ದಕ್ಷಿಣ ಕನ್ನಡ

ನಿಷೇಧಿತ ಎಂಡಿಎಂಎ ಮಾರಾಟ : ಆರೋಪಿ ಪುತ್ತೂರಿನ ಮುಹಮ್ಮದ ಸಫ್ವಾನ್ ಬಂಧನ

ಮಂಗಳೂರು: ನಿಷೇಧಿತ ಎಂಡಿಎಂಎ ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಯೊಬ್ಬನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ಬನ್ನೂರು ನಿವಾಸಿ ಮುಹಮ್ಮದ್ ಸಫ್ಘಾನ್ (32) ಬಂಧಿತ ಆರೋಪಿ. ಖಚಿತ ವರ್ತಮಾನದ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ನಗರದ ಉಳ್ಳಾಲಬೈಲು ಪರಿಸರದಲ್ಲಿ ಬೈಕನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 90000 ಮೌಲ್ಯದ ನಿಷೇಧಿತ ಮಾದಕ ವಸ್ತು ಎಂಡಿಎಂಎ, ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪಕ ಹಾಗೂ ಬೈಕ್ ಸೇರಿ ಸುಮಾರು ಎರಡು ಲಕ್ಷದ ಐದು […]

ನಿಷೇಧಿತ ಎಂಡಿಎಂಎ ಮಾರಾಟ : ಆರೋಪಿ ಪುತ್ತೂರಿನ ಮುಹಮ್ಮದ ಸಫ್ವಾನ್ ಬಂಧನ Read More »

ಲಾರಿ ಹಾಗೂ ಸ್ಕೂಟರ್  ಡಿಕ್ಕಿ : ಸ್ಕೂಟರ್  ಸವಾರ ಸಾವು

ಬಿ.ಸಿ.ರೋಡ್ : ಲಾರಿ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿದ್ದು, ಸಹಸವಾರ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಕಾವಳಪಡೂರು ಗ್ರಾಮದ ವಗ್ಗದಲ್ಲಿ ಸಂಭವಿಸಿದೆ. ಕಾಸರಗೋಡು ಸಮೀಪದ ಬೇಕಲ ನಿವಾಸಿ  ಸುಮಿತ್ (24)  ಮೃತಪಟ್ಟ‌ ದುರ್ದೈವಿಯಾಗಿದ್ದಾರೆ. ಸ್ಕೂಟರ್‌ ಸಹಸವಾರ ಗುರುಪ್ರೀತ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ  ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಬೆಳ್ತಂಗಡಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಾಗುತ್ತಿದ್ದ ಸ್ಕೂಟರ್ ಗೆ ಎದುರು ನಿಂದ ಬಂಟ್ವಾಳ ಕಡೆಯಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಲಾರಿ ಡಿಕ್ಕಿ ಯಾಗಿದೆ. 

ಲಾರಿ ಹಾಗೂ ಸ್ಕೂಟರ್  ಡಿಕ್ಕಿ : ಸ್ಕೂಟರ್  ಸವಾರ ಸಾವು Read More »

ಕೃಷಿಕ ನವೀನ್ ಚಾತುಬಾಯಿಯವರಿಗೆ ಮ್ಯಾಕ್ಸ್ ಲೈಫ್ ಕೃಷಿಕ ರತ್ನ ಪುರಸ್ಕಾರ

ಐವರ್ನಾಡು : ಐವರ್ನಾಡು ಗ್ರಾಮದ ಕೃಷಿಕರಾದ ಸಿ.ಕೆ.ನವೀನ್ ಚಾತುಬಾಯಿ ಅವರಿಗೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ಕೊಡ ಮಾಡುವ ಕೃಷಿಕ ರತ್ನ ಪುರಸ್ಕಾರ ಜುಲೈ 5 ರಂದು ನೀಡಲಾಗಿದೆ. ಮಂಗಳೂರಿನ ರೀಜನಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ಮಾಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಯ ಸೀನಿಯ‌ರ್ ಮ್ಯಾನೇಜರ್ ಸುಧಾಕರ್ ಶೆಟ್ಟಿ ಮತ್ತು ಕಂಪನಿಯ ಅಧಿಕಾರಿಗಳು ಸಿಬ್ಬಂದಿಗಳು ನಿರ್ವಹಿಸಿದರು.

ಕೃಷಿಕ ನವೀನ್ ಚಾತುಬಾಯಿಯವರಿಗೆ ಮ್ಯಾಕ್ಸ್ ಲೈಫ್ ಕೃಷಿಕ ರತ್ನ ಪುರಸ್ಕಾರ Read More »

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಬೆಳ್ಳಾರೆ ಶಾಖೆ 2ನೇ ವರ್ಷಕ್ಕೆ ಪಾದಾರ್ಪಣೆ |  ಗಣಹೋಮ, ಲಕ್ಷ್ಮೀಪೂಜೆ

ಬೆಳ್ಳಾರೆ: ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಬೆಳ್ಳಾರೆ ಶಾಖೆ ಒಂದು ವರ್ಷ ಯಶಸ್ವಿಯಾಗಿ ಪೂರೈಸಿ 2 ನೇ ವರ್ಷಕ್ಕೆ ಇಂದು ಪಾದಾರ್ಪಣೆ ಮಾಡಿತು. ಇದರ ಅಂಗವಾಗಿ ಬೆಳಿಗ್ಗೆ ಕಚೇರಿಯಲ್ಲಿ ಗಣಹೋಮ ಹಾಗೂ ಲಕ್ಷ್ಮೀಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ಸಲಹಾ ಸಮಿತಿ ಅಧ್ಯಕ್ಷ ಸತೀಶ್ ಪಾಂಬಾರು, ಉಪಾಧ್ಯಕ್ಷ ಲೋಕೇಶ್ ಚಾಕೋಟೆ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ ಕಣಜಾಲು, ಸಲಹಾ ಸಮಿತಿ ಸದಸ್ಯರುಗಳಾದ ನಾರಾಯಣ ಗೌಡ

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಬೆಳ್ಳಾರೆ ಶಾಖೆ 2ನೇ ವರ್ಷಕ್ಕೆ ಪಾದಾರ್ಪಣೆ |  ಗಣಹೋಮ, ಲಕ್ಷ್ಮೀಪೂಜೆ Read More »

ಪಂಜ ಸರಕಾರಿ ಕಾಲೇಜಿನಲ್ಲಿ ಕಳ್ಳತನ l ವಿದ್ಯುತ್ ಫ್ಯೂಸ್, ನೆಟ್ ಕೇಬಲ್ ಹೊತ್ತೊಯ್ದ ಕಳ್ಳರು

ಪಂಜ : ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಪರಿಚಿತರು ಸೊತ್ತುಗಳನ್ನು ಹಾನಿಗೈದು ಎರಡು ದಿನ ಪ್ರತ್ಯೇಕವಾಗಿ ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ. ಜು.4 ರಂದು ರಾತ್ರಿ ಕಾಲೇಜಿನಲ್ಲಿ ಕಳ್ಳತನ, ಕಿಟಕಿ ಗಾಜು ಒಡೆದ ಪ್ರಕರಣ ನಡೆದಿತ್ತು. ಜು.5 ರಂದು ರಾತ್ರಿ ಮತ್ತೆ ಕಳ್ಳರು ಕಾಲೇಜು ಕೊಠಾಡಿ ಬಾಗಿಲಿನ ಹಲಗೆ ಮುರಿದಿರುವುದು ಹೊಸದಾಗಿ ಹಾಕಿದ ಪ್ಯೂಸ್ ಕದ್ದಿರುವುದು ಬೆಳಕಿಗೆ ಬಂದಿದೆ. ಪಿ.ಯು.ಕಾಲೇಜಿನಲ್ಲಿ ಕಿಟಕಿ ಗಾಜು ಒಡೆದಿದ್ದು ಮತ್ತು ಅಲ್ಲೇ ಸಮೀಪದಲ್ಲಿರುವ ಹೈಸ್ಕೂಲ್ ಕಟ್ಟದಲ್ಲಿರುವ ಸುಮಾರು 9 ವಿದ್ಯುತ್ ಪ್ಯೂಸ್, ಇಂಟರ್ನೆಟ್

ಪಂಜ ಸರಕಾರಿ ಕಾಲೇಜಿನಲ್ಲಿ ಕಳ್ಳತನ l ವಿದ್ಯುತ್ ಫ್ಯೂಸ್, ನೆಟ್ ಕೇಬಲ್ ಹೊತ್ತೊಯ್ದ ಕಳ್ಳರು Read More »

ಡಾ.ಪ್ರಭಾಕರ ಭಟ್ ಕಲ್ಲಡ್ಕರಿಂದ ಗೌರವ ಡಾಕ್ಟರೇಟ್ ಪದವಿ ನಿರಾಕರಣೆ | ಕಾರಣವೇನು ? ಇಲ್ಲಿದೆ ಡಿಟೈಲ್ಸ್

ಮಂಗಳೂರು : ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ವಿವಿ ನೀಡಲು ಉದ್ದೇಶಿಸಿದ್ದ ಗೌರವ ಡಾಕ್ಟರೇಟ್‌ನ್ನು ಸ್ವೀಕರಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕ ಹಾಗೂ ಶಿಕ್ಷಣ, ಸಾಮಾಜಿಕ ಮತ್ತು ಧಾರ್ಮಿಕ ರಂಗಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ನಿರಾಕರಿಸಿದ್ದಾರೆ. ತಾನೊಬ್ಬ ಸಾಮಾನ್ಯ ಸ್ವಯಂಸೇವಕನಾಗಿದ್ದು, ಪಟ್ಟಿಯಿಂದ ತಮ್ಮ ಹೆಸರನ್ನು ಕೈ ಬಿಡಬೇಕೆಂದು ವಿನೀತನಾಗಿ ಕೇಳಿಕೊಳ್ಳುವುದಾಗಿ ಅವರು ವಿಶ್ವವಿದ್ಯಾಲಯದ ಕುಲಪತಿ ನರಸಿಂಹ ಮೂರ್ತಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ನನ್ನಂತಹ ಸರ್ವ ಸಾಮಾನ್ಯ ವ್ಯಕ್ತಿಯನ್ನು ಅತ್ಯಂತ ದೊಡ್ಡ ಅಂತಾರಾಷ್ಟ್ರೀಯ

ಡಾ.ಪ್ರಭಾಕರ ಭಟ್ ಕಲ್ಲಡ್ಕರಿಂದ ಗೌರವ ಡಾಕ್ಟರೇಟ್ ಪದವಿ ನಿರಾಕರಣೆ | ಕಾರಣವೇನು ? ಇಲ್ಲಿದೆ ಡಿಟೈಲ್ಸ್ Read More »

ಭಾರೀ ಮಳೆ : ಇಂದು ಶಾಲಾ-ಕಾಲೇಜುಗಳಿಗೆ ರಜೆ

ಪುತ್ತೂರು: ಭಾರೀ ಮಳೆಯ ಹಿನ್ನಲೆಯಲ್ಲಿ ಇಂದು ದ.ಕ.ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಈ ಕುರಿತು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶ ಹೊರಡಿಸಿದ್ದಾರೆ. ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ;ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಮಳೆಯ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ರೆಡ್ ಅಲರ್ಟ್‍ ಘೋಷಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತಗ್ಗು ಪ್ರದೇಶವಾದ ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಸಾರ್ವಜನಿಕರು ಹೋಗದಂತೆ, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.

ಭಾರೀ ಮಳೆ : ಇಂದು ಶಾಲಾ-ಕಾಲೇಜುಗಳಿಗೆ ರಜೆ Read More »

ಎಣ್ಮೂರು ಕೋಟಿ ಚೆನ್ನಯ ಶ್ರೀ ನಾಗಬ್ರಹ್ಮ ದೈವಸ್ಥಾನದ ಬೈದರ್ಕಳ ಗರಡಿಯ ಕೋಟಿ ದರ್ಶನ ಪಾತ್ರಿ ಗಿರೀಶ್ ಮೃತದೇಹ ಪತ್ತೆ

ಬಂಟ್ವಾಳ: ನಾಪತ್ತೆಯಾಗಿದ್ದ ಕೋಟಿ ದರ್ಶನ ಪಾತ್ರಿ ಗಿರೀಶ್ ಅವರ ಮೃತದೇಹ ಬಂಟ್ವಾಳ ಸಮೀಪ ಇಂದು ಮಧ್ಯಾಹ್ನ ಪತ್ತೆಯಾಗಿದೆ. ಕುಕ್ಕಿಪಾಡಿ ಗ್ರಾಮದ ರಿಕ್ಷಾಚಾಲಕ ಗಿರೀಶ್ ಎಂಬವರು ಕಾಣೆಯಾಗಿರುವ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಿರೀಶ್ ಬುಧವಾರ ತಡರಾತ್ರಿ 2 ಗಂಟೆ ಸುಮಾರಿಗೆ ಬಾಡಿಗೆ ಹೋಗಲು ಇದೆ ಎಂದು ಹೇಳಿ ಮನೆಯಿಂದ ತೆರಳಿದ್ದರು. ಬುಧವಾರ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಪೊಳಲಿ ಗುರುಪುರ ಸೇತುವೆ ಮೇಲೆ ರಿಕ್ಷಾ ಒಂದು ಅಡ್ಡವಾಗಿ ನಿಂತಿದ್ದನ್ನು ಗಮನಿಸಿ ಪರಿಶೀಲನೆ ನಡೆಸಿದಾಗ ರಿಕ್ಷಾದಲ್ಲಿ ಯಾರೂ ಇಲ್ಲದೇ

ಎಣ್ಮೂರು ಕೋಟಿ ಚೆನ್ನಯ ಶ್ರೀ ನಾಗಬ್ರಹ್ಮ ದೈವಸ್ಥಾನದ ಬೈದರ್ಕಳ ಗರಡಿಯ ಕೋಟಿ ದರ್ಶನ ಪಾತ್ರಿ ಗಿರೀಶ್ ಮೃತದೇಹ ಪತ್ತೆ Read More »

ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿಯ ಶವ ಪತ್ತೆ

ಬಿ.ಸಿ.ರೋಡ್ : ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಸಂದರ್ಭ ಕಾಲು ಜಾರಿ ನದಿಗೆ ಬಿದ್ದ ವ್ಯಕ್ತಿಯ ಶವ   ಪತ್ತೆಯಾಗಿದೆ. ಗುರುವಾರ ಸಂಜೆ ಅಜಿಲಮೊಗರು ಸೇತುವೆ ಬಳಿ ಈ ಘಟನೆ ನಡೆದಿದ್ದು ಇದೀಗ ಮೈಕಲ್ ಅವರ ಶವ ಪತ್ತೆಯಾಗಿದೆ. ಮೈಕಲ್ ಅವರು ಸುದೀಪ ಹಾಗೂ ದಯಾನಂದ, ಜನಾರ್ದನ ಎಂಬವರ ಜೊತೆಗೆ ನದಿಗೆ ತೆರಳಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದರು. ಸಂಜೆ ಸುಮಾರು 6.15 ರ ಹೊತ್ತಿಗೆ ಸುದೀಪ ಮತ್ತು ದಯಾನಂದರು ಮನೆಗೆ ತೆರಳಿದ್ದು, ಸ್ವಲ್ಪ ಹೊತ್ತಿನ ಬಳಿಕ ಜನಾರ್ದನ

ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿಯ ಶವ ಪತ್ತೆ Read More »

ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿ ನೀರುಪಾಲು

ಬಿ.ಸಿ.ರೋಡ್ : ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಸಂದರ್ಭ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿ ಹೋದ ಘಟನೆ ಗುರುವಾರ ಸಂಜೆ ಅಜಿಲಮೊಗರು ಸೇತುವೆ ಬಳಿ ನಡೆದಿದೆ. ಮಣಿನಾಲ್ಕೂರು ಗ್ರಾಮದ ಕುಟೇಲು ಎಂಬಲ್ಲಿಗೆ ಸುರತ್ಕಲ್ ನ ಕಾನ ನಿವಾಸಿ ಮೈಕಲ್ (53) ನೀರು ಪಾಲಾದವರು. ಮೈಕಲ್ ಅವರು ಸುದೀಪ ಹಾಗೂ ದಯಾನಂದ, ಜನಾರ್ದನ ಎಂಬವರ ಜೊತೆಗೆ ನದಿಗೆ ತೆರಳಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದರು. ಸಂಜೆ ಸುಮಾರು 6.15 ರ ಹೊತ್ತಿಗೆ ಸುದೀಪ ಮತ್ತು ದಯಾನಂದರು ಮನೆಗೆ

ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿ ನೀರುಪಾಲು Read More »

error: Content is protected !!
Scroll to Top