ದಕ್ಷಿಣ ಕನ್ನಡ

ಸುಳ್ಯ: ಗೋವು ಅಕ್ರಮ ಸಾಗಿಸುತ್ತಿದ್ದ ಮೂವರು ಸೆರೆ

ಸುಳ್ಯ: ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ ಘಟನೆ ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಪಿಕಪ್ ಚಾಲಕ ಕೇರಳ ಮೂಲದ ಇಸಾಕ್ (40), ಸುಳ್ಯದ ನಾವೂರು ನಿವಾಸಿ ಇಬ್ರಾಹಿಂ ಎಂಬವರು ಗೋವುಗಳನ್ನು ಅಮರಮುಡ್ನೂರಿನಿಂದ ಖರೀದಿಸಿ, ಅನುಮತಿ ಪಡೆಯದೆ ವಧೆ ಮಾಡುವ ಸಲುವಾಗಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆಲೆಟ್ಟಿ ಮಾರ್ಗವಾಗಿ ಕೇರಳದ ಕಡೆಗೆ ಪಿಕಪ್ ವಾಹನದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸುಳ್ಯ ಪೊಲೀಸರು ಪಿಕಪ್ […]

ಸುಳ್ಯ: ಗೋವು ಅಕ್ರಮ ಸಾಗಿಸುತ್ತಿದ್ದ ಮೂವರು ಸೆರೆ Read More »

ವಿಟ್ಲ: ಬೈಕ್ – ಲಾರಿ ನಡುವೆ ಡಿಕ್ಕಿ

ವಿಟ್ಲ: ಇಲ್ಲಿನ ಕಾಶಿಮಠ ಪೆಟ್ರೋಲ್ ಪಂಪ್ ಬಳಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಲ್ಲಕಟ್ಟ ನಿವಾಸಿ ರತ್ನಕರ್ ಎಂಬುವವರು ಗಾಯಗೊಂಡಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಗೊಂಡ ರತ್ನಾಕರ್ ರವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಟ್ಲ: ಬೈಕ್ – ಲಾರಿ ನಡುವೆ ಡಿಕ್ಕಿ Read More »

ಕಾರುಗಳ ಮುಖಾಮುಖಿ ಡಿಕ್ಕಿ : ಪಾದಚಾರಿಗೆ ಗಂಭೀರ ಗಾಯ

ಬೆಳ್ಳಾರೆಯಲ್ಲಿ ಕಾರುಗಳ ನಡುವೆ ಅಪಘಾತ ನಡೆದಿದ್ದು, ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವರಿಗೆ ಕಾರು ಗುದ್ದಿ ಗಂಭೀರ ಗಾಯವಾದ ಘಟನೆ ಬುಧವಾರ ಸಂಜೆ ನಡೆದಿದೆ. ಮಾರುತಿ 800 ಕಾರು ಮತ್ತು ಬ್ರಿಜಾ ಕಾರುಗಳ ನಡುವೆ ಡಿಕ್ಕಿಯಾಗಿದ್ದು, ಡಿಕ್ಕಿ ಹೊಡೆದ ಪರಿಣಾಮ ಹತ್ತಿರದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರು ಗುದ್ದಿದೆ. ಕಾರು ಗುದ್ದಿದ ಪರಿಣಾಮ ಪೆರುವಾಜೆಯ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಾರುಗಳ ಮುಖಾಮುಖಿ ಡಿಕ್ಕಿ : ಪಾದಚಾರಿಗೆ ಗಂಭೀರ ಗಾಯ Read More »

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಮೀಕ್ಷೆ ಯೋಜನ ಬೈಠಕ್ ಸಂಪನ್ನ

ಕಾರ್ಕಳ: ವಿದ್ಯಾಭಾರತಿ ಕಾರ್ಯಕ್ರಮಗಳನ್ನು ಉತ್ತಮವಾಗಿ ಸಂಘಟಿಸಿ ವಿದ್ಯಾ ಭಾರತಿ ಶೈಕ್ಷಣಿಕ ಚಟುವಟಿಕೆಗಳಿಗೆ ಕೈಜೋಡಿಸಿ ಯಶಸ್ವಿಯಾಗಿ ಮಾಡಿದ್ದೀರಿ. ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಅವರ ಪ್ರತಿಭೆಗಳಿಗೆ, ಅವರ ವಿದ್ವತ್ತಿಗೆ ನಾವು ಪ್ರೇರಣೆಯನ್ನು ಪ್ರೋತ್ಸಾಹವನ್ನು ನೀಡಿ ಸಮಾಜದ, ದೇಶದ ಸಂಸ್ಕೃತಿಯ ಅರಿವನ್ನು ಮೂಡಿಸಿ ದೇಶಕ್ಕೆ ಒಬ್ಬ ಉತ್ತಮ ಪ್ರಜೆಯನ್ನಾಗಿ ಮಾಡುವುದೇ ನಮ್ಮ ವಿದ್ಯಾ ಭಾರತಿಯ ಕಲ್ಪನೆ. ಈ ಸೇವಾ ಕಾರ್ಯಕ್ಕೆ ತಾವೆಲ್ಲರೂ ಕೈಜೋಡಿಸಿರುವುದು ತುಂಬಾ ಸಂತೋಷವಾಗಿದೆ. ಎಂದು ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷ ಪಾಂಡುರಂಗ ಪೈ ಅವರು ಮಾತನಾಡಿದರು .

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಮೀಕ್ಷೆ ಯೋಜನ ಬೈಠಕ್ ಸಂಪನ್ನ Read More »

ಕಾರು-ಬೈಕ್‌ ಡಿಕ್ಕಿ : ಇಬ್ಬರು ಸವಾರರು ಗಂಭೀರ

ವಿಟ್ಲ : ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಗಂಭೀರ ಗಾಯಗೊಂಡ ಘಟನೆ ವಿಟ್ಲ-ಮಂಗಳೂರು ರಸ್ತೆಯ ಬೊಬ್ಬೆಕೇರಿ ಶಾಂತಿನಗರ ಎಂಬಲ್ಲಿ ನಡೆದಿದೆ. ವಿಟ್ಲ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಮತ್ತು ಮಂಗಳೂರು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿದ್ದ ವೀರಕಂಬ ಮೂಲದವರು ಎನ್ನಲಾದ ಸವಾರ ಮತ್ತು ಸಹಸವಾರ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕಾರು ವಿಟ್ಲದ ಮೇಗಿನಪೇಟೆಯ ನಿವಾಸಿಯದ್ದು, ಹೊರ

ಕಾರು-ಬೈಕ್‌ ಡಿಕ್ಕಿ : ಇಬ್ಬರು ಸವಾರರು ಗಂಭೀರ Read More »

ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಅಂದರ್

ಬೆಳ್ತಂಗಡಿ: ಸುಮಾರು ಐದು‌‌ ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ‌ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯೊಬ್ಬನನ್ನು ಕೊನೆಗೂ ವೇಣೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಣಿಕಂಠ ಎಂದು ಗುರುತಿಸಲಾಗಿದೆ. ಈತ ಉಡುಪಿ ಜಿಲ್ಲೆಯ ಕಾಪು ಪ್ರದೇಶದವನು ಎಂದು ತಿಳಿದು ಬಂದಿದೆ. ಆರೋಪಿಯನ್ನು ಉಡುಪಿಯಲ್ಲಿ ಬಂಧಿಸಲಾಗಿದ್ದು, ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಅಂದರ್ Read More »

ಪ್ರಚೋದನಕಾರಿ ವಿಡಿಯೋ ಹಂಚಿದ ಆರೋಪಿ ಸೆರೆ

ಫೇಸ್‌ಬುಕ್‌ ನಕಲಿ ಖಾತೆ ಮೂಲಕ ವಿಡಿಯೋ ಹಂಚುತ್ತಿದ್ದ ಪಾತಕಿ ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ತಿರುಚಿದ ವಿಡಿಯೋಗಳನ್ನು ಸೃಷ್ಟಿಸಿ ಹಂಚಿಕೊಂಡು ಸಮಾಜದಲ್ಲಿ ಕೋಮು ದ್ವೇಷದ ಕಿಚ್ಚು ಹಚ್ಚಲು ಯತ್ನಿಸಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ನಿವಾಸಿ ಮಹಮ್ಮದ್ ರಫೀಕ್ (38) ಬಂಧಿತ ಆರೋಪಿ, ಈತ ನಝೀರ ಮಂಗಳೂರು ಫೇಸ್‌ಬುಕ್ ಖಾತೆಯ ಮೂಲಕ ವಿಡಿಯೋಗಳನ್ನು ಹರಿಬಿಡುತ್ತಿದ್ದ. ಕಳೆದ ಅಕ್ಟೋಬಋನಲ್ಲಿ ಈತ ತನ್ನ ಫೇಸ್‌ಬುಕ್ ಖಾತೆಯ ಮೂಲಕ ಎಐ ತಂತ್ರಜ್ಞಾನ

ಪ್ರಚೋದನಕಾರಿ ವಿಡಿಯೋ ಹಂಚಿದ ಆರೋಪಿ ಸೆರೆ Read More »

ಮಸೀದಿ ವಿಚಾರದಲ್ಲಿ ಮಾರಾಮಾರಿ : ಮೂರು ಪ್ರಕರಣ ದಾಖಲು

ಗುಂಪು ಕಟ್ಟಿಕೊಂಡು ಹೊಡೆದಾಟ; ಹಲವರಿಗೆ ಗಾಯ ಬಂಟ್ವಾಳ : ಉಳ್ಳಾಲ ತಾಲೂಕಿನ ಸಜಿಪಪಡು ಗ್ರಾಮದ ತಲೆಮೊಗರು ಮಸೀದಿಯ ವಿಚಾರಕ್ಕೆ ಸಂಬಂಧಿಸಿದಂತೆ ಭಾರಿ ಮಾರಾಮಾರಿ ನಡೆದಿದ್ದು, ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಈ ಹೊಡೆದಾಟದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಮೊದಲ ಪ್ರಕರಣದಲ್ಲಿ ಸಜಿಪಪಡು ನಿವಾಸಿ ಅಬ್ದುಲ್ ನವಾಝ್ (42) ಎಂಬವರು ನೀಡಿದ ದೂರಿನಂತೆ ಮಾರ್ಚ್ 22ರಂದು ಬೆಳಗ್ಗೆ ಇವರು ಮತ್ತು ಅವರ

ಮಸೀದಿ ವಿಚಾರದಲ್ಲಿ ಮಾರಾಮಾರಿ : ಮೂರು ಪ್ರಕರಣ ದಾಖಲು Read More »

ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ. ಪ್ರಕರಣ ಸಿಐಡಿಗೆ ವರ್ಗಾವಣೆ

ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಆದೇಶಿಸಿದ ಸರ್ಕಾರ ಮಂಗಳೂರು : ಮೂಡುಬಿದಿರೆಯ ಅಮಾನತಿನಲ್ಲಿರುವ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂದೇಶ್‌ಪಿ.ಜಿ.ಯ ಹೊಸ ಹೊಸ ಪ್ರಕರಣಗಳು ಬಯಲಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಸೋಮವಾರ ಆದೇಶ ಹೊರಡಿಸಿದೆ. ಸರ್ಕಾರ ಆದೇಶ ಹೊರಬಿದ್ದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ. 2018ರಲ್ಲಿ ವೇಣೂರು ಠಾಣೆಯಲ್ಲಿ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅಕ್ಕನ ವಿರುದ್ಧ ತಂಗಿ ದೂರು ನೀಡಿದ್ದರು. ಆ ಮಹಿಳೆ

ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ. ಪ್ರಕರಣ ಸಿಐಡಿಗೆ ವರ್ಗಾವಣೆ Read More »

ಆಟೋ – ಬಸ್ಸಿನ ನಡುವೆ ಅಪಘಾತ

ಬೆಳ್ತಂಗಡಿ: ಚಾರ್ಮಾಡಿ ರಸ್ತೆಯಲ್ಲಿ ಆಟೋ ಮತ್ತು ಬಸ್ಸು ಗುದ್ದಿದ ಘಟನೆ ನಡೆದಿದೆ. ಘಟನೆಯಲ್ಲಿ ಆಟೋ ನಜ್ಜುಗುಜ್ಜಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

ಆಟೋ – ಬಸ್ಸಿನ ನಡುವೆ ಅಪಘಾತ Read More »

error: Content is protected !!
Scroll to Top