ಡೆಂಗ್ಯೂ ಶಂಕಿತ ಜ್ವರದಿಂದ ಬಳಲುತ್ತಿದ್ದ ಯುವತಿ ಮೃತ್ಯು
ಬೆಳ್ತಂಗಡಿ : ಡೆಂಗ್ಯೂ ಜ್ವರದಿಂದ ಯುವತಿಯೊಬ್ಬರು ಬಳತ್ತಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲಿನ ದೇವಗಿರಿಯ ಬೈಕಾಟ್ ನಿವಾಸಿ ಜೋಸ್- ಮೆಡ್ಲಿ ದಂಪತಿ ಪುತ್ರಿ ಟಿನು (27) ಮೃತಪಟ್ಟವರು. ಬೆಂಗಳೂರಿನಲ್ಲಿ ನರ್ಸ್ ಆಗಿದ್ದ ಟಿನು ಅವರಿಗೆ ಶಿವಮೊಗ್ಗ ಜಿಲ್ಲೆಯ ಸಾಗರದ ಸೋಬಿಟ್ ಅವರೊಂದಿಗೆ ಎರಡೂವರೆ ವರ್ಷಗಳ ಹಿಂದೆ ವಿವಾಹವಾಗಿತ್ತು. ಇತ್ತೀಚೆಗೆ ಜ್ವರದಿಂದ ಬಳಲುತ್ತಿದ್ದು, ಡೆಂಗ್ಯೂ ಎಂದು ಶಂಕಿಸಲಾಗಿತ್ತು.
ಡೆಂಗ್ಯೂ ಶಂಕಿತ ಜ್ವರದಿಂದ ಬಳಲುತ್ತಿದ್ದ ಯುವತಿ ಮೃತ್ಯು Read More »










