೂಡ್ನೂರು ಗ್ರಾಮದ ಮಾಡತ್ತಾರು  ದರ್ಭೆ ನಿವಾಸಿ ದಾಮೋದರ ಗೌಡ ಅವರು  ಕೂಲಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು, ವರ್ಷಗಳ ಹಿಂದೆ ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೆಂಡತಿಯಲ್ಲೂ ಆರೋಗ್ಯ ಸಮಸ್ಯೆಯುಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಮನೆಯಲ್ಲಿ ಔಷಧಿ ಮಾಡುತ್ತಿದ್ದು,

ಚಂದಳಿಕೆ ಯುವಕೇಸರಿ ಅಬೀರಿ- ಅತಿಕಾರಬೈಲು ಸಂಘಟನೆ ವತಿಯಿಂದ ಸಹಾಯಧನ ಹಸ್ತಾಂತರ Read More »

ಸಿಸಿಟಿವಿಯಲ್ಲಿ ಕಂಡು ಬಂದ ಚಿರತೆ ಓಡಾಟ : ಭಯಭೀತರಾದ ಸ್ಥಳೀಯ ಜನ

ಬೆಳ್ತಂಗಡಿ: ಚಿರತೆಯೊಂದು ಓಡಾಡುತ್ತಿರುವ ದೃಶ್ಯ ಬೆಳ್ತಂಗಡಿಯ ಹುಣ್ಸೆಕಟ್ಟೆಯ ಪಂಜಿರ್ಪು ಎಂಬಲ್ಲಿ ಮುಂಜಾನೆ ನಡೆದಿದ್ದು, ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಪಂಜಿರ್ಪು ಗಣೇಶ್ ಐತಾಳ್ ಎಂಬವರ ಮನೆ ಸಮೀಪ ಬೆಳಿಗ್ಗೆ 4 ಗಂಟೆಯ ಹೊತ್ತಿಗೆ ಚಿರತೆ ರಸ್ತೆಯ ಬದಿ ಓಡಾಡುತ್ತಿರುವ ದೃಶ್ಯ ಮನೆಯ ಸಿಸಿ ಕ್ಯಾಮರದಲ್ಲಿ ಪತ್ತೆಯಾಗಿದ್ದು, ಸ್ಥಳೀಯ ಜನತೆ ಇದೀಗ ಭಯಭೀತರಾಗಿದ್ದಾರೆ. ಈ ಪ್ರದೇಶವು ನಗರದಿಂದ ಒಂದು ಕಿಮೀ ದೂರದಲ್ಲಿದ್ದು, ಸಮೀಪದ ಕೊಯ್ಯೂರು ಮತ್ತು ಗೇರುಕಟ್ಟೆ ಅರಣ್ಯ ಪ್ರದೇಶವಿದೆ.

ಸಿಸಿಟಿವಿಯಲ್ಲಿ ಕಂಡು ಬಂದ ಚಿರತೆ ಓಡಾಟ : ಭಯಭೀತರಾದ ಸ್ಥಳೀಯ ಜನ Read More »

ಎಸ್.ಎಸ್.ಎಲ್. ಸಿ ಫಲಿತಾಂಶ : ಉಡುಪಿ, ದಕ್ಷಿಣ ಕನ್ನಡ ಸಾಧನೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಭಿನಂದನೆ

ಮಂಗಳೂರು : ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಗಳಿಸಿದೆ.  ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಅಭಿನಂದಿಸಿದ್ದಾರೆ. ಗುಣ ಮಟ್ಟದ  ಶಿಕ್ಷಣದೊಂದಿಗೆ ಅವಳಿ ಜಿಲ್ಲೆಗಳ ಈ ಸಾಧನೆಗೆ ಕಾರಣೀಭೂತರಾದ ಶಾಲೆಯ ಮುಖ್ಯೋಪಾಧ್ಯಯರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮವನ್ನು ಶ್ಲಾಘಿಸುತ್ತಾ, ಕರಾವಳಿಯ ಉತ್ಕೃಷ್ಟ ಶೈಕ್ಷಣಿಕ ಪರಂಪರೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದ್ದಾರೆ.

ಎಸ್.ಎಸ್.ಎಲ್. ಸಿ ಫಲಿತಾಂಶ : ಉಡುಪಿ, ದಕ್ಷಿಣ ಕನ್ನಡ ಸಾಧನೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಭಿನಂದನೆ Read More »

error: Content is protected !!
Scroll to Top